For Quick Alerts
ALLOW NOTIFICATIONS  
For Daily Alerts

Angarki sankashti chaturthi 2021: ಮಂಗಳವಾರದ ಈ ಸಂಕಷ್ಟಿ ತುಂಬಾ ಮಹತ್ವವಾದದ್ದು , ಏಕೆ?

|

ಮಾರ್ಚ್‌ 2, ಅಂಗಾರಕ ಚತುರ್ಥಿ, ಈ ದಿನ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದ್ದು ಉಪವಾಸವಿದ್ದು ವಿಘ್ನ ನಿವಾರಕನನ್ನು ಆರಾಧಿಸಲಾಗುವುದು. ಸಂಕಷ್ಟಿ ಮಂಗಳವಾರ ಬಂದರೆ ಅದನ್ನು ಅಂಗಾರಕ ಚತುರ್ಥಿ ಎಂದು ಕರೆಯಲಾಗುತ್ತದೆ.

ಈ ದಿನ ಬಿಟ್ಟರೆ ಈ ವರ್ಷ ಜುಲೈ 22 ಹಾಗೂ ನವೆಂಬರ್‌ 23ರಂದು ಅಂಗಾರಕ ಚತುರ್ಥಿ ಇದೆ.

ಅಂಗಾರಕ ಚತುರ್ಥಿ ಶುಭ ಮುಹೂರ್ತ

ಅಂಗಾರಕ ಚತುರ್ಥಿ ಶುಭ ಮುಹೂರ್ತ

ಸಂಕಷ್ಟಿ ಚತುರ್ಥಿ ತಿಥಿ: 2 ಮಾರ್ಚ್, 2021

ಚತುರ್ಥಿ ತಿಥಿ ಆರಂಭ: 02 ಮಾರ್ಚ್, ಮಂಗಳವಾರ ಬೆಳಗ್ಗೆ 5.46 ನಿಮಿಷಕ್ಕೆ

ಚತುರ್ಥಿ ತಿಥಿ ಮುಕ್ತಾಯ:03 ಮಾರ್ಚ್, ಬುಧವಾರ ರಾತ್ರಿ 2:59ಕ್ಕೆ

ಅಂಗಾರಕ ಚತುರ್ಥಿ ಪೂಜಾ ವಿಧಾನ

ಅಂಗಾರಕ ಚತುರ್ಥಿ ಪೂಜಾ ವಿಧಾನ

ಅಂಗಾರಕ ಚತುರ್ಥಿಯಂದು ಬೆಳಗ್ಗೆ ಸ್ನಾನ ಮಾಡಿ ಗಣೇಶನಿಗೆ ಗರಿಕೆ, ಮೋದಕ ಅರ್ಪಿಸಿ ಪೂಜಿಸಲಾಗುತ್ತದೆ. ಈ ದಿನ ಉಪವಾಸವಿದ್ದು ಗಣೇಶನ ಸ್ತುತಿಸುತ್ತಾ ಇರಬೇಕು. ರಾತ್ರಿ ಚಂದ್ರ ದರ್ಶನದ ಬಳಿಕ ವ್ರತ ಸಂಪನ್ನಗೊಳಿಸಿ ಆಹಾರ ಸೇವಿಸಬೇಕು. ಉಪವಾಸ ಮಾಡುವಾಗ ಅಧಿಕ ಪಾನೀಯ ಕುಡಿಯುವುದು , ಎಲೆ ಅಡಿಕೆ ತಿನ್ನುವುದು ಇವೆಲ್ಲಾ ಉಪವಾಸ ಮುರಿಯುವುದಕ್ಕೆ ಸಮ. ಆದ್ದರಿಂದ ಉಪವಾಸ ಕಟ್ಟುನಿಟ್ಟಾಗಿರಬೇಕು.

ಅಂಗಾರಕ ಚತುರ್ಥಿ ಮಹತ್ವ

ಅಂಗಾರಕ ಚತುರ್ಥಿ ಮಹತ್ವ

ಅಂಗಾರಕ ಎಂದರೆ ಮಂಗಳಕರ ಎಂಬ ಅರ್ಥ. ಮಂಗಳವಾರದಂದು ಬರುವ ಸಂಕಷ್ಟಿಯನ್ನು ಅಂಗಾರಕ ಚತುರ್ಥಿ ಎಂದು ಹೇಳಲಾಗುವುದು. ಅಂಗಾರಕ ಚತುರ್ಥಿ ಆಚರಿಸಿದರೆ ಅದು 21 ವ್ರತಗಳನ್ನು ಪಾಲಿಸಿದ್ದಕ್ಕೆ ಸಮ. ಈ ದಿನ ವ್ರತವಿದ್ದು ಪೂಜಿಸಿದರೆ ನಾವು ಮಾಡಿದ ಸಂಕಲ್ಪ ನೆರವೇರಲು ಗಣೇಶ ಸಹಾಯ ಮಾಡುತ್ತಾನೆ ಎಂಬ ನಂಬಿಕೆ.

ಈ ಸ್ತೋತ್ರ ಪಠಿಸಿ

ಈ ಸ್ತೋತ್ರ ಪಠಿಸಿ

ಸಂಕಟ ಹರ ಗಣೇಶ ಸ್ತೋತ್ರ:

ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ

ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ

ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ

ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ

ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ

ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ

ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||

English summary

Angarki sankashti chaturthi 2021 Date, Shubh muhurat, Puja vidhi, Vrat Vidhi, Mantra and Significance in Kannada

Angarki sankashti chaturthi 2021 Date, Shubh muhurat, Puja vidhi, Vrat Vidhi, Mantra and Significance in Kannada,
X
Desktop Bottom Promotion