14-5-2019- ಮಂಗಳವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯ�

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.

ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಈ ದಿನದ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ( 14 ಮೇ 2019)

ಮೇಷ( 14 ಮೇ 2019)

ಧೈರ್ಯ ಸಾಹಸ ಪ್ರವೃತ್ತಿಯವರಾದ ನೀವು ಮುನ್ನುಗ್ಗುವುದರಲ್ಲಿ ಹಿಂದೆ ಬೀಳಬೇಡಿ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎನ್ನುವುದು ನಿಮ್ಮ ಘೋಷ ವಾಕ್ಯವಾಗಿರಲಿ. ದೂರದ ಊರಿನ ಪ್ರವಾಸ ಕಾರ್ಯಕ್ರಮ ದಿಢೀರಾಗಿ ನಿರ್ಧಾರವಾಗಬಹುದು. ಅದಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಿ. ಮಕ್ಕಳು ಮತ್ತು ಮೊಮ್ಮಕ್ಕಳು ನಿಮ್ಮ ಸುಖಕ್ಕೆ ಕಾರಣರಾಗುವರು.9845743807 ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಬೇಡದ ಮಾತು ಮಾತನಾಡಿ ಸುಮ್ಮನೆ ಕಿರಿಕಿರಿಗೆ ಸಿಕ್ಕಿಹಾಕಿಕೊಳ್ಳದಿರಿ. ಹಿರಿಯರ ಆಶೀರ್ವಾದವಿರುವುದರಿಂದ ಹೆಚ್ಚಿನ ತೊಂದರೆ ಇರುವುದಿಲ್ಲ. ಸಾಧು, ಸಂತರ ಭೇಟಿ ಆಗಲಿದೆ. ನಕಾರಾತ್ಮಕ ಧೋರಣೆಗಳನ್ನು ಕೈಬಿಡಿ. ಉತ್ತಮವಾದ ಜನರಿಂದ ನಿಮಗೆ ಬೆಂಬಲ ದೊರೆಯಲಿದೆ. ಪ್ರಯಾಣ ಕಾಲದಲ್ಲಿ ತುಸು ಎಚ್ಚರಿಕೆ ಇರಲಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.9845743807 ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ನಿಮಗೆ ನೂರಾರು ಕಡೆಗಳಿಂದ ಪ್ರಶಂಸೆಗಳು ಬರುವ ಸಾಧ್ಯತೆ ಇರುವುದು. ಇದು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಷ್ಠೆಯಿಂದ ದುಡಿಯಲು ಸಹಕಾರಿ ಆಗುವುದು. ನಿಮ್ಮ ಕೈಕೆಳಗಿನ ಕೆಲಸಗಾರರು ಮುಷ್ಕರ ನಡೆಸುವ ಸಾಧ್ಯತೆ ಇರುವುದು. ಕಾರ್ಯ ಸಾಧನೆಗಾಗಿ ನಿಮ್ಮ ತಾಳ್ಮೆಯೇ ಉತ್ತಮ ಅಡಿಪಾಯ. ತಾಳಿದವನು ಬಾಳಿಯಾನು. ಯಾವುದೇ ದೃಢ ನಿರ್ಧಾರ ತಳೆಯುವ ಮುನ್ನ ನಿಮ್ಮ ಸಹೋದ್ಯೋಗಿಗಳ ಸಲಹೆ ಪಡೆಯಿರಿ.9845743807 ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಕೋಪದಲ್ಲಿ ಕೊಯ್ದುಕೊಂಡ ಮೂಗನ್ನು ಮರು ಜೋಡಿಸಲು ಆಗುವುದಿಲ್ಲ. ನಿಮ್ಮ ಕೋಪ ತಾಪದ ಮೇಲೆ ಹತೋಟಿ ಇಟ್ಟುಕೊಳ್ಳುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಕೌಟುಂಬಿಕವಾಗಿ ತೊಂದರೆ ಎದುರಿಸಬಹುದು.ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಸಾಲದು. ದೈಹಿಕ ಆರೋಗ್ಯ ರಕ್ಷ ಣೆಗಾಗಿ ಪ್ರಾಣಾಯಾಮ, ಯೋಗ, ಧ್ಯಾನ ಮುಂತಾದವುಗಳನ್ನು ಚಾಚು ತಪ್ಪದೇ ಮಾಡಬೇಕಾಗುವುದು.9845743807 ಅದೃಷ್ಟ ಸಂಖ್ಯೆ:4

ಸಿಂಹ

ಸಿಂಹ

ಮನೆಯ ವಾತಾವರಣದಲ್ಲಿ ಒಳಗೊಳಗೇ ಅಸಮಾಧಾನದ ಹೊಗೆ ಏಳುವ ಸಾಧ್ಯತೆ ಇರುತ್ತದೆ. ಇದರ ಮೂಲವನ್ನು ಕಂಡು ಹಿಡಿದು ಅದನ್ನು ಅಲ್ಲಿಯೇ ನಂದಿಸುವುದರಿಂದ ಒಳಿತಾಗುವುದು.ಖರ್ಚಿನ ದಾರಿಗಾಗಿ ನೂರೆಂಟು ರೀತಿಯ ಯಾದಿ ನಿಮ್ಮೆದುರಿಗೆ ಬರುವುದು. ಅದೆಲ್ಲವನ್ನು ನಾಜೂಕಾಗಿ ನೀವು ಬಗೆಹರಿಸಿಕೊಳ್ಳುವಿರಿ. ಆಂಜನೇಯ ಸ್ವಾಮಿಯ ಸ್ತೋತ್ರ ಪಠಿಸುವುದರಿಂದ ಕಾರ್ಯ ಸಿದ್ಧಿ ಆಗುವುದು.9845743807 ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ನಡುವೆಯೂ ನಿಮ್ಮ ಕಾರ್ಯವು ಜನರು ಮೆಚ್ಚುವಂತೆ ಆಗುವುದು. ನಿಮಗೆ ಭಗವಂತನ ಒಲುಮೆ ಇದೆ ಎಂದು ತಿಳಿಯಲು ಇದುವೇ ಸಾಕ್ಷಿ. ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗ್ಗಾಡದೆ ಅಥವಾ ಕಾದಾಡದೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಿ. ಶಿವನ ಒಲುಮೆಯನ್ನು ಸಂಪಾದಿಸಿಕೊಳ್ಳಿ. ಹಣಕಾಸಿನ ಪರಿಸ್ಥಿತಿಯು ಸುಧಾರಣೆಗೊಳ್ಳುವುದು.9845743807 ಅದೃಷ್ಟ ಸಂಖ್ಯೆ:4

ತುಲಾ

ತುಲಾ

ಅಮೃತಪೂರ್ಣ ಸಿಹಿಯೊಂದಿಗಿನ ನಿಮ್ಮ ಮಾತುಗಳು ನಿಮ್ಮ ವಿರೋಧಿಗಳನ್ನು ಕೂಡಾ ನಿಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುವವು. ಅಜಾತ ಶತ್ರುಗಳಿಂದ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಹಲವಾರು ಕಾರ್ಯ ಯೋಜನೆಗಳನ್ನು ಒತ್ತಡದಲ್ಲಿ ನಿರ್ವಹಿಸಲು ಮುಂದಾಗುವಿರಿ. ನಿಧಾನವಾಗಿ ಆದರೂ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆದರೆ ನಿಮ್ಮ ದೌರ್ಬಲ್ಯವನ್ನು ಪರರ ಮುಂದೆ ಪ್ರದರ್ಶಿಸದಿರುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ಬಹು ದೊಡ್ಡ ಬಂಡವಾಳದೊಂದಿಗೆ ವ್ಯಾಪಾರ, ವ್ಯವಹಾರಗಳನ್ನು ಆರಂಭಿಸುವಿರಿ. ಇದರಿಂದ ಹೆಚ್ಚಿನ ಲಾಭ ಕಂಡು ಬರುವುದು. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು.ನಿಮ್ಮ ವಿಶೇಷವಾದ ಕಾರ್ಯಕ್ಷ ಮತೆ ಕಚೇರಿಯಲ್ಲಿ ಪ್ರಶಂಸೆಗೆ ಒಳಗಾಗುವ ಹೇರಳ ಅವಕಾಶಗಳು ಲಭ್ಯವಾಗಿರುತ್ತವೆ. ಸ್ಥಿರಾಸ್ತಿ ಖರೀದಿಯ ಬಗ್ಗೆ ಮಾತುಕತೆ ನಡೆಸುವಿರಿ ಮತ್ತು ಅದರಲ್ಲಿ ಸಫಲತೆಯನ್ನು ಕಾಣುವಿರಿ.9845743807 ಅದೃಷ್ಟ ಸಂಖ್ಯೆ:9

ಧನುಸ್ಸು

ಧನುಸ್ಸು

ಮಕ್ಕಳ ವಿಚಾರವಾಗಿ ಆತಂಕದ ಕ್ಷ ಣಗಳನ್ನು ಎದುರಿಸುವಿರಾದರೂ ಸಂತೋಷದ ವಾರ್ತೆಯೂ ಸಿಗಲಿದೆ. ವಿದ್ಯಾಗುರುಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುವಿರಿ. ಇದರಿಂದ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.ನಿಮ್ಮದೇ ಆದ ಕೆಲವು ನಿರ್ದಿಷ್ಟ ಯೋಜನೆಗಳನ್ನು ನೀವು ಸಾಧಿಸಿ ತೋರಿಸುವ ಮೂಲಕ ಬಂಧು ಬಳಗದವರಲ್ಲಿ ವಿಶೇಷ ಅಭಿಮಾನಕ್ಕೆ ಪಾತ್ರರಾಗುವಿರಿ. ಒಂದು ಮಹತ್ತರ ಕಾರ್ಯವನ್ನು ಮಾಡಿ ಮುಗಿಸಿದ ತೃಪ್ತಿ ನಿಮ್ಮದಾಗುವುದು.9845743807 ಅದೃಷ್ಟ ಸಂಖ್ಯೆ:8

ಮಕರ

ಮಕರ

ಸಾಮಾಜಿಕವಾದ ನೆಲೆಯಲ್ಲಿ ತೊಂದರೆಗಳಿಗೆ ಹೆಚ್ಚಿನ ಅವಕಾಶಗಳು ಬರುವವು. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಖರ್ಚು ವೆಚ್ಚಗಳಲ್ಲಿ ಕೈ ಹಿಡಿತ ಮಾಡಬೇಕಾಗುವುದು.ಮನೆಯಲ್ಲಿ ಅಶಾಂತಿಯ ವಾತಾವರಣ ತಲೆದೋರುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಭಕ್ತಿಯಿಂದ ಪೂಜಿಸಿ. ಆಕೆಯು ನಿಮ್ಮ ಸಂಕಷ್ಟಗಳನ್ನು ದೂರಮಾಡಿ ಮನಸ್ಸಿಗೆ ನೆಮ್ಮದಿ ನೀಡುವಳು.9845743807 ಅದೃಷ್ಟ ಸಂಖ್ಯೆ:2

ಕುಂಭ

ಕುಂಭ

ನಿಮ್ಮ ಹಲವು ವಿಚಾರಗಳಿಗೆ ಹಿರಿಯರೊಬ್ಬರ ಸಲಹೆಯನ್ನು ಸ್ವೀಕರಿಸಿ ಮತ್ತು ನಿಮಗೆ ಸ್ತ್ರೀ ಸಮೂಹ ಬೆಂಗಾವಲಿಗೆ ನಿಲ್ಲಲಿದೆ. ದೇವಿಯು ನಿಮಗೆ ಮಹಿಳೆ ರೂಪದಲ್ಲಿ ಸಹಾಯ ಮಾಡುವಳು.ಮಹತ್ತರವಾದ ಕಾರ್ಯಗಳನ್ನು ಮುಂದೂಡುವುದು ಒಳಿತು. 5 ವರ್ಷದ ಒಳಗೆ ಇರುವ ಹೆಣ್ಣು ಮಕ್ಕಳಿಗೆ ಸಿಹಿ ಹಂಚಿರಿ. ಹಣಕಾಸಿನ ವ್ಯವಸ್ಥೆ ಸಾಧಾರಣ ಮಟ್ಟದ್ದಾಗಿದ್ದು ಕೈ ಹಿಡಿತ ಮಾಡಬೇಕಾಗುವುದು.9845743807 ಅದೃಷ್ಟ ಸಂಖ್ಯೆ:2

ಮೀನ

ಮೀನ

ಪ್ರಜ್ಞಾರೂಪದಿಂದ ಇಡೀ ಜಗತ್ತನ್ನೇ ವ್ಯಾಪಿಸಿಕೊಂಡಿರುವ ಶ್ರೀದೇವಿಯು ನಿಮಗೆ ಅಭಯ ಹಸ್ತ ನೀಡಿರುವಳು. ಆಕೆಯ ಕೃಪಾ ಕಟಾಕ್ಷ ದಿಂದ ನಿಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು.

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರು ಹಿರಿಯರು. ಹಾಗಾಗಿ ನೀವು ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯ ರೂಪಿಸಿಕೊಳ್ಳಿ. ಇದರಿಂದ ಹೆಚ್ಚಿನ ಆತಂಕದಿಂದ ದೂರ ಉಳಿಯ ಬಹುದು. 9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನಕೊರತೆ , ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope 14 May 2019

Know what astrology and the planets have in store for you today. Choose your zodiac sign and read the details..
Story first published: Tuesday, May 14, 2019, 4:00 [IST]
X
Desktop Bottom Promotion