Latest Updates
-
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ
ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ
ಪ್ರತಿಯೊಬ್ಬರ ಮನೆಯ ದೋಸೆ ತೂತು ಎನ್ನುವ ಗಾದೆಯಿದೆ. ಯಾಕೆಂದರೆ ಸಮಸ್ಯೆ, ಜಗಳ ಎನ್ನುವುದು ಪ್ರತಿಯೊಂದು ಮನೆಗಳಲ್ಲೂ ಇರುವುದು. ಆದರೆ ಇವುಗಳನ್ನು ಹೋಗಲಾಡಿಸಿ, ಸಂತೋಷದ ಜೀವನ ನಡೆಸಲು ಪ್ರತಿಯೊಬ್ಬರು ಬಯಸುವರು. ಆದರೆ ಸಂಪತ್ತು ಹಾಗೂ ಸಮೃದ್ಧಿಯ ಕೊರತೆಯಿಂದಾಗಿ ಇದು ಸಿಗುವುದು ಕಡಿಮೆ. ಕೆಲವೊಂದು ಮನೆಗಳಲ್ಲಿ ಆಗಾಗ ಜಗಳಗಳಾಗುವುದು ಇದೆ.

ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಮನೆಯಲ್ಲಿನ ಸದಸ್ಯರ ಮಧ್ಯೆ ಮನಸ್ತಾಪ ಇತ್ಯಾದಿಗಳು. ಮನೆಯ ವಾಸ್ತು ಸರಿಯಾಗಿ ಇಲ್ಲದೆ ಇರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ವಾಸ್ತು ಸರಿಯಾಗಿಲ್ಲ ವಾದರೆ ಆಗ ಮನೆಯ ಸದಸ್ಯರ ಮಧ್ಯೆ ಕಲಹಗಳು ಉಂಟಾಗುವುದು. ವಾಸ್ತು ಸರಿಪಡಿಸಿಕೊಂಡರೆ ಇಂತಹ ಸಮಸ್ಯೆ ನಿವಾರಣೆ ಮಾಡಬಹುದು. ಇದು ಹೇಗೆ ಎಂದು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ ಮತ್ತು ಸಂತೋಷದಿಂದ ಜೀವನ ಸಾಗಿಸಿ...

ಅಡುಗೆ ಮನೆ ಅಥವಾ ಶೌಚಾಲಯ ಈಶಾನ್ಯ ಭಾಗದಲ್ಲಿ
ಮನೆಯ ಈಶಾನ್ಯಭಾಗದಲ್ಲಿ ಯಾವತ್ತೂ ಅಡುಗೆ ಮನೆ ಅಥವಾ ಶೌಚಾಲಯವು ಇರಲೇಬಾರದು. ಕುಟುಂಬ ಸದಸ್ಯರ ಮಧ್ಯೆ ಉಂಟಾಗುವ ಕಲಹಕ್ಕೆ ಇದು ಪ್ರಮುಖ ಕಾರಣವಾಗಿದೆ. ಈಶಾನ್ಯ ಭಾಗವು ದೇವರಿಗೆ ಮೀಸಲಿರಿಸಲಾಗಿದೆ. ಇದರಿಂದ ಶೌಚಾಲಯವು ನಿಮಗೆ ಅಶುಭ ಉಂಟು ಮಾಡಬಹುದು. ಉತ್ತರ ಭಾಗದಲ್ಲಿ ಇರುವಂತಹ ಅಡುಗೆ ಮನೆಯು ನಿಮಗೆ ಇದೇ ರೀತಿಯ ಪರಿಣಾಮ ಉಂಟು ಮಾಡಬಹುದು.

ಬಾಗಿಲುಗಳು ಮತ್ತು ಕಿಟಕಿಗಳು
ಮನೆಯ ಬಾಗಿಲುಗಳು ಮತ್ತು ಕಿಟಕಿಗಳು ಪೂರ್ವ ಭಾಗಕ್ಕೆ ಇರಬೇಕು. ಪೂರ್ವ ಭಾಗವು ಸೂರ್ಯನು ಮೂಡುವಂತಹ ದಿಕ್ಕು. ಇದರಿಂದಾಗಿ ಧನಾತ್ಮಕ ಶಕ್ತಿಯು ಬರುವುದು. ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವಾಗ ಅಥವಾ ಹಾಕುವಾಗ ಯಾವುದೇ ರೀತಿಯ ಶಬ್ಧ ಬರಬಾರದು.

ಮನೆಯ ಪವಿತ್ರ ಮೂಲೆ
ಈಶಾನ್ಯ ಭಾಗವನ್ನು ವಾಸ್ತುಶಾಸ್ತ್ರದಲ್ಲಿ `ಇಶಾನ ಕೋಣೆ' ಎಂದು ಕರೆಯಲಾಗುವುದು. ಮನೆಯ ಈ ದಿಕ್ಕಿನಲ್ಲಿರುವಂತಹ ನೆಲವು ಎತ್ತರವಾಗಿರಬಾರದು. ಹೀಗಿದ್ದರೆ ಆಗ ಕುಟುಂಬದ ಸದಸ್ಯರ ಮಧ್ಯೆ ಜಗಳವಾಗುವುದು. ಮಕ್ಕಳು ಕೂಡ ಕಳಪೆ ಪ್ರದರ್ಶನ ನೀಡಬಹುದು. ಈ ಭಾಗದಲ್ಲಿ ದೇವರ ಕೋಣೆ ನಿರ್ಮಿಸಿ. ಈ ಭಾಗದಲ್ಲಿ ಯಾವುದೇ ರೀತಿಯ ವಿದ್ಯುತ್ ಸಾಮಗ್ರಿಗಳನ್ನು ಇಡಬೇಡಿ.

ಗೇಟ್ ಸಮೀಪ ಮೆಟ್ಟಿಲುಗಳು ಇರಬಾರದು
ಮನೆಯ ಮುಖ್ಯ ಗೇಟ್ ನ ಬಳಿಯಲ್ಲಿಯೇ ಮೆಟ್ಟಿಲುಗಳನ್ನು ನಿರ್ಮಿಸುವುದು ಜನರು ಮಾಡುತ್ತಿರುವ ಮತ್ತೊಂದು ತಪ್ಪು. ಮೆಟ್ಟಿಲುಗಳು ಮನೆಯ ನೈರುತ್ಯ ಅಥವಾ ಪಶ್ಚಿಮ ಅಥವಾ ದಕ್ಷಿಣ ಭಾಗದಲ್ಲಿ ಇರಬೇಕು. ಇದನ್ನು ಹೊರತುಪಡಿಸಿ, ಮುಖ್ಯ ಗೇಟ್ ನ ಸಮೀಪವೇ ಅಡುಗೆ ಮನೆ ಇರಬಾರದು. ಅಡುಗೆಮನೆಯು ದಕ್ಷಿಣ ಅಥವಾ ನೈರುತ್ಯ ಭಾಗದಲ್ಲಿ ಇರಬೇಕು. ಪೂರ್ವ ಭಾಗಕ್ಕೆ ಮುಖ ಮಾಡಿಕೊಂಡು ಅಡುಗೆ ಮಾಡಬೇಕು.

ಈಶಾನ್ಯ ಭಾಗದಲ್ಲಿ ಗೋದಾಮು ಇಡಬೇಡಿ
ಮನೆಯ ಈಶಾನ್ಯ ಭಾಗದಲ್ಲಿ ಯಾವತ್ತಿಗೂ ಗೋದಾಮು ಇರಬಾರದು. ಈಶಾನ್ಯ ಭಾಗವು ದೇವರಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳುವುದರಿಂದ ಈ ಭಾಗದಲ್ಲಿ ಗೋದಾಮು ಇತ್ಯಾದಿ ನಿರ್ಮಿಸಬಾರದು. ಇದು ಮನೆಯವರ ಮಧ್ಯೆ ಜಗಳ ಉಂಟು ಮಾಡುವುದು ಮಾತ್ರವಲ್ಲದೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಜಾಗವು ಪೂಜಾ ಕೊಠಡಿಗೆ ತುಂಬಾ ಪ್ರಾಸಸ್ತ್ಯವಾಗಿರುವ ಜಾಗವಾಗಿದೆ. ಗೇಟ್ ನ ಸಮೀಪ ಪೂಜೆಯ ಕೋಣೆ ಇರಬಾರದು.

ಕನ್ನಡಿಗಳು ಮತ್ತು ಗಾಜುಗಳು
ಮೇಲಿನವುಗಳನ್ನು ಹೊರತುಪಡಿಸಿ ಇತರ ಕೆಲವೊಂದು ನಂಬಿಕೆಗಳು ಇವೆ. ಕಿಟಕಿ ಗಾಜು, ಕನ್ನಡಿ ಒಡೆದಿರಬಾರದು ಮತ್ತು ಗಡಿಯಾರವು ಸರಿಯಾಗಿ ಕೆಲಸ ಮಾಡುತ್ತಿರಬೇಕು. ಹಾಸಿಗೆಗೆ ವಿರುದ್ಧವಾಗಿ ಕನ್ನಡಿ ಇಡಬೇಡಿ. ಹಾಸಿಗೆಯಲ್ಲಿ ಮಲಗಿದ ವ್ಯಕ್ತಿಗೆ ಕನ್ನಡಿಯಲ್ಲಿ ತನ್ನ ಚಿತ್ರ ಕಾಣಬಾರದು.

ಹಿರಿಯರ ಫೋಟೊಗಳು
ಇಹಲೋಕ ತ್ಯಜಿಸಿರುವಂತಹ ಹಿರಿಯರಿಗೆ ಹಿಂದೂ ಧರ್ಮದಲ್ಲಿ ಪೂಜಿಸಲಾಗುವುದು. ಆದರೆ ಕೆಲವರು ದೇವರ ಫೋಟೊ ಜತೆಗೆ ಹಿರಿಯರ ಫೋಟೊಗಳನ್ನು ಇಡುವರು. ಇದು ಒಳ್ಳೆಯದಲ್ಲ. ದಕ್ಷಿಣ ಭಾಗದ ಗೋಡೆಯಲ್ಲಿ ಇದನ್ನು ನೇತಾಡಬಾರದು. ಇದರಿಂದ ಮನೆಯ ಶಾಂತಿ ಕಾಪಾಡಬಹುದು.

ಪವಿತ್ತ ತುಳಸಿ ಗಿಡ
ಹಿಂದೂಗಳು ತುಳಸಿ ಗಿಡವನ್ನು ತುಂಬಾ ಪವಿತ್ರವೆಂದು ಪರಿಗಣಿಸುವರು. ಇದರಲ್ಲಿ ಇರುವಂತಹ ಆರೋಗ್ಯ ಗುಣಗಳೊಂದಿಗೆ ಇದು ಕೆಲವೊಂದು ಆಧ್ಯಾತ್ಮಿಕ ಲಾಭಗಳನ್ನು ನೀಡುವುದು. ತುಳಸಿ ಪೂಜೆ ಮಾಡಿದರೆ ವಿಷ್ಣುವಿನ ಆರಾಧನೆ ಮಾಡಿದಂತೆ. ಕುಟುಂಬ ಸದಸ್ಯರ ಮಧ್ಯೆ ಶಾಂತಿ ನೆಲೆಸಲು ತುಳಸಿ ಗಿಡವು ತುಂಬಾ ಮಹತ್ವದ್ದಾಗಿದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.



Click it and Unblock the Notifications











