ನಿಮ್ಮ ಬರವಣಿಗೆಗೆ ನಮ್ಮ ಪ್ರೋತ್ಸಾಹ

By: manu
Subscribe to Boldsky

ನೀವು ಅರೆಕಾಲಿಕ ಕೆಲಸ/ಪಾರ್ಟ್ ಟೈಮ್ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಸೃಜನಾತ್ಮಕ ಬರವಣಿಗೆ ನಿಮ್ಮ ಪ್ರತಿಭೆಯಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣ ವೇದಿಕೆ. ನಮ್ಮದು ಬೋಲ್ಡ್‍ಸ್ಕೈ (ಜೀವನಶೈಲಿ-ಆಧಾರಿತ ಆನ್‍ಲೈನ್ ವೆಬ್‍ಸೈಟ್) ಜಾಲತಾಣ.

ಇಲ್ಲಿ ಸ್ವತಂತ್ರ ವಿಷಯಗಳ ಬರಹಗಾರರು ಬೇಕಾಗಿದ್ದಾರೆ. ಇವರು ಆರೋಗ್ಯ, ಸೌಂದರ್ಯ, ಗರ್ಭಧಾರಣೆ, ಪೋಷಣೆ, ಸಂಬಂಧಗಳು ಸೇರಿದಂತೆ ಅನೇಕ ವಿಚಾರಗಳಿಗೆ ವಿಶೇಷ ಲೇಖನಗಳನ್ನು ಕಳುಹಿಸಬಹುದು. ಲೇಖನ ಬರೆಯುವ ಮೊದಲು ನೀವು ತಿಳಿದಿರಬೇಕಾದ ಕೆಲವು ವಿಚಾರಗಳು:

ಮಾಹಿತಿಯುಕ್ತ ಉತ್ತಮ ಗುಣಮಟ್ಟದ ಲೇಖನಗಳು:

ನೀವು ಬರೆಯುವ ಅಥವಾ ಆಯ್ಕೆ ಮಾಡಿಕೊಳ್ಳುವ ಲೇಖನಗಳು ಆಕರ್ಷಕ, ಅರ್ಥಪೂರ್ಣ ಶೀರ್ಷಿಕೆಗಳನ್ನು ಹೊಂದಿರಬೇಕು. ಜೀವನ ಶೈಲಿ ವಿಚಾರಕ್ಕೆ ಸಂಬಂಧಿಸಿದ ಅರ್ಥಪೂರ್ಣ ಮಾಹಿತಿ ಹೊಂದಿರುವ ವಿಷಯವಾಗಿರಬೇಕು. ಸರಳವಾದ ವಿಷಯ ಮಂಡಣೆ ಮತ್ತು ಸ್ಪಷ್ಟತೆ (ಕಾಗುಣಿತ ಮತ್ತು ವ್ಯಾಕರಣದಲ್ಲಿ ಯಾವುದೇ ತಪ್ಪು ಇರಬಾರದು) ಇರಬೇಕು.  

writing

ಕೃತಿಚೌರ್ಯ ಸಲ್ಲದು:

ನಾವು ಬರಹಗಾರರ ಸಮಗ್ರತೆಯನ್ನು ಪ್ರೀತಿಸುತ್ತೇವೆ. ಕೃತಿಚೌರ್ಯ ಮಾಡಿರುವ ಲೇಖನಗಳನ್ನು ಸ್ವೀಕರಿಸುವುದಿಲ್ಲ. ವೆಬ್‍ಸೈಟ್ ಅಥವಾ ಇತರ ಯಾವುದೇ ಮೂಲಗಳಿಂದ ಮಾಹಿತಿಯನ್ನು ಪಡೆದು ನಿಮ್ಮದೇ ರೀತಿಯಲ್ಲಿ ಬರೆಯಬೇಕೇ ವಿನಃ ನೇರವಾಗಿ ನಕಲಿ ಮಾಡುವಂತಿಲ್ಲ.

ಲೇಖನದ ಸ್ವರೂಪಗಳು:

* ಪ್ರತಿಯೊಂದು ಲೇಖನವು ಕಡಿಮೆಯೆಂದರೂ 700 ಪದಗಳನ್ನು ಹೊಂದಿರಬೇಕು. (ನೆನಪಿರಲಿ: ಎಸ್‍ಎಮ್‍ಎಸ್ ರೀತಿಯ ಭಾಷೆಗಳನ್ನು ನಿಷೇಧಿಸಲಾಗಿದೆ)

* ನಮ್ಮ ವೆಬ್‍ಸೈಟ್/ಜಾಲತಾಣದಲ್ಲಿ ಈಗಾಗಲೇ ಪ್ರಕಟವಾದ ವಿಷಯದ ಬಗ್ಗೆ ಲೇಖನಗಳನ್ನು ಬರೆಯಬಾರದು. ಪದೇ-ಪದೇ ಒಂದೇ ವಿಚಾರದ ಬಗ್ಗೆ ಲೇಖನಗಳನ್ನು ಪ್ರಕಟಿಸುವುದರಿಂದ ಓದುಗರಿಗೆ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ.

* ಲೇಖನದ ಮಾಹಿತಿಗೆ ನಮ್ಮ ವೆಬ್‍ಸೈಟ್‍ನ ಹುಡುಕು ಆಯ್ಕೆಯಲ್ಲಿ (search option) ವಿಷಯಗಳನ್ನು ಬರೆದು/ಟೈಪ್ ಮಾಡಿ ಹುಡುಕಬಹುದು.

ನಮ್ಮ ವೆಬ್ ಸೈಟ್‍ನ ಲಿಂಕ್: www.kannada.boldsky.com

ನಮಗೇಕೆ ನೀವು ಬರೆಯಬೇಕು?

ನಿಮ್ಮ ಅದ್ಭುತ ಲೇಖನವನ್ನು ನಮಗೆ ಬರೆದು ಕಳುಹಿಸಿದರೆ ನೀವು ಉತ್ತಮ ಆದಾಯವನ್ನು ಪಡೆಯಬಹುದು. ನಿಮ್ಮ ಲೇಖನದಿಂದ ಉತ್ತಮ ರೀತಿಯ ಪುಟವೀಕ್ಷಣೆ ದೊರೆತರೆ ನಮ್ಮಿಂದ ನಿಮಗೆ ಉತ್ತಮ ಪ್ರೋತ್ಸಾಹ ಸಿಗುವುದು.

ನಮ್ಮನ್ನು ಸಂಪರ್ಕಿಸಲು: writeforboldsky@oneindia.co.in

ಈ ಕೆಳಗೆ ತಿಳಿಸಿದ ವಿಭಾಗದಲ್ಲಿ ಯಾವ ಬರವಣಿಗೆ ವಿಚಾರದಲ್ಲಿ ಆಸಕ್ತಿ ಹೊಂದಿರುವಿರಿ ಎಂಬುದನ್ನು ನಮಗೆ ತಿಳಿಸಬೇಕು.

* ಆರೋಗ್ಯ

* ಸೌಂದರ್ಯ

* ಹೊಸರುಚಿ

* ಗರ್ಭಧಾರಣೆ ಮತ್ತು ಪೋಷಣೆ

* ಸಂಬಂಧ

* ಮನರಂಜನೆ

* ಪ್ರಯಾಣ

ನೋಂದಣಿಗೆ ಬೇಕಾದ ವಿವರ:

ಆಯ್ಕೆ ಮಾಡಿದ ನಂತರ ನಿಮ್ಮ ಐಡಿ ಪುರಾವೆಗಳು (ಪಾನ್ ಕಾರ್ಡ್, ಆಧಾರ್ ಕಾರ್ಡ್), ಬ್ಯಾಂಕ್ ಖಾತೆಯ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ನಿಮ್ಮ ಲೇಖನದ ಬಗ್ಗೆ ಬೇಕಾದ ವಿಚಾರಗಳ ಕುರಿತು ನಿಮ್ಮೊಂದಿಗೆ ಸಂವಹನ ಸಂಪರ್ಕ ಮಾಡುತ್ತೇವೆ.

English summary

Write For Us- Earn Name, Fame & Money

We, at Boldsky (Lifestyle-based online website) are on the lookout for Freelance Content Writers who could send us their write-ups on various sections like Health, Beauty, Pregnancy & Parenting, Relationships, etc.Here's what you should know about before you want to get started:
Subscribe Newsletter