ಮುಂಜಾನೆ ಎದ್ದ ಕೂಡಲೇ ನೀವು ಮಾಡಲೇಬೇಕಾದ ಕೆಲಸಗಳು....

By: Arshad
Subscribe to Boldsky

ದಿನದ ಪ್ರಾರಂಭ ಸೂರ್ಯೋದಯದ ಮೂಲಕವಾದರೆ ಆರೋಗ್ಯಕರ ಎಂದು ಎಲ್ಲಾ ಧರ್ಮಗಳಲ್ಲಿ ತಿಳಿಸಲಾಗಿದೆ. ಈ ಹೊತ್ತಿನಲ್ಲಿ ನಿದ್ದೆ ಅತ್ಯಂತ ಸುಖಕರವಾಗಿದ್ದು ಇದನ್ನು ಬಿಡಲು ಮನಸ್ಸಾಗದೇ ಇರುವ ಕಾರಣ ಹೆಚ್ಚಿನವರು ತಮ್ಮ ದಿನವನ್ನು ತಡವಾಗಿ ಆರಂಭಿಸುತ್ತಾರೆ. ಆದರೆ ಈ ಸುಖವನ್ನು ಕೊಂಚ ತ್ಯಾಗ ಮಾಡಿ ದಿನದ ಪ್ರಥಮ ದಿನವನ್ನು ಈ ಐದು ಕ್ರಿಯೆಗಳ ಮೂಲಕ ಪ್ರಾರಂಭಿಸಿದರೆ ಆರೋಗ್ಯ

ಉತ್ತಮವಾಗುವುದು ಮಾತ್ರವಲ್ಲ, ದಿನದ ಇತರ ಕೆಲಸಕಾರ್ಯಗಳು ಸಹಾ ಸುಸೂತ್ರವಾಗಿ ಜರುಗುತ್ತವೆ. ಈ ವಿಷಯವನ್ನು ಸುಮ್ಮನೇ ಹೀಗೇ ಹೇಳುತ್ತಿಲ್ಲ. ದಿನದ ಪ್ರಥಮ ಗಂಟೆ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯಂತ ಅಮೂಲ್ಯವಾಗಿದ್ದು ದಿನದ ಮುಂದಿನ ಗಂಟೆಗಳ ಕ್ರಿಯಾತ್ಮಕತೆಗೆ ಬುನಾದಿಯಾಗಿದೆ ಎಂದು ಕೆಲವು ಸಂಶೋಧನೆಗಳು ದೃಢಪಡಿಸಿವೆ. ಬೆಳಗ್ಗೆ ಕಡ್ಡಾಯವಾಗಿ ಮಾಡಬೇಕಾದ 9 ಹವ್ಯಾಸಗಳು

ಆದ್ದರಿಂದ ದಿನದ ಪ್ರಾರಂಭವನ್ನು ಸರಿಯಾದ ಕ್ರಮದಲ್ಲಿ ಆರಂಭಿಸುವುದು ಆರೋಗ್ಯಕ್ಕೂ, ವೃತ್ತಿಜೀವನಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಒಟ್ಟು ಐದು ಕ್ರಿಯೆಗಳನ್ನು ಅತಿಮುಖ್ಯವೆಂದು ಪರಿಗಣಿಸಲಾಗಿದ್ದು ವ್ಯಕ್ತಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿಷಯಗಳನ್ನು ನೋಡೋಣ.... 

ಎದ್ದ ಬಳಿಕ ತಾಜಾತನ ಅನುಭವಿಸಿ

ಎದ್ದ ಬಳಿಕ ತಾಜಾತನ ಅನುಭವಿಸಿ

ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಮೊದಲಿನ ಕೆಲಸವೆಂದರೆ ವೈಯಕ್ತಿಯ ಸ್ವಚ್ಛತೆಗೆ ಆದ್ಯತೆ. ಶೌಚಕ್ರಿಯೆ, ಸ್ನಾನ, ಹಲ್ಲುಜ್ಜುವುದು ಮೊದಲಾದವುಗಳ ಮೂಲಕ ದೈಹಿಕವಾಗಿಯೂ, ಪ್ರಾರ್ಥನೆ, ಸೂರ್ಯನಮಸ್ಕಾರ ಮೊದಲಾದ ಮೂಲಕ ಮಾನಸಿಕವಾಗಿಯೂ ತಾಜಾತನ ಅನುಭವಿಸುವ ಮೂಲಕ ಭಾವನಾತ್ಮಕವಾಗಿ

ಹೆಚ್ಚು ಸಬಲರಾಗಲು ಸಾಧ್ಯವಾಗುತ್ತದೆ, ತನ್ಮೂಲಕ ದಿನವಿಡೀ ಧನಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ಸ್ಪಷ್ಟಪಡಿಸಿವೆ.

ಲಿಂಬೆ ರಸ ಬೆರೆಸಿದ ನೀರು.....

ಲಿಂಬೆ ರಸ ಬೆರೆಸಿದ ನೀರು.....

ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ನೀರು ಅಥವಾ ಲಿಂಬೆ, ಜೀರಿಗೆ ಮೊದಲಾದವುಗಳನ್ನು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಸೇವಿಸುವ ಮೂಲಕ ರಾತ್ರಿಯ ಅವಧಿಯಲ್ಲಿ ದೇಹ ಅನೈಚ್ಛಿಕ ಕಾರ್ಯಗಳಿಗೆ ಬಳಿಸಿದ ಬಳಿಕ ಎದುರಾದ ನಿರ್ಜಲೀಕರಣದಿಂದ ಉಂಟಾದ ನೀರಿನ ಕೊರತೆಯನ್ನು ನೀಗಿಸಬಹುದು. ಇದರಿಂದ ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಲಘು ವ್ಯಾಯಾಮ ಹಾಗೂ ಸೆಳೆತಗಳು

ಲಘು ವ್ಯಾಯಾಮ ಹಾಗೂ ಸೆಳೆತಗಳು

ನಮ್ಮ ದೇಹ ಒಂದೇ ಕಡೆ ಕುಳಿತಿರಲಂತೂ ಖಂಡಿತವಾಗಿ ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ ದಿನದ ಹೆಚ್ಚಿನ ಹೊತ್ತು ಚಾಲನೆಯಿಲ್ಲದೇ ಇರುವ ಮೂಲಕ ಸ್ನಾಯುಗಳು ಸೆಡೆತಗೊಳ್ಳುತ್ತವೆ. ದಿನದ ಪ್ರಥಮ ಗಂಟೆಯಲ್ಲಿ ಸುಲಭ ವ್ಯಾಯಾಮ, ವಿಶೇಷವಾಗಿ ಸ್ನಾಯುಗಳನ್ನು ಸೆಳೆಯುವ ಸೆಳೆತದ ವ್ಯಾಯಾಮಗಳನ್ನು ನಿರ್ವಹಿಸುವ ಮೂಲಕ ರಕ್ತಸಂಚಾರ ಉತ್ತಮಗೊಂಡು ಒತ್ತಡ ನಿವಾರಿಸುತ್ತದೆ ಹಾಗೂ ದಿನವಿಡೀ ದೇಹ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಆದರೆ ನಾಳೆ ಎನ್ನುವವನ ಮನೆ ಹಾಳು ಎಂಬಂತೆ ಪ್ರತಿದಿನ ವ್ಯಾಯಾಮವನ್ನು ಮಾಡುವುದು ಅತ್ಯಗತ್ಯ, ರಜಾದಿನಗಳನ್ನೂ ಸೇರಿಸಿ!

ನಿಮ್ಮ ಹಾಸಿಗೆಯನ್ನು ಸರಿಪಡಿಸಿ

ನಿಮ್ಮ ಹಾಸಿಗೆಯನ್ನು ಸರಿಪಡಿಸಿ

ಹೆಚ್ಚಿನವರಿಗೆ ಬೆಳಗ್ಗೆದ್ದ ಬಳಿಕ ತಮ್ಮ ಹೊದಿಗೆ, ಬೆಡ್ ಶೀಟುಗಳನ್ನು ಮಡಚಿಡುವುದು ಎಂದರೆ ಆಗದ ಕೆಲಸ. ಹಾಗೇ ಎದ್ದು ಹೋಗುತ್ತಾರೆ. ಆದರೆ ಎದ್ದ ತಕ್ಷಣ ಅಥವಾ ಸ್ನಾನಮಾಡಿ ಬಂದ ಬಳಿಕ ಹೊದಿಕೆಗಳನ್ನು ಸರಿಯಾಗಿ ಮಡಚಿಡುವುದು, ಬೆಡ್ ಶೀಟ್, ದಿಂಬುಗಳನ್ನು ಸರಿಪಡಿಸುವ ಮೂಲಕ ನಿಮ್ಮ ಹಾಸಿಗೆಯನ್ನು ನೋಡಲು ಸುಂದರವಾಗಿಸಿ. ಅಂತೆಯೇ ಹಾಸಿಗೆಯ ಅಕ್ಕಪಕ್ಕದ ವಸ್ತುಗಳು ಸಹಾ. ಹಾಸಿಗೆ ಸುಂದರವಾಗಿದ್ದಾಗ ಮನವೂ ಪ್ರಫುಲ್ಲವಾಗಿದ್ದು ಇಡಿಯ ದಿನ ಪ್ರಫುಲ್ಲವಾಗಿರಲು ನೆರವಾಗುತ್ತದೆ.

ಮೊಬೈಲ್ ಫೋನ್ ಅನ್ನು ಆದಷ್ಟು ದೂರವಿರಿಸಿ

ಮೊಬೈಲ್ ಫೋನ್ ಅನ್ನು ಆದಷ್ಟು ದೂರವಿರಿಸಿ

ಇಂದು ನಮ್ಮ ಮೊಬೈಲುಗಳು ನಮಗೆ ಅತ್ಯಂತ ಆತ್ಮೀಯವಾಗಿಬಿಟ್ಟಿವೆ. ಹೆಚ್ಚಿನವರು ಬೆಳಿಗ್ಗೆ ಕಣ್ಣು ಬಿಟ್ಟ ಬಳಿಕ ಮೊತ್ತ ಮೊದಲನೆಯದಾಗಿ ಮೊಬೈಲನ್ನು ನೋಡಿ ರಾತ್ರಿ ಬಂದ ಸಂದೇಶಗಳನ್ನು ಓದಿಯೇ ಹಾಸಿಗೆಯಿಂದ ಏಳುತ್ತಾರೆ. ಆದರೆ ಇದು ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಬೆಳಿಗೆದ್ದ ಬಳಿಕ ತಕ್ಷಣ ಫೋನ್ ನೋಡುವುದು ಬೇಡವೇ ಬೇಡ!

ಬೆಳಿಗೆದ್ದ ಬಳಿಕ ತಕ್ಷಣ ಫೋನ್ ನೋಡುವುದು ಬೇಡವೇ ಬೇಡ!

ವಿಶೇಷವಾಗಿ ಮಾನಸಿಕ ಆರೋಗ್ಯದ ಮೇಲೆ ಹಿಂದಿನ ದಿನದ ಋಣಾತ್ಮಕ ವಿಷಯಗಳು ತಲೆಯ ಮೇಲೆ ಮೋಡ ಕವಿದಿರುವಂತೆ ವಿವೇಕವನ್ನು ಮಸುಕಾಗಿಸುತ್ತದೆ. ಇದರಿಂದ ಮನಸ್ಸು ಋಣಾತ್ಮಕ ಚಿಂತನೆ ನಡೆಸುತ್ತಾ ಇಡಿಯ ದಿನ ಋಣಾತ್ಮಕ ಯೋಚನೆಗಳನ್ನೇ ಹೆಚ್ಚು ಬೆಂಬಲಿಸುತ್ತದೆ. ಆದ್ದರಿಂದ ಬೆಳಿಗೆದ್ದ ಬಳಿಕ ತಕ್ಷಣ ಫೋನ್ ನೋಡುವುದು ಬೇಡವೇ ಬೇಡ!ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರಂಟಿ..

ಈ ದಿನದ ಕಾರ್ಯಕ್ರಮಗಳೇನು ಎಂಬುದನ್ನು ಗುರುತುಪಡಿಸಿ

ಈ ದಿನದ ಕಾರ್ಯಕ್ರಮಗಳೇನು ಎಂಬುದನ್ನು ಗುರುತುಪಡಿಸಿ

ಪ್ರತಿಯೊಬ್ಬರಿಗೂ ದಿನದಲ್ಲಿ ನಿರ್ವಹಿಸಬೇಕಾದ ಹಲವು ಕಾರ್ಯಗಳಿರುತ್ತವೆ. ಇವುಗಳಲ್ಲಿ ಮುಖ್ಯವಾದವು ಯಾವುವು? ಯಾವುದನ್ನು ಮೊದಲು ನಿರ್ವಹಿಸಬೇಕು, ಇದಕ್ಕಾಗಿ ಬೇರೇನು ತಯಾರಿ ಮಾಡಿಕೊಳ್ಳಬೇಕು, ಯಾವ ವಸ್ತುಗಳನ್ನು ಕೊಂಡು ಹೋಗಬೇಕು ಎಂಬುದನ್ನು ಸ್ಥೂಲವಾಗಿ ಪರಿಶೀಲಿಸಿ ತಯಾರಿ ಮಾಡಿಟ್ಟುಕೊಳ್ಳಿ. ನೀವು ಹೋಗಬೇಕಾದ ಸ್ಥಳದಲ್ಲಿ ಅಗತ್ಯ ಬೀಳಬಹುದಾದ ಪರಿಕರಗಳನ್ನೂ ಜೊತೆಯಲ್ಲಿ ಕೊಂಡುಕೊಳ್ಳಿ. ಉದಾಹರಣೆಗೆ ಪೆನ್ನು. ಬ್ಯಾಂಕಿಗೆ ಹೋದಾದ ಸಹಿ ಮಾಡಲು ಇನ್ನೊಬ್ಬರಿಂದ ಎರವಲು ಪಡೆಯಲು ಅಂಗಲಾಚಬೇಕಾದ ದೈನ್ಯತೆಯಿಂದ ಇದು ತಪ್ಪಿಸುತ್ತದೆ.

 
English summary

Do These Things In The First Hour Of Your Day

These are some of the most important things that you need to do in the first hour of the day! Do these things in the first hour of your day, as it helps in organising yourself for the entire day. Find out what they are!
Please Wait while comments are loading...
Subscribe Newsletter