For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಕಡ್ಡಾಯವಾಗಿ ಮಾಡಬೇಕಾದ 9 ಹವ್ಯಾಸಗಳು

|

ಪ್ರತಿದಿನವು ಎದ್ದ ಕೂಡಲೆ ಆ ದಿನವನ್ನು ಚೆನ್ನಾಗಿ ಆರಂಭಿಸಬೇಕಾದ ಅಗತ್ಯವಿರುತ್ತದೆ. ಪ್ರತಿ ಮುಂಜಾನೆಯು ಒಂದು ಹೊಸ ಆರಂಭವನ್ನು ನಮಗೆ ನೀಡುತ್ತದೆ. ಅದನ್ನು ಅಷ್ಟೇ ನವೋತ್ಸಾಹದಿಂದ ನಾವು ಎದುರುಗೊಳ್ಳಬೇಕಾಗುತ್ತದೆ. ಅದಕ್ಕಾಗಿ ಕೆಲವೊಂದು ಒಳ್ಳೆಯ ಕೆಲಸಗಳನ್ನು ಬೆಳಗ್ಗೆ ಮಾಡಬೇಕು. ಬೆಳಗ್ಗೆ ಮಾಡುವ ಒಳ್ಳೆಯ ಅಭ್ಯಾಸಗಳು ದಿನವಿಡೀ ನಿಮ್ಮನ್ನು ಉಲ್ಲಾಸದಿಂದ ಇರಿಸುತ್ತವೆ. ಇವುಗಳು ನಿಮ್ಮಲ್ಲಿ ಚೈತನ್ಯವನ್ನು ತುಂಬಿ, ನಿಮ್ಮ ದಿನವನ್ನು ಶುಭದಿನವನ್ನಾಗಿಸುತ್ತದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಬಹುತೇಕ ಮಂದಿ ಯುವಕರಿಗೆ ಬೆಳಗಿನ ಸಮಯ ಎಂದರೆ ಸವಿಯಾದ ನಿದ್ದೆ ಮಾಡುವ ಸಮಯ. ಅಲಾರಂ ಇರಿಸಿಕೊಂಡು ಎದ್ದು, ಮತ್ತೆ ಉದ್ದೇಶ ಪೂರ್ವಕವಾಗಿ ನಿದ್ದೆ ಮಾಡುವ ಸಮಯ ಇದಾಗಿರುತ್ತದೆ. ಅವರು ಹಿರಿಯರು ಅನುಸರಿಸುತ್ತಿದ್ದ ಸೂರ್ಯ ಹುಟ್ಟುವ ಮೊದಲು ಎದ್ದೇಳಬೇಕು ಎಂಬ ಅಂಶಕ್ಕೆ ವಿರೋಧಿಗಳಾಗಿರುತ್ತಾರೆ. ಬೆಳಗಿನ ಉಪಹಾರವನ್ನು ತಪ್ಪಿಸಬಾರದು ಏಕೆ?

ಎಲ್ಲರೂ ಹೀಗೆ ವಿರೋಧಿಸುತ್ತಾರೆ ಎಂದು ಹೇಳಲಾಗುವುದಿಲ್ಲವಾದರು, ಬಹುತೇಕ ಮಂದಿ ಹೀಗೆಯೇ ಮಾಡುತ್ತಾರೆ. ಬನ್ನಿ ಮುಂಜಾನೆ ನಾವು ಮಾಡಬೇಕಾದ ಕೆಲವೊಂದು ಹವ್ಯಾಸಗಳು ಯಾವುವು ಎಂದು ತಿಳಿದುಕೊಂಡು ಬರೋಣ:

ಸ್ವಲ್ಪ ನಗಿ

ಸ್ವಲ್ಪ ನಗಿ

ನಗು ಎಂಬುದು ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾದ ಅಂಶಗಳಲ್ಲಿ ಒಂದು. ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೆ, ಸ್ವಲ್ಪ ನಗುವುದಿರಿಂದ ದಿನವಿಡೀ ಸಂತೋಷವಾಗಿ ಇರಬಹುದು. ಇದರಿಂದ ನಿಮಗೆ ಹಳೆಯ ಸಂತೋಷಕರ ಸನ್ನಿವೇಶಗಳು ನೆನಪಿಗೆ ಬರುತ್ತವೆ.

ಸ್ವಲ್ಪ ನೀರು ಕುಡಿಯಿರಿ

ಸ್ವಲ್ಪ ನೀರು ಕುಡಿಯಿರಿ

ನೀರು ಕುಡಿಯುವುದರಿಂದ ನಿಮ್ಮ ಜಠರದ ಆರೋಗ್ಯವು ಸುಧಾರಿಸುತ್ತದೆ. ಬೆಳ್ಳಗ್ಗೆ ಇದನ್ನು ಸೇವಿಸುವುದರಿಂದ ಖಾಲಿ ಹೊಟ್ಟೆಯಲ್ಲಿರುವ ಕಲ್ಮಶಗಳು ನೇರವಾಗಿ ನಿಮ್ಮ ಕರುಳುಗಳಿಗೆ ರವಾನೆಯಾಗಿ, ದೇಹದಿಂದ ಹೊರಹಾಕಲ್ಪಡುತ್ತವೆ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ನಿತ್ಯ ಕರ್ಮಗಳನ್ನು ಮುಗಿಸಿ

ನಿತ್ಯ ಕರ್ಮಗಳನ್ನು ಮುಗಿಸಿ

ಬೆಳಗ್ಗೆ ಎದ್ದ ಕೂಡಲೆ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿ, ಮುಖ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮನಸ್ಸಿಗೆ ಮುದ ದೊರೆಯುತ್ತದೆ. ಇದನ್ನು ಮಾಡಲು ಸೋಮಾರಿತನ ಮಾಡಬೇಡಿ. ಆರೋಗ್ಯದ ದೃಷ್ಟಿಯಿಂದು ಇದು ತುಂಬಾ ಮುಖ್ಯ. ಇದರಿಂದಾಗಿ ನೀವು ತುಂಬಾ ಫಿಟ್ ಆಗಿರುತ್ತೀರಿ.

ವರ್ಕ್‌ಔಟ್ ಮಾಡಿ

ವರ್ಕ್‌ಔಟ್ ಮಾಡಿ

ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು ವರ್ಕ್ ಔಟ್ ಮಾಡಿ. ಇದರಿಂದ ನಿಮಗೆ ಫಿಟ್‍ನೆಸ್ ದೊರೆಯುತ್ತದೆ. ಜೊತೆಗೆ ಇದು ನಿಮ್ಮ ದಿನವನ್ನು ಮತ್ತಷ್ಟು ಲವಲವಿಕೆಗೊಳಿಸುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೆ ಸ್ವಲ್ಪ ವರ್ಕ್ ಔಟ್ ಮಾಡಿ.

ಸ್ನಾನ ಮಾಡಿ

ಸ್ನಾನ ಮಾಡಿ

ಸ್ವಲ್ಪ ದೀರ್ಘವಾದ ತೃಪ್ತಿಕರವಾದ ಸ್ನಾನವನ್ನು ಮಾಡಿ. ಬೆಳಗ್ಗೆ ಮಾಡುವ ಸ್ನಾನವು ನಿಮ್ಮ ದೇಹದ ಶುದ್ಧಿಗಷ್ಟೇ, ಅಲ್ಲದೆ ಮನಸ್ಸಿನ ಚೈತನ್ಯಕ್ಕು ಸಹ ಅತ್ಯಂತ ಅವಶ್ಯಕ.

ಪ್ರಾರ್ಥನೆ ಮಾಡಿ

ಪ್ರಾರ್ಥನೆ ಮಾಡಿ

ಬೆಳಗ್ಗೆ ಸಾಧ್ಯವಾದರೆ ಧ್ಯಾನ ಮಾಡಿ. ನೀವು ಆಸ್ತಿಕರಾಗಿದ್ದಲ್ಲಿ, ದೇವರ ಧ್ಯಾನವನ್ನು ಮಾಡಿ. ಪೂಜೆ-ಪುನಸ್ಕಾರಗಳು ಮತ್ತು ಪ್ರಾರ್ಥನೆಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ.

ಪರಿಪೂರ್ಣ ಉಪಾಹಾರ

ಪರಿಪೂರ್ಣ ಉಪಾಹಾರ

ಬೆಳಗ್ಗೆ ನೀವು ಸೇವಿಸುವ ಉಪಾಹಾರವು ನಿಮ್ಮ ಇಡೀ ದಿನದ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿರುತ್ತದೆ. ಅದಕ್ಕೆ ಆಂಗ್ಲ ಗಾದೆಯೊಂದು ಹೀಗೆ ಹೇಳಿದೆ: "ಈಟ್ ಬ್ರೇಕ್‍ಫಾಸ್ಟ್ ಲೈಕ್ ಎ ಕಿಂಗ್, ಲಂಚ್ ಲೈಕ್ ಎ ಕ್ವೀನ್ ಅಂಡ್ ಡಿನ್ನರ್ ಲೈಕ್ ಎ ಪೀಸಂಟ್" ಎಂದರೆ ರಾಜನ ರೀತಿ ಉಪಾಹಾರ ಸೇವಿಸು, ರಾಣಿಯ ರೀತಿ ಮಧ್ಯಾಹ್ನದ ಊಟ ಮಾಡು, ರೈತನ ರೀತಿ ರಾತ್ರಿ ಊಟವನ್ನು ಮಾಡು ಎಂದು ಈ ಗಾದೆ ತಿಳಿಸುತ್ತದೆ. ಎಷ್ಟು ಸಾಧ್ಯವೋ ಅಷ್ಟು ಅದ್ಧೂರಿಯಾದ ಉಪಾಹಾರವನ್ನು ಸೇವಿಸಿ.

ದಿನದ ಕುರಿತು ಯೋಜನೆ ತಯಾರಿಸಿ

ದಿನದ ಕುರಿತು ಯೋಜನೆ ತಯಾರಿಸಿ

ಆಯಾ ದಿನ ಏನೇನು ಮಾಡಬೇಕು ಎಂಬ ಕುರಿತು ಯೋಜನೆ ಸಿದ್ಧಪಡಿಸಿ. ಇದರಿಂದ ನಿಮಗೆ ಶಿಸ್ತು ಮೂಡುತ್ತದೆ. ಜೊತೆಗೆ ನಿಮ್ಮ ಕೆಲಸಗಳೆಲ್ಲವು ಸುಗಮವಾಗಿ ನೆರವೇರುತ್ತದೆ. ಯೋಜನೆಯು ಸಮಯವನ್ನು ಸಹ ಉಳಿಸುತ್ತದೆ.

ನಕ್ಕು ನಲಿಯಿರಿ

ನಕ್ಕು ನಲಿಯಿರಿ

ಬೆಳಗ್ಗೆಯೇ ಒಂದು ಒಳ್ಳೆಯ ಮೂಡ್ ಇರಿಸಿಕೊಳ್ಳುವುದರಿಂದ, ಅದು ದಿನದ ಮೇಲೆ ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಬೆಳಗ್ಗೆ ನಗುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಾಗಾಗಿ ಬೆಳಗ್ಗೆ ನಗು ನಗುತ್ತ ಸ್ವಲ್ಪ ಹೊತ್ತಾದರು ಕಾಲ ಕಳೆಯಿರಿ.

English summary

9 Must To Do Morning Habits

Starting a new day with a healthy list of things that has to be done in the morning is the best way to wake up. Mornings signify a new beginning in all aspects, be it at personal or professional front. A good and healthy set of must do morning habits help a person lead a more stable and better quality of life.
X
Desktop Bottom Promotion