Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲಗಲು ಹೊರಟಿರಾ? ಹಾಗಾದರೆ ಇವುಗಳನ್ನು ಒಮ್ಮೆ ಮಾಡಿ ಮುಗಿಸಿ!
ಬೆಳಗ್ಗೆಯಿಂದ ಸಂಜೆಯವರೆಗೂ ದಣಿದ ಜೀವ ಬಯಸುವುದು ಒಂದೇ. ಅದು ಕಣ್ತುಂಬ ನಿದ್ರೆ. ನಿತ್ಯದ ದಿನಚರಿಯಾದ ನಿದ್ರೆ ಸರಿಯಾಗದಿದ್ದರೆ ಅದೇನೋ ಒಂದು ಬಗೆಯ ಕಿರಿ ಕಿರಿ ಉಂಟಾಗುವುದು. ಅದೆಷ್ಟೇ ಕಷ್ಟ-ಸುಖಗಳಿರಲಿ ನಿದ್ರೆ ಮಾಡಿದಾಗ ಎಲ್ಲವೂ ಮರೆಯಾಗುತ್ತವೆ. ಜೊತೆಗೆ ದೇಹಕ್ಕೆ ಶಕ್ತಿ ಹಗೂ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಮರುದಿನದ ಚಟುವಟಿಕೆಗೆ ಸಿದ್ಧರಾಗಲು ಚೈತನ್ಯ ನೀಡುತ್ತದೆ. ಕೆಲವೊಮ್ಮೆ ನಕಾರಾತ್ಮ ಶಕ್ತಿ ನಮ್ಮ ನಿದ್ರೆಯನ್ನು ಕೆಡಿಸುತ್ತದೆ. ಸರಿಯಾಗಿರದ ವಾಸ್ತುವೂ ಸಹ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ನಿದ್ರೆ ಭಂಗವಾಗಿ ಕೆಟ್ಟಕನಸುಗಳು ನಮ್ಮನ್ನು ಕಾಡುತ್ತವೆ.
ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ದಕ್ಷತೆ ಹೆಚ್ಚಿಸಲು ಮತ್ತು ಉತ್ತಮ ನಿದ್ರೆಯಿಂದ ಅದೃಷ್ಟ ಹೆಚ್ಚಿಸಿಕೊಳ್ಳಲು ಕೆಲವು ನಿಯಮ ಹಾಗೂ ಸಂಪ್ರದಾಯಗಳನ್ನು ಅನುಸರಿಸಬೇಕಾಗುವುದು. ಇಲ್ಲವಾದರೆ ಒಂದಲ್ಲಾ ಒಂದು ಬಗೆಯ ತೊಡಕುಗಳು ನಮ್ಮನ್ನು ಕಾಡುತ್ತಿರುತ್ತವೆ. ಈ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಮುಂದೆ ಓದಿ. ನಿಯಮಗಳನ್ನು ಅನುಸರಿಸಿ ಅದೃಷ್ಟಗಳನ್ನು ಪಡೆದುಕೊಳ್ಳಿ....

ಕೆಟ್ಟ ಕನಸುಗಳ ತಡೆಗೆ
ಮಲಗುವ ಮುನ್ನ ಒಂದು ಸಣ್ಣ ಚೀಲದಲ್ಲಿ ಸೋಂಪು ಕಾಳುಗಳ (ಫೆನ್ನೆಲ್ ಸೀಡ್ಸ್)ನ್ನು ತುಂಬಿ, ದಿಂಬಿನ ಕೆಳಗೆ ಇಟ್ಟು, ಮಲಗಬೇಕು. ಹೀಗೆ ಮಾಡುವುದರಿಂದ ಕೆಟ್ಟಕನಸುಗಳಿಂದ ಬೆಚ್ಚಿ ಬೀಳುವುದು, ಬೆವರುವುದು ಮತ್ತು ಭಯಪಡುವ ಸಮಸ್ಯೆ ಇರದು. ಸುಖಕರ ನಿದ್ರೆ ನಿಮ್ಮದಾಗುವುದು.

ಅದೃಷ್ಟ ಹೆಚ್ಚುವುದು
ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿಸಿ, ತಲೆಗೆ ಹತ್ತಿರ ಇರುವ ಮೇಜಿನ ಮೇಲಿಟ್ಟುಕೊಂಡು ಮಲಗಬೇಕು. ಬೆಳಗ್ಗೆ ಈ ತಂಬಿಗೆ ನೀರನ್ನು ಸಸ್ಯಕ್ಕೆ ಹಾಕಬೇಕು. ಈ ವಿಧಾನದಿಂದ ಅದೃಷ್ಟ ಹೆಚ್ಚುವುದು.

ಮಲಗುವ ಮುನ್ನ ಓದುವ ಅಭ್ಯಾಸ
ಮಲಗುವ ಮುನ್ನ ಓದುವುದು ಉತ್ತಮ ಅಭ್ಯಾಸ. ಅದರಲ್ಲೂ ಧಾರ್ಮಿಕ ಹಾಗೂ ಸ್ಫೂರ್ತಿದಾಯಕ ವಿಚಾರಗಳನ್ನು ಓದಿ ಮಲಗಿದರೆ ಮನಸ್ಸಿನ ಒತ್ತಡಗಳು ಕಡಿಮೆಯಾಗುತ್ತವೆ. ಜೊತೆಗೆ ಅಲ್ಝೈಮರ್ಸ್‍ನಂತಹ ರೋಗಗಳನ್ನು ಬಾರದಂತೆ ತಡೆಯಬಹುದು. ಮಲಗುವಾಗ ತಲೆಯು ಉತ್ತರ ದಿಕ್ಕಿಗೆ ಇರುವಂತೆ ಮಲಗಬೇಕು.

ಮೊಬೈಲ್‌ನಿಂದ ದೂರವಿರಿ...
ಮಲಗುವ ಮುನ್ನ ಮೊಬೈಲ್‍ಅನ್ನು ದೂರವಿಡಿ ಅಥವಾ ಸ್ವಿಚ್ ಆಫ್ ಮಾಡಿ. ಕನಿಷ್ಠ ಪಕ್ಷ 10 ನಿಮಿಷ ಧ್ಯಾನಮಾಡಿ. ಇದರಿಂದ ಮೆದುಳಿನ ಶಕ್ತಿ ಮತ್ತು ಏಕಾಗ್ರತೆಯ ಶಕ್ತಿ ಹೆಚ್ಚುವುದು.
ಮಹಿಳೆಯ ಕನಸು ಬಿದ್ದರೆ-ಕನಸಲ್ಲಿ ಅರೆರೆರೇ! ಭವಿಷ್ಯ ಅಯ್ಯಯ್ಯಯ್ಯೋ..!

ಕರ್ಪೂರ ಮತ್ತು ತೆಂಗಿನ ಎಣ್ಣೆ
ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಕಾಲನ್ನು ತೊಳೆಯಬೇಕು. ಕರ್ಪೂರ ಮತ್ತು ತೆಂಗಿನ ಎಣ್ಣೆಯ ಮಿಶ್ರಣದ ತೈಲವನ್ನು ಪಾದ ಹಾಗೂ ಅಂಗಾಲಿಗೆ ಸವರಿಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ಆರಾಮದಾಯಕ ಅನುಭವ ಪಡೆದು, ವಿಶ್ರಾಂತ ನಿದ್ರೆಗೆ ಜಾರಬಹುದು.

ಮಲಗುವ ಮುನ್ನ ವಿಷ್ಣು ಮಂತ್ರ....
ಈ ಕೆಳಗಿನ ವಿಷ್ಣು ಮಂತ್ರವನ್ನು ಜಪಿಸಿ ಮಲಗಿದರೆ ಸಕಾರಾತ್ಮಕ ಶಕ್ತಿಯು ನಿಮ್ಮನ್ನು ರಕ್ಷಿಸುವುದು.
"ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದೃಶಂ, ಮೇಘವರ್ಣಂ ಶುಭಾಂಗಮ್
ಲಕ್ಷ್ಮಿಕಾಂತಂ ಕಮಲನಯನಂ, ಯೋಗಿಹೃದ್ಧ್ಯಾನಗಮ್ಯಂ,
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ''.



Click it and Unblock the Notifications
