Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅಚ್ಚರಿ ಜಗತ್ತು: ಮೈ ನಡುಗಿಸುವ ವಿಚಿತ್ರ ಕಾಯಿಲೆಗಳಿವು!
ವಿಶ್ವದೆಲ್ಲೆಡೆ ಸಾವಿರಾರು ರೋಗಗಳು ಹಾಗೂ ಕಾಯಿಲೆಗಳು ಇದ್ದರೂ ಅದರಲ್ಲಿ ಕೆಲವೊಂದು ತುಂಬಾ ವಿಚಿತ್ರವಾಗಿದೆ. ಇದರ ಬಗ್ಗೆ ಕೇಳಿದರೆ ನೀವು ಆಶ್ಚರ್ಯಚಕಿತರಾಗುವುದರಲ್ಲಿ ಸಂಶಯವೇ ಇಲ್ಲ.
ಮಾನವ ಹಲವಾರು ಸಂಶೋಧನೆಗಳನ್ನು ಮಾಡುತ್ತಾ ಸಾಗಿದಂತೆ ಪ್ರಕೃತಿ ಕೂಡ ಅದಕ್ಕೆ ವಿರುದ್ಧವಾಗಿರುತ್ತದೆ. ಇದರಿಂದ ವಿಶ್ವದೆಲ್ಲೆಡೆಯಲ್ಲಿ ಹಲವಾರು ರೋಗಗಳಿಗೆ ಇಂದಿಗೂ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದರಲ್ಲೂ ಕೆಲವೊಂದು ರೋಗಗಳು ತುಂಬಾ ವಿಚಿತ್ರವಾಗಿದೆ.
ವಿಶ್ವದೆಲ್ಲೆಡೆ ಸಾವಿರಾರು ರೋಗಗಳು ಹಾಗೂ ಕಾಯಿಲೆಗಳು ಇದ್ದರೂ ಅದರಲ್ಲಿ ಕೆಲವೊಂದು ತುಂಬಾ ವಿಚಿತ್ರವಾಗಿದೆ. ಇದರ ಬಗ್ಗೆ ಕೇಳಿದರೆ ನೀವು ಆಶ್ಚರ್ಯಚಕಿತರಾಗುವುದರಲ್ಲಿ ಸಂಶಯವೇ ಇಲ್ಲ. ಈ ಕಾಯಿಲೆ ಬಂದರೆ ಇಪ್ಪತ್ತನಾಲ್ಕು ಗಂಟೆಯಲ್ಲಿ ಸಾವು ಖಚಿತ!
ನೀಲಿ ಚರ್ಮದ ರೋಗ ಅಥವಾ ರಕ್ತಪಿಶಾಚಿ ರೋಗಗಳು ಇದರಲ್ಲಿ ಕೆಲವು. ಇಂತಹ ಕೆಲವು ರೋಗಗಳ ಬಗ್ಗೆ ನಿಮಗೆ ತಿಳಿದಿರಲಿಕ್ಕೂ ಇಲ್ಲ. ಈ ಲೇಖನದಲ್ಲಿ ಅಂತಹ ಕೆಲವೊಂದು ರೋಗಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ....

ನಿರಂತರ ಲೈಂಗಿಕ ಪ್ರಚೋದನೆಯ ಕಾಯಿಲೆ
ಇದು ವ್ಯಕ್ತಿಯೊಬ್ಬನು ಅನುಭವಿಸುವಂತಹ ಅತ್ಯಂತ ವಿಚಿತ್ರವಾಗಿರುವಂತಹ ರೋಗವಾಗಿದೆ. ಈ ಕಾಯಿಲೆ ಇರುವ ವ್ಯಕ್ತಿಗೆ ನಿರಂತರ 24 ಗಂಟೆಯೂ ಜನನಾಂಗ ಉದ್ರೇಕವಾಗುತ್ತಿರುತ್ತದೆ. ಇದು ನಿರಂತರ, ನಿಷ್ಕರುಣೆಯ ಜನನಾಂಗದ ಉದ್ರೇಕವಾಗಿದೆ. ಇದಕ್ಕೆ ಹಾಗೂ ಲೈಂಗಿಕ ಆಕಾಂಕ್ಷೆಗಳಿಗೆ ಯಾವುದೇ ಸಂಬಂಧವಿಲ್ಲ. ಎಷ್ಟು ವಿಚಿತ್ರವಲ್ಲವೇ?

ತೋಳಮಾನವ ಲಕ್ಷಣ
ಕೆಲವರು ಹೆಚ್ಚುವರಿ ಕೂದಲನ್ನು ಬೆಳೆಯುವಂತಹ ಎಕ್ಸ್ ವರ್ಣತಂತುವಿನೊಂದಿಗೆ ಜೀನ್‌ಗಳೊಂದಿಗೆ ಜನಿಸಿರುತ್ತಾರೆ. ಇಂತಹ ವ್ಯಕ್ತಿಗಳ ಮುಖ ಪೂರ್ತಿ ಕೂದಲು ಬೆಳೆಯುತ್ತದೆ. ವಿಶ್ವದೆಲ್ಲೆಡೆಯಲ್ಲಿ ಇಂತಹ ಸುಮಾರು 50 ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲೂ ಮಧ್ಯಮ ವಯಸ್ಸಿನವರಲ್ಲಿ ಇದು ಕಂಡುಬರುವುದು.

ಸ್ಫೋಟಗೊಳ್ಳುವ ತಲೆ ಕಾಯಿಲೆ!
ಇದು ವಿಶ್ವದೆಲ್ಲೆಡೆಯಲ್ಲಿ ಸಾವಿರಾರು ಮಂದಿಯಲ್ಲಿ ಕಂಡುಬರುತ್ತಾ ಇದೆ. ಇಂತಹ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಬಾಂಬ್ ಸಿಡಿದಂತೆ, ಗುಂಡು ಹಾರಿಸಿದಂತೆ ಅಥವಾ ಇತರ ಯಾವುದೇ ಜೋರಾದ ಸದ್ದು ಮಲಗುವ ಸಮಯದಲ್ಲಿ ಕಿವಿಗೆ ಕೇಳಿಸುತ್ತದೆ.

ಆಲಿಸ್ ಇನ್ ವಂಡರ್ಲ್ಯಾಂಡ್
ಈ ಕಾಯಿಲೆ ಬಗ್ಗೆ ಓದಿದರೆ ನಿಮಗೆ ತುಂಬಾ ವಿಚಿತ್ರವೆನಿಸುತ್ತದೆ. ಇಂತಹ ಕಾಯಿಲೆಯಿಂದ ಹಲವಾರು ಮಂದಿ ಬಳಲುತ್ತಾ ಇರುತ್ತಾರೆ. ಭ್ರಮೆ, ದಿಗ್ಭ್ರಮೆ ಮತ್ತು ಗಾತ್ರ ಸರಿಯಾಗಿ ಕಾಣಿಸದೆ ಇರುವುದು ಈ ರೋಗದ ಲಕ್ಷಣವಾಗಿದೆ. ಇದು ಬಾಲ್ಯದಲ್ಲಿ ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಯೌವನಕ್ಕೆ ಕಾಲಿಡುತ್ತಾ ಇರುವಂತೆ ಇದು ಸಂಪೂರ್ಣವಾಗಿ ವ್ಯಕ್ತಿಯನ್ನು ಆವರಿಸುತ್ತದೆ.

ಏಲಿಯನ್ ಕೈ
ಇದು ತುಂಬಾ ಅಚ್ಚರಿ ಮೂಡಿಸುವಂತಹ ನರವಿಜ್ಞಾನದ ಕಾಯಿಲೆಯಾಗಿದೆ. ಒಬ್ಬ ವ್ಯಕ್ತಿಯ ಕೈಯು ಆತನ ನಿಯಂತ್ರಣವಿಲ್ಲದೆ ಮತ್ತು ಆತನಿಗೆ ಪರಿವೆಯೇ ಇಲ್ಲದೆ ಅತ್ತಿತ್ತ ಹೋಗುತ್ತಾ ಇರುತ್ತದೆ. ಯಾವುದೇ ವಸ್ತುವಿನ ಕಡೆ ಕೈಯು ಸಾಗಬಹುದು ಮತ್ತು ಅದನ್ನು ತುಂಬಾ ಕುಶಲತೆಯಿಂದ ಹಿಡಿಯಬಹುದು.

ನೀಲಿ ಚರ್ಮ ರೋಗ
ಬೆಳ್ಳಿಯ ರಾಸಾಯನಿಕಗಳಿಗೆ ದೇಹವು ಅತೀ ಹೆಚ್ಚು ಒಗ್ಗಿಕೊಂಡಾಗ ಇದು ಕಾಣಿಸುತ್ತದೆ. ದೇಹದ ಹೆಚ್ಚಿನ ಭಾಗವು ಈ ರೋಗದಿಂದ ಪ್ರಭಾವಿತವಾಗಿರುತ್ತದೆ. ಈ ಕಾಯಿಲೆಯಿಂದ ವ್ಯಕ್ತಿಯ ಚರ್ಮವು ನೀಲಿ ಬಣ್ಣಕ್ಕೆ ತಿರುಗುವುದು.



Click it and Unblock the Notifications