ಸಾವಿನ ಭಯವನ್ನು ದೂರ ಮಾಡಿ, ಬದುಕಲು ಆರಂಭಿಸಿ

By Gururaja Achar

ನಾವು ಸದಾಕಾಲವೂ ಅಮರತ್ವವನ್ನೇ ಬಯಸುತ್ತೇವೆ. ಸಾಮಾನ್ಯವಾಗಿ ಮನುಷ್ಯನು ಎಂದೆಂದಿಗೂ ತೀರದ ಆಯಸ್ಸು, ಬತ್ತದ ಅವಕಾಶಗಳು, ಮತ್ತು ತನ್ನ ಜೇವನದ ಕುರಿತ ಸ್ವನಿಯoತ್ರಣದ ಬಗ್ಗೆ ಹಗಲುಗನಸು ಕಾಣುತ್ತಲೇ ಇರುತ್ತಾನೆ. ಆದರೆ ವಾಸ್ತವವೇನೆಂದರೆ, ಮನುಷ್ಯನ ಆಯಸ್ಸು ಸೀಮಿತವಾದುದಾಗಿದ್ದು, ಆತನು ಪರಿಸ್ಥಿತಿಯ ಕೈಗೊoಬೆಯಾಗಿರುತ್ತಾನೆ.

ಪರಿಸ್ಥಿತಿಯನ್ನು ಮೀರಿದ ಯಾವುದೂ ಅವನ ನಿಯಂತ್ರಣದಲ್ಲಿಲ್ಲ. ಮನೋವೈದ್ಯರ ಸಹಾಯ ಯಾಚಿಸುವ ಹೆಚ್ಚಿನವರ ಒಂದು ಸಾಮಾನ್ಯವಾದ ಸಮಸ್ಯೆ ಅಥವಾ ದೂರು ಏನೆಂದರೆ ಅದು ಸಾವಿನ ಕುರಿತಾದ ಭಯ. ಈ ಸಾವಿನ ಭಯ ಎಂಬುದು, ಅದು ಸುಪ್ತಭೀತಿಯೇ ಆಗಿರಲಿ ಅಥವಾ ಜಾಗೃತವಾದುದೇ ಆಗಿರಲಿ, ಎಲ್ಲರನ್ನೂ ಒಂದಲ್ಲ ಒಂದು ರೂಪದಲ್ಲಿ ಕಾಡುತ್ತಲೇ ಇರುತ್ತದೆ.

Don’t Fear Death, Begin To Live

ಸಾವಿನ ಕುರಿತಾದ ಭಯದ ಕಾರಣದಿಂದ, ಕೆಲವು ವ್ಯಕ್ತಿಗಳು ಬಹುವಾದ ಉದ್ವೇಗದಿಂದ, ವಿವಿಧ ವಸ್ತು ಅಥವಾ ವಿಷಯಗಳ ಕುರಿತಾದ ಭಯಗಳಿಂದ (phobias), ದಿಕ್ಕೇ ತೋಚದಂತಾಗುವ ಪರಿಸ್ಥಿತಿಯಿಂದ (panic), ಭ್ರಮೆಯಿಂದ ಬಳಲುತ್ತಿದ್ದು, ಅವರ ಸಮಯ, ಶ್ರಮ, ಶಕ್ತಿಯೆಲ್ಲವೂ ಈ ಸಾವಿನ ಭಯದ ವಿರುದ್ಧ ಸೆಣಸುವುದರಲ್ಲೇ ವ್ಯರ್ಥವಾಗುತ್ತದೆ.

ನೀವರಿಯದ ಸಾವಿನ ಕರಾಳ ಲಕ್ಷಣಗಳು!

ಈ ಸಾವಿನ ಭಯದ ವಿರುದ್ಧ ಸೆಣಸಲು ಅವರು ನಾನಾ ಮಾರ್ಗೋಪಾಯಗಳನ್ನು ಅನುಸರಿಸುತ್ತಾರೆ. ಕೆಲವರು "ಸಾವು ಇನ್ನೂ ದೂರದಲ್ಲಿದೆ. ಹಾಗಾಗಿ ನಾವು ಜೀವನದ ಹೋರಾಟದಲ್ಲಿ ಏನೇ ಆಗಲಿ ಮುಂದುವರಿಯಬೇಕು" ಎಂದು ತಮ್ಮನ್ನು ತಾವೇ ಸoತೈಸಿಕೊಳ್ಳುತ್ತಾರೆ.

ಇನ್ನು ಕೆಲವರು ಜನಮಾನಸದಲ್ಲಿ ನೆನಪಿನ ರೂಪದಲ್ಲಿ ಶಾಶ್ವತವಾಗಿ ಉಳಿಯುವ ಮೂಲಕ ಸಾವನ್ನು ಗೆದ್ದoತಾಗಲಿ ಎಂದು ಆಶಿಸುತ್ತಾ ಹೆಸರು, ಕೀರ್ತಿಯನ್ನು ಕಲೆಹಾಕುವುದರಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರಂತೂ ತಮ್ಮ ದೈಹಿಕ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳುವುದಕ್ಕೋಸ್ಕರ ತಮ್ಮ ಶರೀರ ಮತ್ತು ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದ ಕಾಳಜಿ ವಹಿಸುತ್ತಾರೆ.

ಸಾವಿನ ಕುರಿತಾದ ಭಯವನ್ನು ಮೀರಿ ನಿಲ್ಲುವುದಕ್ಕೋಸ್ಕರ ಇಷ್ಟೆಲ್ಲಾ ಪ್ರಯತ್ನಗಳನ್ನು ಕೈಗೊoಡಿದ್ದಾಗ್ಯೂ ಕೂಡ, ನಮ್ಮಲ್ಲಿ ಅನೇಕರು ಆಗಾಗ್ಗೆ ಸಾವಿನ ನಂತರ ಮುಂದೇನು ? ಎಂಬುದರ ಕುರಿತು ಚಿoತೆಗೀಡಾಗುತ್ತೇವೆ. ನಾವಿದುವರೆಗೂ ಸಾವನ್ನು ಎದುರಿಸದೆ ಇರುವ ಕಾರಣ, ಸಾವಿನ ಕುರಿತು ನಾವು ಅಷ್ಟೆಲ್ಲಾ ಭಯಪಡಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಮನಸ್ಸಿನ ಆಳವಾದ ಅತ್ಮಾವಲೋಕನದಿಂದ ಕಂಡುಬರುವ ಅಂಶವೇನೆಂದರೆ, ಜನರು ಸಾವಿನ ಕುರಿತು ಭಯ ಪಡಲು ಕಾರಣ, ಅವರು ತಮ್ಮ ಜೀವಿತಾವಧಿಯ ಕಾಲದಲ್ಲಿ ಜೀವನದ ಅರ್ಥ ಏನು ಎಂಬುದನ್ನು ಅರಿಯುವಲ್ಲಿ ವಿಫಲರಾಗಿರುವುದು. ಈ ಕಾರಣದಿಂದ ಜನರು ವಿಷಾದ, ಅಪರಾಧಿ ಮನೋಭಾವ, ಮತ್ತು ಸಿಟ್ಟಿನಂತಹ ಭಾವನೆಗಳಿಂದ ಬಳಲುತ್ತಿರುತ್ತಾರೆ.

ನಿಮ್ಮ ಆರೋಗ್ಯಕ್ಕೆ ಲಾಭದಾಯಕವಾಗಿರುವ 7 ಭಾರತೀಯ ಸಂಪ್ರದಾಯಗಳು

ನಮ್ಮಲ್ಲಿ ಅಂತರ್ಗತವಾಗಿರುವ ಆ ಪ್ರಚಂಡ ಶಕ್ತಿಗೆ ಅರಳಿ ಬೆಳಗಲು ಅವಕಾಶ ನೀಡದೇ ಹೋದಾಗ ನಾವು ಒಂದು ರೀತಿಯ ಶೂನ್ಯ ಭಾದಿಂದ ಆಕ್ರಮಿಸಲ್ಪಡುತ್ತೇವೆ. ಜನನ ಕಾಲದಲ್ಲಿ ನಾವೆಲ್ಲಾ ಬೀಜಗಳಿಗೆ ಹೋಲಿಸಿಕೊಳ್ಳಬಹುದಾಗಿದ್ದು, ಜೀವನದ ಉದ್ದೇಶವು ಬೆಳೆದು, ಅಭಿವೃದ್ಧಿಯನ್ನು ಸಾಧಿಸಿ, ನಮ್ಮ ಸಾಮರ್ಥ್ಯದ ಉತ್ತುಂಗವನ್ನು ತಲುಪಿ ಅಸಾಧಾರಣವಾದುದನ್ನು ಸಾಧಿಸುವುದೇ ಆಗಿದೆ.

ದುರದೃಷ್ಟವಶಾತ್, ನಮ್ಮಲ್ಲಿ ಅನೇಕರಿಗೆ ಇಂತಹ ಒಂದು ಮಹಾನ್ ಜೀವನ ಪ್ರಕ್ರಿಯೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ತತ್ಪರಿಣಾಮವಾಗಿ, ಬೆಳವಣಿಗೆ ಅಥವಾ ವ್ಯಕ್ತಿ ವಿಕಾಸವು ಅಡಚಣೆಗೆ ಒಳಗಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ದ್ವಂದ್ವ ಸಂದಿಗ್ಧಗಳು, ಅಪಘಾತಗಳು, ಅಹಂ ಸಂಬಂಧೀ ಕಲಹಗಳು, ಮತ್ತಿತರ ಅಡಚಣಾತ್ಮಕ ಅಂಶಗಳ ಕಾರಣಗಳಿಂದಾಗಿ ತಮ್ಮ ಜೀವನದ ಅತ್ಯುತ್ತಮ ಕೊಡುಗೆಯನ್ನು ನೀಡಲು ವಿಫಲರಾಗುತ್ತಾರೆ.

ನಾವು ನಮ್ಮ ಅತ್ಯಂತ ಆತ್ಮೀಯರಾದವರನ್ನು ಪೂರ್ಣ ಪ್ರಮಾಣದಲ್ಲಿ ಪ್ರೀತಿಸುವಲ್ಲಿ ಎಡವಿದಾಗ ಅಪರಾಧಿ ಮನೋಭಾವದಿಂದ ಬಳಲುತ್ತೇವೆ. ಅತೀ ಆತ್ಮೀಯವಾದ ಸಂಬoಧಗಳಲ್ಲಿಯೂ ಕೂಡ ಕೆಲವರು ಕೊಡುವುದಕ್ಕಿಂತಲೂ ಕೂಡ ಪಡೆಯುವುದರಲ್ಲೇ ಹೆಚ್ಚಾಗಿ ಆಸಕ್ತರಾಗಿರುತ್ತಾರೆ.

ಇಂತಹ ಒಂದು ಮನಸ್ಥಿತಿಯು ಕೆಲವೊಮ್ಮೆ ಧೀರ್ಘಕಾಲದವರೆಗೂ ಅನುಕೂಲಕರ ಎಂದೆನಿಸಿದರೂ ಕೂಡ, ನಾವು ದ್ರೋಹ ಮಾಡುತ್ತಿದ್ದೇವೆ ಎಂಬುದಾಗಿ ನಮ್ಮ ಅಂತರಾತ್ಮವು ನಮ್ಮನ್ನು ತಿವಿಯುತ್ತಿರುತ್ತದೆ. ಕಟ್ಟಕಡೆಗೆ ಒಂದು ದಿನ, ನಮ್ಮ ಅತ್ಮಸಾಕ್ಷಿಯು ನಮ್ಮ ಅಪರಾಧವನ್ನು ನಿಚ್ಚಳವಾಗಿ ಖಚಿತಪಡಿಸುತ್ತದೆ ಆಗ ನಮಗೆ ನಮ್ಮ ತಪ್ಪಿನ ಅರಿವಾಗುತ್ತದೆ ಆದರೆ ಅಷ್ಟರಲ್ಲಿ ಅಸಹಾಯಕರಾಗಿರುತ್ತೇವೆ.

ಇದಕ್ಕೆ ವ್ಯತಿರಿಕ್ತವಾಗಿ ಕೆಲವರು ಸಂಬಂಧಗಳಲ್ಲಿ ಎಂದಿಗೂ ತಮ್ಮ ಭಾವನೆ, ಅವಶ್ಯಕತೆ, ಮತ್ತು ಮನಸ್ಸಿನ ಆಸೆಗಳ ಕುರಿತು ಹೇಳಿಕೊಳ್ಳುವುದಿಲ್ಲ ಆದರೆ, ಮತ್ತೋರ್ವನಿಗೆ ಧಾರಾಳವಾಗಿ ನೀಡುವುದರಲ್ಲಿ ತೃಪ್ತರಾಗುತ್ತಾರೆ.

ಇಂತಹ ಪ್ರವೃತ್ತಿಯು ವ್ಯಕ್ತಿಯಲ್ಲಿ ಅನಾದರ ಮತ್ತು ಕೋಪದ ಭಾವನೆಗಳನ್ನು ಹುಟ್ಟುಹಾಕುತ್ತದೆ. ಅವರು ಈ ಸಿಟ್ಟಿನ ಭಾವನೆಯನ್ನು ಒಳಗೊಳಗೆ ಮುಚ್ಚಿಡುತ್ತಾರೆಯಾದರೂ, ಇತರರೊಂದಿಗಿನ ಅವರ ನಿಜವಾದ ಸಂಬಂಧವನ್ನು ಅದು ಹಾಳುಗೆಡವುತ್ತದೆ. ವಿಷಾದಭಾವ, ಅಪರಾಧೀಭಾವ, ಮತ್ತು ಕೋಪವು ನಮ್ಮ ಜೀವನವನ್ನು ನಿರರ್ಥಕಗೊಳಿಸುತ್ತದೆ. ಸಾಮಾನ್ಯವಾಗಿ ಜನರು ಇಂತಹ ವ್ಯರ್ಥ ವಿಷಯಗಳನ್ನು ತ್ಯಜಿಸುವ ಪ್ರಯತ್ನದಲ್ಲಿ ಜೀವನ ಸಾರ್ಥಕ್ಯವನ್ನು ಕಾಣುತ್ತಾರೆ.

ದೇವಸ್ಥಾನದ ಗಂಟೆಯ ನಿನಾದದ ಮಹತ್ವ ಅರಿಯಿರಿ

ಸಾವಿನ ಕುರಿತಾದ ಭಯದಿಂದ ಪಾರಾಗಲು ನಾವು ಮೊದಲು ನಮ್ಮ ಅಸ್ತಿತ್ವದ ಅರ್ಥದ ಕುರಿತು ನಿರಂತರವಾಗಿ ಚಿಂತಿಸಬೇಕು. ನಾವು, ಜೀವನವು ನಮಗೆ ತoದೊಡ್ಡಬಹುದಾದ ಎಲ್ಲಾ ಪ್ರತಿರೋಧಗಳನ್ನು ಎದುರಿಸಲು ಸಮರ್ಥರಾಗುವಂತೆ ನಮ್ಮ ಅಂತ: ಶಕ್ತಿಯನ್ನು ಗರಿಷ್ಠ ಮಟ್ಟಕ್ಕೆ ಅಭಿವೃದ್ಧಿಗೊಳಿಸಿಕೊoಡಿರುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.

ನಮ್ಮ ಸಾಮರ್ಥ್ಯಗಳು ಮತ್ತು ನಮ್ಮ ಜೀವನದ ಗುರಿಗಳು ಹಾಗೂ ನಮ್ಮ ಸಂಪೂರ್ಣ ಗಮನವನ್ನು ಅವುಗಳತ್ತ ಹರಿಸುವುದರ ಮೂಲಕ ನಾವು ನಮ್ಮ ಶಕ್ತಿಯನ್ನು ಅರಿತುಕೊಳ್ಳಬಹುದು.

ಸಂಬಂಧಗಳಲ್ಲಿ ನಾವು ಯಾರಿಗೇ ಆಗಲಿ ಅವರಿಗೂ ವ್ಯಕ್ತಿತ್ವವಿದೆ ಎಂಬುದನ್ನು ಮೊದಲು ಅರಿಯಬೇಕು ಮತ್ತು ಯಥೋಚಿತವಾಗಿಯೇ ಎಲ್ಲಾ ಸಂಬಂಧಗಳಲ್ಲಿಯೂ ವ್ಯವಹರಿಸಬೇಕು. ನಮಗೆ ಅವಶ್ಯವಾಗಿರುವoತೆಯೇ ನಮ್ಮ ಆತ್ಮೀಯರಿಗೂ ಸಹ ಪ್ರೀತಿ, ಕಾಳಜಿ, ಮತ್ತು ಗಮನದ ಅವಶ್ಯಕತೆ ಇರುತ್ತದೆ. ಒಂದು ವೇಳೆ, ನಮ್ಮ ಆತ್ಮೀಯರ ಕುರಿತು ನಮಗೆ ಕೋಪವಿದ್ದರೆ, ಅವರಿಗೆ ನೋವಾಗದಂತೆ, ಅವರನ್ನು ದ್ವೇಷಿಸದೇ ಕೋಪದ ಕುರಿತ ಕಾರಣವನ್ನು ತಿಳಿಯಪಡಿಸುವುದು ಬಹಳ ಮುಖ್ಯವಾದುದು.

ನಮ್ಮ ಅಸ್ತಿತ್ವದ ಕುರಿತು ಅರ್ಥಮಾಡಿಕೊಳ್ಳುವುದರ ಮೂಲಕ ನಾವು ನಮ್ಮ ಸಂಕುಚಿತ ಮನೋಭಾವನೆಯಿಂದ ಹೊರಬರಬಹುದು. ಜೀವನಕ್ಕೊಂದು ಅರ್ಥವನ್ನು ಕಂಡುಕೊಂಡು, ನಮ್ಮ ಅಹಂ ಅನ್ನು ಮೀರಿ ಬೆಳೆದಾಗ, ಸಾವಿನ ಕುರಿತಾದ ಭಯವು ಇಲ್ಲವಾಗುತ್ತದೆ. ಇಂತಹ ಒಂದು ಸ್ಥಿತಿಯಲ್ಲಿ ನಮಗೆ ಬಿಡುಗಡೆಯ ಅನುಭವವಾಗಿ ಜೀವನದ ಅಪಾರವಾದ ಸಾಧ್ಯತೆಗಳ ಕುರಿತು ಮನವರಿಕೆಯಾಗುತ್ತದೆ.

Story first published: Saturday, April 26, 2014, 17:17 [IST]
X
Desktop Bottom Promotion