Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮೇ ತಿಂಗಳು ದ್ವಾದಶ ರಾಶಿಗಳಿಗೆ ಆರೋಗ್ಯದ ದೃಷ್ಟಿಯಿಂದ ಹೇಗಿದೆ?
ಆರೋಗ್ಯವೇ ಭಾಗ್ಯ, ಆರೋಗ್ಯ ಸರಿಯಿದ್ದರೆ ಒಕೆ, ಇಲ್ಲಾಂದ್ರೆ ಆ ತಿಂಗಳ ಬಜೆಟ್ ಪ್ಲ್ಯಾನ್ ಕೂಡ ಉಲ್ಟಾಪಲ್ಟಾ ಆಗುವುದು. ಆಸ್ಪತ್ರೆಗೆ ಒಂದು ವಿಸಿಟ್ ಕೊಟ್ಟರೆ ಸಾವಿರ ಲೆಕ್ಕದಲ್ಲಿ ಹಣ ಸುರಿಯಬೇಕು. ವೈದಿಕ ಶಾಸ್ತ್ರದ ಪ್ರಕಾರ ಆರೋಗ್ಯಕ್ಕೂ ಗ್ರಹಗಳ ಸ್ಥಾನಕ್ಕೂ ಸಂಬಂಧವಿದೆ. ಹಾಗಾಗಿ ಈ ಮೇ ತಿಂಗಳ ಮೇ ತಿಂಗಳು ಆರೋಗ್ಯದ ದೃಷ್ಟಿಯಿಂದ ದ್ವಾದಶ ರಾಶಿಗಳಿಗೆ ಹೇಗಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಆರೋಗ್ಯದ ವಿಷಯದಲ್ಲಿ, ಮೇ ತಿಂಗಳು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ. ತಿಂಗಳ ಆರಂಭವು ನಿಮಗೆ ಉತ್ತಮವಾಗಿರುತ್ತದೆ, ಆದರೆ ನಂತರ ಆರೋಗ್ಯ ಸಮಸ್ಯೆ ಕಾಡುವುದು. ಹೆಚ್ಚುತ್ತಿರುವ ಕೆಲಸದ ಹೊರೆಯಿಂದಾಗಿ ವಿಶ್ರಾಂತಿ ಪಡೆಯುವುದಿಲ್ಲ, ಇದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಈ ಅವಧಿಯಲ್ಲಿ ಮಾನಸಿಕವಾಗಿಯೂ ತುಂಬಾ ಒತ್ತಡಕ್ಕೆ ಒಳಗಾಗುತ್ತೀರಿ. ಉತ್ತಮ ಆರೋಗ್ಯಕ್ಕಾಗಿ, ನೀವು ಸಮಯಕ್ಕೆ ಸರಿಯಾಗಿ ಊಟವನ್ನು ತೆಗೆದುಕೊಳ್ಳಬೇಕು ಹಾಗೂ ಸಾಕಷ್ಟು ವಿಶ್ರಾಂತಿ ಪಡೆಯಬೇಕು.
ವೃಷಭ ರಾಶಿ
ನಿಮ್ಮ ಆರೋಗ್ಯವು ಸ್ವಲ್ಪ ಸಮಯದವರೆಗೆ ಉತ್ತಮವಾಗಿಲ್ಲದಿದ್ದರೆ, ಈ ಸಮಯದಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಆದರೆ ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸುತ್ತಿರಿ. ನೀವು ನಿರ್ಲಕ್ಷ್ಯ ಮಾಡಿದರೆ ಆಸ್ಪತ್ರೆಗೆ ಅಧಿಕ ಖರ್ಚು ಮಾಡಬೇಕಾಗುವುದು. ಪ್ರತಿದಿನ ಲಘು ವ್ಯಾಯಾಮದ ಜೊತೆಗೆ ಧ್ಯಾನವನ್ನೂ ಮಾಡಬೇಕು.
ಮಿಥುನ ರಾಶಿ
ಈ ಸಮಯದಲ್ಲಿ ಆಹಾರದಲ್ಲಿನ ತೊಂದರೆಯಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ತಿಂಗಳ ಆರಂಭವು ನಿಮಗೆ ಸ್ವಲ್ಪ ನಿಧಾನವಾಗಿರಲಿದೆ. ಆದರೆ ಕ್ರಮೇಣ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ನಿಮ್ಮ ಮೇಲೆ ಅತಿಯಾದ ಕೆಲಸದ ಒತ್ತಡ ಹಾಕಬೇಡಿ. ಇದಲ್ಲದೇ ಅನಗತ್ಯ ಚಿಂತೆಗಳಿಂದ ದೂರವಿರಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ಕರ್ಕ ರಾಶಿ
ಆರೋಗ್ಯದ ವಿಷಯದಲ್ಲಿ, ಈ ತಿಂಗಳು ನಿಮಗೆ ಉತ್ತಮವಾಗಿದೆ. ಈ ಸಮಯದಲ್ಲಿ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಬಹುದು. ಯಾವುದೇ ಕಾಯಿಲೆಯು ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದರೆ, ಈ ಸಮಯದಲ್ಲಿ ನೀವು ಸುಧಾರಣೆ ಕಾಣಬಹುದು. ನಿಮ್ಮ ಜೀವನಶೈಲಿಯಲ್ಲಿ ನೀವು ಕೆಲವು ಅಗತ್ಯ ಬದಲಾವಣೆಗಳನ್ನು ಮಾಡುತ್ತೀರಿ, ಅದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಸಿಂಹ ರಾಶಿ
ನಿರಂತರ ಕೆಲಸ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಬಿಡುವಿಲ್ಲದ ಕೆಲಸದ ನಡುವೆ ವಿಶ್ರಾಂತಿ ಕಡೆಯೂ ಗಮನಹರಿಸಿ. ನೀವು ಸಿಗರೇಟ್, ಮದ್ಯಪಾನ ಗುಟ್ಕಾ ಮುಂತಾದ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ, ಈ ಅವಧಿಯಲ್ಲಿ ಈ ಕೆಟ್ಟ ಅಭ್ಯಾಸಗಳಿಂದ ದೂರವಿರಿ. ನಿಮ್ಮ ದಿನಚರಿಯಲ್ಲಿ ನೀವು ಯೋಗ ಮತ್ತು ಧ್ಯಾನವನ್ನು ಸೇರಿಸಿಕೊಳ್ಳಬೇಕು.
ಕನ್ಯಾ ರಾಶಿ
ಅನಗ್ಯತ ಚಿಂತೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ನೆಗೆಟಿವ್ ಆಲೋಚನೆಗಳಿಂದ ದೂರಿವಿದ್ದರೆ ಶೀಘ್ರದಲ್ಲೇ ನೀವು ಉತ್ತಮ ಬದಲಾವಣೆಗಳನ್ನು ನೋಡುತ್ತೀರಿ. ತಿಂಗಳ ಕೊನೆಯಲ್ಲಿ, ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರುತ್ತದೆ, ಆದರೆ ಸರಿಯಾದ ಚಿಕಿತ್ಸೆಯಿಂದ, ಈ ಸಮಸ್ಯೆ ದೂರಾಗುವುದು.
ತುಲಾ ರಾಶಿ
ನಿಮಗೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆ ಇದ್ದರೆ, ಈ ತಿಂಗಳು ನಿಮ್ಮ ಸಮಸ್ಯೆ ಹೆಚ್ಚಾಗಲಿದೆ. ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಹೊರಗಿನ ಆಹಾರವನ್ನು ತಪ್ಪಿಸಿ. ಇದಲ್ಲದೆ, ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳೊಂದಿಗೆ ಹಸಿರು ತರಕಾರಿಗಳನ್ನು ಸಹ ನೀವು ಸೇರಿಸಿಕೊಳ್ಳಬೇಕು. ನಿಮ್ಮನ್ನು ಫಿಟ್ ಆಗಿ ಮತ್ತು ಸಕ್ರಿಯವಾಗಿ ಇರಿಸಿಕೊಳ್ಳಲು ಆಹಾರಕ್ರಮ, ವ್ಯಾಯಾಮದತ್ತ ಗಮನಹರಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಮೇ ತಿಂಗಳು ತುಂಬಾ ಆಯಾಸವನ್ನುಂಟು ಮಾಡಲಿದೆ. ಅದು ವೈಯಕ್ತಿಕ ಅಥವಾ ವೃತ್ತಿಪರ ಜೀವನದ ಮೇಲೆ ಪ್ರಭಾವ ಬೀರಲಿದ. ಅಂತಹ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ನೀವು ಸಣ್ಣ ವಿಷಯಗಳಿಗೆ ಕೋಪಗೊಳ್ಳಬಹುದು. ಇದು ಆರೋಗ್ಯದ ಮೇಲೂ ಪ್ರಭಾವ ಬೀರುವುದು. ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು.
ಧನು ರಾಶಿ
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಈ ಅವಧಿಯಲ್ಲಿ ನೀವು ನಿಮ್ಮ ದಿನಚರಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತೀರಿ, ಇದರಿಂದ ದೇಹದಲ್ಲಿ ಉತ್ತಮ ಬದಲಾವಣೆಯಾಗಲಿದೆ. ನೀವು ಈಗಾಗಲೇ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಈ ತಿಂಗಳು ನಿಮ್ಮ ಆರೋಗ್ಯ ಸುಧಾರಿಸಬಹುದು. ನೀವು ಸರಿಯಾದ ಸಮಯಕ್ಕೆ ನಿಯಮಿತವಾಗಿ ಆಹಾರ ಸೇವಿಸಿದರೆ, ಪ್ರತಿದಿನ ಲಘು ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಕರ ರಾಶಿ
ಆರೋಗ್ಯದ ವಿಷಯದಲ್ಲಿ, ಮೇ ತಿಂಗಳು ನಿಮಗೆ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ, ಕೆಲಸದ ಜೊತೆಗೆ, ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಸಂಪೂರ್ಣ ಕಾಳಜಿ ವಹಿಸಲು ಸಾಧ್ಯವಾಗುವುದು. ಈ ಸಮಯದಲ್ಲಿ, ನೀವು ನಿಮ್ಮ ದಿನನಿತ್ಯದ ಆರೋಗ್ಯ ತಪಾಸಣೆ ಮಾಡಿಸುವುದು ಒಳ್ಳೆಯದು. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಕಡೆ ಗಮನಹರಿಸಿ.
ಕುಂಭ ರಾಶಿ
ನೀವು ಆರೋಗ್ಯದ ಕಡೆ ಅಧಿಕ ಗಮನ ನೀಡಬೇಕಾಗಿದೆ. ನೀವು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಅವಧಿಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಮಾಡಬೇಡಿ, ಅನಾರೋಗ್ಯ ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುವುದು. ನೀವು ಆರೋಗ್ಯಕರ ಆಹಾರಕ್ರಮದ ಕಡೆ ಗಮನಹರಿಸುವುದು ಒಳ್ಳೆಯದು.
ಮೀನ ರಾಶಿ
ಈ ತಿಂಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ನೀವು ತುಂಬಾ ಚುರುಕಾಗಿರುತ್ತೀರಿ. ತುಂಬಾ ಸಮಯದಿಂ ಕಾಡುತ್ತಿದ್ದ ಚಿಂತೆ ದೂರಾಗುವುದರಿಂಂದ ಮಾನಸಿಕವಾಗಿ ನೀವು ತುಂಬಾ ಒಳ್ಳೆಯದನ್ನು ಅನುಭವಿಸುವಿರಿ. ನೀವು ಜಿಮ್ ಇತ್ಯಾದಿಗಳಿಗೆ ಸೇರಬಹುದು.



Click it and Unblock the Notifications









