Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ವಾಸ್ತು ಪ್ರಕಾರ, ಮನೆಯೊಳಗೆ ಬುದ್ಧನ ಪ್ರತಿಮೆ ಇಡಲು ಸೂಕ್ತ ಸ್ಥಳ ಯಾವುದು?
ಮನೆಯಲ್ಲಿ ಶಾಂತಿ, ಸಕಾರಾತ್ಮಕತೆ ನೆಲೆಸಲು ಬುದ್ಧನ ಪ್ರತಿಮೆ ಇಡಬೇಕು ಎಂಬ ನಂಬಿಕೆಯಿದೆ. ಬುದ್ಧನು ನೆಮ್ಮದಿ ಮತ್ತು ಶಾಂತತೆಯ ಪ್ರತೀಕ. ಅದಕ್ಕೆ ಸುಂದರವಾದ ಮನೆಗಳಲ್ಲಿ ಸೊಗಸಾದ ವಿವಿಧ ಬುದ್ಧನ ಮೂರ್ತಿಗಳನ್ನು ಇಡಲಾಗುತ್ತದೆ. ಆದರೆ ವಾಸ್ತು ಪ್ರಕಾರ, ಬುದ್ಧನನ್ನು ನಿಮ್ಮ ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಇದು ಆರೋಗ್ಯ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ.
ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಲು ಸರಿಯಾದ ದಿಕ್ಕುಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರವೇಶ ದ್ವಾರ:
ನಾವು ಯಾರ ಮನೆಗಾದರೂ ಹೋದಾಗ, ಮನೆಯ ಪ್ರವೇಶದ್ವಾರದಲ್ಲಿ ನಿಲ್ಲುವುದು ರೂಢಿ. ಆದ್ದರಿಂದ ನಿಮ್ಮ ಮನೆಯ ಬಾಗಿಲಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಎಲ್ಲಾ ಎದುರಾಳಿ ಶಕ್ತಿಗಳನ್ನು ಹೊರಕ್ಕೆ ತಳ್ಳಲಾಗುವುದು. ಬುದ್ಧ ಆಶೀರ್ವಾದ ಮಾಡುವ ಮೂರ್ತಿಯನ್ನು ನೆಲದಿಂದ ಮೂರು-ನಾಲ್ಕು ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಇಡಿ. ಬುದ್ಧನನ್ನು ಎಂದಿಗೂ ನೆಲದ ಮೇಲೆ ಇಡಬೇಡಿ.

ಲಿವಿಂಗ್ ರೂಮ್:
ವಾಸ್ತು ಪ್ರಕಾರ ಲಿವಿಂಗ್ ರೂಮ್ ನಲ್ಲಿ ಬುದ್ಧನ ಮೂರ್ತಿಯನ್ನು ಪಶ್ಚಿಮಕ್ಕೆ ಎದುರಾಗಿ ಇಡಿ. ಇದು ನಿಮ್ಮ ಮನೆಗೆ ಶಾಂತಿ ಮತ್ತು ಸಾಮರಸ್ಯವನ್ನು ತರಬಹುದು. ಆಂತರಿಕ ನಂಬಿಕೆಗಳು ಮತ್ತು ಮನಸ್ಸಿನ ಸ್ಥಿತಿಯನ್ನು ಸುಧಾರಿಸಲು ಸ್ವಚ್ಛವಾದ ಟೇಬಲ್ ಅಥವಾ ಕಪಾಟಿನಲ್ಲಿ ಇರಿಸಿ. ನೀವು ವಿವಿಂಗ್ ರೂಮ್ ನಲ್ಲಿ ಕುಳಿತಾಗ ಆ ಮೂರ್ತಿಯನ್ನು ನೋಡಿ, ಶಾಂತತೆ ಹಾಗೂ ನಿರಾಳತೆ ನಿಮ್ಮನ್ನು ಆವರಿಸಬಹುದು.

ಗಾರ್ಡನ್:
ಶಾಂತಿಯುತವಾದ ಸಂಜೆಯನ್ನು ನಿಮ್ಮ ತೋಟದಲ್ಲಿ ಕಳೆಯುವ ಮನಸ್ಸು ನಿಮ್ಮದಾಗಿದ್ದರೆ, ಗಾರ್ಡನ್ ನಲ್ಲಿ ಬುಧ್ಧನ ಮೂರ್ತಿಯನ್ನು ಇಡುವುದು ಒಳ್ಳೆಯದು. ಇದಕ್ಕಾಗಿ ಧ್ಯಾನ ಮಾಡುವ ಬುದ್ಧನನ್ನು ಹುಡುಕಿ. ಅದನ್ನು ನಿಮ್ಮ ಉದ್ಯಾನವನದ ಸ್ವಚ್ಛವಾದ ಮೂಲೆಯಲ್ಲಿ ಇರಿಸಿ. ಹೀಗೆ ಮಾಡಿದರೆ, ನಿಮ್ಮ ಸುಂದರವಾದ ಉದ್ಯಾನದಲ್ಲಿ ನೀವು ನಡೆದಾಡುವಾಗ ಹೆಚ್ಚು ಆರಾಮದಾಯಕ ಮತ್ತು ನಿರಾಳತೆಯನ್ನು ಅನುಭವಿಸುವಿರಿ. ಧ್ಯಾನ ಮಾಡುವಾಗ ಆಂತರಿಕ ಶಾಂತಿಯನ್ನು ಪಡೆಯಲು ಸುವಾಸಿತ ಮೇಣದ ಬತ್ತಿಗಳನ್ನು ಕೂಡ ಸೇರಿಸಬಹುದು.

ಪೂಜಾ ಅಥವಾ ಧ್ಯಾನ ಕೊಠಡಿ:
ಅನೇಕ ಜನರು ತಾವು ಪ್ರಾರ್ಥಿಸುವ ಕೋಣೆಯಲ್ಲಿ ಧ್ಯಾನ ಮಾಡುವ ಬುದ್ಧನ ಕಲಾಕೃತಿಯನ್ನು ಇಡುತ್ತಾರೆ. ಇದು ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಸಕಾರಾತ್ಮಕ ಶಕ್ತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ನೀವು ಮೂರ್ತಿಯನ್ನು ಪೂರ್ವಕ್ಕೆ ಎದುರಾಗಿರುವ ಮೂಲೆಯಲ್ಲಿ ಇಡಬಹುದು, ಏಕೆಂದರೆ ಅದು ಜ್ಞಾನೋದಯವನ್ನು ಪ್ರತಿನಿಧಿಸುತ್ತದೆ. ಪೂಜೆ ಮಾಡುವ ಕೋಣೆಯಲ್ಲಿ ಬುದ್ಧನನ್ನು ಸಹ ಇರಿಸಬಹುದು. ಆದಾಗ್ಯೂ, ಅದನ್ನು ಕಣ್ಣಿನ ಮಟ್ಟದಲ್ಲಿ ಇಡಲು ಮರೆಯದಿರಿ, ಪ್ರಬುದ್ಧ ಗುರುವನ್ನು ಕಣ್ಣಿನ ಮಟ್ಟಕ್ಕಿಂತ ಕೆಳಗಿಡುವುದು ಒಳ್ಳೆಯದಲ್ಲ.

ಮಕ್ಕಳ ಕೋಣೆ ಅಥವಾ ಅಧ್ಯಯನ ಕೊಠಡಿ:
ಶೈಕ್ಷಣಿಕ ಯಶಸ್ಸನ್ನು ಸಾಧಿಸಲು, ಬುದ್ಧನ ಸಣ್ಣ ತಲೆ ಇರುವ ಮೂರ್ತಿಯನ್ನು ಪೂರ್ವ ದಿಕ್ಕಿಗೆ ಮೇಜಿನ ಮೂಲೆಯಲ್ಲಿ ಇಡಿ. ಇದರಿಂದ ನಿಮ್ಮ ಮಕ್ಕಳ ಗಮನ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಮಕ್ಕಳ ಅಭಿವೃದ್ಧಿಗೂ ಸಹಾಯ ಮಾಡುವುದು.



Click it and Unblock the Notifications
