Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಪೊರಕೆಯನ್ನ ಈ ದಿನ ಖರೀದಿಸಿದರೆ, ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗದು
ಪೊರಕೆ ಎಂಬುದು ಪ್ರತಿ ಮನೆಯಲ್ಲೂ ಸ್ವಚ್ಛಗೊಳಿಸಲು ಬಳಸುವ ವಸ್ತುವಾದರೂ ಸಹ, ಶಾಸ್ತ್ರದಲ್ಲಿ ಇದನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಪೊರಕೆಯನ್ನು ಖರೀದಿಸಲು, ಬಳಸಲು ಕೆಲವೊಂದು ನಿಯಮಗಳನ್ನು ಮಾಡಿರುವುದು. ಇಂದು ಈ ಶಾಸ್ತ್ರ ಸಂಪ್ರದಾಯದ ಮಹತ್ವ ಕಡಿಮೆಯಾಗಿದ್ದರೂ ಸಹ, ಪೊರಕೆಗೆ ಇರುವ ದೈವಿಕ ಗುಣವಂತೂ ಸುಳ್ಳಲ್ಲ. ಅದೇ ಕಾರಣಕ್ಕೆ ಇಂದಿಗೂ ಪೊರಕೆ ತೊಳಿಯಬಾರದು, ದಾಟಬಾರದು ಎಂದು ಹೇಳುವುದು. ಇದಲ್ಲದೇ ಪೊರಕೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ವಿಶೇಷ ನಿಯಮಗಳಿವೆ. ಇವುಗಳನ್ನು ಅನುಸರಿಸಿದರೆ, ನಿಮ್ ಜೀವನದಲ್ಲಿ ಸಂಪತ್ತಿನ ಕೊರತೆಯಾಗುವುದಿಲ್ಲ ಎಂಬುದು ನಂಬಿಕೆ.
ಶಾಸ್ತ್ರದ ಪ್ರಕಾರ, ಪೊರಕೆಗೆ ಸಂಬಂಧಿಸಿದ ನಿಯಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಈ ದಿನ ಪೊರಕೆ ಎಸೆಯಬೇಡಿ:
ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗುರುವಾರ ಅಥವಾ ಶುಕ್ರವಾರದಂದು ಹಳೆಯ ಅಥವಾ ಹಾಳಾದ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಾರದು. ಏಕೆಂದರೆ ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಂಬಂಧಿಸಿವೆ. ಆದ್ದರಿಂದ ಈ ದಿನ, ಪೊರಕೆಯನ್ನು ಮನೆಯಿಂದ ಹೊರಗೆ ಹಾಕಿದರೆ, ಲಕ್ಷ್ಮಿ ದೇವಿಯು ಕೋಪದಿಂದ ಮನೆಯಿಂದ ಹೊರಹೋಗುತ್ತಾಳೆ. ಇದಲ್ಲದೇ ವಿಷ್ಣುವಿನ ಕೃಪೆಯೂ ನಿಮ್ಮ ಮೇಲೆ ಇರಲಾರದು.

ಪೊರಕೆಯನ್ನು ಈ ದಿನ ಖರೀದಿಸಿದರೆ ಶುಭ:
ಶಾಸ್ತ್ರಗಳ ಪ್ರಕಾರ, ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಸಲು ಉತ್ತಮ ಮತ್ತು ಮಂಗಳಕರ ದಿನವಾಗಿದೆ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಸಂಪತ್ತು ಬರುತ್ತದೆ. ಅಷ್ಟೇ ಅಲ್ಲ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ಅದೇ ಸಮಯದಲ್ಲಿ, ಈ ದಿನವನ್ನು ಹೊರತುಪಡಿಸಿ, ಕೃಷ್ಣ ಪಕ್ಷದಲ್ಲಿ ಪೊರಕೆ ಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ, ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.

ಪೊರಕೆ ಬಗ್ಗೆ ಇರುವ ನಂಬಿಕೆಗಳು:
ಶಾಸ್ತ್ರಗಳ ಪ್ರಕಾರ, ಪೊರಕೆಯನ್ನು ತುಳಿಯುವುದು ಅಥವಾ ದಾಟುವುದು ಅಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಲಕ್ಷ್ಮಿಯ ಸಂಕೇತ. ಮಾತ್ರವಲ್ಲ, ಪೊರಕೆಯನ್ನು ಮನೆಯಲ್ಲಿ ಯಾರಿಗೂ ಕಾಣದಂತಹ ಸ್ಥಳದಲ್ಲಿ ಇಡಬೇಕು. ಹಾಗಂತ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡುವುದು ಸರಿಯಲ್ಲ. ಮನೆ ಎದುರು ಸಹ ಪೊರಕೆ ಇಡಬಾರದು. ಜೊತೆಗೆ, ಸೂರ್ಯಾಸ್ತದ ನಂತರ ಗುಡಿಸಬಾರದು ಎಂಬ ನಂಬಿಕೆಯಿದೆ. ಏಕೆಂದರೆ ಸೂರ್ಯಾಸ್ತದ ವೇಳೆ ಲಕ್ಷ್ಮಿ ಮನೆ ಪ್ರವೇಶಿಸುವ ಸಮಯ ಹಾಗೂ ಆಕೆಯನ್ನು ಪೂಜಿಸುವ ಸಮಯ. ಈ ವೇಳೆ ಗುಡಿಸುವುದರಿಂದ ಲಕ್ಷ್ಮಿ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ.



Click it and Unblock the Notifications
