Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಜೀವನದಲ್ಲಿ ಸಂತೋಷವಾಗಿರಲು ಈ ವಿಚಾರಗಳನ್ನು ಇಂದೇ ಬಿಟ್ಟುಬಿಡಿ
ಜೀವನದಲ್ಲಿ ಎಲ್ಲ ಇದ್ದು, ಸಂತೋಷವೇ ಇಲ್ಲವೆಂದರೆ ಆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಹಾಗಂತ ಯಾರೋ ಬಂದು ನಿಮ್ಮನ್ನು ಸಂತೋಷವಾಗಿಡುತ್ತಾರೆ ಎಂದು ನಿರೀಕ್ಷಿಸುವುದು ನಿಮ್ಮ ಮೂರ್ಖತನ. ನಿಮ್ಮ ಖುಷಿಯನ್ನು ನೀವೇ ಕಂಡುಕೊಳ್ಳಬೇಕೇ ಹೊರತು ಬೇರಾರೂ ಸಹಾಯಕ್ಕೆ ಬರುವುದಿಲ್ಲ.
ಸಕಾರಾತ್ಮಕ ಆಲೋಚನೆಗಳನ್ನು ಪೋಷಿಸುವ ಮೂಲಕ ನಿಮ್ಮಲ್ಲಿ ಸಂತಸವನ್ನು ನೀವೇ ಹುಟ್ಟುಹಾಕಬಹುದು. ಒಂದುವೇಳೆ ನಿಮ್ಮ ಬದುಕಲ್ಲಿ ಬರೀ ನೋವು ಅಥವಾ ನಿರಾಶೆಗಳೇ ತುಂಬಿಕೊಂಡಿದ್ದರೆ, ಸಂತೋಷವನ್ನು ಪಡೆಯಲು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದು. ಅಂತಹ ಬದಲಾವಣೆಗಳಾವುವು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ.

ಜೀವನದಲ್ಲಿ ಸಂತೋಷವಾಗಿರಲು ತೆಗೆದುಹಾಕಬೇಕಾದ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:
ಭಯವನ್ನು ಬಿಡಿ:
ಏನಾಗಬಹುದು ಎಂಬ ಭಯವನ್ನು ಮೊದಲು ಬಿಡಿ. ಭಯಬಿಡಲು ಪ್ರಾರಂಭಿಸಿದಾಗ ನಿಮ್ಮ ಕನಸುಗಳು ನಿಜಮಾಡಿಕೊಳ್ಳಲು ದಾರಿಗಳನ್ನು ಹುಡುಕುತ್ತೀರಿ. ಭಯವು ನಿಜವಲ್ಲ, ಅದು ನಿಮ್ಮ ಆಲೋಚನೆಗಳು. ನಿಮ್ಮ ಆಲೋಚನೆಗಳಲ್ಲಿ ಭಯವನ್ನು ದೂರಮಾಡಲು ಪ್ರಾರಂಭಿಸಿ, ಆಗ ಸಕಾರಾತ್ಮಕ ಆಲೋಚನೆಗಳು ಹುಟ್ಟಿಕೊಳ್ಳಲು ಆರಂಭವಾಗುವುದು.

ನಕಾರಾತ್ಮಕ ಸ್ವ-ಮಾತು ಬೇಡ:
ಹೌದು, ನಿಮ್ಮ ಬಗ್ಗೆ ನೀವೇ ನಕಾರಾತ್ಮಕವಾಗಿ ಮಾತನಾಡಿದರೆ ಸಂತೋಷವಾಗಿರಲು ಸಾಧ್ಯವಿಲ್ಲ. ನಿಮ್ಮನ್ನು ಪ್ರೀತಿಸಬೇಕಾದ ವ್ಯಕ್ತಿ ನೀವೇ. ಆದ್ದರಿಂದ ನಕಾರಾತ್ಮಕ ಚಿಂತನೆ ಬೇಡ. ಇಂತಹ ಮಾತುಗಳು ನಿಮ್ಮನ್ನು ಮತ್ತಷ್ಟು ಕೆಳ ಮಟ್ಟಕ್ಕೆ ತಳ್ಳುತ್ತದೆ. ಜೊತೆಗೆ ನಿಮ್ಮ ಸಂತೋಷವನ್ನೂ ಕಿತ್ತುಕೊಳ್ಳುವುದು.

ಬಿಟ್ಟುಕೊಡುವುದು ಬೇಡ:
ಯಾವುದೇ ವಿಚಾರಕ್ಕಾಗಲಿ ಮನ್ನಿಸುವಿಕೆಯನ್ನು ನಿಲ್ಲಿಸಿ. ನಿಮಗೆ ಯಾವುದು ಅವಶ್ಯಕತೆ ಇದೆಯೋ ಅದನ್ನು ಬಿಟ್ಟುಕೊಡಲು ಹೋಗಬೇಡಿ. ಅದನ್ನು ಹೇಗಾದರೂ ಪಡೆದೇ ತೀರುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಿ. ಹೋಗಲಿ ಬಿಡು ಎಂಬ ಭಾವನೆ ಬೇಡ. ನಿಮಗೆ ಬೇಡವಾದಲ್ಲಿ ಮಾತ್ರ ಬಿಟ್ಟುಕೊಡುವ ನಿರ್ಧಾರ ಮಾಡಿ. ಇಲ್ಲವಾದಲ್ಲಿ ಕೊನೆವರೆಗೂ ಹೋರಾಡಿ.

ಹಿಂದೆ ನಡೆದಿದ್ದನ್ನು ಮರೆತುಬಿಡಿ:
ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ, ಮರೆಯಲು ಸಾಧ್ಯವಿಲ್ಲ ಮತ್ತು ಅಳಿಸಲಾಗುವುದಿಲ್ಲ. ಹೀಗಿರುವಾಗ ಅದನ್ನೇ ನೆನೆಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ. ಆದ್ದರಿಂದ ಅದನ್ನು ಅಲ್ಲಿಗೆ ಬಿಟ್ಟು, ಹಿಂದೆ ಆದ ತಪ್ಪನ್ನು ಸರಿಪಡಿಸಿಕೊಳ್ಳುವ ದಾರಿಯನ್ನು ಹುಡುಕುತ್ತಾ ಮುಂದೆ ಸಾಗಬೇಕು.

ಇತರರ ದೂಷಣೆ ಬೇಡ:
ನಿಮ್ಮ ಸ್ವಂತ ತಪ್ಪುಗಳಿಗೆ ನೀವು ಜವಾಬ್ದಾರರು, ಬೇರೆ ಯಾರೂ ಇಲ್ಲ. ತಪ್ಪುಗಳು ನಿಮ್ಮ ಸ್ವಂತದ್ದು ಜೊತೆಗೆ ಕಲಿಯಲು ಸೂಕ್ತವಾದ ಅವಕಾಶವೂ ಕೂಡ. ನಿಮ್ಮ ತಪ್ಪುಗಳಿಗೆ ವ್ಯವಸ್ಥೆಯನ್ನು ಅಥವಾ ಇತರ ವ್ಯಕ್ತಿಯನ್ನು ದೂಷಣೆ ಮಾಡುತ್ತಾ ಕೂರುವುದು ಸರಿಯಲ್ಲ. ಅದನ್ನು ಬಿಟ್ಟು ನಿಮ್ಮ ಸ್ವಂತ ಕಾರ್ಯಗಳಿಗೆ ನೀವೇ ಜವಾಬ್ದಾರಿಯನ್ನು ತೆಗೆದುಕೊಳ್ಳಿ.

ನಿಯಂತ್ರಣದ ಅಗತ್ಯ ಬಿಟ್ಟುಬಿಡಿ:
ಯಾವುದೇ ಘಟನೆಗಳನ್ನು ನಿಯಂತ್ರಿಸಲು ಹೋಗಬೇಡಿ. ಜೀವನದ ಎಲ್ಲಾ ಕ್ರಿಯೆಗಳನ್ನು ನಿಮ್ಮ ನಿಯಂತ್ರಣದಲ್ಲಿ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಏನು ಆಗುವುದು ಅದನ್ನು ಒಪ್ಪಿಕೊಳ್ಳಿ. ನಿಯಂತ್ರಣ ಹೇರಲು ಹೋಗಬೇಡಿ.

ಇತರರ ಟೀಕೆ ಬೇಡ:
ಇನ್ನೊಬ್ಬ ವ್ಯಕ್ತಿಯು ಏನು ಮಾಡುತ್ತಿದ್ದಾನೆಂದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ಇತರರನ್ನು ಟೀಕಿಸಲು ಬಳಸುವ ಶಕ್ತಿಯನ್ನು ನಿಮ್ಮ ವಿಚಾರಗಳನ್ನು ಉತ್ತಮಗೊಳಿಸಲು ಬಳಸಿಕೊಳ್ಳಿ. ಇತರರನ್ನ ಟೀಕೆ ಮಾಡುವುದರಿಂದ ನಿಮಗೇನು ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಬದಲಾವಣೆ ಒಪ್ಪಿಕೊಳ್ಳಿ:
ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಅನುಮತಿಸಿ. ಬದಲಾವಣೆಯನ್ನು ಸ್ವೀಕರಿಸಲು ಕಲಿಯಿರಿ. ಯಾವ ವ್ಯಕ್ತಿಯೂ ಅಥವಾ ಯಾವುದೇ ವಿಚಾರವೂ ಬದಲಾಗದೇ ಇರುವುದಿಲ್ಲ. ಕಾಲಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುವುದು. ಈ ಬದಲಾವಣೆಗಳಿಗೆ ತಲೆಕೆಡಿಸಿಕೊಳ್ಳದೇ, ಅವುಗಳನ್ನು ಒಪ್ಪಿಕೊಂಡು ಸಂತೋಷವಾಗಿರಿ.

ಯಾವಾಗಲೂ ಸರಿಯೇ ಆಗಿರಬೇಕಾಗಿಲ್ಲ:
ಯಾವಾಗಲೂ ಸರಿಯಾಗಿರಬೇಕಾದ ಅಗತ್ಯವೇನಿಲ್ಲ. ಆ ಆಲೋಚನೆಯನ್ನು ಮೊದಲು ಬಿಡಿ. ನಿಮ್ಮ ಸುತ್ತಮುತ್ತಲಿನವರಿಗೆ ಹಾನಿಯಾಗದಂತೆ ಬದುಕಿದರೆ ಸಾಕು. ತಪ್ಪು ಎಲ್ಲರೂ ಮಾಡುತ್ತಾರೆ. ಆದರೆ ಅದನ್ನೇ ಯೋಚಿಸಿಕೊಂಡು ಕೂರುವ ಅವಶ್ಯಕತೆ ಇಲ್ಲ.



Click it and Unblock the Notifications
