Just In
Don't Miss
- News
Breaking: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧ: ಸಿಎಂ ಬೊಮ್ಮಾಯಿ
- Movies
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಖಾನ್ ಹೆಸರು ಕೈಬಿಟ್ಟ ಸೀಮಾ
- Finance
Gold Rate Today: ಚಿನ್ನ 400 ರೂ ಏರಿಕೆ : ಪ್ರಮುಖ ನಗರಗಳ ಮೇ 20ರ ದರ ಎಷ್ಟಿದೆ?
- Sports
CSK vs RR: ಎರಡನೇ ಸ್ಥಾನದ ಮೇಲೆ ರಾಜಸ್ಥಾನ್ ಕಣ್ಣು; ಪಂದ್ಯದ ಟಾಸ್ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಮಾಹಿತಿ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Automobiles
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ದಿನಾಚರಣೆ: ಪ್ರೇರಣಾತ್ಮಕ ನುಡಿಗಳು
ಸುಭಾಷ್ ಚಂದ್ರ ಬೋಸ್ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದ ಅಗ್ರಗಣ್ಯ ಹೋರಾಟಗಾರರಲ್ಲಿ ಸುಭಾಷ್ ಚಂದ್ರ ಬೋಸ್ ಸಹ ಒಬ್ಬರು. ಒರಿಸ್ಸಾದ ಕಟಕ್‌ನಲ್ಲಿ ಬಂಗಾಳಿ ಕುಟುಂಬದಲ್ಲಿ 1897ರ ಜನವರಿ 23ರಂದು ಜನಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಶ್ರೀಮಂತ ಕುಟುಂಬದಿಂದ ಬಂದವರು. ಆದರೆ ಅವರು ತಮ್ಮ ದೇಶವನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಅರ್ಪಿಸಿದ್ದರು.
ಇದೇ ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ದೇಶದ ಜನತೆಗೆ ಸುಭಾಷ್ ಚಂದ್ರ ಬೋಸ್ ಅವರು ನೀಡಿದ್ದ ಪ್ರೇರಣಾತ್ಮಕ ಸಂದೇಶಗಳನ್ನು ಮುಂದೆ ನೋಡೋಣ:

1. ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಮ್ಮ ದೊಡ್ಡ ಅಪರಾಧ ಎಂಬುದು ನೆನಪಿಡಿ.
- ಸುಭಾಷ್ ಚಂದ್ರ ಬೋಸ್

2. ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಮತ್ತು ನಾವು ಅದನ್ನು ಎಂದಿಗೂ ಹೋಲಿಸಲಾಗುವುದಿಲ್ಲ.
- ಸುಭಾಷ್ ಚಂದ್ರ ಬೋಸ್

3. ಸ್ವೀಕರಿಸಬೇಕಾದ ಸವಾಲುಗಳು ಇಲ್ಲದೇ ಇದ್ದರೆ, ಹೋರಾಟಗಳು ಇಲ್ಲದೇ ಹೋದರೆ ಜೀವನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.
- ಸುಭಾಷ್ ಚಂದ್ರ ಬೋಸ್

4. ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.
- ಸುಭಾಷ್ ಚಂದ್ರ ಬೋಸ್

5. ಇತಿಹಾಸದಲ್ಲಿ ಯಾವುದೇ ನಿಜವಾದ ಬದಲಾವಣೆ ಆಗಬೇಕಾದರೆ ಅದು ಕೇವಲ ಚರ್ಚೆಗಳಿಂದ ಸಾಧಿಸಲಾಗುವುದಿಲ್ಲ.
- ಸುಭಾಷ್ ಚಂದ್ರ ಬೋಸ್

6. ಒಬ್ಬ ವ್ಯಕ್ತಿಯು ಒಂದು ಉತ್ತಮ ಕಲ್ಪನೆಗಾಗಿ ಸಾಯಬಹುದು, ಆದರೆ ಆ ಕಲ್ಪನೆಯು ಅವನ ಮರಣದ ನಂತರ ಸಾವಿರ ಜನರಲ್ಲಿ ಅವತರಿಸುತ್ತದೆ.
- ಸುಭಾಷ್ ಚಂದ್ರ ಬೋಸ್

7. ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು.
- ಸುಭಾಷ್ ಚಂದ್ರ ಬೋಸ್

8. ಉತ್ಸಾಹವಿಲ್ಲದೆ ಯಾವ ಮಹತ್ತರವಾದ ಕೆಲಸವೂ ನಡೆದಿಲ್ಲ.
- ಸುಭಾಷ್ ಚಂದ್ರ ಬೋಸ್

9. ಜನ, ಹಣ ಮತ್ತು ವಸ್ತುಗಳು ಸ್ವತಃ ಜಯ ಅಥವಾ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ. ಧೈರ್ಯಶಾಲಿ ಕೆಲಸಗಳು ಮತ್ತು ಉಜ್ವಲ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ನಾವು ಪ್ರೇರಕ ಶಕ್ತಿಯನ್ನು ಹೊಂದಿರಬೇಕು.
- ಸುಭಾಷ್ ಚಂದ್ರ ಬೋಸ್

10. ಅನ್ಯಾಯ ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ದೊಡ್ಡ ಅಪರಾಧ ಎಂಬುದನ್ನು ಮರೆಯಬೇಡಿ. ನೀವು ಪಡೆಯಲು ಬಯಸಿದರೆ, ನೀವು ನೀಡಬೇಕು ಎಂಬ ಶಾಶ್ವತ ಕಾನೂನನ್ನೂ ನೆನಪಿಡಿ.
- ಸುಭಾಷ್ ಚಂದ್ರ ಬೋಸ್