Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರಕ್ಷಾಬಂಧನ 2021: ಸಹೋದರನ ರಾಶಿಗೆ ಅನುಗುಣವಾಗಿ ಯಾವ ಬಣ್ಣದ ರಾಖಿ ಕಟ್ಟಿದರೆ ಆತನಿಗೆ ಒಳಿತಾಗುವುದು?
ಸಹೋದರ-ಸಹೋದರಿಯರ ಪ್ರೀತಿ-ಭಾಂದವ್ಯದ ಸಂಕೇತವೇ ರಕ್ಷಾ ಬಂಧನ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುವ ರಕ್ಷಾಬಂಧನ ಈ ವರ್ಷ 22 ಆಗಸ್ಟ್ 2021 ರ ಭಾನುವಾರ ಬಂದಿದ್ದು, ಈಗಾಗಲೇ ಎಲ್ಲಾ ಸಹೋದರಿಯರು ತನ್ನ ಪ್ರೀತಿಯ ಸಹೋದರನಿಗೆ ಎಂತಹ ರಾಖಿ ಕಟ್ಟಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಸಹೋದರನ ರಾಶಿಚಕ್ರಕ್ಕೆ ಅನುಗುಣವಾದ ಬಣ್ಣದ ರಾಖಿಯನ್ನು ಕಟ್ಟಿದರೆ, ಆತನ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ಬಣ್ಣದ ರಕ್ಷಾ ಬಂಧನವನ್ನು ಕಟ್ಟಬೇಕು ಎಂಬುದನ್ನು ಇಲ್ಲಿ ನೋಡೋಣ.
ರಾಶಿಗೆ ಅನುಗುಣವಾಗಿ ರಾಖಿಯ ಬಣ್ಣ ಹೇಗಿರಬೇಕು ಎಂಬುದನ್ನ ಈ ಕೆಳಗೆ ನೀಡಲಾಗಿದೆ:

ಮೇಷ:
ಮೇಷ ರಾಶಿಯ ಸಹೋದರನಿಗೆ ಕೆಂಪು ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಸಹೋದರನ ಜೀವನದಲ್ಲಿ ಶುಭ ಮತ್ತು ಸಮೃದ್ಧಿಯನ್ನು ತರುತ್ತದೆ ಜೊತೆಗೆ ಅವನು ಯಾವಾಗಲೂ ಶಕ್ತಿಯುತವಾಗಿರುತ್ತಾನೆ. ಜೊತೆಗೆ ಇದು ದೀರ್ಘಾಯುಷ್ಯ ಮತ್ತು ಸಮೃದ್ಧಿಯನ್ನು ತರುತ್ತದೆ.

ವೃಷಭ:
ನಿಮ್ಮ ಸಹೋದರ ವೃಷಭ ರಾಶಿಗೆ ಸೇರಿದವನಾರಾಗಿದ್ದರೆ, ಅವರಿಗೆ ಬಿಳಿ ಬಣ್ಣದ ರಾಖಿ ಕಟ್ಟಬೇಕು ಮತ್ತು ಅವರಿಗೆ ಬಿಳಿ ಬಣ್ಣದ ಸಿಹಿ ತಿನ್ನಿಸಬೇಕು. ಇದರಿಂದ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.

ಮಿಥುನ:
ಈ ರಾಶಿಯವರಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಅವರ ಜೀವನದಲ್ಲಿ ಪ್ರಗತಿ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ. ಜೊತೆಗೆ ಜೀವನದಲ್ಲಿನ ಸಮಸ್ಯೆಗಳನ್ನು ದೂರಮಾಡಿ, ಶಾಂತಿ, ಸಾಮರಸ್ಯವನ್ನು ಸಹೋದರನ ಜೀವನದಲ್ಲಿ ತರುತ್ತದೆ.

ಕರ್ಕ :
ಕರ್ಕ ರಾಶಿಯ ಸಹೋದರರಿಗೆ ಬಿಳಿ ಅಥವಾ ಹಳದಿ ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಅವರ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಜೊತೆಗೆ ನಿಮ್ಮ ಹಾಗೂ ಅವರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಸಿಂಹ :
ಈ ರಾಶಿಯವರ ಅಧಿಪತಿ ಸೂರ್ಯ ಗ್ರಹ. ಇದಕ್ಕಾಗಿ ಅವರು ಕೆಂಪು ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಅವರ ಜೀವನವನ್ನು ಸಂತೋಷದಿಂದ ಕೂಡಿರುವಂತೆ ಮಾಡುತ್ತದೆ.

ಕನ್ಯಾ:
ಕನ್ಯಾ ರಾಶಿಯವರಿಗೆ ಕಿತ್ತಳೆ ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಸಹೋದರನ ಜೀವನಕ್ಕೆ ಸಂತೋಷವನ್ನು ತರುವುದಲ್ಲದೇ, ಶಕ್ತಿ ಹಾಗೂ ಧೈರ್ಯವನ್ನು ತರುವುದು. ಅದೃಷ್ಟದ ಜೊತೆಗೆ, ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.

ತುಲಾ:
ಈ ರಾಶಿಯ ಸಹೋದರನಿಗೆ ಬಿಳಿ ಬಣ್ಣದ ರಾಖಿಯನ್ನು ಕಟ್ಟಬೇಕು. ಇದರಿಂದ ಅವನ ಜೀವನ ಆರೋಗ್ಯಕರ ಹಾಗೂ ಸಮೃದ್ಧವಾಗಿರುತ್ತದೆ. ಅವನ ಮನಸ್ಸಲ್ಲಿರುವ ಕಿರಿಕಿರಿಯನ್ನು ದೂರಮಾಡಿ, ಶಾಂತಿ ನೆಲೆಗೊಳ್ಳುವಂತೆ ಮಾಡುತ್ತದೆ.

ವೃಶ್ಚಿಕ:
ವೃಶ್ಚಿಕ ರಾಶಿಗೆ ಸೇರಿದ ಸಹೋದರರಿಗೆ ಸಹೋದರಿಯರು ಕೆಂಪು ಅಥವಾ ಗುಲಾಬಿ ಬಣ್ಣದ ರಕ್ಷಾಬಂಧನವನ್ನು ಕಟ್ಟಬೇಕು. ಇದು ನಿಮ್ಮ ಸಹೋದರರಿಗೆ ಸಂತೋಷ ಮತ್ತು ಅದೃಷ್ಟವನ್ನು ಹೊತ್ತು ತರುತ್ತದೆ. ಜೊತೆಗೆ ಈ ಬಣ್ಣದ ರಾಖಿ ಪ್ರೀತಿ-ವಾತ್ಸಲ್ಯವನ್ನು ಹೆಚ್ಚಿಸಿ, ಆತನಿಗೆ ಉತ್ತಮ ಆರೋಗ್ಯ , ದೀರ್ಘಾಯುಷ್ಯ ಪಡೆಯುತ್ತಾನೆ.

ಧನು:
ಈ ರಾಶಿಯವರು ಗುರು ಗ್ರಹದ ಮಾಲೀಕರಾಗಿರುವುದರಿಂದ ಇವರಿಗೆ ಚಿನ್ನದ ಅಥವಾ ಹಳದಿ ಬಣ್ಣದ ರಾಖಿಯನ್ನು ಕಟ್ಟುವುದು ಶುಭಕರವಾಗಿರುತ್ತದೆ. ಜೊತೆಗೆ ಇವರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಮಾತ್ರ ನೀಡಬೇಕು. ಹೀಗೆ ಮಾಡುವುದರಿಂದ ಅವರ ಜೀವನವು ಆಶಾವಾದ ಹಾಗೂ ಭರವಸೆಯಿಂದ ತುಂಬಿರುತ್ತದೆ. ಅಷ್ಟೇ ಅಲ್ಲ, ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಾಯವಾಗುತ್ತದೆ.

ಮಕರ:
ಮಕರ ರಾಶಿಯವರ ಮಾಲೀಕ ಶನಿದೇವನಾಗಿರುವುದರಿಂದ ಈ ರಾಶಿಯ ಸಹೋದರನಿಗೆ ಕಡು ನೀಲಿ ಬಣ್ಣದ ರಾಖಿಯನ್ನು ಕಟ್ಟುವುದು ಶುಭಕರವಾಗಿರುತ್ತದೆ. ಇದರಿಂದ ಸಹೋದರನ ಜೀವನದ ಸಮಸ್ಯೆಗಳು ನಿವಾರಣೆಯಾಗುತ್ತದೆ, ಜೊತೆಗೆ ಮನಸ್ಸು ಶಾಂತವಾಗುತ್ತದೆ.

ಕುಂಭ:
ಈ ರಾಶಿಯವರಿಗೆ ನೀಲಿ ಬಣ್ಣದ ರಾಖಿ ಕಟ್ಟುವುದು ಮಂಗಳಕರ ಎಂದು ಸಾಬೀತಾಗಿದೆ. ನೀಲಿ ಬಣ್ಣವಯ ಸಾಕಷ್ಟು ಭರವಸೆ, ಸಕಾರಾತ್ಮಕತೆ, ಸಹಾನುಭೂತಿಯ ಸಂಕೇತವಾಗಿರುವುದರಿಂದ, ನಿಮ್ಮ ಹಾಗೂ ಸಹೋದರನ ಪ್ರೀತಿ ಜೀವನದುದ್ದಕ್ಕೂ ಇರುತ್ತದೆ.

ಮೀನ:
ಮೀನ ರಾಶಿಯ ಸಹೋದರನಿಗೆ ಹಳದಿ ಅಥವಾ ಹಸಿರು ಬಣ್ಣದ ರಾಖಿಯನ್ನು ಕಟ್ಟಬೇಕು. ಇದು ಜೀವನದಲ್ಲಿ ಸಂತೋಷ ಹಾಗೂ ನಗುವನ್ನು ಹೆಚ್ಚಿಸುವತ್ತದೆ. ಜೊತೆಗೆ ಅವನಿಗೆ ಹಳದಿ ಬಣ್ಣದ ಸಿಹಿಯನ್ನ ತಿನ್ನಿಸಬೇಕು. ಇದರಿಂದ ಅತನ ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ.



Click it and Unblock the Notifications











