Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಕ್ಷಾಬಂಧನ 2021: ಈ ರಾಶಿಯವರಿಗೆ ಗಜಕೇಸರಿ ಯೋಗದಿಂದ ಅದೃಷ್ಟ ಬದಲಾಗಲಿದೆ!
ಸಹೋದರ-ಸಹೋದರಿಯರ ಸಂಬಂಧದ ಹಬ್ಬ ರಕ್ಷಾ ಬಂಧನ ಸಮೀಪಿಸುತ್ತಿದೆ. ಗಸ್ಟ್ 22ರಂದು ನಡೆಯಲಿರುವ ರಕ್ಷಾಬಂಧನವು ಈ ಬಾರಿ ಅನೇಕ ವಿಶೇಷತೆಗಳನ್ನು ಹೊತ್ತು ತಂದಿದೆ. ಒಂದು ಕಡೆ, ಈ ದಿನ ಯಾವುದೇ ಭದ್ರಾ ಅವಧಿ ಇರುವುದಿಲ್ಲ, ಭದ್ರಾ ಅವಧಿಯಲ್ಲಿ ರಾಖಿ ಕಟ್ಟಬಾರದು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ವರ್ಷ, ಸಹೋದರಿಯರು ತಮ್ಮ ಸಹೋದರರಿಗೆ ದಿನವಡೀ ಯಾವುದೇ ಸಮಯದಲ್ಲಿ ರಾಖಿ ಕಟ್ಟಬಹುದು.
ಮತ್ತೊಂದೆಡೆ, ಈ ಬಾರಿ ರಕ್ಷಾಬಂಧನದಂದು, ಕುಂಭದಲ್ಲಿ ಚಂದ್ರನು ಇರುತ್ತಾನೆ ಮತ್ತು ಕುಂಭ ರಾಶಿಯಲ್ಲಿ ಗುರು ಹಿಮ್ಮುಖ ಚಲನೆಯಲ್ಲಿರುತ್ತಾನೆ. ಜ್ಯೋತಿಷ್ಯದ ಪ್ರಕಾರ, ಗುರು ಮತ್ತು ಚಂದ್ರನ ಈ ಸಂಯೋಗದಿಂದಾಗಿ ಗಜಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಮಂಗಳಕರವಾದ ಕೆಲಸವನ್ನು ಮಾಡಿದರೆ, ಅದರಲ್ಲಿ ವಿಜಯ ಸಿಗುವ ಸಾಧ್ಯತೆಯಿದೆ. ಈ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಶುಭಕರವಾಗಿದ್ದು, ಯಾವೆಲ್ಲಾ ಎಂಬುದನ್ನು ನೋಡೋಣ.
ರಕ್ಷಾಬಂಧನದಂದು ರೂಪುಗೊಳ್ಳುವ ಗಜಕೇಸರಿ ಯೋಗವು ಯಾವೆಲ್ಲಾ ರಾಶಿಗಳಿಗೆ ಶುಭಕರವಾಗಿರುತ್ತವ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಧನಸ್ಸು:
ಈ ರಾಶಿಯ ಜನರು ಆರ್ಥಿಕ ಲಾಭಗಳನ್ನು ಪಡೆಯುವ ಉತ್ತಮ ಅವಕಾಶಗಳನ್ನು ಹೊಂದಿರುತ್ತಾರೆ, ಜೊತೆಗೆ ಖ್ಯಾತಿಯು ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸು ಇರುತ್ತದೆ. ನಿಲ್ಲಿಸಿದ ಕೆಲಸವನ್ನು ಮುಂದುವರಿಸುತ್ತೀರಿ. ನೀವು ಸ್ವಲ್ಪ ಸಮಯದವರೆಗೆ ಪ್ರಮುಖ ವಹಿವಾಟುಗಳನ್ನು ಮಾಡಲು ಬಯಸಿದರೆ, ಅದನ್ನು ಈ ಸಮಯದಲ್ಲಿ ಮಾಡಬಹುದು. ಇದರಿಂದು ಒಳ್ಳೆಯ ಲಾಭ ಸಿಗುವುದು.

ಮೀನ:
ನಿಮ್ಮ ಜೀವನದಲ್ಲಿ ದೀರ್ಘಕಾಲದಿಂದ ಬಿಟ್ಟು ಬಿಡದೇ ಕಾಡುತ್ತಿದ್ದ ತೊಂದರೆಗಳಿಗೆ ವಿದಾಯ ಹೇಳುವ ಸಮಯ ಬಂದಿದೆ. ನಿಮ್ಮ ಆಸೆಗಳು ಅಥವಾ ಕನಸುಗಳು ನನಸಾಗಬಹುದು. ಹಣ ಉತ್ತಮವಾಗಿರಲಿದೆ. ನಿಮ್ಮ ಎಲ್ಲಾ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುತ್ತೀರಿ ಮತ್ತು ಅದಕ್ಕಾಗಿ ನೀವು ಪ್ರಶಂಸೆಯನ್ನೂ ಪಡೆಯುತ್ತೀರಿ. ಒಟ್ಟಾರೆಯಾಗಿ, ಗಜ ಕೇಸರಿ ಯೋಗವು ನಿಮಗೆ ಅತ್ಯಂತ ಮಂಗಳಕರವಾಗಿದೆ.

ಕರ್ಕ:
ಈ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ, ಆತ ಗುರುವಿನೊಂದಿಗೆ ಸಂಯೋಜನೆ ಹೊಂದಿ ಗಜಕೇಸರಿ ಯೋಗ ರೂಪುಗೊಳ್ಳುವುದರಿಂದ ಈ ಯೋಗವು ಕರ್ಕಾಟಕ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಅವರು ತಮ್ಮ ಕಾರ್ಯಗಳಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಇದರಿಂದ ಆದಾಯ ಹೆಚ್ಚಾಗುತ್ತದೆ. ತಮ್ಮೆಲ್ಲಾ ಕೆಲಸಗಳಿಗೆ ಎಲ್ಲರ ಸಹಕಾರ ಸಿಗುತ್ತದೆ. ಜೀವನದಲ್ಲಿ ಸಂತೋಷ ಬರುತ್ತದೆ.



Click it and Unblock the Notifications
