For Quick Alerts
ALLOW NOTIFICATIONS  
For Daily Alerts

ಜಪಾನಿಯರ ಸಂತೋಷ ಹಾಗೂ ದೀರ್ಘಾಯುಷ್ಯದ ಸೀಕ್ರೆಟ್ ಇದೇ ಇಕಿಗೈ!

|

ಐಕಿಗೈ...ಈ ಪದ ಸಾಮಾನ್ಯವಾಗಿ ಹೆಚ್ಚಿನವರು ಕೇಳಿರ್ತೀರಿ.. ಇದೊಂದು ಜಪಾನಿಯರ ತತ್ವಶಾಸ್ತ್ರವಾಗಿದ್ದು ಅವರ ದೀರ್ಘಾಯಸ್ಸಿನ ಹಿಂದಿನ ಗುಟ್ಟು ಎಂದು ನಂಬಲಾಗಿದೆ. ಜೀವನದಲ್ಲಿ ಸಂತೋಷವಾಗಿರಲು ಹಾಗೂ ದೀರ್ಘಕಾಲ ಬದುಕೋಕೆ ಸಹಾಯ ಮಾಡುವ ಅಂಶಗಳೇ ಈ ಇಕಿಗೈ.

123

ಅಂದಹಾಗೇ ಜಪಾನಿ ಭಾಷೆಯಲ್ಲಿ 'ಇಕಿ' ಎಂದರೆ ಜೀವನ ಮತ್ತು 'ಗೈ' ಮೌಲ್ಯ ಎಂದರ್ಥ. ಈ ಕುರಿತು ಕೆನ್‌ಮೊಗಿ 'ಇಕಿಗೈ' ಎಂಬ ಪುಸ್ತಕವನ್ನು ಬರೆದಿದ್ದು, ನಿಮ್ಮ ಸಂತೋಷಕ್ಕೆ ಅಗತ್ಯವಾಗಿರುವ ಮುಖ್ಯ ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಹಾಗಾದ್ರೆ ಬನ್ನಿ, ಇಕಿಗೈ ಪ್ರಕಾರ, ಸಂತೋಷದಾಯಕ ಜೀವನದಕ್ಕೆ ಅಡಿಪಾಯವಾಗಿರುವ ಅಂಶಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಐಕಿಗೈ ಪುಸ್ತಕದ ಲೇಖಕ ಕೆನ್ ಮೊಗಿ, ಈ ಐದು ವಿಚಾರಗಳು ನಿಮ್ಮ ಇಕಿಗೈ ಪ್ರವರ್ಧಮಾನಕ್ಕೆ ಬರಲು ಅಗತ್ಯವಾದ ಅಡಿಪಾಯವನ್ನು ಒದಗಿಸುತ್ತವೆ ಎಂದು ಹೇಳುತ್ತಾರೆ. ಹಾಗಾದರೆ, ಅಂತಹ ವಿಚಾರಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

1. ಸಣ್ಣದನ್ನು ಪ್ರಾರಂಭಿಸುವುದು

1. ಸಣ್ಣದನ್ನು ಪ್ರಾರಂಭಿಸುವುದು

ಹನಿ ಹನಿ ಗೂಡಿದರೆ ಹಳ್ಳ ಎಂಬ ಮಾತಿದೆ. ಅದೇ ರೀತಿ ಜೀವನದಲ್ಲಿ ಏನೇ ಸಾಧಿಸಲು ಮೊದಲು ಸಣ್ಣದೊಂದು ಹೆಜ್ಜೆ ಇಡಬೇಕು. ಏನೂ ಆರಂಭಿಸದೇ ಕೇವಲ ಆಲೋಚನೆಗಳನ್ನೇ ಮಾಡಿ ಕೂತರೆ ಯಾವುದೇ ಸಾಧನೆ ಮಾಡಲು ಅಸಾಧ್ಯ. ಆದ್ದರಿಂದ ಸಣ್ಣ ಹೆಜ್ಜೆಗಳನ್ನು ಇಡುವ ಮೂಲಕ ಜನರು ತಮ್ಮ ಗುರಿಗಳನ್ನು ಸಾಧಿಸಬಹುದು ಎಂದು ಇಕಿಗೈ ಹೇಳುತ್ತದೆ.

2: ನಮ್ಮನ್ನು ನಾವು ಮುಕ್ತಗೊಳಿಸುವುದು

2: ನಮ್ಮನ್ನು ನಾವು ಮುಕ್ತಗೊಳಿಸುವುದು

ನಮ್ಮನ್ನು ನಾವು ಒಪ್ಪಿಕೊಳ್ಳುವುದು ಹಾಗೂ ಯಾವುದೇ ಗೊಂದಲಗಳಿಂದ ಮುಕ್ತಗೊಳಿಸಿಕೊಳ್ಳುವುದು ನಮ್ಮ ಜೀವನದಲ್ಲಿ ನಾವು ಎದುರಿಸುವ ಪ್ರಮುಖ ಮತ್ತು ಕಷ್ಟಕರವಾದ ಕಾರ್ಯಗಳಲ್ಲಿ ಒಂದಾಗಿದೆ. ಯಾರೂ ಸಹ ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಸದಾಕಾಲ ದೂಷಣೆ ಮಾಡುವುದರಲ್ಲೇ ಜೀವನ ಸಾಗುವುದು. ಆದರೆ ನಮ್ಮನ್ನು ನಾವು ಒಪ್ಪಿಕೊಂಡರೆ ಮಾತ್ರ ಜೀವನದಲ್ಲಿ ಏನಾದರೂ ಮಾಡಲು ಸಾಧ್ಯ. ಇದು ವಾಸ್ತವವಾಗಿ, ಹೆಚ್ಚು ಸುಲಭವಾದ, ಸರಳವಾದ ಮತ್ತು ಹೆಚ್ಚು ಲಾಭದಾಯಕ ಕೆಲಸಗಳಲ್ಲಿ ಒಂದಾಗಿದೆ.

3: ಸಾಮರಸ್ಯ ಮತ್ತು ಸುಸ್ಥಿರತೆ

3: ಸಾಮರಸ್ಯ ಮತ್ತು ಸುಸ್ಥಿರತೆ

ಸಾಮಾನ್ಯವಾಗಿ ಜನರು ತಮ್ಮ ಸ್ವಾರ್ಥದ ಬಗ್ಗೆಯೇ ಆಲೋಚನೆ ಮಾಡುತ್ತಿರುತ್ತಾರೆ. ತಮ್ಮೆಲ್ಲಾ ಕೆಲಸಗಳ ಹಿಂದೆ ತಮ್ಮದೇ ಆದ ಸ್ವಾರ್ಥವನ್ನು ಹೊಂದಿರುತ್ತಾರೆ. ಆದರೆ, ಜನ ಸ್ವಾರ್ಥ ಬಿಟ್ಟು ಯೋಚಿಸಿದರೆ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಅದು ಸಾಮರಸ್ಯ ಮತ್ತು ಸುಸ್ಥಿರತೆಯನ್ನು ಸೃಷ್ಟಿಸುತ್ತದೆ ಎಂದು ಈ ಇಕಿಗೈ ಹೇಳುವುದು.

4.ಸಣ್ಣ ವಿಷಯಗಳಲ್ಲಿ ಸಂತೋಷ ಕಾಣುವುದು

4.ಸಣ್ಣ ವಿಷಯಗಳಲ್ಲಿ ಸಂತೋಷ ಕಾಣುವುದು

ಹೌದು, ವ್ಯಕ್ತಿ ತನಗೆ ಸಿಗುವ ಸಣ್ಣ ಸಣ್ಣ ವಿಚಾರಗಳಲ್ಲೂ ಸಂತೋಷವನ್ನು ಗಳಿಸಿಕೊಳ್ಳಬೇಕು. ಸಿಕ್ಕಿದ್ದಕ್ಕೆ ಸಂತೋಷ ಪಡದೇ, ಸಿಗದೇ ಇರುವುದಕ್ಕೆ ದುಃಖ ಪಡುತ್ತಾ ಕೂರುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ನಿಮ್ಮ ದಿನವನ್ನು ಆರಂಭಿಸುವ ಮುನ್ನ ನಿಮಗೆ ಸಂತೋಷ ನೀಡುವ ಸಣ್ಣ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಇದು ನಿಮಗೆ ಜೀವನದಲ್ಲಿ ಸಿಗೋ ಸಣ್ಣ ಸಣ್ಣ ಖುಷಿಯನ್ನು ಅನುಭವಿಸಲು ಸಹಾಯ ಮಾಡುತ್ತದೆ.

5: ಈ ಕ್ಷಣದಲ್ಲಿ ಬದುಕುವುದು

5: ಈ ಕ್ಷಣದಲ್ಲಿ ಬದುಕುವುದು

ಕೆನ್ ಪ್ರಕಾರ, ಮಕ್ಕಳು ವರ್ತಮಾನದಲ್ಲಿ ಬದುಕುತ್ತಾರೆ. ಏಕೆಂದರೆ ಅವರಿಗೆ ಹಿಂದಿನ ಅಥವಾ ಭವಿಷ್ಯದ ಬಗ್ಗೆ ಖಚಿತವಾದ ಕಲ್ಪನೆಯಿರುವುದಿಲ್ಲ. ಅದೇ ರೀತಿ ನಾವು ಸಹ, ಈ ಕ್ಷಣದಲ್ಲಿ ಬದುಕಬೇಕು. ಹಿಂದೆ ಆಗಿದ್ದರ ಬಗ್ಗೆ ಯೋಚಿಸದೇ, ಮುಂದಾಗುವುದನ್ನು ಚಿಂತಿಸದೇ, ಈಗಿರುವ ಕ್ಷಣವನ್ನು ಸಂಪೂರ್ಣವಾಗಿ ಬದುಕಬೇಕು. ಇದು ನಿಮ್ಮೊಳಗಿನ ಮಗುವನ್ನು ಹೊರತರಲು ಸಹಾಯ ಮಾಡುತ್ತದೆ.

English summary

Ikigai: Know all about the Japanese secret to a long and happy life

Here we talking about Ikigai: Know all about the Japanese secret to a long and happy life, read on
Story first published: Wednesday, September 14, 2022, 11:19 [IST]
X
Desktop Bottom Promotion