Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Chanakya Niti : ಚಾಣಕ್ಯ ಪ್ರಕಾರ ಜೀವನದಲ್ಲಿ ಗೆಲ್ಲಬೇಕೆಂದರೆ ಇಂಥ ನಾಲ್ವರ ಸಂಘ ಇರಲೇಬೇಕಂತೆ
ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಯಶಸ್ಸಿನ ಹಿಂದೆ ಬಿದ್ದವರೇ. ಸೋಲನ್ನ ಯಾರು ಬಯಸೋದಿಲ್ಲ ಆದರೂ ಸೋಲು ಪದೇ ಪದೇ ನಮ್ಮನ್ನು ಕಾಡದೇ ಬಿಡೋದಿಲ್ಲ. ಆದರೆ ಚಾಣಕ್ಯನ ಪ್ರಕಾರ ಈ ನಾಲ್ಕು ಜನ ನಿಮ್ಮ ಜೊತೆಗೆ ಇದ್ದರೆ ನೀವು ಅಸಾಧಾರಣ ಗೆಲವು ಸಾಧಿಸಬಹುದಂತೆ.

ಕೆಲವೊಂದು ಬಾರಿ ನಾನೊಬ್ಬನೇ ಏನನ್ನಾದರೂ ಸಾಧಿಸುತ್ತೇನೆ ಅಂದರೆ ಅದು ಖಂಡಿತ ಸಾಧ್ಯವಿಲ್ಲ. ನಮಗೆ ನಮ್ಮವರ ಬೆಂಬಲ ಬೇಕಾಗುತ್ತದೆ. ನೀವು ಯಾವಾಗ ಈ ವ್ಯಕ್ತಿಗಳ ಸಹಾಯ ಪಡೆಯುತ್ತಿರೋ ಗೆಲುವು ಸುಲಭ ಅಂತಾರೆ ಚಾಣಕ್ಯ. ಹಾಗಾದರೆ ಚಾಣಕ್ಯ ಹೇಳಿದ ಆ ನಾಲ್ಕು ಜನ ಯಾರು ಅನ್ನೋದನ್ನ ಹೇಳ್ತೀವಿ.
1. ಸ್ನೇಹಿತನ ಜೊತೆಗೆ ಅಧ್ಯಯನ ನಡೆಸಿ
ವಿದ್ಯಾರ್ಥಿ ಜೀವನದಲ್ಲೇ ಆಗಲಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲೇ ಆಗಲಿ ಅಧ್ಯಯನ ನಡೆಸುವಾಗ ಗುಂಪು ಗುಂಪಾಗಿ ಕುಳಿತರೇ ಓದಿರೋದು ಸರಿಯಾಗಿ ತಲೆಗೆ ಹತ್ತೋದಿಲ್ಲ. ಓದುವ ಮಧ್ಯೆ ಅಡಚನೆ ಉಂಟಾಗುತ್ತದೆ. ಚಾಣಕ್ಯನ ಪ್ರಕಾರ ಒಬ್ಬರೇ ಕುಳಿತು ಓದುವುದು ಸರಿಯಲ್ಲ. ಕೆಲವೊಂದು ಸಾರಿ ನಮ್ಮ ಮನಸ್ಸು ಚಂಚಲವಾಗಿರುತ್ತದೆ, ಓದಿನ ಮಧ್ಯದಲ್ಲೇ ಎದ್ದು ಹೋಗುತ್ತೇವೆ. ಇನ್ನೂ ಅನುಮಾನಗಳು ಬಂದಾಗ ಬಗೆಹರಿಸಲು ಯಾರು ಇರುವುದಿಲ್ಲ. ಹೀಗಾಗಿ ಓದುವಾಗ ನಿಮ್ಮ ಸ್ನೇಹಿತ ನಿಮ್ಮ ಜೊತೆಗಿದ್ದರೆ ಉತ್ತಮ. ಆತ ನಿಮಗೆ ಓದಿನ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತಾನೆ. ನೀವಿಬ್ಬರು ಪರಸ್ಪರ ಚರ್ಚಿಸಿ ಕೂಡ ಓದಬಹುದು.
2. ನಾಲ್ಕು ಜನರ ಜೊತೆಗೆ ಪ್ರವಾಸಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಒಬ್ಬರೇ ಪ್ರವಾಸಕ್ಕೆ ಹೋಗುವುದು ಸರಿಯಲ್ಲ. ಒಬ್ಬರೇ ಹೋದರೆ ಅಪಾಯ ಎದುರಾಗಬಹುದು. ಹೀಗಾಗಿ ನಾಲ್ಕು ಜನರ ತಂಡದೊಂದಿಗೆ ಪ್ರವಾಸಕ್ಕೆ ಹೋಗುವುದು ತುಂಬಾನೇ ಒಳ್ಳೆಯದು. ಪ್ರವಾಸದ ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು, ನಿಮ್ಮ ಕಷ್ಟಕ್ಕೆ ಹೆಗಲು ಕೊಡಲು ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ.
3. ಒಬ್ಬರೇ ತಪಸ್ಸು ಮಾಡಿ
ಚಾಣಕ್ಯನ ಪ್ರಕಾರ ತಪಸ್ಸು ಮಾಡುವಾಗ ಯಾರನ್ನೂ ಜೊತೆಗೆ ಕರೆದುಕೊಂಡು ಹೋಗಬೇಡಿ. ಒಬ್ಬರೇ ತಪಸ್ಸು ಮಾಡಿದರೆ ಉತ್ತಮ. ನಿಮ್ಮ ಸಂಗಡಿಗರು ಜೊತೆಗೆಗಿದ್ದಾಗ ನಿಮ್ಮ ಗಮನ ಬೇರೆ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಪಸ್ಸು ಮಾಡವಾಗ ಒಂಟಿಯಾಗಿದ್ದರೆ ಒಳ್ಳೆಯದು.
4. ಮನೋರಂಜನೆಗಾಗಿ ನಾಲ್ಕು ಜನ ಸ್ನೇಹಿತರು ಅಗತ್ಯ
ಚಾಣಕ್ಯನ ಪ್ರಕಾರ ಒಬ್ಬಂಟಿಯಾಗಿದ್ದರೆ ನಮಗೆ ಮನೋರಂಜನೆ ಪಡೆಯುವುದಕ್ಕೆ ಆಗೋದಿಲ್ಲ. ನೀವೇನಾದರೂ ಮನೋರಂಜನಾ ಕಾರ್ಯಕ್ರಮಕ್ಕೆ ಹೋಗಬೇಕೆಂದಿದ್ದರೆ ಖಂಡಿತ ನಾಲ್ಕು ಜನ ಜೊತೆಯಾಗಿಯೇ ಹೋಗಬೇಕು. ಸ್ನೇಹಿತರು ಜೊತೆಗಿದ್ದಾಗ ಮಾತ್ರ ಒಂದು ಕಾರ್ಯಕ್ರಮದಲ್ಲಿ ಎಂಜಾಯ್ ಮಾಡೋದಿಕ್ಕೆ ಸಾಧ್ಯ.
5. ದೊಡ್ಡ ಪಡೆಯ ಜೊತೆಗೆ ಯುದ್ಧಕ್ಕೆ ತೆರಳಿ
ಚಾಣಕ್ಯನ ಪ್ರಕಾರ ಯುದ್ಧಕ್ಕೆ ಹೋಗುವಾಗ ಒಬ್ಬನೇ ಹೋಗುತ್ತೇನೆ ಎಂಬ ಬಂಢ ದೈರ್ಯ ಖಂಡಿತ ಬೇಡ. ನಿಮ್ಮೊಬ್ಬರಿಂದ ಶತ್ರುಗಳನ್ನು ಗೆಲ್ಲೋದಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ದೊಡ್ಡ ಪಡೆಯ ಜೊತೆಗೆ ಶತ್ರು ಸೈನ್ಯದ ಜೊತೆಗೆ ಸೆಣಸಾಡಲು ಸಿದ್ಧರಾಗಿರಿ. ನಿಮ್ಮ ಸೈನ್ಯ ದೊಡ್ಡದಾಗಿದ್ದಾಗ ಮಾತ್ರ ನೀವು ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಜೀವನದಲ್ಲಿ ಜೊತೆಗಾರರು ಅನ್ನುವವರು ತುಂಬಾನೇ ಮುಖ್ಯವಾಗುತ್ತಾರೆ. ಒಬ್ಬಂಟಿಯಾಗಿ ಬದುಕುತ್ತೇನೆ ಅಂದರೆ ಖಂಡಿತ ಸಾಧ್ಯವೇ ಇಲ್ಲ. ಜೀವನದಲ್ಲಿ ಸಂತೋಷ-ದುಃಖಕ್ಕೆ ಪಾಲುದಾರರಾಗಿ ಯಾರಾದರೊಬ್ಬರು ಬೇಕೇಬೇಕಾಗುತ್ತದೆ.



Click it and Unblock the Notifications



