Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
ಹನುಮ ಜಯಂತಿಯಂದು ಈ ಕ್ರಮಗಳನ್ನು ಮಾಡುವುದರಿಂದ ರಾಹು-ಕೇತು, ಶನಿಯ ಕೆಟ್ಟ ಪ್ರಭಾವದಿಂದ ಪಾರಾಗಬಹುದು
ಹಿಂದೂ ಕ್ಯಾಲೆಂಡರ್‌ನ ಮೊದಲ ತಿಂಗಳು ಅಂದರೆ ಚೈತ್ರ ಮಾಸ ಬಹಳ ವಿಶೇಷವಾಗಿದೆ. ಇದು ಹಿಂದೂ ಹೊಸ ವರ್ಷ ಪ್ರಾರಂಭವಾಗುವ ತಿಂಗಳು. ಚೈತ್ರ ನವರಾತ್ರಿ, ಶ್ರೀರಾಮನ ಜನ್ಮದಿನವೂ ಇದೇ ತಿಂಗಳಿನಲ್ಲಿ ಬರುತ್ತದೆ. ಅಷ್ಟೇ ಅಲ್ಲ, ಶ್ರೀರಾಮನ ಭಕ್ತ ಹನುಮನ ಜಯಂತಿಯೂ ಇದೇ ತಿಂಗಳಲ್ಲಿ ನಡೆಯುತ್ತದೆ. ಹನುಮ ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಜನಿಸಿದ. ಈ ವರ್ಷ ಹನುಮ ಜಯಂತಿಯು 16ನೇ ಏಪ್ರಿಲ್ 2022 ರ ಶನಿವಾರದಂದು ಬರುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ಶನಿ, ರಾಹು-ಕೇತುವಿನ ರಾಶಿ ಬದಲಾವಣೆ:
ಜ್ಯೋತಿಷ್ಯದ ದೃಷ್ಟಿಕೋನದಿಂದ, ಏಪ್ರಿಲ್ ತಿಂಗಳು ಅನೇಕ ಬದಲಾವಣೆಗಳನ್ನು ತಂದಿದೆ. ಈ ತಿಂಗಳು ಶನಿ, ರಾಹು-ಕೇತುಗಳಂತಹ ಗ್ರಹಗಳು ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿದ್ದು, ಅದರಿಂದ ಶುಭ-ಆಶುಭ ಫಲಿತಾಂಶಗಳು ಸಿಗಲಿದೆ. ರಾಹು-ಕೇತು 12 ಏಪ್ರಿಲ್ 2022 ರಂದು ರಾಶಿಚಕ್ರವನ್ನು ಬದಲಾಯಿಸಿದರೆ, ಶನಿಯು 29 ಏಪ್ರಿಲ್ 2022 ರಂದು ಸ್ಥಾನ ಬದಲಾವಣೆ ಮಾಡಲಿದೆ. ಜ್ಯೋತಿಷ್ಯದ ಪ್ರಕಾರ, ಈ ಕ್ರೂರ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಅನೇಕ ರಾಶಿಚಕ್ರದ ಮೇಲೆ ಭಾರೀ ಪ್ರಭಾವ ಬೀರಲಿದೆ. ಈ ಸಂದರ್ಭದಲ್ಲಿ, ಈ ಗ್ರಹಗಳಲ್ಲಿ ಕಂಡುಬರುವ ಅಶುಭ ಫಲಗಳನ್ನು ಗುಣಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಗ್ರಹಗಳ ಸ್ಥಾನ ಬದಲಾವಣೆಯಿಂದ ಅಶುಭ ಫಲಗಳನ್ನು ತಪ್ಪಿಸಲು ಹನುಮಂತನಿಗೆ ಮಾಡಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ. ಅವುಗಳೆಂದರೆ:
ಸಾಡೇ ಸಾತಿಯಿರುವವರು ಹೀಗೆ ಮಾಡಿ:
ಹನುಮನ ಜಯಂತಿಯಂದು ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸಬೇಕು. ಹನುಮಾನ್ ದೇವಸ್ಥಾನಕ್ಕೆ ಹೋಗಿ ವಿಗ್ರಹದ ಮುಂದೆ ಕುಳಿತು ಪಠಿಸಿ. ಹಾಗೆ ಮಾಡುವುದರಿಂದ ಶನಿ ದೈಯ್ಯ ಅಥವಾ ಸಾಡೇ ಸಾತಿಯಿಂದ ಬಳಲುತ್ತಿರುವವರಿಗೆ ಸಾಕಷ್ಟು ಪರಿಹಾರ ದೊರೆಯುತ್ತದೆ.

ಜೀವನದಲ್ಲಿ ಶಾಂತಿ ನೆಲೆಸಲು:
ಹನುಮಂತನಿಗೆ ಕಡಲೆ ಹಿಟ್ಟಿನ ಲಡ್ಡು ಎಂದರೆ ತುಂಬಾ ಇಷ್ಟ. ಹನುಮ ಜಯಂತಿಯ ದಿನ ಈ ಹಿಟ್ಟಿನ ಲಡ್ಡುವನ್ನು ನೈವೇದ್ಯ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಜೀವನಕ್ಕೆ ಸಂತೋಷ ಸಿಗುತ್ತದೆ. ಜೊತೆಗೆ ಸಂಕಟಗಳೆಲ್ಲವೂ ಮರೆಯಾಗುವುದು.

ಬಿಕ್ಕಟ್ಟುಗಳಿಂದ ಮುಕ್ತಿ ಪಡೆಯಲು:
ಹನುಮನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಹನುಮ ಜಯಂತಿಯ ದಿನ ಸಿಂಧೂರವನ್ನು ಬಜರಂಗಬಲಿ ಅರ್ಪಿಸಬೇಕು. ಮಲ್ಲಿಗೆ ಹೂವಿನ ಮಾಲೆ ಮತ್ತು ಕೆಂಪು ವಸ್ತ್ರಗಳನ್ನು ಸಹ ಅರ್ಪಿಸಿ. ಹನುಮ ಜಯಂತಿಯಿಂದ ಆರಂಭವಾಗಿ ಮುಂದಿನ 11 ಹುಣ್ಣಿಮೆಗಳವರೆಗೆ ಈ ಪರಿಹಾರವನ್ನು ಮಾಡಿದರೆ ದೊಡ್ಡ ಬಿಕ್ಕಟ್ಟುಗಳಿಂದ ಮುಕ್ತಿ ಪಡೆಯಬಹುದು.

ಯಶಸ್ಸು ದೊರೆಯಲು:
ಹನುಮ ಅಂದರೆ, ಕೆಂಪು ವಸ್ತ್ರ ನೆನಪಾಗುವುದು ಸಹಜ. ಜೊತೆಗೆ ಧೈರ್ಯ ಸಾಹಸದ ಸಂಕೇತ. ಇದರ ಸಾಂಕೇತಿಕವೇ ತ್ರಿಕೋನ ಕೆಂಪು ಧ್ವಜ. ಆದ್ದರಿಂದ ಈ ಹನುಮ ಜಯಂತಿಯಂದು ಹನುಮನ ದೇವಸ್ಥಾನದಲ್ಲಿ ತ್ರಿಕೋನ ಕೆಂಪು ಧ್ವಜವನ್ನು ಹಾರಿಸಬೇಕು. ಹೀಗೆ ಮಾಡುವುದರಿಂದ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಿಗುತ್ತದೆ.



Click it and Unblock the Notifications











