For Quick Alerts
ALLOW NOTIFICATIONS  
For Daily Alerts

ಧರ್ಮವನ್ನೇ ಬದಲಾಯಿಸಿರುವ ಖ್ಯಾತ 17 ಸೆಲೆಬ್ರಿಟಿಗಳು

By Super
|

ಪ್ರತಿಯೊಬ್ಬ ವ್ಯಕ್ತಿಗೂ ತಾನು ನಂಬಿರುವ ಧರ್ಮ ಪವಿತ್ರವಾಗಿರುತ್ತದೆ. ಬಹುತೇಕ ನಾವೆಲ್ಲಾ ಹುಟ್ಟಿನಿಂದಲೇ ನಮ್ಮ ತಂದೆತಾಯಿಗಳ ಧರ್ಮವನ್ನು ಅನುಸರಿಸುತ್ತೇವೆ. ಆದರೆ ಕೆಲವರಿಗೆ ಬೇರೆ ಧರ್ಮದ ಕುರಿತು ಆಸಕ್ತಿ ಹುಟ್ಟಿ ಆ ಮತದ ಬಗ್ಗೆ ಎಲ್ಲಾ ವಿವರಗಳನ್ನು ಪಡೆದುಕೊಂಡು ಆ ಮತವನ್ನು ಅನುಸರಿಸುವ ನಿರ್ಧಾರ ಕೈಗೊಳ್ಳುತ್ತಾರೆ.

ಈ ನಿರ್ಧಾರ ಅತ್ಯಂತ ಖಾಸಗಿಯಾಗಿರುವುದರಿಂದ ಅವರನ್ನು ತಡೆಯುವುದು ತುಂಬಾ ಕಷ್ಟ. ಕಲವೆಡೆ ಬಲವಂತದಿಂದ ಮತಾಂತರಗೊಳಿಸಲಾಗಿರುವ ಪ್ರಸಂಗಗಳು ತಿಳಿದುಬಂದರೂ ಮತಾಂತರಗೊಂಡ ವ್ಯಕ್ತಿ ಅನಿವಾರ್ಯವಾಗಿ ಹೊಸ ಕಟ್ಟುಪಾಡುಗಳಿಗೆ ಒಳಪಡುತ್ತಾನೆಯೇ ವಿನಃ ಮನಸ್ಸಿನಿಂದಲ್ಲ.

ಹೀಗೆ ಸ್ವ ಇಚ್ಛೆಯಿಂದ ಮತಾಂತರಗೊಂಡವರಲ್ಲಿ ಜಗತ್ತಿನ ಹಲವು ಖ್ಯಾತನಾಮರೂ, ವಿದ್ವಾಂಸರೂ, ಬುದ್ದಿಜೀವಿಗಳೂ ಇದ್ದಾರೆ. ಮತಾಂತರಕ್ಕೆ ಕಾರಣವನ್ನು ಕೆದಕಿದರೆ ಕೆಲವರು ಆಧ್ಯಾತ್ಮದ ಕಾರಣ ನೀಡಿದರೆ ಇನ್ನು ಕೆಲವರು ಹೊಸ ಮತ ನೀಡುವ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯನ್ನು ಹೆಸರಿಸುತ್ತಾರೆ. ಕೆಲವರಂತೂ ತಮ್ಮ ಪ್ರಿಯತಮ/ಪ್ರಿಯತಮೆಯ ಪ್ರೀತಿ ಪಡೆಯಲೆಂದೇ ಮತಾಂತರಗೊಂಡಿದ್ದಾರೆ.

ವಿಚಿತ್ರವೆಂದರೆ ಕೆಲವರು ಅಲ್ಪಕಾಲದ ಲಾಭ ಅಥವಾ ಬಿಡುಗಡೆಗಾಗಿ ಮತಾಂತರಗೊಳ್ಳುತ್ತಾರೆ. ಗಲ್ಫ್ ರಾಷ್ಟ್ರಗಳಲ್ಲಿ ಗುರುತರ ಅಪರಾಧಗಳಿಗಾಗಿ ಜೈಲು ಸೇರಿದವರು ಮುಸ್ಲಿಂ ಮತಕ್ಕೆ ಸೇರ್ಪಡೆಗೊಂಡರೆ ವರ್ಷಕ್ಕೊಂದು ಅಥವಾ ಎರಡು ಬಾರಿ ದೊರೆ ಮುಸ್ಲಿಮ್ ಕೈದಿಗಳಿಗೆ ನೀಡುವ ಕ್ಷಮಾದಾನ ದಕ್ಕಿಸಿಕೊಳ್ಳಬೇಕೆಂದಲೇ ಮತಾಂತರಗೊಳ್ಳುತ್ತಾರೆ. ತಮ್ಮ ಧರ್ಮದಲ್ಲಿ ಮಾದಕವಸ್ತುವಿನ ಸೇವನೆ ನಿಷಿದ್ಧವಾದುದರಿಂದ ಮಾದಕವಸ್ತುಸೇವನೆಗೆ ಅವಕಾಶವಿರುವ ಧರ್ಮಕ್ಕೆ ಸೇರಿದವರಿದ್ದಾರೆ. ಮತಾಂತರಗೊಂಡ ಖ್ಯಾತನಾಮರಲ್ಲಿ ಜಗತ್ತಿನ ಹದಿನೇಳು ಹೆಸರುಗಳು ಈ ಕೆಳಗಿನಂತಿವೆ.

ಜೂಲಿಯಾ ರಾಬರ್ಟ್ಸ್

ಜೂಲಿಯಾ ರಾಬರ್ಟ್ಸ್

ಪ್ರೆಟಿ ವುಮನ್ ಚಲನಚಿತ್ರದಿಂದ ಪ್ರಖ್ಯಾತರಾದ ಜೂಲಿಯಾ ರಾಬರ್ಟ್ಸ್ 2009ರಲ್ಲಿ ಭಾರತಕ್ಕೆ Eat Pray Love ಎಂಬ ಆಂಗ್ಲ ಚಲನಚಿತ್ರದ ಚಿತ್ರೀಕರಣಕ್ಕೆಂದು ಪಟೌಡಿ ನಗರಕ್ಕೆ ಆಗಮಿಸಿದ್ದಾಗ ಅಲ್ಲಿನ ಹರಿ ಮಂದಿರದಲ್ಲಿ ಸ್ವಾಮಿ ಧರಮ್ ದೇವ್ ರವರ ಪ್ರವಚನಗಳಿಗೆ ಮನಸೋತರು. ಬಳಿಕ ಅವರು ನೀಮ್ ಕರೋಲಿ ಬಾಬಾ ಮಹಾರಾಜ್ ಜೀ ಯವರ ಶಿಷ್ಯೆಯಾಗಿ ಸೇರಿಕೊಂಡರು. ಹಿಂದೂ ಧರ್ಮದಿಂದ ಅತೀವ ಪ್ರಭಾವಿತರಾದ ಅವರು 2010 ರಲ್ಲಿ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡರು. ತಮ್ಮ ಮಕ್ಕಳ ಹೆಸರನ್ನೂ ಹೇಜ಼ೆಲ್ ನಿಂದ ಲಕ್ಷ್ಮಿ ಎಂದೂ, ಫಿನ್ನಿಯಸ್ ನನ್ನು ಗಣೇಶನೆಂದೂ ಹೆನ್ರಿಯನ್ನು ಕೃಷ್ಣ ಬಲರಾಂ ಎಂದೂ ಬದಲಿಸಿದರು.

courtesy - daily.bhaskar

ರಿಚರ್ಡ್ ಗಿಯರ್

ರಿಚರ್ಡ್ ಗಿಯರ್

ಹಾಲಿವುಡ್ ನಟ ರಿಚರ್ಡ್ ಗಿಯರ್ ರವರು ತಮ್ಮ ಇಪ್ಪತ್ತನೇ ವಯಸ್ಸಿನಿಂದಲೂ ಬೌದ್ಧ ಧರ್ಮದ ಬಗ್ಗೆ ಆಸಕ್ತಿ ತಳೆದಿದ್ದರು. ಆರು ವರ್ಷಗಳವರೆಗೆ ಜೆನ್ ವಿದ್ಯೆಯನ್ನು ಕಲಿತರು. ಭಾರತಕ್ಕೆ ಒಮ್ಮೆ ಅವರು ಬಂದಿದ್ದಾಗ ಹದಿನಾಲ್ಕನೇ ದಲಾಯಿ ಲಾಮಾ ರೊಂದಿಗೆ ಭೇಟಿಯಾದ ಬಳಿಕ ಬೌದ್ಧ ಧರ್ಮಕ್ಕೆ ಸೇರುವ ಅವರ ಬಯಕೆ ಇನ್ನೂ ಗಟ್ಟಿಯಾಯಿತು. ಇಂದಿಗೂ ಅವರು ಟಿಬೆಟ್ ನಲ್ಲಿಯೇ ಇದ್ದು ಬೌದ್ಧ ಧರ್ಮಕ್ಕೆ ಹಲವು ವಿಧದ ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ. ಬೌದ್ಧ ಧರ್ಮವನ್ನು ಅನುಸರಿಸುವ ನಿಟ್ಟಿನಲ್ಲಿ ಶಾಕಾಹಾರಿಯೂ ಆಗಿದ್ದಾರೆ.

courtesy - daily.bhaskar

ಶರ್ಮಿಳಾ ಟಾಗೋರ್

ಶರ್ಮಿಳಾ ಟಾಗೋರ್

ಕಶ್ಮೀರ್ ಕೀ ಕಲಿ, ಅನ್ ಇವ್ನಿಂಗ್ ಇನ್ ಪ್ಯಾರಿಸ್, ಆರಾಧನಾ ಮೊದಲಾದ ಹಲವು ಹಳೆಯ ಹಿಂದಿ ಚಲನಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಶರ್ಮಿಳಾ ಟಾಗೋರ್ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿಯವರನ್ನು ವಿವಾಹವಾದ ಬಳಿಕ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ತಮ್ಮ ಹೆಸರನ್ನು ಬೇಗಂ ಆಯೆಷಾ ಸುಲ್ತಾನಾ ಎಂದು ಬದಲಿಸಿಕೊಂಡರು.

courtesy - daily.bhaskar

ಟಾಮ್ ಕ್ರೂಸ್

ಟಾಮ್ ಕ್ರೂಸ್

ಮಿಷನ್ ಇಂಪಾಸಿಬಲ್ ಚಲನಚಿತ್ರ ಸರಣಿಗಳಲ್ಲಿ ನಾಯಕನಟನಾಗಿ ನಟಿಸಿದ ಟಾಮ್ ಕ್ರೂಸ್ ಹುಟ್ಟಿನಿಂದ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದರೂ ತಮ್ಮ ವೃತ್ತಿಜೀವನದ ಪ್ರಾರಂಭದಲ್ಲಿ Scientology ಧರ್ಮಕ್ಕೆ ಸೇರಿದರು.

courtesy - daily.bhaskar

ಒರ್ಲಾಂಡೋ ಬ್ಲೂಮ್

ಒರ್ಲಾಂಡೋ ಬ್ಲೂಮ್

ಬ್ರಿಟಿಷ್ ನಟರಾದ ಒರ್ಲಾಂಡೋ ಬ್ಲೂಮ್ ಹುಟ್ಟಿನಿಂದ ಇಂಗ್ಲೆಂಡಿನ ಆಂಗ್ಲಿಕನ್ ಚರ್ಚಿಗೆ ಸೇರಿದವರಾಗಿದ್ದರೂ ಬಳಿಕ ಬೌದ್ಧಧರ್ಮಕ್ಕೆ ಸೇರಿದರು. ತನ್ನ ಮನಃಶಾಂತಿಗಾಗಿ ಬೌದ್ಧಧರ್ಮವನ್ನು ಸೇರುತ್ತಿದ್ದೇನೆ ಎಂದು ಆ ಸಂದರ್ಭದಲ್ಲಿ ವಿವರಣೆ ನೀಡಿದ್ದರು.

courtesy - daily.bhaskar

ಮಡೋನ್ನಾ

ಮಡೋನ್ನಾ

ಖ್ಯಾತ ಪಾಪ್ ಗಾಯಕಿ ಹಾಗೂ ನಟಿ ಮಡೋನ್ನಾ ಲೂಯಿಸ್ ಸಿಕೋನ್ ಕ್ರಿಶ್ಚಿಯನ್ ಪಂಥಕ್ಕೆ ಸೇರಿದವರಾಗಿದ್ದರೂ ಬಳಿಕ ಜ್ಯೂ ಪಂಥಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನೂ ಎಸ್ತರ್ ಎಂದು ಬದಲಿಸಿಕೊಂಡರು.

courtesy - daily.bhaskar

ಜಾನ್ ಟ್ರಾವೋಲ್ಟಾ

ಜಾನ್ ಟ್ರಾವೋಲ್ಟಾ

ಖ್ಯಾತ ಆಂಗ್ಲ ನಟರಾದ ಜಾನ್ ಟ್ರಾವೋಲ್ಟಾ ಜನ್ಮದಿಂದ ಕ್ಯಾಥೋಲಿಕ್ ಕ್ರಿಶ್ಚಿಯನ್ನರಾಗಿದ್ದರೂ ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ Scientology ಧರ್ಮಕ್ಕೆ ಸೇರಿದರು.

daily.bhaskar

ಜಾರ್ಜ್ ಹ್ಯಾರಿಸನ್

ಜಾರ್ಜ್ ಹ್ಯಾರಿಸನ್

ವಿಶ್ವದ ಅತ್ಯಂತ ಶ್ರೇಷ್ಟ ಗಿಟಾರ ವಾದಕರಾದ ಜಾರ್ಜ್ ಹ್ಯಾರಿಸನ್ ಜನ್ಮದಿಂದ ರೋಮನ್ ಕ್ಯಾಥೋಲಿಕ್ ಪಂಥಕ್ಕೆ ಸೇರಿದವರಾಗಿದ್ದರು. 1965ರಲ್ಲಿ ಭಾರತಕ್ಕೆ ತಮ್ಮ ತಂಡ ಬೀಟಲ್ಸ್ ನೊಂದಿಗೆ ಆಗಮಿಸಿದಾಗ ಅವರು ಪಂಡಿತ್ ರವಿಶಂಕರ್ ರನ್ನು ಭೇಟಿಯಾಗಿ ಭಾರತೀಯ ಸಂಗೀತಕ್ಕೆ ಮನಸೋತರು, ಅವರ ಶಿಷ್ಯರೂ ಆದರು. ತರುವಾಯ ಹಲವು ಸ್ವಾಮಿಗಳ ಪ್ರವಚನಗಳನ್ನು ಆಲಿಸಿದ ಅವರು ಹಿಂದೂಧರ್ಮಕ್ಕೆ ಮನಸೋತು ಕೃಷ್ಣಪಂಥಕ್ಕೆ ಸೇರ್ಪಡೆಗೊಂಡರು. ಆ ತರುವಾಯ ಅವರು ಹಿಂದೂ ಧರ್ಮದ ಕಟ್ಟಾ ಅನುಯಾಯಿಯಾಗಿ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದರು.

courtesy - daily.bhaskar

ಕೇಟಿ ಹೋಮ್ಸ್

ಕೇಟಿ ಹೋಮ್ಸ್

ಖ್ಯಾತ ನಟ ಟಾಮ್ ಕ್ರೂಸ್ ರವರ ಧರ್ಮಪತ್ನಿಯಾಗಿರುವ ಕೇಟಿ ಹೋಮ್ಸ್ ಸಹಾ ತನ್ನ ಪತಿಯನ್ನನುಸರಿಸಿ ಕ್ರಿಶ್ಚಿಯನ್ ಧರ್ಮದಿಂದ Scientology ಧರ್ಮಕ್ಕೆ ಮತಾಂತರಗೊಂಡರು.

daily.bhaskar

ಮೈಕಲ್ ಜಾಕ್ಸನ್

ಮೈಕಲ್ ಜಾಕ್ಸನ್

ಪಾಪ್ ಸಂಗೀತದ ದಂತಕತೆಯಾದ ಮೈಕಲ್ ಜಾಕ್ಸನ್ 2008ರಲ್ಲಿ ಲಾಸ್ ಎಂಜಲೀಸ್ ನ ಸ್ನೇಹಿತನ ಮನೆಯಲ್ಲಿ ಮುಸ್ಲಿಮರಾಗಿ ಮತಾಂತರಗೊಂಡರು. ಬಳಿಕ ತಮ್ಮ ಹೆಸರನ್ನು ಮಿಖಾಯಿಲ್ ಎಂದು ಬದಲಿಸಿಕೊಂಡರು.

courtesy - daily.bhaskar

ನರ್ಗಿಸ್ ದತ್ತ್

ನರ್ಗಿಸ್ ದತ್ತ್

ರಾಜ್ ಕಪೂರರ ಹಳೆಯ ಹಿಂದಿ ಚಲನಚಿತ್ರಗಳ ಖ್ಯಾತ ನಾಯಕನಟಿಯಾಗಿದ್ದ ನರ್ಗಿಸ್ ದತ್ತ್ (ಜನನದ ಹೆಸರು ಫಾತಿಮಾ ರಶೀದ್) ಸುನಿಲ್ ದತ್ತ್ ರನ್ನು ವಿವಾಹವಾದ ಬಳಿಕ ಹಿಂದೂ ಧರ್ಮವನ್ನು ಸ್ವೀಕರಿಸಿ ತಮ್ಮ ಹೆಸರನ್ನು ನಿರ್ಮಲಾ ದತ್ತ್ ಎಂದು ಬದಲಿಸಿಕೊಂಡರು.

courtesy - daily.bhaskar

ಇಸ್ಲಾ ಫಿಷರ್

ಇಸ್ಲಾ ಫಿಷರ್

ಬ್ರಿಟಿಷ್ ನಾಗರಿಕ ರಾದ ಇಸ್ಲಾ ಫಿಷರ್ ಹಲವು ಆಂಗ್ಲ ಸಿನೆಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜನ್ಮತಃ ಕ್ರಿಶ್ಚಿಯನ್ ಪಂಥಕ್ಕೆ ಸೇರಿದ ಇವರು ಇತ್ತೀಚೆಗೆ ಹೀಬ್ರೂ ಪಂಥವನ್ನು ಅಂಗೀಕರಿಸಿ ತಮ್ಮ ಹೆಸರನ್ನು ಆಯ್ಲಾ ಎಂದು ಬದಲಿಸಿಕೊಂಡರು.

courtesy - daily.bhaskar

 ಸ್ನೂಪ್ ಡಾಗ್

ಸ್ನೂಪ್ ಡಾಗ್

ಸ್ನೂಪ್ ಡಾಗ್ ಎಂದು ಪ್ರಖ್ಯಾತರಾಗಿರುವ ರ್‍ಯಾಪ್ ಗಾಯಕ Calvin Cordozar Broadus ರವರು ಜನ್ಮತಃ ಬ್ಯಾಪ್ಟಿಸ್ಟ್ ಆಗಿದ್ದರೂ ಬಳಿಕ ನೇಶನ್ ಆಫ್ ಇಸ್ಲಾಂ ಎಂಬ ಪಂಥಕ್ಕೆ ಮತಾಂತರಗೊಂಡರು.

daily.bhaskar

ಎ.ಆರ್. ರೆಹಮಾನ್

ಎ.ಆರ್. ರೆಹಮಾನ್

ಅಂತರ್ಜಾತೀಯ ವಿವಾಹವಾದ ತಂದೆತಾಯಿ (ತಾಯಿ ಮುಸ್ಲಿಂ, ತಂದೆ ಹಿಂದೂ ಧರ್ಮಕ್ಕೆ ಸೇರಿದವರು) ಯವರ ಮಗನಾಗಿ ಹುಟ್ಟಿದ ಇವರ ಮೊದಲ ಹೆಸರು ಎ.ಎಸ್. ದಿಲೀಪ್ ಕುಮಾರ್. ತಮ್ಮ ತಾರುಣ್ಯದವರೆಗೂ ನಾಸ್ತಿಕರಾಗಿದ್ದ ಇವರು ಕ್ರಮೇಣ ಇಸ್ಲಾಂ ಧರ್ಮದತ್ತ ಒಲವು ಮೂಡಿ ತಮ್ಮ ಇಪ್ಪತ್ತಮೂರನೆಯ ವಯಸ್ಸಿನಲ್ಲಿ ಎ.ಆರ್. ರೆಹಮಾನ್ (Allah Rakha Rahman) ಎಂದು ಹೆಸರನ್ನು ಬದಲಿಸಿಕೊಂಡರು.

courtesy - daily.bhaskar

ಡ್ರೂ ಬ್ಯಾರಿಮೋರ್

ಡ್ರೂ ಬ್ಯಾರಿಮೋರ್

ಖ್ಯಾತ ಆಂಗ್ಲ ನಟಿ ಕ್ರಿಶ್ಚಿಯನ್ ಪಂಥಕ್ಕೆ ಸೇರಿದವರಾಗಿದ್ದರು. ಕಳೆದ ವರ್ಷ ಅವರು ತಮ್ಮ ಮೈಯೆಲ್ಲಾ ಮೂಡಿಸಿದ್ದ ಹಚ್ಚೆಗಳನ್ನು ನಿರ್ಮೂಲನಗೊಳಿಸಿ ಹೀಬ್ರೂ ಪಂಥಕ್ಕೆ ಸೇರಿಕೊಂಡರು.

courtesy - daily.bhaskar

ಎಲಿಜಬೆಥ್ ಟೇಲರ್

ಎಲಿಜಬೆಥ್ ಟೇಲರ್

ಏಳು ಜನ ಪತಿಯರನ್ನು ಹೊಂದಿದ್ದ ಖ್ಯಾತ ಆಂಗ್ಲ ನಟಿ ಲಿಜ್ ಟೇಲರ್ ತಮ್ಮ ನಾಲ್ಕನೆಯ ಪತಿ ಎಡ್ಡೀ ಫಿಷರ್ ರ ಧರ್ಮವಾದ ಹೀಬ್ರೂ ಪಂಥಕ್ಕೆ ಮನಸೋತು ಮತಾಂತರಗೊಂಡರು. ಆ ಬಳಿಕ ತಮ್ಮ ಹೆಸರನ್ನು Elisheba Rachel ಎಂದು ಬದಲಿಸಿಕೊಂಡರು.

daily.bhaskar

ಮೈಕ್ ಟೈಸನ್

ಮೈಕ್ ಟೈಸನ್

ವಿಶ್ವ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಕೆಲವು ಅಪರಾಧಗಳಿಗಾಗಿ ಜೈಲು ಸೇರಿದ್ದರು. ಕಾರಾಗೃಹವಾಸದಲ್ಲಿ ಇಸ್ಲಾಂ ಧರ್ಮವನ್ನು ಅಭ್ಯಸಿಸಿದ ಅವರು ಇಸ್ಲಾಂ ಧರ್ಮದ ಕಟ್ಟುಪಾಡುಗಳಿಗೆ ಮನಸೋತು ಜೈಲು ಅವಧಿ ಮುಗಿದ ಬಳಿಕ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಇದಕ್ಕೆ ಪುರಾವೆಯಾಗಿ ಮುಸ್ಲಿಮೇತರರಿಗೆ ಪ್ರವೇಶ ನಿಷಿದ್ಧವಾಗಿರುವ ಮೆಕ್ಕಾ ನಗರದಲ್ಲಿ ತಮ್ಮ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದರು.

courtesy - daily.bhaskar

English summary

17 celebrities who have changed their religion

For people, their religion is extremely important and protected aspect of their lives. However, there are many people who change or have changed their religions as desired by them. Here are some of the most famous celebrities who changed their religion after becoming famous…
X
Desktop Bottom Promotion