Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಇವರು 50 ವರ್ಷದಿಂದ ಬರೀ ನೀರು, ತಂಪು ಪಾನೀಯ ಕುಡಿದು ಬದುಕಿದ್ದಾರೆ!
75ರ ಈ ವೃದ್ಧೆ ಕಳೆದ 50 ವರ್ಷದಿಂದ ಬರೀ ನೀರು, ತಂಪು ಪಾನೀಯ ಮಾತ್ರ ಕುಡಿದರೂ ಆರೋಗ್ಯವಾಗಿರುವ ಮೂಲಕ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.
ನೀರು, ಜ್ಯೂಸ್ ಕುಡಿದು ವರ್ಷಗಟ್ಟಲೆ ಬದುಕಲು ಸಾಧ್ಯನಾ? ಆದರೆ ಇಲ್ಲೊಬ್ಬ ಹಿರಿಯ ಮಹಿಳೆ ಕಳೆದ 50 ವರ್ಷಗಳಿಂದ ಬರೀ ನೀರು, ಜ್ಯೂಸ್ ಕುಡಿದು ಬದುಕುತ್ತಿದ್ದಾರೆ! ಅವರ ವಯಸ್ಸು 75, ವಿಯಟ್ನಾಂನಲ್ಲಿ ವಾಸಿಸುತ್ತಿದ್ದಾರೆ.
ಮಿಸ್ ಬುಯಿ ಲೋಯಿ ಎಂದು ಅವರ ಹೆಸರು, ಈ ಇಳಿ ವಯಸ್ಸಿನಲ್ಲಿ ತುಂಬಾ ಆರೋಗ್ಯಕರವಾಗಿದ್ದಾರೆ. ಅವರಿಗೆ ಯಾವುದೇ ಘನ ಆಹಾರ ಎಂದು ತಿನ್ನಬೇಕೆಂದು ಅನಿಸುವುದೇ ಇಲ್ವಂತೆ. ಬರೀ ನೀರು, ಸಕ್ಕರೆಯಂಶ ಜ್ಯೂಸ್ ಇಷ್ಟೇ ಅವರ ಆಹಾರ

ಬೆಟ್ಟ ಹತ್ತುವಾಗ ಸಿಡಿಲು ಬಡಿದಿತ್ತು
ಅವರು ಬರೀ ದ್ರವಾಂಶ ಕುಡಿಯಲು ಪ್ರಾರಂಭಿಸಿದ್ದು ಸಿಡಲು ಬಡಿದ ಮೇಲೆ. ಅವರು ಹಾಗೂ ಮತ್ತೊಬ್ಬ ಮಹಿಳೆ ಜೊತೆ ಗಾಯವಾದ ಸೈನಿಕರಿಗೆ ಚಿಕಿತ್ಸೆ ನೀಡಲು ಬೆಟ್ಟ ಹತ್ತುತ್ತಿದ್ದರಂತೆ, ಆಗ ಅವರಿಗೆ ಸಿಡಿಲು ಬಡಿದು ಪ್ರಜ್ಞೆ ತಪ್ಪಿತು, ನಂತರ ಎಚ್ಚರವಾದ ಮೇಲೆ ಅವರು ಫ್ರೆಂಡ್ ಜ್ಯೂಸ್ ಕುಡಿಸಿದರು. ಅದಾದ ಬಳಿಕ ಅವರಿಗೆ ಯಾವುದೇ ಘನ ಆಹಾರ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲ, ಸ್ವಲ್ಪ ಸಮಯ ಹಣ್ಣು, ಮತ್ತಿತರ ಆಹಾರ ಸೇವಿಸಿದರು. ಆದರೆ 1970ರಿಂದ ಅವರು ಹಣ್ಣು ಹಾಗೂ ಇತರ ಘನ ಆಹಾರ ಸೇವಿಸುವುದನ್ನು ಸಂಪೂರ್ಣ ನಿಲ್ಲಿಸಿದರು.
ಇದೀಗ ಅವರ ಮನೆಯ ಫ್ರಿಡ್ಜ್ ತುಂಬಾ ಬರೀ ನೀರು ಹಾಗೂ ಜ್ಯೂಸ್‌ಗಳಿವೆ. ಅದರಲ್ಲೂ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಡಯಟ್‌ನಿಂದಾಗಿ ಹೆರಿಗೆಯಾದಾಗ ಮಕ್ಕಳಿಗೆ ಹಾಲುಣಿಸಲು ಕೂಡ ಸಾಧ್ಯವಾಗಲಿಲ್ಲ ಅವರಿಗೆ.
ಈಗ ಅವರು ಸುಮಾರು 50 ವರ್ಷಗಳಿಂದ ಬರೀ ನೀರು, ಜ್ಯೂಸ್ ಅಷ್ಟೇ ಸೇವಿಸುತ್ತಿದ್ದಾರೆ, ಅದರೂ ದೊಡ್ಡ ಆರೋಗ್ಯ ಸಮಸ್ಯೆಯಿಲ್ಲದೆ ತುಂಬಾ ಚೆನ್ನಾಗಿದ್ದಾರೆ, ಈ ಮೂಲಕ ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.



Click it and Unblock the Notifications
