Horoscope Today 30 March 2023: ಗುರುವಾರ: ಈ ದಿನ ಯಾವ ರಾಶಿಗಳಿಗೆ ಶುಭ, ಯಾರಿಗಲ್ಲ

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್‌ 30ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಶುಕ್ಲ ಪಕ್ಷ
ತಿಥಿ: ನವಮಿ
ನಕ್ಷತ್ರ: ಪುನರ್ವಸು
ರಾಹುಕಾಲ: ಮಧ್ಯಾಹ್ನ 01:56ರಿಂದ 03:28ರವರೆಗೆ

Dina Bhavishya -March 30 2023 Today Rashi Bhavishya, Daily Horoscope in Kannada

ಮೇಷ ರಾಶಿ

ಕೆಲಸದ ವಿಷಯದಲ್ಲಿ ನೋಡುವುದಾದರೆ ಈ ದಿನ ಅದೃಷ್ಟದ ದಿನ. ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಪ್ರೀತಿ,ಖುಷಿ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.

ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ 10:15 ರವರೆಗೆ

ವೃಷಭ ರಾಶಿ

ಇಂದು ಮಿಶ್ರಫಲ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಆದರೆ ಹಳೆಯ ಸಾಲ ಮರು ಪಾವತಿ ಮಾಡಲು ಒತ್ತಾಯ ಬರಬಹುದು. ಇಂದು ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ಉದ್ಯಮಿಗಳು ಯಾವುದೇ ಹಳೆಯ ನ್ಯಾಯಾಲಯದ ಪ್ರಕರಣದಿಂದ ಮುಕ್ತರಾಗಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.

ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 34
ಅದೃಷ್ಟದ ಸಮಯ: 11:30 ರಿಂದ 2:25 ರವರೆಗೆ

ಮಿಥುನ ರಾಶಿ

ಈ ದಿನ ನಿಮಗೆ ಒಳ್ಲೆಯದಿದೆ. ಪ್ರತಿಕೂಲ ಸಂದರ್ಭಗಳಲ್ಲಿ, ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ. ಇಂದು ಕೆಲಸದ ಬಗ್ಗೆ ನಿಮ್ಮ ಕಾಳಜಿ ಸ್ವಲ್ಪ ಹೆಚ್ಚಾಗಬಹುದು. ವಿಶೇಷವಾಗಿ ವ್ಯಾಪಾರಸ್ಥರು ಇಂದು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ಹಣದ ವಿಷಯದಲ್ಲಿ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಇಂದು ಆಯಾದ ಹೆಚ್ಚಾಗಬಹುದು. ಆಹಾರಕ್ರಮದ ಕಡೆಗೆ ಗಮನಹರಿಸಿ.

ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 6:40 ರವರೆಗೆ

ಕರ್ಕ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಮತ್ತಷ್ಟು ಗಮನವಿಟ್ಟು ಓದಲು ಸಲಹೆ ನೀಡಲಾಗಿದೆ ಆರ್ಥಿಕ ಪರಿಸ್ಥಿತಿಯಲ್ಲಿ ಬೆಳವಣಿಗೆಗೆ ಅವಕಾಶವಿದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಇಂದು ಪೂರ್ಣಗೊಳಿಸಬಹುದು. ನಿಮ್ಮ ತಪ್ಪಿನ ಬಗ್ಗೆ ಯಾರಾದರೂ ಹೇಳಿದರೆ ತಿದ್ದಿಕೊಳ್ಳಲು ಪ್ರಯತ್ನಿಸಿ. ಉದ್ಯಮಿಗಳು ಇಂದು ಮಿಶ್ರ ಲಾಭವನ್ನು ಪಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿದೆ.

ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ 10 ರವರೆಗೆ

ಸಿಂಹ ರಾಶಿ

ಕೆಲಸದ ವಿಷಯದಲ್ಲಿ ಇಂದು ನಿಮಗೆ ಸವಾಲಿನ ದಿನ. ನಿಮ್ಮ ಕೆಲಸಗಳು ಅಪೂರ್ಣವಾಗಬಹುದು. ಇಂದು ಆರ್ಥಿಕ ನಷ್ಟದ ಬಲವಾದ ಸಾಧ್ಯತೆಯೂ ಇದೆ. ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ನಂಬಬೇಡಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಯತ್ನಿಸಿ. ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗುವಿರಿ.

ಅದೃಷ್ಟದ ಬಣ್ಣ: ತಿಳಿ ಕೆಂಪು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಬೆಳಿಗ್ಗೆ 7:20 ರಿಂದ ಮಧ್ಯಾಹ್ನ 3 ರವರೆಗೆ

ಕನ್ಯಾ ರಾಶಿ

ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಹೊಂದಾಣಿಕೆ ಒಳ್ಳೆಯದು. ನಿಮ್ಮ ಕೆಲಸವನ್ನು ಮೇಲಾಧಿಕಾರಿ ಗುರುತಿಸುತ್ತಾರೆ. ಇಂದು ಉದ್ಯಮಿಗಳಿಗೆ ದೊಡ್ಡ ಆರ್ಥಿಕ ಲಾಭದ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿಯು ಉತ್ತಮವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿರುತ್ತದೆ.

ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4:30 ರವರೆಗೆ

ತುಲಾ ರಾಶಿ

ಆರೋಗ್ಯದ ದೃಷ್ಟಿಯಿಂದ ಈ ದಿನ ಒಳ್ಳೆಯದಲ್ಲ. ಹಳೆಯ ರೋಗ ಮರುಕಳಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ವಹಿಸದಿರುವುದು ಉತ್ತಮ. ಕೆಲಸದಲ್ಲಿ ಅಧಿಕ ಒತ್ತಡವಿರಲಿದೆ. ನೀವು ವ್ಯಾಪಾರಸ್ಥರಾಗಿದ್ದರೆ ಇಂದು ನಿಮ್ಮ ಕೆಲವು ಪ್ರಮುಖ ಕೆಲಸಗಳಿಗೆ ಅಡಚಣೆ ಉಂಟಾಗಬಹುದು. ಹಣದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಅಧಿಕ ಖರ್ಚು ಮಾಡಲು ಹೋಗಬೇಡಿ.

ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಗ್ಗೆ 11 ನಿಂದ ಮಧ್ಯಾಹ್ನ12:25ರವರೆಗೆ

ವೃಶ್ಚಿಕ ರಾಶಿ

ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಲು ಹೋಗಬೇಡಿ. ಎಲೆಕ್ಟ್ರಾನಿಕ್ಸ್, ಬಟ್ಟೆ, ಸೌಂದರ್ಯವರ್ಧಕಗಳು, ಪೀಠೋಪಕರಣಗಳು ಇತ್ಯಾದಿಗಳಲ್ಲಿ ಕೆಲಸ ಮಾಡುವ ಜನರಿಗೆ ಇಂದು ತುಂಬಾ ಪ್ರಯೋಜನಕಾರಿಯಾಗಲಿದೆ. ಮಾರಾಟದಲ್ಲಿ ಹೆಚ್ಚಳ ಕಂಡುಬರಲಿದೆ. ಸರ್ಕಾರಿ ಕೆಲಸ ಮಾಡುವವರು ತಮ್ಮ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ಮಾಡಲು ಸಲಹೆ ನೀಡಲಾಗಿದೆ. ಒಂದು ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಆರ್ಥಿಕ ಭಾಗ ಚೆನ್ನಾಗಿರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 6:30 ರಿಂದ ರಾತ್ರಿ 10 ರವರೆಗೆ

ಧನು ರಾಶಿ

ಕಚೇರಿಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಇಂದು ಕೆಲಸದ ಒತ್ತಡ ಅಧಿಕವಿರಲಿದೆ. ಉದ್ಯಮಿಗಳು ಇತ್ತೀಚೆಗೆ ಯಾವುದೇ ಹೂಡಿಕೆಯನ್ನು ಮಾಡಿದ್ದರೆ, ಅದರಿಂದ ನೀವು ಎರಡು ಪಟ್ಟು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಅದೇ ರೀತಿಯಲ್ಲಿ, ನಿಮ್ಮ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳುತ್ತಿರಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ಹದಗೆಡಬಹುದು. ಜಾಗರೂಕರಾಗಿರಿ

ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: 11:30 ರಿಂದ ಮಧ್ಯಾಹ್ನ 3 ರವರೆಗೆ

ಮಕರ ರಾಶಿ

ನಿಮ್ಮ ವೈಯಕ್ತಿಕ ವಿಷಯಗಳನ್ನು ಮನೆಯೊಳಗೆ ಪರಿಹರಿಸಲು ನೀವು ಪ್ರಯತ್ನಿಸಿದರೆ ಅದು ಉತ್ತಮವಾಗಿರುತ್ತದೆ. ಕಛೇರಿಯಲ್ಲಿ ನಿಮ್ಮ ಸ್ವಂತ ಕೆಲಸಗಳಿಗೆ ಗಮನ ಕೊಡಿ. ಇತರರ ತಪ್ಪುಗಳನ್ನು ಕಂಡುಹಿಡಿಯಲು ಹೋಗಬೇಡಿ. ವ್ಯಾಪಾರಸ್ಥರು ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗುತ್ತದೆ. ಇಂದು ಹಣದ ವಿಷಯದಲ್ಲಿ ಉತ್ತಮ ಸೂಚನೆಯನ್ನು ನೀಡುತ್ತಿದೆ ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5:20 ರವರೆಗೆ

ಕುಂಭ ರಾಶಿ

ಕೆಲಸದ ವಿಷಯದಲ್ಲಿ ಇಂದು ಪ್ರಮುಖವಾದ ದಿನ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯ ವ್ಯಕ್ತಿಯ ಮಾರ್ಗದರ್ಶನವನ್ನು ನೀವು ಪಡೆಯಬಹುದು. ಶೀಘ್ರದಲ್ಲೇ ನಿಮ್ಮ ವೃತ್ತಿಜೀವನ ಹೊಸ ದಿಕ್ಕಿನಲ್ಲಿ ಸಾಗಲಿದೆ. ಆರ್ಥಿಕ ದೃಷ್ಟಿಯಿಂದ ಇಂದು ತುಂಬಾ ಏರಿಳಿತಗಳಿವೆ. ನೀವು ಯಾರಿಗಾದರೂ ಸಾಲ ಅಥವಾ ಸಾಲವನ್ನು ನೀಡಿದ್ದರೆ ನಿಮ್ಮ ಹಣವನ್ನು ಮರಳಿ ಪಡೆಯುವಲ್ಲಿ ಇನ್ನಷ್ಟು ವಿಳಂಬವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆತಂಕವು ಬಹಳಷ್ಟು ಹೆಚ್ಚಾಗಬಹುದು.ಇಂದು ನಿಮ್ಮ ಸಂಗಾತಿಯೊಂದಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಆರೋಗ್ಯವು ಸುಧಾರಿಸುತ್ತದೆ, ಆದರೆ ನೀವು ವಿಶ್ರಾಂತಿಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಅದೃಷ್ಟ ಬಣ್ಣ: ಹಳದಿ
ಶುಭ ಸಂಖ್ಯೆ: 10
ಶುಭ ಸಮಯ: ಬೆಳಗ್ಗೆ 04:25ರಿಂದ ಮಧ್ಯಾಹ್ನ 12:30ರವರೆಗೆ

ಮೀನ ರಾಶಿ

ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಲು ಸೂಚಿಸಲಾಗಿದೆ. ಉದ್ಯಮಿಗಳ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳಿವೆ. ಹಣದ ಕೊರತೆಯಿಂದ ನಿಮ್ಮ ಯಾವುದೇ ಕೆಲಸವು ಸ್ಥಗಿತಗೊಂಡಿದ್ದರೆ, ಅದು ಇಂದೇ ಪೂರ್ಣಗೊಳ್ಳಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇಂದು ನೀವು ತುಂಬಾ ಸಂತೋಷ ಮತ್ತು ಶಕ್ತಿಯುತವಾಗಿರುತ್ತೀರಿ.

ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಮಧ್ಯಾಹ್ನ 2:20 ರಿಂದ ಸಂಜೆ 4:30 ರವರೆಗೆ

English summary

Dina Bhavishya -March 30 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 30 March 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Thursday, March 30, 2023, 4:00 [IST]
X
Desktop Bottom Promotion