Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೆಹಲಿಯಿಂದ ಬಿಹಾರ್‌ಗೆ ಹೋದ ಮಹಿಳೆಗೆ 1L ರೋಮಿಂಗ್ ಬಿಲ್ ಹಾಕಿದ ಏರ್‌ಟೆಲ್!: ಪೋಸ್ಟ್ ವೈರಲ್
ದೆಹಲಿ ಮೂಲದ ಮಹಿಳೆಯೊಬ್ಬರು X ಸಾಮಾಜಿಕ ತಾಣದಲ್ಲಿ ಏರ್‌ಟೆಲ್ ಕಂಪನಿ ತಮಗೆ ನೀಡಿದ ಶಾಕ್ ಅನುಭವ ಹಂಚಿಕೊಂಡಿದ್ದೇ ಇದೀಗ ಆ ಪೋಸ್ಟ್ ತುಂಬಾ ವೈರಲ್ ಆಗಿದೆ. ಆ ಪೋಸ್ಟ್‌ನಲ್ಲಿ ಹೇಳಿಕೊಂಡ ವಿಚಾರ ಶಾಕಿಂಗ್ ಹೌದೂ, ಫನ್ನಿಯೂ ಹೌದು, ಅಲ್ಲದೆ ಕಂಪನಿಗಳಿಂದ ಇಂಥ ತಪ್ಪುಗಳು ಆಗುತ್ತವೆ ಕೂಡ. ಇದೀಗ ಏರ್‌ಟೆಲ್ ಕಂಪನಿ ಮುಜುಗರಕ್ಕೆ ಒಳಗಾಗುವಂತಿದೆ ಅವರ ಈ ಪೋಸ್ಟ್.

ದೆಹಲಿಯಿಂದ ಬಿಹಾರಕ್ಕೆ ಹೋಗಿ ಬಂದ ಮಹಿಳೆಗೆ ಒಂದು ಲಕ್ಷ ರೋಮಿಂಗ್ ಬಿಲ್
ಆ ಮಹಿಳೆಯೊಬ್ಬರು ಬರಹಗಾರ್ತಿಯೂ ಅವರು. ಅವರು ಏರ್‌ಟೆಲ್ ಕಂಪನಿ ಕೆಲಸಕ್ಕೆ ಟೆರಿಬಲ್ ಸ್ಕ್ಯಾಮ್ ಎಂದು ಜರಿದಿದ್ದಾರೆ. ಅವರು ದೆಹಲಿಯಿಂದ ಬಿಹಾರದ ವಾಲ್ಮಿಕಿ ನಗರಕ್ಕೆ ಹೋಗಿದ್ದರು. ಅವರಿಗೆ ಏರ್‌ಟೆಲ್ ರೋಮಿಂಗ್ ಬಿಲ್ ಎಂದು ಒಂದು ಲಕ್ಷ ರುಪಾಯಿ ಪಾವತಿಸಲು ಹೇಳಿದೆ, ನಾನು ಭಾರತೀಯಳು, ನಾನ್ಯಾಕೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದಾಗ ಒಂದು ಲಕ್ಷ ರುಪಾಯಿ ರೋಮಿಂಗ್ ಬಿಲ್ ಕಟ್ಟಬೇಕು, ಅಲ್ಲದೆ ನನ್ನ ಔಟ್‌ಗೋಯಿಂಗ್ ಸರ್ವೀಸ್ ಕೂಡ ರದ್ದು ಮಾಡಿದ್ದಾರೆ, ಶೇಮ್ ಆನ್ ಯೂ ಏರ್‌ಟೆಲ್ ಇಂಡಿಯಾ (A terrible scam! I'm in Valmiki Nagar, Bihar.
@airtelindia
sends me a roaming bill of ₹1L+. I'm an INDIAN citizen on INDIAN soil. With no outstanding bill, Airtel cuts my services. Leaving me stranded!
Shame on you
@airtelindia
! ) ಎಂದು ಬರೆದಿದ್ದಾರೆ.
ಡಿಸೆಂಬರ್ 6ರಂದು ಶೇರ್ ಮಾಡಿದ ಈ ಪೋಸ್ಟ್‌ಗೆ ತುಂಬಾನೇ ಲೈಕ್ಸ್, ವ್ಯೂವ್ಸ್ ಬಂದಿದೆ. ಗ್ರಾಹಕರ ವೇದಿಕೆಗೆ ಹೋಗಿ ಅವರಿಗೆ ಬುದ್ಧಿ ಕಲಿಸಬೇಕು ಎಂದು ಕೆಲವರು ಕಮೆಂಟ್ ಮಾಡಿದರೆ , ನನಗೂ ಇದೇ ರೀತಿಯ ಅನುಭವ ಆಗಿತ್ತು , ಲೋಕಲ್ SMSಗೆ ಇಂಟರ್‌ನ್ಯಾಷನಲ್ SMS ರೇಟ್ ಹಾಕಿದ್ದರು ಎಂದು ಬರೆದಿದ್ದಾರೆ.
ಈ ರೀತಿ ಕಂಪನಿ ಮಾಡಿದರೆ ಅದನ್ನು ಬಿಟ್ಟು ಬೇರೆ ಸರ್ವೀಸ್ ಬಳಸಿ ಎಂದು ಕೆಲವರು ಕಮೆಂಟಿಸಿದ್ದಾರೆ. ಒಟ್ಟಿನಲ್ಲಿ ಕಂಪನಿ ಇಂಥದ್ದೊಂದು ಪ್ರಮಾದ ಮಾಡ ಬಾರದಿತ್ತು, ಆದರೆ ಅವರ ಕಡೆಯಿಂದ ಆಗಿದೆ, ಅದಕ್ಕೆ ಏರ್‌ಟೆಲ್ ಕಂಪನಿ ಪ್ರತಿಕ್ರಿಯಿಸಿದೆಯೇ? ಇಲ್ಲವೇ ಎಂಬುವುದ ಬಗ್ಗೆ ಮಾಹಿತಿ ಸಿಕ್ಕಿಲ್ಲ.
A terrible scam! I'm in Valmiki Nagar, Bihar. @airtelindia sends me a roaming bill of ₹1L+. I'm an INDIAN citizen on INDIAN soil. With no outstanding bill, Airtel cuts my services. Leaving me stranded!
— Neha Sinha (@nehaa_sinha) December 6, 2023
Shame on you @airtelindia! Do look into this @DoT_India @AshwiniVaishnaw pic.twitter.com/f7BT321Xv1
ಕರೆಂಟ್ ಬಿಲ್, ಮೊಬೈಲ್ ಬಿಲ್ ಹೀಗೆ ಕೆಲವೊಂದು ಬಿಲ್‌ಗಳು ನಮ್ಮ ಊಹೆಗೂ ಮೀರಿ ಬಂದಾಗ ಆಘಾತವಾಗುವುದು ಸಹಜ, ಅಷ್ಟೊಂದು ಬಿಲ್ ಹೇಗೆ ಕಟ್ಟುವುದು ಎಂದು ಕೆಲವರು ಬೆಚ್ಚಿ ಬೀಳುತ್ತಾರೆ, ಕೆಲವರಷ್ಟೇ ಈ ರೀತಿ ಬುದ್ಧಿ ಕಲಿಸುತ್ತಾರೆ. ಈ ರೀತಿ ಬಿಲ್ ಹಾಕಿದರೆ ಮತ್ತೆ ಲ್ಯಾಂಡ್‌ಫೋನ್ ಬರಬಹುದು ಅಷ್ಟೇ.....



Click it and Unblock the Notifications











