Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ ತಿಂಗಳು ಮೇಷ ರಾಶಿಯವರೇ ಈ ಬಗ್ಗೆ ಜಾಗ್ರತೆವಹಿಸಿ
ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಮೇಷ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯವನ್ನು ನೀಡಲಾಗಿದ್ದು ಆಗಸ್ಟ್ ತಿಂಗಳು ಮೇಷ ರಾಶಿಯವರಿಗೆ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿಯವರು ಈ ತಿಂಗಳು ಮಿಶ್ರಫಲ. ರಾಹು ಮತ್ತು ಕೇತು ಎರಡೂ ಗ್ರಹಗಳು ಅನುಕೂಲಕರ ಸ್ಥಾನದಲ್ಲಿ ಇಲ್ಲ. ರಾಹು ಮೊದಲ ಮತ್ತು ಕೇತು ಏಳನೇ ಮನೆಯಲ್ಲಿದ್ದಾರೆ. ಗುರು ಮೊದಲ ಮನೆಯಲ್ಲಿದೆ. ಆಗಸ್ಟ್ 18ರವರೆಗೆ ಬುಧ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಬುಧವು ಆಗಸ್ಟ್ 24ಕ್ಕೆ ಹಿಮ್ಮುಖವಾಗಿ ಚಲಿಸಲಿದೆ. ಮೊದಲ ಮನೆಯಲ್ಲಿ ರಾಹು ಮತ್ತು ಏಳನೇ ಮನೆಯಲ್ಲಿ ಕೇತು ಇರುವುದರಿಂದ ಮೇಷ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು.

ಈ ಅವಧಿಯಲ್ಲಿ ಖರ್ಚು ಹೆಚ್ಚಾಗಲಿದೆ, ನೀವು ಮಕ್ಕಳ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ. ಪ್ರೇಮ ಹಾಗೂ ವೈವಾಹಿಕ ಜೀವನದಲ್ಲಿ ಏರಳಿತ ಉಂಟಾಗಲಿದೆ. ರಾಹು-ಕೇತುಗಳ ಪ್ರತಿಕೂಲ ಸ್ಥಾನದಿಂದಾಗಿ ಸಂಬಂಧದಲ್ಲಿ ಸಮಸ್ಯೆ ಉಂಟಾಗುವುದು.
ವೃತ್ತಿ ಜೀವನ
ಆಗಸ್ಟ್ ತಿಂಗಳು ಮೇಷ ರಾಶಿಯವರಿಗೆ ವೃತ್ತಿಜೀವನದ ವಿಷಯದಲ್ಲಿ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಗೆ ಕಾರಣವಾದ ಗ್ರಹವಾದ ಶನಿಯು ಹಿಮ್ಮುಖ ಸ್ಥಿತಿಯಲ್ಲಿದೆ, ಈ ಕಾರಣದಿಂದಾಗಿ ವೃತ್ತಿ ಜೀವನದಲ್ಲಿ ದೊಡ್ಡ ಬೆಳವಣಿಗೆ ಕಂಡು ಬರುವುದಿಲ್ಲ. ನಿಮ್ಮ ಫಲಕ್ಕೆ ತಕ್ಕ ಫಲ ನೀವು ತಕ್ಷಣವೇ ಪಡೆಯದಿರುವ ಸಾಧ್ಯತೆಯಿದೆ. ಶನಿಯು ಹಿಮ್ಮುಖ ಸ್ಥಿತಿಯಲ್ಲಿರುವುದರಿಂದ ವೃತ್ತಿ ಜೀವನದಲ್ಲಿ ಕೆಲ ಸವಾಲುಗಳು ಎದುರಿಸಬಹುದು. ಆದರೆ ಮಂಗಳನ ಸ್ಥಿರ ಸ್ಥಾನದಿಂದಾಗಿ ಉದ್ಯೋಗದಲ್ಲಿನ ಸವಾಲು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದು.
ನಿಮ್ಮಲ್ಲಿ ಕೆಲವರು ವೃತ್ತಿಗೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಲು ಅವಕಾಶಗಳನ್ನು ಪಡೆಯಬಹುದು. ಹನ್ನೆರಡನೆಯ ಮನೆಯ ಅಧಿಪತಿಯಾದ ಗುರುವಿನ ಜೊತೆಗೆ ಒಂಬತ್ತನೇ ಮನೆಯಲ್ಲಿ ರಾಹು ಇರುತ್ತದೆ. ಇದರ ಪ್ರತಿಕೂಲ ಪರಿಣಾಮದಿಂದಾಗಿ ಸ್ಥಳೀಯರಿಗೆ ವಿದೇಶದಲ್ಲಿ ಉದ್ಯೋಗಾವಕಾಶಗಳು ಸಿಗಬಹುದು. ಮೇಷ ರಾಶಿಯ ಅಧಿಪತಿಯಾದ ಮಂಗಳನು ಶುಕ್ರನೊಂದಿಗೆ ಆರನೇ ಮನೆಯಲ್ಲಿ ಉಪಸ್ಥಿತನಿದ್ದಾನೆ. ಈ ತಿಂಗಳು ಉದ್ಯಮಿಗಳಿಗೆ ಲಾಭದಾಯಕವಾಗಿರಲಿದೆ.
ಆರ್ಥಿಕ ಸ್ಥಿತಿ
ಈ ತಿಂಗಳು ಮೇಷ ರಾಶಿಯವರಿಗೆ ಆರ್ಥಿಕವಾಗಿ ಅಷ್ಟು ಅನುಕೂಲಕರವಲ್ಲ, ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ. ಇದರೊಂದಿಗೆ, ನೀವು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ದೊಡ್ಡ ಲಾಭ ಪಡೆಯಲು ಸಾಧ್ಯವಿಲ್ಲ.
ಆರೋಗ್ಯ
ಈ ಅವಧಿಯಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಆದರೆ ದೊಡ್ಡ ಸಮಸ್ಯೆಯೇನೂ ಇರಲ್ಲ, ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು, ಹಾಗಂತ ನಿರ್ಲಕ್ಷ್ಯ ಮಾಡಬೇಡಿ.
ಪ್ರೇಮ, ವೈವಾಹಿಕ ಜೀವನ
ಈ ತಿಂಗಳು ಪ್ರೇಮ ಹಾಗೂ ವೈವಹಿಕ ಜೀವನಕ್ಕೆ ಅನುಕೂಲಕರವಲ್ಲ, ಈ ಸಮಯದಲ್ಲಿ ನಿಮ್ಮಿಬ್ಬರಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರುವುದು. ಕುಟುಂಬ ಜೀವನದಲ್ಲಿ ಒತ್ತಡದ ಪರಿಸ್ಥಿತಿ ಇರಲಿದೆ. ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ.
ಪರಿಹಾರ:
ಶನಿಯ ಕೃಪೆಗಾಗಿ ಶನಿ ದೇವರನ್ನು ಆರಾಧಿಸಿ.



Click it and Unblock the Notifications