Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೋಶಿಯಲ್ ಮೀಡಿಯಾದಲ್ಲಿ ಲೈಕ್, ಕಾಮೆಂಟ್ ಮಾಡಲ್ವಾ? ಹಾಗಾದ್ರೆ ಈ ಅಪಾಯ ಹೆಚ್ಚು..
ನಾವೀಗ ಡಿಜಿಟಲ್ ಯುಗದಲ್ಲಿ ಜೀವಿಸುತ್ತಿದ್ದೇವೆ. ಸೋಶಿಯಲ್ ಮೀಡಿಯಾದ ಹೊರತು ಬದುಕಿರಲು ಸಾಧ್ಯವಿಲ್ಲ ಎಂದು ಸುಳಿಯೊಳಗೆ ಸಿಲುಕಿದ್ದೇವೆ. ಕೆಲವರಂತು ಮೊಬೈಲ್ ಕೈಯಲ್ಲಿ ಹಿಡಿಯದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ಟಿಂಡರ್, ಟ್ವಿಟರ್ (ಎಕ್ಸ್) ಶೇರ್ ಚಾಟ್ ಹೀಗೆ ಹತ್ತಾರು ಸೋಶಿಯಲ್ ಮೀಡಿಯಾ ಸೈಟ್‌ಗಳು ನಮ್ಮನ್ನೇ ಆಳುತ್ತಿವೆ.
ಬಹುಪಾಲು ಈ ತಾಣಗಳ ಬಳಕೆದಾರರು ಲೈಕ್, ಕಾಮೆಂಟ್ ಮಾಡುತ್ತಾ ಕಾಲ ಕಳೆಯುತ್ತಾರೆ. ಆದ್ರೆ ಇದಕ್ಕೆ ತದ್ವಿರುದ್ದ ಎಂಬ ಕೆಲ ಸಮೂಹವೇ ನಮ್ಮ ನಡುವೆ ಇದೆ. ಅದೇನಂದರೆ ಅವರು ಬೇರೆಯವರಿಗಿಂತಲೂ ಹೆಚ್ಚು ಹೊತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಆದ್ರೆ ಯಾವ ಪೋಸ್ಟ್‌ಗಳಿಗೂ ಲೈಕ್, ಕಮೆಂಟ್ ಮಾಡುವುದೇ ಇಲ್ಲ. ಅವರು ಸಾಮಾಜಿಕ ಜಾಲತಾಣಗಳ ಬಳಕೆದಾರರು ಎಂಬುದೇ ಯಾರಿಗೂ ತಿಳಿದಿರುವುದಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಬ್ರೌಸ್ ಮಾಡುವುದು ಆದರೆ ಪೋಸ್ಟ್‌ಗಳಿಗೆ ಎಂದಿಗೂ ಲೈಕ್ ಅಥವಾ ಕಾಮೆಂಟ್ ಮಾಡದಿರುವುದು ಮಾನಸಿಕ ಆರೋಗ್ಯ ಸ್ಥಿತಿಯ ಸಂಕೇತವಾಗಿದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಸೆಂಟ್ರಲ್ ಚೈನಾ ನಾರ್ಮಲ್ ಯೂನಿವರ್ಸಿಟಿಯ ಸಂಶೋಧಕರು ಪ್ಲಾಟ್‌ಫಾರ್ಮ್‌ಗಳನ್ನು ಸಕ್ರಿಯವಾಗಿ ಬಳಸುವ ಜನರಿಗೆ ಹೋಲಿಸಿದರೆ 'ನಿಷ್ಕ್ರಿಯವಾಗಿ' ಬಳಸುವ ಜನರು ಸೂಕ್ಷ್ಮ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಕೊಂಡಿದ್ದಾರೆ.
ಏನಿದು ಅಧ್ಯಯನ?
ಸಂಶೋದಕರ ತಂಡವೊಂದು 500ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳನ್ನು ಅವರ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯ ಕುರಿತು ಸಮೀಕ್ಷೆ ನಡೆಸಿತ್ತು, ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುವವರು ಹೆಚ್ಚು ಸಾಮಾಜಿಕ ಬೆಂಬಲವನ್ನು ಹೊಂದಿದ್ದಾರೆ ಮತ್ತು ಇತರರೊಂದಿಗೆ ಸ್ನೇಹಯುತ ಪರಿಸರ ಬೆಳೆಸಲು ಇಚ್ಛಿಸುತ್ತಾರೆ ಎಂದು ತಿಳಿದುಕೊಂಡರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಲೈಕ್, ಕಾಮೆಂಟ್ ಮಾಡದಿರುವವರು ಸಂಕೀರ್ಣ ಮತ್ತು ತಮ್ಮ ಸುತ್ತಲಿನ ಸಾಮಾಜಿಕ ಸ್ಥಿತಿಗಳ ಬಗ್ಗೆ ಆತಂಕ ಹೊಂದಿದ್ದಾರೆ ಎಂದು ಕಂಡುಕೊಂಡರು. ಆದರೆ ಅವರು ಬೇರೆಯವರ ಜೀವನದಲ್ಲಿ ಏನು ನಡೆಯುತ್ತಿದೆ ಎಂದುದನ್ನು ತಿಳಿಯಲು ಬಹಳ ಉತ್ಸುಕರಾಗಿರುತ್ತಾರೆ ಎಂದು ತಿಳಿದುಬಂದಿದೆ.
ಯಾವ ಮಾನಸಿಕ ಸಮಸ್ಯೆಗೆ ಒಳಗಾಗಿರುತ್ತಾರೆ?
ಈ ರೀತಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವವರು ಒಂದಿಷ್ಟು ಖಿನ್ನತೆಗಳ ಹುದುಗಿಸಿಟ್ಟುಕೊಂಡಿರುತ್ತಾರೆ. ಅವರಲ್ಲಿ ಈ ಭಾವನೆಗಳು ಮೂಡಲು ಕೆಲವು ಘಟನೆಗಳು ಸಹ ಕಾರಣವಾಗಿರಬಹುದು ಅಥವಾ ಕೆಲವೊಮ್ಮೆ ಸಾಮಾಜಿಕರಣದಿಂದ ದೂರ ಉಳಿಯಲು ಈ ರೀತಿ ಮಾಡುತ್ತಿರಬಹುದು. ಇದು ಇನ್ನೂ ಮುಂದುವರೆದರೆ ಕುಟುಂಬ, ಸ್ನೇಹಿತರು, ಬಳಗದಿಂದ ಶಾಶ್ವತವಾಗಿ ದೂರಾಗುವ ಭಾವನೆ ಅವರಲ್ಲಿ ಮೂಡಬಹುದು.
ಕೀಳರಿಮೆ ಕಾಡುತ್ತಿರಬಹುದು
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೊಫೈಲ್ ಫೋಟೋ ಹಾಕದೆ ಅಥವಾ ಎಲ್ಲಿಯೂ ತಮ್ಮ ಕುರಿತು ತಿಳಿಸದೆ ದೂರವೇ ಉಳಿದಿದ್ದರೆ ಅಂತವರಲ್ಲಿ ಕೀಳರಿಮೆ ಭಾವನೆ ಕಾಡುತ್ತಿರಬಹುದು. ಬೇರೆಯವರು ಏನೆಂದುಕೊಂಡಾರು ಎಂಬ ಭಾವನೆ ಮತ್ತೆ ಮತ್ತೆ ಎದುರಾಗಿ ಈ ಕಾರ್ಯಗಳನ್ನು ಮಾಡದಂತೆ ತಡೆಯುತ್ತಿರಬಹುದು. ಅವರಲ್ಲಿ ಕೌಟುಂಬಿಕ ಸಮಸ್ಯೆ ಎದುರಾಗಿರಬಹುದು. ಅಥವಾ ಕೌಟುಂಬಿಕವಾಗಿ ಕಹಿ ಘಟನೆಗಳು ನಡೆದಿರಬಹುದು. ಅಂತವರು ಈ ಕಹಿ ಘಟನೆಯ ಮರೆಯುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುತ್ತಾರೆ. ಆದರೆ ಎಲ್ಲಿಯೂ ತಮ್ಮ ಇರುವಿಕೆಯನ್ನು ತೋರ್ಪಡಿಸುವುದಿಲ್ಲ.
ಭಾಗವಹಿಸುವಿಕೆಗೆ ಅಡ್ಡಿಯಾಗಿರುವುದೇನು?
ಸಾಮಾಜಿಕ ಜಾಲತಾಣದಲ್ಲಿ ಎಲ್ಲರಂತೆ ಬೆರೆಯಲು ಇಚ್ಛೆ ಇದ್ದರೂ ಅವರೂ ಹಿಂದೆ ಸರಿಯುತ್ತಾರೆ. ಇದಕ್ಕೆ ಹಲವು ಕಾರಣಗಳಿಗೆ ಎಂದು ಸಂಶೋದಕರು ಕಂಡುಕೊಂಡಿದ್ದಾರೆ. ಅವರಲ್ಲಿ ಭಯದ ವಾತಾವರಣವಿರಲಿದೆಯಂತೆ, ಸಾಮಾಜಿಕ ಜಾಲತಾಣದ ಕುರಿತು ಅವರಿಗಿರುವು ತಪ್ಪು ಗ್ರಹಿಕೆಯೂ ಅವರ ಪ್ರಾತಿನಿಧ್ಯ ಕಸಿಯುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಅವರಿಗೆ ಹಿಂದೆ ನಡೆದ ಯಾವುದೋ ಕಹಿ ಘಟನೆಯಿಂದ ಇನ್ನೆಂದು ಜಾಲತಾಣದಲ್ಲಿ ಗುರುತಿಸಿಕೊಳ್ಳಬಾರದು ಎಂದು ಎನಿಸಿರಬಹುದು.
ನೀವೂ ಸಹ ಸಾಮಾಜಿಕ ಜಾಲತಾಣಗಳ ಬಳಕೆದಾರರಾಗಿದ್ದು, ಲೈಕ್ ಶೇರ್, ಕಾಮೆಂಟ್ ನಿಂದ ದೂರ ಉಳಿದಿದ್ದರೆ ಇದು ಎಲ್ಲೋ ನಿಮ್ಮ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿರುವ ಲಕ್ಷಣ ಇರಬಹುದು. ಹಾಗೆಂದ ಮಾತ್ರಕ್ಕೆ ಎಲ್ಲರಲ್ಲೂ ಈ ರೀತಿಯ ಸಮಸ್ಯೆ ಇರಬೇಕೆಂದಿಲ್ಲ. ಕೆಲವರು ಅಂಜಿಕೆಯಿಂದಲೂ, ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಲು ಈ ರೀತಿ ಮಾಡುತ್ತಿರಬಹುದು. ಅದರಲ್ಲೂ ಸಾಮಾಜಿಕ ಜಾಲತಾಣವನ್ನು ನಾವೆಷ್ಟು ಕಡಿಮೆ ಬಳಸುತ್ತೀವೆಯೋ ಅಷ್ಟು ಒಳ್ಳೆಯದೆ ಅಲ್ಲವೆ....



Click it and Unblock the Notifications