Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
'ಇಡೀ ಪ್ರಪಂಚ ಹೀಗ್ಯಾಕಿಲ್ಲ'? ಪುಟ್ಟ ಹುಡುಗಿಯ ಕಾರ್ಯಕ್ಕೆ ಜನರು ಫಿದಾ..!
ನಿಮಗೆ ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಯಾರೆಂದು ತಿಳಿದಿರಬಹುದು, ಅವರು ಭಾರತದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ಸಕ್ರಿಯರಾಗಿರುವ ಅವರು ಒಂದಲ್ಲಾ ಒಂದು ರೀತಿಯ ವಿಭಿನ್ನ ವಿಡಿಯೋಗಳ ಹಂಚಿಕೊಳ್ಳುತ್ತಿರುತ್ತಾರೆ.
ಕೆಲವೊಮ್ಮೆ ಈ ವಿಡಿಯೋಗಳು ಒಂದಿಷ್ಟು ಬದಲಾವಣೆಗೆ ಕಾರಣವಾಗಲಿ ಎಂಬುದು ಅವರ ಆಶಯವಾಗಿರುತ್ತೆ. ಮತ್ತೆ ಕೆಲವೊಮ್ಮೆ ಸಹಾಯಕ್ಕಾಗಿ, ಇನ್ನು ಹಲವು ಬಾರಿ ಭಾರತದ ಟ್ಯಾಲೆಂಟ್‌ಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿರುತ್ತಾರೆ.

ಇದೀಗ ಅವರು ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಯ ಜೊತೆಗೆ ವೈರಲ್ ಸಹ ಆಗುತ್ತಿದೆ. ಅವರು ಪುಟ್ಟ ಹುಡುಗಿಯೊಬ್ಬಳು ತಂದೆಯನ್ನು ವೀಲ್ ಚೇರ್‌ನಲ್ಲಿ ರಸ್ತೆ ದಾಟಿಸುವ ವಿಡಿಯೋ ಅದಾಗಿದೆ. ಆದರೆ ಇಷ್ಟೇ ಆಗಿದ್ದರೆ ಈ ವಿಡಿಯೋ ಸುದ್ದಿಯಾಗುತ್ತಿರಲಿಲ್ಲ. ಆದರೆ ಆ ಪುಟ್ಟ ಹುಡುಗಿಯ ಧನ್ಯತಾ ಮನೋಭಾವ ಇಡೀ ವಿಡಿಯೋವನ್ನು ಸುಂದರವಾಗಿಸಿದೆ.
ಆ ಪುಟ್ಟ ಬಾಲಕಿ ಟ್ರಾಫಿಕ್‌ನಲ್ಲಿ ನಿಂತಿರುವ ಕಾರುಗಳತ್ತ ಬಗ್ಗಿ ಧನ್ಯವಾದ ಹೇಳುತ್ತಿರುವ ರೀತಿಗೆ ಜನ ಫಿದಾ ಆಗಿದ್ದಾರೆ. ತಂದೆ ರಸ್ತೆ ದಾಟಲು ಸಹಾಯ ಮಾಡಿದ ಎಲ್ಲರಿಗೂ ಆಕೆ ಬಗ್ಗೆ ಧನ್ಯವಾದ ಹೇಳುತ್ತಿದ್ದಾಳೆ.
ವಿಡಿಯೋದಲ್ಲಿ ಏನಿದೆ?
ವೀಲ್ ಚೇರ್ ಮೇಲೆ ಕುಳಿತಿರುವ ತಂದೆಯನ್ನು ಆಕೆ ರಸ್ತೆ ದಾಟಿಸುತ್ತಿದ್ದಾಳೆ. ಆದರೆ ಈ ವೇಳೆ ಟ್ರಾಫಿಕ್‌ನಲ್ಲಿ ಕಾರುಗಳು ಸಿಗ್ನಲ್ ಬಿಡುವುದನ್ನು ಕಾದಿವೆ. ಈ ನಡುವೆ ತಂದೆ ವೀಲ್ ಚೇರ್‌ನಲ್ಲಿ ಮುಂದೆ ಸಾಗುತ್ತಿದ್ದರೆ ಆ ಪುಟ್ಟ ಹುಡುಗಿ ರಸ್ತೆಯಲ್ಲಿ ನಿಂತಿರುವ ಕಾರುಗಳ ಬಗ್ಗಿ ಧನ್ಯವಾದ ಹೇಳುತ್ತಿದ್ದಾಳೆ. ಇದೇ ರೀತಿ ಪ್ರತಿ ಮೂರು ಹೆಜ್ಜೆ ಮುಂದೆ ಹೋಗಿ ಮಾಡುತ್ತಿದ್ದಾಳೆ.
ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಇಡೀ ಜಗತ್ತು ಹೀಗಿರಲು ಏಕೆ ಸಾಧ್ಯವಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ. ಆ ಹುಡುಗಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆಯೂ ಕೇಳಿಬಂದಿದೆ. ಸಣ್ಣ ವಯಸ್ಸಿನಲ್ಲೇ ಆಕೆಗೆ ಈ ಶಿಸ್ತು ಕಲಿಸಿರುವ ಸಂಪ್ರದಾಯ ಹಾಗೂ ಕುಟುಂಬದವರಿಗೆ ಮೊದಲು ಧನ್ಯವಾದ ಹೇಳಬೇಕು.
ಇಂದು ಜಗತ್ತಿಗೆ ಅಗತ್ಯವಾಗಿ ಬೇಕಾಗಿರುವುದು ಈ ಮನೋಭಾವ. ಇತ್ತೀಚಿಗೆ ಯಾರಿಗೂ ಧನ್ಯವಾದ ಹೇಳುವುದಿರಲಿ ಅನ್ಯರಿಗೆ ಸಹಾಯ ಮಾಡುವ ಗುಣವೂ ಇರುವುದಿಲ್ಲ ಆದರೆ ಆ ಪುಟ್ಟ ಹುಡುಗಿಯ ಕಾರ್ಯ ನೋಡಿಯಾದರು ಜನ ತಿದ್ದುಕೊಳ್ಳಲಿ ಎಂದು ಜನ ಅಭಿಪ್ರಾಯ ಪಟ್ಟಿದ್ದಾರೆ. ಮಾನವರಲ್ಲಿ ದಯೆ ತೋರುವುದು ನಾವು ಹೊಂದಿರುವ ಅತ್ಯಂತ ದೊಡ್ಡ ಸಂಪತ್ತು ಎಂದು ನೆಟ್ಟಿಗರು ಹೇಳಿದ್ದಾರೆ. ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರೆ, 14 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಇದಕ್ಕೂ ಮೊದಲು ಆನಂದ್ ಮಹೀಂದ್ರಾ ಮಹಾರಾಷ್ಟ್ರದ ಮೌಂಟ್ ಕಲ್ಸುಬಾಯ್ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಈ ಪರ್ವತದ ವಿಹಂಗಮ ನೋಟ ಎಲ್ಲರ ಗಮನ ಸೆಳೆದಿತ್ತು. ಸೂರ್ಯಾಸ್ತದ ನೋಟ ನೋಡುಗರ ಮನ ಗೆದ್ದಿತ್ತು. ಮೋಡಗಳು ಕಾಲ ಅಡಿಗೆ ಸಾಗುತ್ತಿರುವುದು, ಮುಸ್ಸಂಜೆಯ ಇಡೀ ಆಕಾಶ ಕೆಂಪಾಗಿರುವುದು ಸೇರಿ ದೂರದ ಬೆಟ್ಟಗಳು ಹಾಗೂ ಸ್ವರ್ಗಲೋಕದಿಂದ ಭೂಲೋಕಕ್ಕೆ ಇಳಿಯುತ್ತಿರುವಂತೆ ಈ ವಿಡಿಯೋದಲ್ಲಿ ಕಂಡುಬಂದಿತ್ತು.
ಇಂತಹ ವಿಡಿಯೋಗಳ ಹಂಚಿಕೊಳ್ಳುವ ಮೂಲಕ ಆನಂದ್ರ ಮಹೀಂದ್ರಾ ಸಕ್ರೀಯ ಸಾಮಾಜಿಕ ಜಾಲತಾಣಗಳ ಬಳಕೆದಾರರು ಎನಿಸಿದ್ದಾರೆ. ಅವರ ಖಾತೆಗಳಲ್ಲಿ ಇಂತಹ ನೂರಾರು ವಿಡಿಯೋಗಳ ನೋಡಬಹುದು. ಕೆಲವೊಂದು ಅಚ್ಚರಿಯ ವಿಡಿಯೋಗಳು ಸೇರಿ ಎಲ್ಲಿಯೂ ಕಾಣಸಿಗದಂತಹ ವಿಚಿತ್ರ ವಿಡಿಯೋಗಳನ್ನು ಸಹ ಅವರು ಹಂಚಿಕೊಳ್ಳುತ್ತಾರೆ.



Click it and Unblock the Notifications
