For Quick Alerts
ALLOW NOTIFICATIONS  
For Daily Alerts

ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

|

ಮನಃಶಾಸ್ತ್ರದಲ್ಲಿ ‘ಆತ್ಮವಿಶ್ವಾಸ' ಎಂದರೆ ವ್ಯಕ್ತಿಯು ತನ್ನನ್ನು ತಾನು ಭಾವನಾತ್ಮಕವಾಗಿ ಮೌಲ್ಯಮಾಪನ ಮಾಡಿಕೊಂಡಿರುವ ರೀತಿಯನ್ನು ವಿವರಿಸುವಂತದ್ದು ಅಂತ. ಅಂದರೆ ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ಏನೆಂದುಕೊಂಡಿರುತ್ತಾನೋ ತನ್ನ ವ್ಯಕ್ತಿತ್ವವನ್ನು ಕುರಿತಾದ ಅವನ ನಿರ್ಣಯಗಳೇನಿರುತ್ತದೆಯೋ ಅದನ್ನು ಆತ್ಮವಿಶ್ವಾಸವು ಒಳಗೊಂಡಿರುತ್ತದೆ. ಆತ್ಮವಿಶ್ವಾಸವು ವ್ಯಕ್ತಿಯ ನಂಬಿಕೆಗಳು, ಮತ್ತು ಭಾವನೆಗಳಾದ ಹತಾಶೆ, ಹೆಮ್ಮೆ ಮತ್ತು ಅಪಮಾನ ಇವುಗಳನ್ನು ಒಳಗೊಂಡಿರುತ್ತದೆ. ಹೊರಪ್ರಪಂಚದಲ್ಲಿ ಘಟಿಸುವ ಸಂದರ್ಭಗಳೇನೇ ಇರಲಿ ನಿಮ್ಮ ಆತ್ಮಗೌರವು ಬಹಳ ಮೂಲಭೂತವಾದ ಸಂಗತಿ.

ನಿಮ್ಮ ಆತ್ಮವಿಶ್ವಾಸವು ಬಹಳ ಕೆಳಮಟ್ಟದಲ್ಲಿದ್ದರೆ ಅಂದರೆ ನಿಮಗೇ ನಿಮ್ಮ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಅದು ನಿಮ್ಮ ವೈಯುಕ್ತಿಕ ಮತ್ತು ವೃತ್ತಿ ಜೀವನ ಎರಡರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ನೀವಿದನ್ನು ಬದಲಾಯಿಸಿಕೊಳ್ಳಬಹುದು. ಇದನ್ನು ಬದಲಾಯಿಸಿಕೊಳ್ಳಲು ಹಲವು ದಾರಿಗಳಿವೆ.

Ways To Boost Your Self Esteem

ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಟಿಪ್ಸ್:

1. ನಿಮ್ಮನ್ನು ನೀವು ಫ್ರೆಶ್ ಆಗಿರಿಸಿಕೊಳ್ಳಿ: ಒಂದು ಒಳ್ಳೆಯ ಸ್ನಾನ, ಒಳ್ಳೆಯ ಪರ್ಫ್ಯೂಮ್ ಮತ್ತು ಚೆಂದದ ಕೇಶವಿನ್ಯಾಸ ನಿಮ್ಮನ್ನು ಸುಂದರಗೊಳಿಸುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ. ಇಂತಹ ಸಣ್ಣ ಸಂಗತಿಗಳಿಂದಲೇ ನಿಮ್ಮ ಮೂಡ್ ಬದಲಾಗಿ ಬಿಡುತ್ತದೆ. ಇದು ನೆನಪಿರಲಿ.

2. ಚೆಂದವಾಗಿ ಡ್ರೆಸ್ ಮಾಡಿಕೊಳ್ಳಿ. ಬೇರೆಯವರಿಗಾಗಿ ಅಲ್ಲ ನಿಮಗಾಗಿ ನೀವು ಚೆಂದವಾಗಿ ಡ್ರೆಸ್ ಮಾಡಿಕೊಂಡು ನೋಡಿ ನಿಮ್ಮ ಬಗ್ಗೆ ನಿಮಗೇ ಮುದ್ದುಕ್ಕಿ ಬರುತ್ತದೆ. ನೀವು ಹೆಚ್ಚು ವಿಶ್ವಾಸದಿಂದ ಪ್ರಪಂಚವನ್ನು ಎದುರಿಸಲು ಸಿದ್ಧರಾಗುತ್ತೀರಿ.

3. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಪ್ರಪಂಚವನ್ನು ಎದುರಿಸಲು ನಿಮ್ಮನ್ನು ನೀವು ಸದಾ ಸನ್ನದ್ಧರಾಗಿರಿಸಿಕೊಂಡಿದ್ದರೆ ಹೆಚ್ಚು ಆತ್ಮವಿಶ್ವಾಸದಿಂದಿರುತ್ತೀರಿ. ಅದಕ್ಕೆ ಉತ್ತಮ ಮಾರ್ಗವೆಂದರೆ ವಿವಿಧ ವಿಷಯಗಳ ಬಗ್ಗೆ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳವುದು. ಸಂಶೋಧನೆ, ಅಧ್ಯಯನ, ಪ್ರವಾಸ, ಮಾಹಿತಿಸಂಗ್ರಹ, ವಿವಿಧ ರೀತಿಯ ಜನಗಳೊಡನಾಟ, ಪುಸ್ತಕಗಳು, ಮ್ಯಾಗ್ಜೀನ್ಗಳು.. ಇವೆಲ್ಲವೂ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಿಮಗೆ ಪ್ರಪಂಚದೊಂದಿಗೆ ಸ್ಪರ್ಧಿಸಲು ಮತ್ತು ಒಡನಾಡಲು ಹೆಚ್ಚು ವಿಶ್ವಾಸವನ್ನು ತಂದುಕೊಡುತ್ತದೆ.

4. ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸಿ: ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ದೂರವಿರಿಸಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡರೆ ನಿಮ್ಮ ಬದುಕು ಬದಲಾಗುತ್ತದೆ. ಅದ್ಭುತ ಸಂಗತಿಗಳು ಘಟಿಸುತ್ತವೆ. ಇದನ್ನೊಮ್ಮೆ ಪ್ರಯತ್ನಿಸಿ ನೋಡಿ.

5. ಸ್ವಯಂಸೇವಕರಾಗಿ: ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಕಾರಣಕ್ಕೆ ಇತರರ ಬದುಕಿನ ಒಳಿತಿಗೆ ನೀವಾಗಿ ಮುಂದಾಗಿ ಕೆಲಸ ಮಾಡಿ. ಇದು ನಿಮ್ಮ ಬಗ್ಗೆ ನೀವೇ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡುತ್ತದೆ.

6. ವ್ಯಾಯಾಮ: ನಿಮ್ಮನ್ನು ನೀವು ಸದಾ ಸನ್ನದ್ಧರಾಗಿರಿಸಿಕೊಳ್ಳಲು ವ್ಯಾಯಾಮ ಕೂಡ ಮುಖ್ಯವಾದ ಚಟುವಟಿಕೆ. ಇದು ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿಡುತ್ತದೆ. ವೇಗದ ನಡಿಗೆ, ಈಜು, ಓಟ, ಯೋಗ.. ಇವೆಲ್ಲವೂ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿ. ಇವು ನಿಮ್ಮ ಜೀವನವನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತದೆ ಜೊತೆಗೆ ನಿಮ್ಮ ಜೀವನವನ್ನು ಕೂಡ.

English summary

Ways To Boost Your Self Esteem

Having a poor self-esteem can harm your personal as well as professional life. But there are many ways that can help you take charge of the situation. Here go some tips to build confidence to take your life forward.
X
Desktop Bottom Promotion