Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಭಾರತದಲ್ಲಿರುವ ಟಾಪ್ 10 ಹನಿಮೂನ್ ಸ್ಪಾಟ್
ಇದು ಮದು ಕೈಹಿಡಿದು ವಿಹರಿಸುವ ಅನುಭವ ಯಾರಿಗೆ ತಾನೆ ಬೇಡ ಹೇಳಿ?
ಮದುವೆಯಾದ ಹೊಸದರಲ್ಲಿ ಹನಿಮೂನ್ ನ ಹೆಸರು ಹೇಳಿ ದೂರದ ರಮಣೀಯ ಸ್ಥಳಗಳನ್ನು ನೋಡಿ ಬರುವವರೇ ಬುದ್ಧಿವಂತರು. ಮತ್ತೆ ಹೋಗುವ ಎಂದು ಕೂತರೆ ಕೆಲಸದ ಒತ್ತಡ, ಸಂಸಾರ ತಾಪತ್ರಯ, ಮಕ್ಕಳು-ಮರಿ ಎಂದು ಮತ್ತೆ ಸಮಯ ಸಿಗದೇ ಹೋಗಬಹುದು.
ನಮ್ಮ ದೇಶದಲ್ಲಿಯೇ ಅನೇಕ ಸುಂದರ ಹನಿಮೂನ್ ಸ್ಪಾಟ್ (ತಾಣ)ಗಳಿವೆ. ಆ ರೊಮ್ಯಾಂಟಿಕ್ ಸ್ಥಳಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:

ಮನಾಲಿ
ರೊಮ್ಯಾಂಟಿಕ್ ಜೋಡಿಗಳಿಗೆ ಸೂಕ್ತವಾದ ರೊಮ್ಯಾಂಟಿಕ್ ಸ್ಥಳಗಳಲ್ಲಿ ಅಗ್ರಸ್ಥಾನವನ್ನು ಮನಾಲಿಗೆ ಕೊಡಬಹುದು. ಮನಾಲಿ ಹಾಗೂ ಕಸೋಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇರಲ್ಲ, ಅಷ್ಟೊಂದು ಮನಮೋಹಕವಾಗಿದೆ ಈ ತಾಣಗಳು

ಕೋವಲಂ ಬೀಚ್
ಕೋವಲಂ ಬೀಚ್ ಕೇರಳದಲ್ಲಿದೆ. ಇಲ್ಲಿ ಸೂರ್ಯ ಹುಟ್ಟುವುದು ಹಾಗೂ ಮುಳುಗುವುದನ್ನು ನೋಡಲು ರಮಣೀಯವಾಗಿದೆ.

ಜೈಸಲ್ಮೇರ್
ಇದು ರಾಜಾಸ್ಥಾನದಲ್ಲಿದೆ. ಭಾರತದ ಅಭೂತಪೂರ್ವ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದು. ಇಲ್ಲಿರುವ ಕೋಟೆಗಳು ನೋಡಲು ಸುಂದರವಾಗಿದೆ. ಈ ಪ್ರದೇಶ ಸುಂದರವಾದ ದೃಶ್ಯಗಳಿಗೆ ಮಾತ್ರವಲ್ಲ, ರುಚಿಯಾದ ಆಹಾರದಿಂದಲೂ ಪ್ರವಾಸಿಗರ ಮೆಚ್ಚುಗೆಯನ್ನು ಪಡೆದಿದೆ.

ವೇಗಟರ್ ಬೀಚ್(Vegator Beach)
ಈ ಬೀಚ್ ಗೋವಾದ ಉತ್ತರ ಭಾಗದಲ್ಲಿದೆ. ಈ ಸ್ಥಳ romantic coupleಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ.

ಕಾಶ್ಮೀರ್
ಇದನ್ನು ಭೂಮಿಯ ಸ್ವರ್ಗವೆಂದೇ ಹೇಳಬಹುದು. ಆದರೆ ಆಗಾಗ ಇಲ್ಲಿ ಕೇಳಿ ಬರುವ ಗುಂಡಿನ ಸದ್ದು ಪರಿಸ್ಥಿಯ ಕ್ರೂರ ವ್ಯಂಗ್ಯವೇ ಸರಿ... ಇಲ್ಲಿಯ ಪ್ರಕೃತಿ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲದು. ಬೆಡ್ಡ-ಗುಡ್ಡಗಳಿಂದ ಆವೃತವಾಗಿರುವ ಈ ಸುಂದರನಾಡು ತನ್ನ ಅಮೋಘ ಚೆಲುವಿನಿಂದ ಅರಸಿಕನಲ್ಲೂ ರಸಿಕತೆಯನ್ನು ತುಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

ಗೋಕರ್ಣ
ಬೆಂಗಳೂರಿನಿಂದ ಈ ಸ್ಥಳಕ್ಕೆ ಇರುವ ದೂರ 483ಕಿ. ಮೀ ಮಾತ್ರ. ಇಲ್ಲಿಗೆ ಭೇಟಿ ನೀಡಿದರೆ ಗೋಕರ್ಣ ಬೀಚ್ ಜೊತೆಗೆ ಅರ್ಧ ಚಂದ್ರಾಕೃತಿಯ ಬೀಚ್, ಓಂ ಬೀಚ್, ಪ್ಯಾರಾಡೈಸ್ ಬೀಚ್, ಕುಡ್ಲೆ ಬೀಚ್‌ಗಳನ್ನು ನೋಡಬಹುದು.

ಶಿಲ್ಲಾಂಗ್
ಸದಾ ಮೋಡ, ಮಂಜಿನಿಂದ ಆವೃತವಾಗಿರುವ ಈ ರೂಪಸಿಯ ಚೆಲುವಿಗೆ ಸಾಟಿಯೇ ಇಲ್ಲ.

ಶಿಮ್ಲಾ
ಹಿಮಾಚಲ ಪ್ರದೇಶದಲ್ಲಿರುವ ಈ ಸ್ಳಳ ಸುಂದರವಾದ ಗಿರಿಧಾಮವಾಗಿದೆ.

ತಾಜ್ ಮಹಲ್
ಪ್ರೀತಿಯ ದ್ಯೋತಕವಾದ ತಾಜ್ ಮಹಲ್ ವಿಶ್ವಪ್ರಸಿದ್ಧವಾದ ಸ್ಮಾರಕ. ತಮ್ಮ ಸಂಗಾತಿ ಜೊತೆ ಇಲ್ಲಿಗೆ ಭೇಟಿ ನೀಡುವುದು ಒಂದು ವಿಶಿಷ್ಟ ಅನುಭವವೇ ಸರಿ.

ತೇಕ್ಕಡಿ
ಹನಿಮೂನ್ ಗೆ ಕೇರಳಕ್ಕೆ ಹೋಗುವ ಪ್ಲಾನ್ ಇದ್ದರೆ ತೇಕ್ಕಡಿಗೆ ಭೇಟಿ ಕೊಡಲು ಮರೆಯಬೇಡಿ.



Click it and Unblock the Notifications











