Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರಪಂಚದಲ್ಲಿಯೇ ಅತೀ ಎತ್ತರದ ಟಾಪ್ 5 ಶಿವನ ಮೂರ್ತಿ

1. ನೇಪಾಳದ ಶಿವನ ಮೂರ್ತಿ: ಅತೀ ಎತ್ತರದ ಶಿವ ನಿಂತ ಭಂಗಿಯಲ್ಲಿರುವ ಮೂರ್ತಿ ನೇಪಾಳದ ಕಠ್ಮಂಡುನಲ್ಲಿದೆ. ಈ ಮೂರ್ತಿಯು 43.5 ಮೀಟರ್ ಎತ್ತರದಲ್ಲಿದೆ. ಕಂಚಿನ ಬಣ್ಣದ ಈ ಶಿವನ ಮೂರ್ತಿಯು ನೋಡುಗರ ಮನಸೂರೆಗೊಳ್ಳುತ್ತದೆ. ಈ ಮೂರ್ತಿಯ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ.
2. ಮುರುಡೇಶ್ವರದಲ್ಲಿರುವ ಶಿವನ ಮೂರ್ತಿ: ಸಮುದ್ರ ಕಿನಾರೆಯ ಸುಂದರ ಪವಿತ್ರ ತಾಣದಲ್ಲಿ ಅತೀ ಎತ್ತರದ ಶಿವ ಮೂರ್ತಿ ಇದೆ. ಇಲ್ಲಿಯ ಶಿವನ ಮೂರ್ತಿಯು ಬೆಳ್ಳಿಯ ಬಣ್ಣದಲ್ಲಿದ್ದು, ಕುಳಿತ ಭಂಗಿಯಲ್ಲಿದೆ. ಶಿವ ಮೂರನೆ ಕಣ್ಣು ಬಿಟ್ಟಂತೆ ಇರುವ ಈ ಮೂರ್ತಿಯನ್ನು ನೋಡುತ್ತಿದ್ದರೆ ಭಕ್ತಿ ಭಾವ ಉಕ್ಕಿ ಬರುತ್ತದೆ. ಈ ಮೂರ್ತಿಯ ಎತ್ತರ 37ಮೀ ಇದೆ. ಪೂರ್ವಕ್ಕೆ ಗೋಪುರಗಟ್ಟಿರುವ ಬೆಟ್ಟಗಳು, ಪಶ್ಚಿಮದಲ್ಲಿ ಭೋರ್ಗರೆಯುತ್ತಿರುವ ಸಮುದ್ರ ಇದರ ನಡುವಿನ ದೇವಾಲಯ ಭಕ್ತರನ್ನು ಮತ್ತು ಪ್ರವಾಸಿಗಳನ್ನು ಆಕರ್ಷಿಸುತ್ತದೆ.
3. ಹಿಮಾಲಯದ ಕೈಲಾಸ ಪರ್ವತ: ಇದು ಶಿವನ ಭಕ್ತರು ನೋಡಲೇಬೇಕಾದ ಸ್ಥಳವಾಗಿದೆ. ಕೈಲಾಸ ಪರ್ವತದಲ್ಲಿ 32 ಮೀ ಎತ್ತರದಲ್ಲಿರುವ ಶಿವನ ಮೂರ್ತಿಯು ನೋಡಲು ತುಂಬಾ ಮನಮೋಹಕವಾಗಿದೆ. ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸಲಾಗಿದೆ. ಈಬ್ರಹ್ಮಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ.
4. ಹರಿದ್ವಾರದ ಶಿವ ದೇವಾಲಯ: ಹರಿದ್ವಾರದಲ್ಲಿ ಗಂಗಾ ನದಿಯ ಸಮೀಪದಲ್ಲಿರುವ ಶಿವ ದೇವಲಯದಲ್ಲಿರುವ ಶಿವನ ಮೂರ್ತಿಯು 30.5 ಮೀ ಎತ್ತರವನ್ನು ಹೊಂದಿದೆ. ಬದ್ರಿ ಯಾತ್ರೆ ಮಾಡುವವರು ಇವನ ದರ್ಶನ ಪಡದೇ ಮುಂದೆ ಸಾಗುತ್ತಾರೆ.
5. ಬೆಂಗಳೂರಿನಲ್ಲಿರುವ ಶಿವನ ಮೂರ್ತಿ: ಬೆಂಗಳೂರಿನಲ್ಲಿರುವ ಶಿವನ ಮೂರ್ತಿಯು ಪ್ರಪಂಚದಲ್ಲಿಯೇ ಅತೀ ಎತ್ತರದ ಶಿವನ ಮೂರ್ತಿಗಳಲ್ಲಿ ಟಾಪ್ 5 ರಲ್ಲಿ ಐದನೇ ಸ್ಥಾನವನ್ನು ಗಳಿಸಿಕೊಂಡಿದೆ. 20 ಮೀ ಎತ್ತರವಿರುವ ಶಿವನ ಮೂರ್ತಿ ಯೋಗ ಭಂಗಿಯಲ್ಲಿದೆ. ಇಲ್ಲಿ ಶಿವರಾತ್ರಿ ಸಮಯದಲ್ಲಿ ಸಾಕಷ್ಟು ಭಕ್ತಾದಿಗಳು ನೆರೆದಿರುತ್ತಾರೆ.



Click it and Unblock the Notifications
