Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಡೆ ಹಬ್ಬಕ್ಕೆ ಕೊಡಗಿನ ಜನರಿಗೆ ಬೈಗುಳದ ಸುರಿಮಳೆ!

ಕುಂಡೆ ಹಬ್ಬ ಕೊಡಗಿನಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದವರ ಸಂಭ್ರಮದ ಹಬ್ಬ. ವಿಚಿತ್ರವಾಗಿ ವೇಷ ಹಾಕಿಕೊಂಡು, ಎದುರಿಗೆ ಕಂಡವರಿಗೆಲ್ಲಾ ಬೈಯುತ್ತಾ ಹಣ ವಸೂಲಿ ಮಾಡುವ ಹಬ್ಬ. ಕೊಡಗಿನಲ್ಲಿ ಮಾತ್ರ ನಡೆಯುವ ಈ ’ಕುಂಡೆ’ ಹಬ್ಬದ ಕುರಿತು ತಿಳಿಯೋಣ ಬನ್ನಿ.
ಇದೊಂದು ವಿಚಿತ್ರವಾದ ಹಬ್ಬ. ಈ ವಿಚಿತ್ರ ಹಬ್ಬ ನೋಡಿದರೆ ಇದೇನಪ್ಪಾ ಎಂದು ಒಂದು ಕ್ಷಣ ಆಶ್ಚರ್ಯಪಟ್ಟುಕೊಂಡರೆ ಮತ್ತೆ ಕೆಲವರು 'ಇದೇನು ಅನಾಗರಿಕತೆಯ ವರ್ತನೆ' ಎಂದು ಈ ಹಬ್ಬದ ಬಗ್ಗೆ ತಿಳಿವಳಿಕೆಯಿಲ್ಲದವರು ಸಿಡಿಮಿಡಿಗೊಳ್ಳುವುದುಂಟು. ಏಕೆಂದರೆ ಈ ಹಬ್ಬದಲ್ಲಿ ಕೊಡಗಿನ ಆದಿವಾಸಿ ಜನಾಂಗವರು ದಾರಿಯಲ್ಲಿ ಕಂಡವರಿಗೆಲ್ಲಾ ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಆದರೆ ಬೈಗುಳ ಕೇಳಿದವರು ಕೋಪಕೊಳ್ಳುವುದಿಲ್ಲ. ಇವರಿಗೆ ಅಕ್ಕಿ, ಹಣ ಅಂತ ಕಾಣಿಕೆ ಕೊಟ್ಟು ಕಳುಹಿಸುತ್ತಾರೆ!
ಈ ಹಬ್ಬದ ಸಂಭ್ರಮವನ್ನು ನೋಡಬೇಕೆಂದು ಬಯಸುವವರು ತಿತಿಮತಿಗೆ ತೆರಳುವ ರಸ್ತೆಯಲ್ಲಿ ಸಿಗುವ ದೇವರಪುರಕ್ಕೆ ಬರಬೇಕು. ಇದು ಮೇ ತಿಂಗಳ ಕೊನೆಯವಾರದಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದ ದಿನದಂದು ಇವರ ಬಾಯಿಂದ ಬೈಗುಳ ಬಿಟ್ಟರೆ ಬೇರೇನು ಕೇಳುವುದಿಲ್ಲ!
ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನದಲ್ಲಿ ನಡೆಯುವ ಈ ಹಬ್ಬಕ್ಕೆ ಹುಣಸೂರು,ದುಬಾರೆ, ಶ್ರೀಮಂಗಲ ಹೀಗೆ ಕೊಡಗಿನ ಎಲ್ಲಾ ಕಡೆಯಿಂದ ಸಾವಿರಾರು ಬುಡಕಟ್ಟು ಮಂದಿ ಅಗಮಿಸುತ್ತಾರೆ. ಈ ಹಬ್ಬದಲ್ಲಿ ಪುರುಷರು ಹೆಚ್ಚಾಗಿ ಭಾಗವಹಿಸುತ್ತಾರೆ. ಆದರೆ ಅವರ ವೇಷ ಭೂಷಣಗನ್ನು ಸ್ತ್ರೀಯರಂತೆ ಮಾಡಿಕೊಳ್ಳುತ್ತಾರೆ. ಆದರೆ ವೇಷಭೂಷಣ ನೋಡುವಾಗ ವಿಚಿತ್ರವಾಗಿ ಮತ್ತು ಭಯಾನಕವಾಗಿ ಇರುತ್ತದೆ. ಕೆಲವರಿಗೆ ಈ ವೇಷ ನೋಡಿದರೆ ಅಸಹ್ಯ ಕೂಡ ಅನಿಸಬಹುದು! ಮುಖದಲ್ಲಿ ಮಸಿ ಬಳಿದು, ಸ್ತ್ರೀಯರ ಒಳ ಉಡುಪು ಮಾತ್ರ ಧರಿಸಿ (ಕೆಲವರು) ಕೈಯ್ಯಲ್ಲಿ ಸೋರೆಕಾಯಿ ಬುರುಡೆ ಹಿಡಿದು ಅದರಿಂದ ಶಬ್ದವನ್ನು ಮಾಡುತ್ತಾ, ದೊಣ್ಣೆಗಳಿಂದ ಟಿನ್ ಗಳಿಗೆ ಬಡಿಯುತ್ತಾ, ಕಂಠಪೂರ್ತಿ ಕುಡಿದು ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಾರೆ.
ದಾರಿಯಲ್ಲಿ ಸಿಕ್ಕವರನ್ನು ಅಡ್ಡ ಹಾಕಿ ಬೈಯ್ಯುವುದು, ಕೆಲಸದ ಮಾಲೀಕರನ್ನು ಬೈಯ್ಯುವುದು, ದಾರಿಯಲ್ಲಿ ಹೋಗುವ ವಾಹನವನ್ನು ಅಡ್ಡ ಕಟ್ಟಿ ಬೈಯುವುದು ನಂತರ ಹಣ ವಸೂಲಿ ಮಾಡಿ, ನಂತರ ತಾವು ಮಾಡಿದ್ದಕ್ಕೆ ಕ್ಷಮೆ ಕೇಳುವುದು ಈ ಹಬ್ಬದ ಪದ್ಧತಿ. ಇವರು ಹೀಗೆ ಬೇಡುವಾಗ ಬೇಗ ಹಣ ಕೊಟ್ಟುಬಿಡಬೇಕು. ಇಲ್ಲದಿದ್ದರೆ ಕೆಟ್ಟ ಕುಂಡೆ ಅನ್ನಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಹಣ ಕೊಡದಿದ್ದರೆ ಇವರು ಆ ಜಾಗ ಬಿಟ್ಟು ಕದಲುವುದಿಲ್ಲ. ಆದ್ದರಿಂದ ಕೊಡಗಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮನೆಯಲ್ಲಿ ಇವರಿಗೆ ಕೊಡಲು ಅಕ್ಕಿ, ಬೆಲ್ಲ ಮತ್ತು ಹಣ ಎಲ್ಲಾ ರೆಡಿ ಮಾಡಿಟ್ಟು ಬಂದ ಕ್ಷಣ ಕೊಟ್ಟು ಕಳುಹಿಸಿ ಬಿಡುತ್ತಾರೆ.
ಹೀಗೆ ಹಣವನ್ನು ಸಂಗ್ರಹಿಸಿ ವೇಷಧಾರಿಗಳು ಸಂಜೆ ವೇಳೆಗೆ ದೇವರಪುರದ ಅಯ್ಯಪ್ಪ ದೇವಾಲಯದಲ್ಲಿ ಸೇರಿ ಸಾಂಪ್ರದಾಯಕವಾದ ನೃತ್ಯ ಮಾಡುತ್ತಾರೆ. ಈ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ.
ಇದೇ ಹಬ್ಬವು ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ನಡೆಯುತ್ತದೆ. ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸುತ್ತಾರೆ. ನಂತರ ಹರಕೆ ಹೊತ್ತ ಮಂದಿ ಇಲ್ಲಿ ನಡೆಯುವ ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ಈ ಹಬ್ಬ ಹೇಗೆ ಬಂತು ಎಂದು ಕೇಳಿದರೆ ಇಲ್ಲಿಯ ಜನರು ಈ ಕೆಳಗಿನ ದಂತ ಕತೆ ಹೇಳುತ್ತಾರೆ.
ಹಿಂದಿನ ಕಾಲದಲ್ಲಿ ಬುಡಕಟ್ಟು ಮಂದಿಯನ್ನು ಬೇಟೆಗೆಂದು ಅಯ್ಯಪ್ಪ ದೇವರು ಕಾಡಿಗೆ ಕರೆದುಕೊಂಡು ಹೋಗಿದ್ದನಂತೆ. ಕಾಡಿನಲ್ಲಿ ಸುತ್ತಾಡಿ ಬೇಟೆಯಾಡಿದ ಬಳಿಕ ಬುಡಕಟ್ಟು ಮಂದಿಯನ್ನು ಕಾಡಿನಲ್ಲಿಯೇ ಬಿಟ್ಟು ಈಗ ಬರುತ್ತೇನೆಂದು ಹೇಳಿ ಹೋದ ಅಯ್ಯಪ್ಪ ಬರಲಿಲ್ಲವಂತೆ. ಆತನನ್ನು ಕಾದು ಸುಸ್ತಾದ ಬುಡಕಟ್ಟು ಮಂದಿ ಅಯ್ಯಪ್ಪ ಹೋದ ಹಾದಿಯಲ್ಲಿ ಆತನನ್ನು ಹುಡುಕುತ್ತಾ ಹೋದರಂತೆ. ಹೀಗೆ ಹೋದ ಬುಡಕಟ್ಟು ಮಂದಿಗೆ ಅಯ್ಯಪ್ಪ ಭದ್ರಕಾಳಿಯೊಂದಿಗೆ ಸರಸವಾಡುತ್ತಿರುವುದು ಕಾಣಿಸಿತಂತೆ. ಇದರಿಂದ ಕೋಪಗೊಂಡ ಬುಡಕಟ್ಟು ಮಂದಿ ಅಯ್ಯಪ್ಪನನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದರಂತೆ. ಬುಡಕಟ್ಟು ಮಂದಿಗೆ ಅಯ್ಯಪ್ಪ ಹಿಂಭಾಗ ತೋರಿಸಿದ ಕಾರಣ ಕುಂಡೇ... ಕುಂಡೇ... ಎಂದು ಹೀಯಾಳಿಸಿ ತಮ್ಮ ಅಸಮಧಾನವನ್ನು ತೋಡಿಕೊಳ್ಳುತ್ತಾರೆ.
ಇದು ಕತೆಯಾದರೂ ನನಗೆ ಏನು ಅನಿಸುತ್ತದೆ ಅಂದರೆ ಬುಡಕಟ್ಟು ಜನಾಂಗದವರು ಹೆಚ್ಚಾಗಿ ಕಾಫಿ ತೋಟಗಳಲ್ಲಿ ಮಾಲಿಕರ ಬೈಗುಳ ತಿಂದು ಕೆಲಸ ಮಾಡುತ್ತಿರುತ್ತಾರೆ. ಆದರೆ ಈ ಹಬ್ಬದ ಸಂದರ್ಭದಲ್ಲಿ ತಾವು ವರ್ಷ ಪೂರ್ತಿ ಕೇಳಿದ ಬೈಗುಳವನ್ನು ತಮ್ಮ ಮಾಲಿಕರಿಗೇ ಹೇಳಿ ಸಮಧಾನವಾಗುತ್ತಾರೆ. ಇದು ಅವರ ಅಸಾಯಕತೆಯನ್ನು ಪ್ರತಿಭಟಿಸುವ ರೀತಿಯಾಗಿಯೂ ನನಗೆ ಕಾಣಿಸುತ್ತದೆ.
ಈ ಹಬ್ಬದ ಪೂಜೆಯಲ್ಲಿ ಬುಡಕಟ್ಟು ಜನಾಂಗದವರು ಮಾತ್ರವಲ್ಲದೆ ಕೊಡವರು, ಗೌಡರು ಹಾಗೂ ಇತರ ಜನಾಂಗದವರು ಭಾಗವಹಿಸುತ್ತಾರೆ. ಆದರೆ ವಿಚಿತ್ರವಾದ ವೇಷ ಹಾಕಿ ಬೈಗುಳವನ್ನು ಆದಿವಾಸಿಗಳು ಮಾತ್ರ ಹೇಳುತ್ತಾರೆ. ತಮ್ಮ ವರ್ತನೆಗೆ ಭದ್ರಕಾಳಿ ಹತ್ತಿರ ಕ್ಷಮೆ ಕೇಳುತ್ತಾರೆ. ನಂತರ ವಸೂಲಿ ಮಾಡಿದ ಹಣದಲ್ಲಿ ಕಂಠ ಪೂರ್ತಿ ಕುಡಿದು ಹಬ್ಬದ ಸಂಭ್ರಮವನ್ನು ನೆನೆಯುತ್ತಾ ತಮ್ಮ-ತಮ್ಮ ಊರುಗಳಿಗೆ ತೆರಳುತ್ತಾರೆ.
ನಮ್ಮ ಮನೆಯ ಹತ್ತಿರ ಕೂಡ ಒಂದು ಬುಡಕಟ್ಟು ಕುಟುಂಬವಿದೆ. ನಮ್ಮ ಮನೆಯಲ್ಲಿ ಏನಾದರೂ ಕೆಲಸ ಇದ್ದರೆ ಅವರನ್ನು ಹೆಚ್ಚಾಗಿ ಕರೆಯುತ್ತೇವೆ. ಅದರಲ್ಲೂ ಕೆಂಚ ನನ್ನಪ್ಪನ ಅಚ್ಚುಮೆಚ್ಚಿನ ಕೆಲಸಗಾರ. ಹಬ್ಬ ಮುಗಿಸಿ ಕೆಂಚ ನಮ್ಮ ಮನೆಗೆ ಬಂದರೆ 'ಕೆಂಚ ನೀನು ಮೊನ್ನೆ ತುಂಬಾ ಬೈಯ್ದೆ' ಅಂದರೆ 'ಹಬ್ಬ ಅಲ್ವಾ ಸಣ್ಣಮ್ಮ' ಅಂತ ಅಮಾಯಕತೆಯ ನಗೆ ಬೀರುತ್ತಿದ್ದ.



Click it and Unblock the Notifications