Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ತುಂಬಾ ನಾಚಿಕೆಯಿದ್ದರೆ ಹೆಣ್ಣಿಗೆ ಜೀವನ ಕಷ್ಟ!

ತುಂಬಾ ನಾಚಿಕೆ ಹೆಣ್ಣಿಗೆ ಶತ್ರು! ಏಕೆಂದರೆ ತುಂಬಾ ನಾಚಿಕೆ ಇರುವವರಿಗೆ ಆತ್ಮವಿಶ್ವಾಸ ಕಡಿಮೆ ಇದ್ದು, ಕೀಳಿರಿಮೆ ಜಾಸ್ತಿ ಇರುತ್ತದೆ. ದೃಢವಾಗಿ ಯಾವುದೇ ಕೆಲಸವನ್ನು ಎದುರಿಸಲು ಹಿಂದೆ ಮುಂದೆ ನೋಡುತ್ತಾರೆ. ತುಂಬಾ ನಾಚಿಕೆಯಿಂದ ಏನೇ ಕೆಲಸಕ್ಕೂ ಹಿಂದೆ ಮುಂದೆ ನೋಡುವವರು ಜೀವನದಲ್ಲಿ ಕೂಡ ಮುಂದೆ ಬರುವುದು ಕಷ್ಟ.
ಈಗೀನ ಜಗತ್ತೇ ಆಗಿದೆ, ಬೋಲ್ಡ್ ಆಗಿ ಮುನ್ನುಗ್ಗಿದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ನಾಚಿಕೆಯಿಂದ ಮುದುಡಿ ಕೂರದೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
ದೇಹದ ಆಕಾರ: ಅನೇಕ ಹೆಣ್ಣು ಮಕ್ಕಳು ತಮ್ಮ ದೇಹದ ಆಕಾರ ತುಂಬಾ ದಪ್ಪವಿದ್ದರೆ ಅಥವಾ ತುಂಬಾ ತೆಳ್ಳಗೆ ಇದ್ದರೆ ಕೀಳಿರಿಮೆ ಬೆಳೆಸಿಕೊಳ್ಳುತ್ತಾರೆ. ಯೋಗ, ವ್ಯಾಯಾಮ, ಉತ್ತಮ ಆಹಾರಶೈಲಿ ಇವುಗಳು ಆಕರ್ಷಕ ಮೈಕಟ್ಟು ಹೊಂದಲು ಸಹಾಯ ಮಾಡುತ್ತದೆ. ಅಲ್ಲದೆ ದೇಹದ ಬಗ್ಗೆ ತುಂಬಾ ಕೀಳಿರಿಮೆ ಬೆಳೆಸಿಕೊಳ್ಳದೆ ಆಕರ್ಷಕ ವ್ಯಕ್ತಿತ್ವ ಬೆಳೆಸಿಕೊಳ್ಳಿ. ಪ್ರತಿಭೆ ಮತ್ತು ವ್ಯಕ್ತಿತ್ವ ಇದ್ದರೆ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ.
ಡ್ರೆಸ್ಸಿಂಗ್: ಡ್ರೆಸ್ಸಿಂಗ್ ಕೂಡ ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಡ್ರೆಸ್ಸಿಂಗ್ ಸೆನ್ಸ್ ಇದ್ದರೆ ಎಂತಹ ವ್ಯಕ್ತಿಗಳು ಕೂಡ ಆಕರ್ಷಕವಾಗಿ ಕಾಣಬಹುದು. ಡ್ರೆಸ್ ಮಾಡುವಾಗ ಬಟ್ಟೆಯ ಬಣ್ಣ ಮತ್ತು ಆ ಫ್ಯಾಷನ್ ಡ್ರೆಸ್ ನಿಮಗೆ ಒಪ್ಪುತ್ತದೆಯೆ ಎಂದು ಗಮನಿಸಬೇಕು, ಲಘವಾಗಿ ಮೇಕಪ್ ಮಾಡಬೇಕು. ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ರೀತಿಯಲ್ಲಿ ಡ್ರೆಸ್ ಮಾಡಬೇಕು. ಆಗ ಆತ್ಮವಿಶ್ವಾಸ ಬಂದು ನಾಚಿಕೆ, ಕೀಳಿರಿಮೆ ಕಡಿಮೆಯಾಗುವುದು.
ಮೇಕಪ್: ಕೂದಲನ್ನು ಆಕರ್ಷಕವಾಗಿ ಕತ್ತರಿಸಿ, ಲಘುವಾದ ಮೇಕಪ್, ಕಣ್ಣಿಗೆ ಅಲಂಕಾರ ಮಾಡಿದರೆ ಹೆಣ್ಣು ಮಕ್ಕಳು ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಉತ್ತಮ ಗುಣವಿರುವ ಸ್ನೇಹಿತರ ಸಹವಾಸ ಮಾಡಬೇಕು, ಇವೆಲ್ಲ ನಿಮಗೆ ಆತ್ಮವಿಶ್ವಾಸವನ್ನು ತುಂಬುವುದು.
ನಿಮ್ಮನ್ನೇ ನೀವು ಪ್ರೀತಿಸಿ: ಮೊದಲು ನಿಮ್ಮನ್ನೇ ನೀವು ಪ್ರೀತಿಸಿ. ಬಾಹ್ಯ ಸೌಂದರ್ಯ ಶಾಶ್ವತವಲ್ಲ, ಆದ್ದರಿಂದ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡಬೇಕು. ಕೀಳಿರಿಮೆಯಿಂದ ಹೊರಬಂದರೆ ಮಾತ್ರ ನಿಮಗೆ ಇತರರನ್ನು ಆಕರ್ಷಿಸುವ ಸಾಮರ್ಥ್ಯ ಬರುವುದು.



Click it and Unblock the Notifications
