Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಆಡಿ ಕಾರಿನಲ್ಲಿ ಸೊಪ್ಪು ಮಾರುವ ಕೇರಳ ವ್ಯಕ್ತಿಯ ವೀಡಿಯೋ ವೈರಲ್
3-4 ದಿನದಿಂದ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವ ವೀಡಿಯೋ ಅದು. ಯಾವ ಕೆಲಸವೂ ಕಡಿಮೆಯಲ್ಲ, ಶ್ರದ್ಧೆಯಿಂದ ನಾವುದನ್ನು ಮಾಡಬೇಕಷ್ಟೇ , ಅದಕ್ಕೆ ಈ ವ್ಯಕ್ತಿ ಸಾಕ್ಷಿ. ಸ್ವಲ್ಪ ಹಣ ಬಂದಾಗ ಆ ಕೆಲಸ ನನ್ನ ಸ್ಟೇಟಸ್‌ಗೆ ಸೂಟ್ ಅಲ್ಲ ಎಂದು ಭಾವಿಸುವವರೇ ಅಧಿಕ. ಆದರೆ ಇಲ್ಲೊಬ್ಬ ವ್ಯಕ್ತಿ ಆಡಿ ಕಾರಿನಲ್ಲಿ ಬಂದು ಸೊಪ್ಪು ಮಾರಾಟ ಮಾಡಿ ಹೋಗುತ್ತಿದ್ದಾರೆ. ಈ ವ್ಯಕ್ತಿ ಕೇರಳ ಮೂಲದವರಾಗಿದ್ದು ಆ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಆಡಿ A4 ಲಕ್ಷುರಿ ಸೆಡಾನ್ ಕಾರಿನಲ್ಲಿ ಬರುವ ಈ ವ್ಯಕ್ತಿ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡುವ ವ್ಯಕ್ತಿ. ಬದುಕು ಅಷ್ಟು ಲಕ್ಷುರಿ ಆಗಿದ್ದರೂ ಬೀದಿಬದಿಯಲ್ಲಿ ನಿಂತು ಸೊಪ್ಪು ಮಾರಾಟ ಮಾಡುವ ವ್ಯಕ್ತಿಯ ವೀಡಿಯೋವನ್ನು ಸುಜಿತ್ ಎಸ್‌ಪಿ ಶೇರ್ ಮಾಡಿದ್ದು ತುಂಬಾನೇ ವೈರಲ್ ಆಗಿದೆ. ಇವರು ಬಳಸುವ ಕಾರಿಗೆ ಏನೆಂದರೂ 44 ಲಕ್ಷ ಮೇಲಿದೆ.
ಕೆಂಪು ಕೀರೆ ಸೊಪ್ಪನ್ನು ಇವರೇ ಬೆಳೆಯುತ್ತಿದ್ದಾರೆ. ಅದನ್ನು ಕಿತ್ತು ತಮ್ಮ ಕಾರಿನಲ್ಲಿಯೇ ತರುತ್ತಾರೆ. ನಂತರ ಪೇಟೆಯಲ್ಲಿ ನೆಲದ ಮೇಲೆ ಒಂದು ಮ್ಯಾಟ್ ಹಾಸಿ ನಂತರ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ಹಣವಿದೆ ಎಂಬ ಮಾತ್ರಕ್ಕೆ ಬೀದಿ ಬದಿಯಲ್ಲಿ ಸೊಪ್ಪು ಮಾರಾಟ ಮಾಡುವುದೇನು ನನ್ನ ಅಂತಸ್ತಿಗೆ ಸೂಟ್ ಅಲ್ಲ ಅಂತ ಭಾವಿಸಿಯೇ ಇಲ್ಲ. ಹೀಗಾಗಿ ಇವರು ಈ ವಿಷಯದಲ್ಲಿ ರೋಲ್ ಮಾಡೆಲ್ ಆಗಿದ್ದರೆ.
ಈ ವೀಡಿಯೋವನ್ನು ನೆಟ್ಟಿಗರು ತುಂಬಾ ಮೆಚ್ಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊದಲು ನಾನು ಆಡಿ ಕಾರು ತಗೋತೀನಿ ನಂತರ ತರಕಾರಿ ಮಾರುತ್ತೇನೆ ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ನಮ್ಮ ಕೆಲಸ ನಾವು ಮಾಡಲು ನಾಚಿಕೆ ಏಕೆ ಅಲ್ವಾ? ನಿಯತ್ತಿನಿಂದ, ನ್ಯಾಯ ಬದ್ಧವಾಗಿ ಮಾಡುವ ಯಾವ ಕೆಲಸವೂ ಕಡಿಮೆಯಲ್ಲ ಅಲ್ವಾ?
ಸುಜಿತ್ ಎಸ್‌ಪಿ ತುಂಬಾನೇ ಜನಪ್ರಿಯ ವ್ಯಕ್ತಿ ಕೂಡ
ವೆರೈಟಿ ಫಾರ್ಮಿಂಗ್ ಎಂಬ ಇನ್‌ಸ್ಟಾಗ್ರಾಮ್ ಖಾತೆ ಹೊಂದಿರುವ ಇವರಿಗೆ ತುಂಬಾನೇ ಫಾಲೋವರ್ಸ್ ಇದ್ದಾರೆ. ಇವರು ಕೃಷಿ ಬಗ್ಗೆ ತುಂಬಾನೇ ಉಪಯುಕ್ತ ಮಾಹಿತಿ ನೀಡುತ್ತಿರುತ್ತಾರೆ. ತಾವೇ ಕೃಷಿ ಬೆಳೆದು ಮಾರ್ಕೆಟಿಂಗ್ ಕೂಡ ತಾವೇ ಮಾಡುತ್ತಾರೆ, ಇದರಿಂದ ಇವರು ಕೃಷಿಯಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಮಾತನಾಡಿಸಿ ಈ ಕುರಿತು ಕೂಡ ಜನರಿಗೆ ಮಾಹಿತಿ ನೀಡುತ್ತಿರುತ್ತಾರೆ, ಸಾಮಾಜಿಕ ತಾಣದಿಂದ ಕೂಡ ಲಕ್ಷಾಂತರ ರುಪಾಯಿ ದುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಸ್ವಲ್ಪ ಕ್ರಿಯಾತ್ಮಕವಾಗಿ ಯೋಚಿಸಿದರೆ ಚೆನ್ನಾಗಿ ಸಂಪಾದನೆ ಮಾಡಬಹುದು ಎಂಬುವುದಕ್ಕೆ ಇವರು ಉದಾಹರಣೆ.



Click it and Unblock the Notifications
