For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಮಹಿಳೆಯರು ಏಕೆ ಹಸಿರು ಬಣ್ಣವನ್ನು ಬಳಸುತ್ತಾರೆ?

By Divya Pandith
|

ಹಿಂದೂ ಪಂಚಾಗದ ಪ್ರಕಾರ ಶ್ರಾವಣ ಮಾಸ ಅತ್ಯಂತ ಪವಿತ್ರವಾದ ತಿಂಗಳು. ಪ್ರಕೃತಿ ಹಾಗೂ ದೇವರ ಆರಾಧನೆಗೆ ಮಂಗಳಕರವಾದ ದಿನ ಎಂದು ಹೇಳಲಾಗುವುದು. ದಿವ್ಯ ಶಕ್ತಿಯಾದ ದೇವತೆಗಳು ಹಾಗೂ ಶಿವನು ಪ್ರಕೃತಿಯಲ್ಲಿ ಲೀನವಾಗಿರುತ್ತಾನೆ. ಪ್ರಕೃತಿ ಹಾಗೂ ದೇವತೆಗಳ ನಡುವೆ ಅವಿನಾಭಾವ ಸಂಬಂಧಗಳಿರುತ್ತವೆ. ಪ್ರಕೃತಿಯ ಬಣ್ಣವು ಹಸಿರಾಗಿರುವುದರಿಂದ ಪೂಜಾ ವಿಧಿ ವಿಧಾನದಲ್ಲಿ ಮಹಿಳೆಯರು ಹೆಚ್ಚು ಹಸಿರು ಬಣ್ಣದ ಉಡುಗೆ-ತೊಡುಗೆ ಮಾಡಿಕೊಳ್ಳುತ್ತಾರೆ.

ಹಸಿರು ಬಣ್ಣವು ಹೆಚ್ಚಿನ ಅದೃಷ್ಟ ತಂದುಕೊಡುವುದು. ಜೊತೆಗೆ ಪ್ರಕೃತಿಗೆ ಒಂದು ಕೃತಜ್ಞತೆಯನ್ನು ಸಲ್ಲಿಸುವ ವಿಧಾನವೂ ಹೌದು. ಹಾಗಾಗಿಯೇ ಬಹುತೇಕ ಮಹಿಳೆಯರು ಶುಭ ಸಂದರ್ಭದಲ್ಲಿ ಹಸಿರು ಬಳೆ ಹಾಗೂ ಉಡುಗೆಯನ್ನು ತೊಡುವುದರ ಮೂಲಕ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತಾರೆ.

ಮಹಿಳೆಯರು ಹಸಿರು ಬಣ್ಣದ ಆಯ್ಕೆ ಮಾಡಿಕೊಳ್ಳಲು ಇರುವ ಕಾರಣಗಳು ಹಾಗೂ ಅದರ ಇನ್ನಷ್ಟು ಮಹತ್ವವನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ಸೂಕ್ತ ಮಾಹಿತಿಯನ್ನು ಅರಿಯಿರಿ.

wear bangales

ವಿವಾಹದಲ್ಲಿ ಹಸಿರು ಬಣ್ಣದ ಬಂಧನ

ಹಿಂದೂ ಧರ್ಮದ ಬಹುತೇಕ ಜನಾಂಗದವರು ತಮ್ಮ ವಿವಾಹದ ಸಂದರ್ಭದಲ್ಲಿ ಹಸಿರು ಬಣ್ಣದ ಬಳೆಯನ್ನು ಧರಿಸುತ್ತಾರೆ. ಕೆಲವು ಶುಭ ಸಮಾರಂಭದ ಸಂದರ್ಭದಲ್ಲಿ ಹಸಿರು ಉಡುಗೆಯನ್ನು ಧರಿಸುತ್ತಾರೆ. ಕೆಂಪು ಬಣ್ಣದಂತೆ ಹಸಿರು ಬಣ್ಣವು ವಿವಾಹಿತ ಜೀವನದಲ್ಲಿ ಅದೃಷ್ಟವನ್ನು ಮತ್ತು ಸಂತೋಷವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಮಹಿಳೆಯರು ತಮ್ಮ ವಿವಾಹಿತ ಜೀವನದಲ್ಲಿ ಆಶೀರ್ವಾದ ಪಡೆದುಕೊಳ್ಳಲು ಹಾಗೂ ಶಿವನಿಂದ ತಮ್ಮ ಪತಿಗೆ ದೀರ್ಘ ಆಯುಷ್ಯ ಹಾಗೂ ಜೀವನ ದೊರೆಯಲಿ ಎನ್ನುವ ಉದ್ದೇಶದಿಂದ ಹಸಿರು ಬಣ್ಣದ ಬಳೆ ಹಾಗೂ ಬಟ್ಟೆಯನ್ನು ತೊಡುತ್ತಾರೆ.

ಪ್ರಕೃತಿ ಹಾಗೂ ಅದೃಷ್ಟಕ್ಕೆ ಕೃತಜ್ಞತೆ

ಹಿಂದೂ ಧರ್ಮದಲ್ಲಿ ಪ್ರಕೃತಿಯ ವಿವಿಧ ರೂಪಗಳಿಗೆ ಆರಾಧನೆ ಮಾಡುತ್ತೇವೆ. ತುಳಸಿ, ಅಶ್ವತ್ಥ ಮರ, ಬಾಳೆ ಗಿಡ, ಸೇರಿದಂತೆ ಇನ್ನಿತರ ಗಿಡ ಮರಗಳಿಗೆ ಪವಿತ್ರ ಸ್ಥಾನವನ್ನು ನೀಡುವುದರ ಮೂಲಕ ಆರಾಧನೆ ಮಾಡಲಾಗುವುದು. ಪ್ರಕೃತಿಗೆ ಕೃತಜ್ಞತೆ ಹೇಳುವ ಸಲುವಾಗಿ ನೀರು, ಗಾಳಿ, ಸೂರ್ಯ, ಬೆಂಕಿ ಹಾಗೂ ಭೂಮಿಗೆ ಪೂಜೆಯನ್ನು ಮಾಡುತ್ತೇವೆ. ಈ ಸಂದರ್ಭದಲ್ಲಿ ಹಸಿರು ಬಣ್ಣದ ಉಡುಗೆ ಹಾಗೂ ಆಭರಣಗಳನ್ನು ತೊಡುವುದರಿಂದ ದೈವಶಕ್ತಿಯಿಂದ ಆಶೀರ್ವಾದ ಪಡೆದುಕೊಳ್ಳುತ್ತೇವೆ ಎಂದು ಹೇಳಲಾಗುವುದು.

ವೃತ್ತಿ ಜೀವನಕ್ಕೆ ಹಸಿರು ಬಣ್ಣ

ಬುಧ ಗ್ರಹವು ವ್ಯಕ್ತಿಯ ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಫಲಿತಾಂಶವನ್ನು ನೀಡುತ್ತದೆ. ಬುಧ ಗ್ರಹಗತಿಗಳ ಅಧಿಪತಿ ಎಂದು ಸಹ ಹೇಳಲಾಗುವುದು. ಹಸಿರು ಬಣ್ಣ ಬುಧ ದೇವನಿಗೆ ಬಹಳ ಪ್ರಿಯವಾದ ಬಣ್ಣ. ಈ ಬಣ್ಣ ಧರಿಸುವುದರಿಂದ ವ್ಯಕ್ತಿಯು ವೃತ್ತಿ ಜೀವನದಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವನು ಎಂದು ಹೇಳಲಾಗುವುದು. ಶಿವ ಪರಮಾತ್ಮನು ಒಬ್ಬ ಯೋಗಿಯಾಗಿದ್ದಾಗ ಪ್ರಕೃತಿಯ ಸೌಂದರ್ಯದ ಮಧ್ಯೆ ಕುಳಿತು ಧ್ಯಾನ ಮಾಡಲು ಇಷ್ಟಪಡುತ್ತಿದ್ದನು. ಹಾಗಾಗಿಯೇ ಶಿವನ ಆರಾಧನೆಯ ವಿಧಿ-ವಿಧಾನದಲ್ಲಿ ಹಸಿರು ಬಣ್ಣದ ಉಡುಗೆಯನ್ನು ತೊಡಲಾಗುವುದು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಬಣ್ಣವು ವಿಷ್ಣು ದೇವರಿಗೂ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಮಹಿಳೆಯರು ಶ್ರಾವಣ ಮಾಸದಲ್ಲಿ ಬರುವ ವ್ರತ ಹಾಗೂ ಪೂಜಾ ವಿಧಿ-ವಿಧಾನದಲ್ಲಿ ಹಸಿರು ಬಣ್ಣವನ್ನು ಪ್ರಮುಖ ಬಣ್ಣವಾಗಿ ಆಯ್ದುಕೊಳ್ಳುವರು. ಪೂಜೆಯನ್ನು ಸೂಕ್ತ ಸಿದ್ಧತೆಯೊಂದಿಗೆ ಆರಾಧಿಸುವರು ಎಂದು ಹೇಳಲಾಗುವುದು. ಈ ವರ್ಷದ ಶ್ರಾವಣ ಮಾಸವು ಜುಲೈ 28ರಿಂದ ಉತ್ತರ ಭಾರತದಲ್ಲಿ ಆರಂಭಗೊಂಡರೆ ಆಗಸ್ಟ್ 12ರಿಂದ ದಕ್ಷಿಣ ಭಾರತದೆಲ್ಲೆಡೆ ಆರಂಭವಾಗುವುದು. ವಿವಿಧ ಪ್ರದೇಶದಲ್ಲಿ ಪಂಚಾಂಗಗಳ ಬದಲಾವಣೆ ಇರುವುದರಿಂದ ಮಾಸದ ಆರಂಭದಲ್ಲಿ ವ್ಯತ್ಯಾಸ ಇದ್ದರೂ ಹಬ್ಬ ಹಾಗೂ ಆಚರಣೆಗಳು ಒಂದೇ ದಿನ ಬರುವುದು ಎಂದು ಹೇಳಲಾಗುವುದು.

ಶ್ರಾವಣ ಮತ್ತು ಪ್ರಕೃತಿಯ ಪೂಜೆ

ಶ್ರಾವಣ ಮಾಸಕ್ಕೆ ಸಂಬಂಧಿಸಿದ ಕಥೆಯ ಪ್ರಕಾರ ಲಕ್ಷ್ಮಿ ದೇವಿ ವಿಷ್ಣು ದೇವರ ವಾಸಸ್ಥಾನವನ್ನು ತೊರೆದಾಗ ವಿಷ್ಣು ದೇವರು ಬಹಳ ನಿರಾಶೆಗೆ ಒಳಗಾದನು. ಇದಕ್ಕೆ ಪರಿಹಾರವಾಗಿ ದೇವತೆಗಳು ಹಾಗೂ ರಾಕ್ಷಸರು ಕ್ಷೀರ ಸಮುದ್ರವನ್ನು ಕಡೆಯಲು ನಿರ್ಧರಿಸಿದರು. ಸಮುದ್ರ ಮಂಥನ ನಡೆಸಿದಾಗ ಅತ್ಯಂತ ಶಕ್ತಿ ಶಾಲಿಯಾಗಿ ಹೊರ ಬಂದ ವಿಷವನ್ನು ಶಿವನು ಕುಡಿದು, ತನ್ನ ಗಂಟಲಿನಲ್ಲಿ ಇಟ್ಟುಕೊಂಡ. ಈ ಹಿನ್ನೆಲೆಯಲ್ಲಿಯೇ ಶಿವನಿಗೆ ನೀಲಕಂಠ ಎಂದು ಕರೆಯಲಾಯಿತು. ಶಿವನ ಕಂಠವು ನೀಲಿ ಬಣ್ಣದಿಂದ ಗೋಚರಿಸುವುದು ಇದೇ ಕಾರಣದಿಂದ ಹೇಳಲಾಯಿತು. ವಿಷದ ಸೇವನೆಯಿಂದ ಶಿವನ ದೇಹವು ವಿಷದಿಂದ ಆವರಿಸಿಕೊಂಡಿತು. ಆಗ ಅದನ್ನು ತಗ್ಗಿಸಲು ಗಂಗಾದೇವಿಯು ಶಿವನ ದೇಹದಲ್ಲಿ ಆವರಿಸಿಕೊಂಡು, ಶುದ್ಧಗೊಳಿಸಿತು ಎನ್ನುವ ನಂಬಿಕೆಯೂ ಇದೆ. ಹಾಗಾಗಿ ಶ್ರಾವಣ ಮಾಸವನ್ನು ಶಿವನಿಗೆ ಮೀಸಲಾದ ತಿಂಗಳು ಎಂದು ಹೇಳಲಾಗುವುದು.

English summary

Why Women Should Prefer Green Colour

Green colour holds a deep spiritual and religious significance during the Shravana month. Let us explore what this significance is and why women should prefer green colour during the shravan month.
Story first published: Monday, July 23, 2018, 16:47 [IST]
X
Desktop Bottom Promotion