For Quick Alerts
ALLOW NOTIFICATIONS  
For Daily Alerts

ಶಿವನ ಆರಾಧನೆಯಲ್ಲಿ ಅರಿಶಿಣ, ಕುಂಕುಮ ಬಳಸಲೇಬಾರದು, ಏಕೆ?

|

ಶಿವನ ಭಕ್ತನು ಭಕ್ತಿಯಿಂದ ಶಿವನ ಆರಾ‍ಧನೆ ಮಾಡಿದರೆ ಅವನ ಭಕ್ತಿಗೆ ಮೆಚ್ಚಿ ಶಿವ ಒಲಿಯುತ್ತಾನೆ, ಅವನ ಎಲ್ಲಾ ಕಷ್ಟಗಳನ್ನು ಶಿವ ಪರಮಾತ್ಮ ಹೋಗಲಾಡಿಸುತ್ತಾನೆ. ಶಿವನ ಪೂಜೆಗೆ ಯಾವುದೇ ಆಡಂಬರದ ಪ್ರದರ್ಶನವಾಗಲಿ, ವಸ್ತುಗಳಾಗಲಿ ಬೇಕಾಗಿಲ್ಲ, ಪೂಜಿಸುವ ಭಕ್ತನಲ್ಲಿ ಭಕ್ತಿ ಭಾವವೊಂದಿದ್ದರೆ ಸಾಕು. ಶಿವನ ಕೃಪೆಗೆ ಪಾತ್ರರಾಗಬಹುದು.

 Haladi no For shiva pooja

ಶಿವ ಪೂಜೆ ಮಾಡುವಾಗ ಕೆಲವೊಂದು ವಿಧಿ ವಿಧಾನಗಳಿವೆ, ಶಿವ ಪೂಜೆಗೆ ಇತರ ದೇವರುಗಳಿಗೆ ಅರ್ಪಿಸುವಂತೆ ತುಳಸಿ, ಕೇದಗೆ, ಅರಿಶಿಣ, ಕುಂಕುಮ ಹೀಗೆ ಕೆಲವೊಂದು ವಸ್ತುಗಳನ್ನು ಅರ್ಪಿಸುವಂತಿಲ್ಲ. ಈ ಲೇಖನದಲ್ಲಿ ಶಿವನಿಗೆ ಅರಿಶಿಣ, ಕುಂಕುಮ ಏಕೆ ಅರ್ಪಿಸಬಾರದು ಎಂದು ಹೇಳಲಾಗಿದೆ.

ಸರಳತೆ ಇಷ್ಟ ಪಡುವ ನಿರಾಲಂಕಾರ ಶಿವ

ಸರಳತೆ ಇಷ್ಟ ಪಡುವ ನಿರಾಲಂಕಾರ ಶಿವ

ಜಗದ ಲಯಕರ್ತ ಶಿವ ತುಂಬಾ ಸರಳ ಜೀವನವನ್ನು ಇಷ್ಟಪಡುತ್ತಾನೆ. ಆದ್ದರಿಂದ ಈತನ ಪೂಜೆಯೂ ಕೂಡ ಸರಳವಾಗಿಯೇ ಇರಲಿ ಎಂದು ಬಯಸುತ್ತಾನೆ. ಸ್ಮಶಾನವಾಸಿ, ನಿರಾಲಂಕಾರ ಶಿವನಿಗೆ ಯಾವುದೇ ಆಭರಣಗಳಾಗಲಿ, ವಿಶೇಷ ಅಲಂಕಾರವಾಗಲಿ ಇಷ್ಟವಾಗುವುದಿಲ್ಲ. ನೈವೇದ್ಯಕ್ಕೆ ಹಣ್ಣುಗಳನ್ನು ಇಟ್ಟರಷ್ಟೇ ಸಾಕು ತೃಪ್ತಿಗೊಳ್ಳುತ್ತಾನೆ.

ಶಿವ ಪೂಜೆ

ಶಿವ ಪೂಜೆ

ಈಶ್ವರನಿಗೆ ಪೂಜೆ ಮಾಡುವಾಗ ಹಾಲು, ಶ್ರೀಗಂಧ ಲೇಪನ, ಭಸ್ಮದಂಥ ವಸ್ತುಗಳಿಂದ ಪೂಜಿಸಬೇಕು. ಶಿವನಿಗೆ ಆಗದ ವಸ್ತುಗಳನ್ನು ಪೂಜೆಗೆ ಬಳಸಿದರೆ ಇದರಿಂದ ಮುಕ್ಕಣ್ಣನಿಗೆ ಕೋಪಯುಂಟಾಗುವುದು.

ಶಿವಲಿಂಗಕ್ಕೆ ಅರಿಶಿಣ ಏಕೆ ಹಚ್ಚಬಾರದು?

ಶಿವಲಿಂಗಕ್ಕೆ ಅರಿಶಿಣ ಏಕೆ ಹಚ್ಚಬಾರದು?

ಶಿವಲಿಂಗ ಎನ್ನುವುದು ಪುರುಷತ್ವದ ಸಂಕೇತ, ಶಿವಲಿಂಗ ಎನ್ನುವುದು ಪುರುಷನನ್ನು ಪ್ರನಿಧಿಸುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಶಿವನು ಅಗಾಧ ಶಕ್ತಿಯನ್ನು ತನ್ನಲ್ಲಿಟ್ಟಿಕೊಂಟಿರುವ ದೈವ. ಆತನಿಗೆ ಶ್ರೀಗಂಧ, ಹಾಲು, ಭಸ್ಮ, ಬಿಲ್ವ ಪತ್ರೆಗಳಂಥ ವಸ್ತುಗಳನ್ನು ಅರ್ಪಿಸಿ ಪೂಜಿಸಬೇಕು. ನಾವು ಅರ್ಪಿಸುವ ವಸ್ತುಗಳು ಆತನ ಕೋಪ-ತಾಪವನ್ನು ತ ತಣ್ಣಗಾಗಿಸಬೇಕು. ಲೌಕಿಕ ಸುಖಗಳಿಂದ ದೂರವಿರುವ ಬ್ರಹ್ಮಚಾರಿಯ ರೀತಿ ಬದುಕುತ್ತಿರುವ ಶಿವನಿಗೆ ಯಾವುದೇ ಕಾರಣಕ್ಕೂ ಅರಿಶಿಣವನ್ನು ಅರ್ಪಿಸಬಾರದು.

ಅಲ್ಲದೆ ಅರಿಶಿಣ ಸ್ತ್ರೀ ಸೌಂದರ್ಯದ ಸಂಕೇತ. ಇದು ಸೌಂದರ್ಯವನ್ನು ಪ್ರಚೋದಿಸುತ್ತದೆ, ಹೆಣ್ಣಿನ ಸೌಂದರ್ಯ ಲೌಕಿಕ ಸುಖದ ಕಡೆಗೆ ಬಾಗುವಂತೆ ಮಾಡುವುದು. ಆದ್ದರಿಂದ ಅಲೌಕಿಕ ಬದುಕು ನಡೆಸುತ್ತಿರುವ ಶಿವನಿಗೆ ಅರಿಶಿಣ ಅರ್ಪಿಸಲೇಬಾರದು.

ಶಿವನಿಗೆ ಕುಂಕುಮ ಕೂಡ ಅರ್ಪಿಸಬೇಡಿ

ಶಿವನಿಗೆ ಕುಂಕುಮ ಕೂಡ ಅರ್ಪಿಸಬೇಡಿ

ಹಿಂದೂ ಧರ್ಮದಲ್ಲಿ ಪೂಜೆ ಪುರಸ್ಕಾರಗಳಲ್ಲಿ ಕುಂಕುಮಕ್ಕೆ ಪವಿತ್ರವಾದ ಸ್ಥಾನವಿದೆ. ದೇವರ ಪೂಜೆಯಲ್ಲಿ ಕುಂಕು ಬಳಸಲಾಗುವುದು. ಆದರೆ ಶಿವನ ಆರಾಧನೆ ಮಾಡುವಾಗ, ಶಿವ ಪೂಜೆಯನ್ನು ಮಾಡುವಾಗ ಕುಂಕುಮ ಬಳಸಬಾರದು. ಶಿವನು ಲೌಕಿಕ ಜಗತ್ತು ಮತ್ತು ಸಂತೋಷಗಳೊಂದಿಗೆ ಯಾವುದೇ ಬಂಧವೊಂದಿಲ್ಲ. ಶಿವ ಭಸ್ಮ ಪ್ರಿಯ. ಶಿವನ ಆರಾಧನೆಗೆ ವಿಭೂತಿ ಬಳಸಲಾಗುವುದು.

English summary

Why Shivalinga Should Not Be Worshiped with Haldi and Kumkum

Why Shivalinga Should Not Be Worshiped with Haldi, Kukum, Read on,
X
Desktop Bottom Promotion