For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ವ್ರತ 2022: ವರಲಕ್ಷ್ಮಿ ದೇವಿಯ ಮಂತ್ರಗಳು, ಶ್ಲೋಕ ಹಾಗೂ ಆರತಿ ಗೀತೆ

|

ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ವಿ‍ಷ್ಣುವಿನ ಶಕ್ತಿರೂಪಿಣಿ ದೇವಿ ವರಮಹಾಲಕ್ಷ್ಮಿ ವ್ರತ 2022ನೇ ಸಾಲಿನಲ್ಲಿ ಆಗಸ್ಟ್‌ 5ರಂದು ಆಚರಿಸಲಾಗುತ್ತಿದೆ.

varamahalakshmi
ಮಹಾಲಕ್ಷ್ಮಿ ಬಹಳ ಶಿಸ್ತಿನ ದೇವಿ, ಇವಳನ್ನು ಬಹಳ ಶ್ರದ್ಧಾ, ಭಕ್ತಿಯಿಂದ ಪೂಜಿಸಿದರೆ ಮಾತ್ರ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಮಹಾಲಕ್ಷ್ಮಿಯನ್ನು ಮನೆಯಲ್ಲಿ ಇಡುವ ಮೊದಲ ಹಂತದಿಂದ ಆಕೆಗೆ ಆರತಿ ಮಾಡುವವರೆಗೂ ಯಾವೆಲ್ಲಾ ಮಂತ್ರ, ಶ್ಲೋಕಗಳಿಂದ ಭಜಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಶ್ಲೋಕ, ಮಂತ್ರಗಳನ್ನು ಭಜಿಸುತ್ತಾ ಲಕ್ಷ್ಮೀ ಮನೆಯಲ್ಲೇ ನೆಲೆಯೂರುವಂತೆ, ಐಶ್ವರ್ಯ, ಸಕಲ ಸಂಪತ್ತು, ನೆಮ್ಮದಿ, ಆರೋಗ್ಯ ಪ್ರಾಪ್ತಿಯಾಗುವಂತೆ ದೇವಿಯಲ್ಲಿ ಪ್ರಾರ್ಥಿಸೋಣ:
ಮಹಾಲಕ್ಷ್ಮೀ ಅಷ್ಟಕಂ

ಮಹಾಲಕ್ಷ್ಮೀ ಅಷ್ಟಕಂ

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |

ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ‖

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |

ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ | ಸ

ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |

ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |

ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ ‖

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |

ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |

ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |

ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖

ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |

ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ‖

ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ |

ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ‖

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ |

ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ‖

ಲಕ್ಷ್ಮಿ ಮಂತ್ರಗಳು

ಲಕ್ಷ್ಮಿ ಮಂತ್ರಗಳು

ಲಕ್ಷ್ಮಿ ಬೀಜ ಮಂತ್ರ

ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ

ಮಹಾಲಕ್ಷ್ಮಿ ಮಂತ್ರ

ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ

ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿಯೇ ನಮಃ

ಲಕ್ಷ್ಮಿ ಗಾಯತ್ರಿ ಮಂತ್ರ

ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ

ವಿಷ್ಣು ಪತ್ನಯೇ ಚ ಧೀಮಹಿ

ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ

ವರಮಹಾಲಕ್ಷ್ಮಿ ವ್ರತ ಮಂತ್ರ

ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋ ಪಾಂತ್ಯ ಭಾಗವೇ

ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ

ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ

ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ

ಓಂ ಪ್ರಕ್ರತ್ಯೈ ನಮಃ

ಓಂ ವಿಕೃತ್ಯೈ ನಮಃ

ಓಂ ವಿದ್ಯಾಯೈ ನಮಃ

ಓಂ ಸುರಭ್ಯೈ ನಮಃ

ಓಂ ಪರಮಾತ್ಮಿಕಾಯೈ ನಮಃ

ಓಂ ವಾಚೇ ನಮಃ

ಓಂ ಪದ್ಮಲಯಾಯೈ ನಮಃ

ಓಂ ಪದ್ಮಾಯೈ ನಮಃ

ಓಂ ಶುಚ್ಯೈ ನಮಃ

ಓಂ ಸ್ವಾಹಾಯೈ ನಮಃ

ಓಂ ಸ್ವಧಾಯೈ ನಮಃ

ಓಂ ಸುಧಾಯೈ ನಮಃ

ಓಂ ಧನ್ಯಾಯೈ ನಮಃ

ಓಂ ಹಿರಣ್ಮಯ್ಯೈ ನಮಃ

ಓಂ ಲಕ್ಷ್ಮ್ಯೈ ನಮಃ

ಓಂ ನಿತ್ಯ ಪುಷ್ಪಾಯೈ ನಮಃ

ಓಂ ವಿಭಾವರ್ಯೈ ನಮಃ

ಓಂ ಆದಿತ್ಯೈ ನಮಃ

ಓಂ ದಿತ್ಯೈ ನಮಃ

ಓಂ ದೀಪ್ತಾಯೈ ನಮಃ

ಓಂ ವಸುಧಾಯೈ ನಮಃ

ಓಂ ವಸುಧಾರಿಣ್ಯೈ ನಮಃ

ಓಂ ಕಮಲಾಯೈ ನಮಃ

ಓಂ ಕಾಂತಾಯೈ ನಮಃ

ಓಂ ಕಾಮಾಕ್ಷ್ಯೈ ನಮಃ

ಓಂ ಕ್ರೋಧ ಸಂಭವಾಯೈ ನಮಃ

ಓಂ ಅನುಗ್ರಹಪರಾಯೈ ನಮಃ

ಓಂ ಋದ್ಧಯೇ ನಮಃ

ಓಂ ಅನುಘಾಯೈ ನಮಃ

ಓಂ ಹರಿವಲ್ಲಭಾಯೈ ನಮಃ

ಓಂ ಅಶೋಕಾಯೈ ನಮಃ

ಓಂ ಅಮೃತಾಯೈ ನಮಃ

ಓಂ ದೀಪ್ತಾಯೈ ನಮಃ

ಓಂ ಲೋಕಶೋಕ ವಿನಾಶಿನ್ಯೈ ನಮಃ

ಓಂ ಧರ್ಮನಿಲಯಾಯೈ ನಮಃ

ಓಂ ಕರುಣಾಯೈ ನಮಃ

ಓಂ ಲೋಕಮಾತೇ ನಮಃ

ಓಂ ಪದ್ಮಪ್ರಿಯಾಯೈ ನಮಃ

ಓಂ ಪದ್ಮಹಸ್ತಾಯೈ ನಮಃ

ಓಂ ಪದ್ಮಾಕ್ಷ್ಯೈ ನಮಃ

ಓಂ ಪದ್ಮಸುಂದರ್ಯೈ ನಮಃ

ಓಂ ಪದ್ಮೋದ್ಭವಾಯೈ ನಮಃ

ಓಂ ಪದ್ಮಮುಖ್ಯೈ ನಮಃ

ಓಂ ಪದ್ಮನಾಭಪ್ರಿಯಾಯೈ ನಮಃ

ಓಂ ರಮಾಯೈ ನಮಃ

ಓಂ ಪದ್ಮಮಾಲಾಧರಾಯೈ ನಮಃ

ಓಂ ದೇವ್ಯೈ ನಮಃ

ಓಂ ಪದ್ಮಿನ್ಯೈ ನಮಃ

ಓಂ ಪದ್ಮಗಂಥಿನ್ಯೈ ನಮಃ

ಓಂ ಪುಣ್ಯಗಂಧಾಯೈ ನಮಃ

ಓಂ ಸುಪ್ರಸನ್ನಾಯೈ ನಮಃ

ಓಂ ಪ್ರಸಾದಾಭಿಮುಖ್ಯೈ ನಮಃ

ಓಂ ಪ್ರಭಾಯೈ ನಮಃ

ಓಂ ಚಂದ್ರ ವದನಾಯೈ ನಮಃ

ಓಂ ಚಂದ್ರಾಯೈ ನಮಃ

ಓಂ ಚಂದ್ರಸಹೋದರ್ಯೈ ನಮಃ

ಓಂ ಚತುರ್ಭುಜಾಯೈ ನಮಃ

ಓಂ ಚಂದ್ರರೂಪಾಯೈ ನಮಃ

ಓಂ ಇಂದಿರಾಯೈ ನಮಃ

ಓಂ ಇಂದುಶೀತುಲಾಯೈ ನಮಃ

ಓಂ ಆಹ್ಲೋದಜನನ್ಯೈ ನಮಃ

ಓಂ ಪುಷ್ಟ್ಯೈ ನಮಃ

ಓಂ ಶಿವಾಯೈ ನಮಃ

ಓಂ ಶಿವಕರ್ಯೈ ನಮಃ

ಓಂ ಸತ್ಯೈ ನಮಃ

ಓಂ ವಿಮಲಾಯೈ ನಮಃ

ಓಂ ವಿಶ್ವಜನನ್ಯೈ ನಮಃ

ಓಂ ತುಷ್ಟ್ಯೈ ನಮಃ

ಓಂ ದಾರಿದ್ರ್ಯ ನಾಶಿನ್ಯೈ ನಮಃ

ಓಂ ಪ್ರೀತಿಪುಷ್ಕರಿಣ್ಯೈ ನಮಃ

ಓಂ ಶಾಂತಾಯೈ ನಮಃ

ಓಂ ಶುಕ್ಲಮಾಲ್ಯಾಂಬರಾಯೈ ನಮಃ

ಓಂ ಶ್ರಿಯೈ ನಮಃ

ಓಂ ಭಾಸ್ಕರ್ಯೈ ನಮಃ

ಓಂ ಬಿಲ್ವನಿಲಯಾಯೈ ನಮಃ

ಓಂ ವರಾರೋಹಾಯೈ ನಮಃ

ಓಂ ಯಶಸ್ವಿನ್ಯೈ ನಮಃ

ಓಂ ವಸುಂಧರಾಯೈ ನಮಃ

ಓಂ ಉದಾರಾಂಗಾಯೈ ನಮಃ

ಓಂ ಹರಿಣ್ಯೈ ನಮಃ

ಓಂ ಹೇಮಮಾಲಿನ್ಯೈ ನಮಃ

ಓಂ ಧನಧಾನ್ಯ ಕರ್ಯೈ ನಮಃ

ಓಂ ಸಿದ್ಧಯೇ ನಮಃ

ಓಂ ಸ್ತ್ರೈಣ ಸೌಮ್ಯಾಯೈ ನಮಃ

ಓಂ ಶುಭಪ್ರದಾಯೈ ನಮಃ

ಓಂ ನೃಪವೇಶ್ಮ ಗತಾನಂದಾಯೈ ನಮಃ

ಓಂ ವರಲಕ್ಷ್ಮೈ ನಮಃ

ಓಂ ವಸುಪ್ರದಾಯೈ ನಮಃ

ಓಂ ಶುಭಾಯೈ ನಮಃ

ಓಂ ಹಿರಣ್ಯಪ್ರಾಕಾರಾಯೈ ನಮಃ

ಓಂ ಸಮುದ್ರ ತನಯಾಯೈ ನಮಃ

ಓಂ ಜಯಾಯೈ ನಮಃ

ಓಂ ಮಂಗಳಾಯೈ ನಮಃ

ಓಂ ದೇವ್ಯೈ ನಮಃ

ಓಂ ವಿಷ್ಣು ವಕ್ಷಃ ಸ್ಥಲ ಸ್ಥಿತಾಯೈ ನಮಃ

ಓಂ ವಿಷ್ಣುಪತ್ನ್ಯೈ ನಮಃ

ಓಂ ಪ್ರಸನ್ನಾಕ್ಷ್ಯೈ ನಮಃ

ಓಂ ನಾರಾಯಣ ಸಮಾಶ್ರಿತಾಯೈ ನಮಃ

ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ

ಓಂ ಸರ್ವೋಪದ್ರವ ವಾರಿಣ್ಯೈ ನಮಃ

ಓಂ ನವದುರ್ಗಾಯೈ ನಮಃ

ಓಂ ಮಹಾಕಾಳ್ಯೈ ನಮಃ

ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ

ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ

ಓಂ ಭುವನೇಶ್ವರ್ಯೈ ನಮಃ

ಅಷ್ಟಲಕ್ಷ್ಮಿ ವ್ರತ ಶ್ಲೋಕ

ಅಷ್ಟಲಕ್ಷ್ಮಿ ವ್ರತ ಶ್ಲೋಕ

1. ಆದಿ ಲಕ್ಷ್ಮಿ ಮಂತ್ರ

ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೋದರಿ ಹೇಮಮಯೇ ಮುನಿಗಣಮಂಡಿತ ಮೋಕ್ಷಪ್ರದಾಯಿನಿ, ಮಂಜುಳಾ ಭಾಷಿಣಿ ವೇದನುತೇ |

ಪಂಕಜವಾಸಿನಿ ದೇವಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೆ ಜಯ ಜಯ ಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಸದಾ ಪಾಲಯ ಮಾಮ್‌||

2. ಧನ ಲಕ್ಷ್ಮಿ ಮಂತ್ರ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ||

3. ಧೈರ್ಯ ಲಕ್ಷ್ಮಿ ಮಂತ್ರ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ

ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್‌ ||

4. ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ ರ ಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ||

5. ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ ||

6. ಧಾನ್ಯ ಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ

ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ ||

7. ಸಂತಾನ ಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ ||

8. ವಿದ್ಯಾ ಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ||

ಭಾಗ್ಯದ ಲಕ್ಷ್ಮಿ ಬಾರಮ್ಮ - ಪುರಂದರ ದಾಸರ ರಚನೆ

ಭಾಗ್ಯದ ಲಕ್ಷ್ಮಿ ಬಾರಮ್ಮ - ಪುರಂದರ ದಾಸರ ರಚನೆ

ನಮ್ಮಮ್ಮಾ ಶ್ರೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ

ಗೆಜ್ಜೆ ಕಾಲ್‌ಗಳ ಧ್ವನಿಯ ತೋರುತ

ಸಜ್ಜನ ಸಾಧು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ಧಿಯ ಅವರ

ದಿನಕರ ಕೋಟಿ ತೇಜದಿ ಹೊಳೆಯುವ

ಜನಕರಾಯನ ಕುಮಾರಿ ಬೇಗ

ಶಂಕೆ ಇಲ್ಲದ ಭಾಗ್ಯವ ಕೊಡಲು

ಕಂಕಣ ಕೈಯ ತಿರುವುತ ಬಾರೆ

ಕುಂಕುಮಾಂಕಿತೆ ಪಂಕಜ ಲೋಚನೆ

ವೆಂಕಟರಮಣನ ಬಿಂಕದ ರಾಣಿ

ಅತ್ತಿತ್ತಗಲದೆ ಭಕ್ತರ ಮನೆಯೊಳು

ನಿತ್ಯ ಮಹೋತ್ಸವ ನಿತ್ಯ ಸುಮಂಗಲ

ಸತ್ಯದಿ ತೋರುತ ಸಾಧು ಸಜ್ಜನರಾ

ಚಿತ್ತದಿ ಹೊಳೆಯುವ ಪುತ್ತಳಿ ಗೊಂಬೆ

ಸಕ್ಕರೆ ತುಪ್ಪದ ಕಾಲುವೆ ಹರಿಸಿ

ಶುಕ್ರವಾರದ ಪೂಜೆಯ ವೇಳೆಗೆ

ಅಕ್ಕರೆಯುಳ್ಳ ಆಳಗಿರಿ ರಂಗನ

ಚೊಕ್ಕ ಪುರಂದರವಿಠಲನ ರಾಣಿ

ಮಹಾಲಕ್ಷ್ಮಿಗೆ ಆರತಿ ವೇಳೆ ಹಾಡುವ ಗೀತೆ

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||

ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||

ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||

ಮಹಾಲಕ್ಷ್ಮಿಗೆ ಆರತಿ ವೇಳೆ ಹಾಡುವ ಗೀತೆ

ಮಹಾಲಕ್ಷ್ಮಿಗೆ ಆರತಿ ವೇಳೆ ಹಾಡುವ ಗೀತೆ

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||

ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||

ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||

ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ

ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||

ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ

ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||

ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ

ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ ||

ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ ||

ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||

English summary

Varalakshmi Vratha 2022: Varamahalakshmi Mantras & Slokas in Kannada

Here we are discussing about Varalakshmi Vratha 2021: Varamahalakshmi Mantras, Slokas and arahi geethe in Kannada. read more.
X
Desktop Bottom Promotion