ದೀಪಾವಳಿಯ ಶುಭದಿನದಲ್ಲಿ ಲಕ್ಷ್ಮಿ ಪೂಜೆ ಮಾಡುವ ಪರಿ ಹೀಗೆ...

By Jaya subramanya
Subscribe to Boldsky

ದೀಪಾವಳಿಯ ಶುಭದಿನದಲ್ಲಿ ಪಟಾಕಿ ಹಚ್ಚಿ ಸಿಹಿ ತಿಂದು ಸಂಭ್ರಮವಾಗಿ ಹಬವನ್ನು ಆಚರಿಸುವುದಲ್ಲದೆ ಇತರ ಸಂಪ್ರದಾಯಗಳನ್ನು ವಿಧಿವತ್ತಾಗಿ ಆಚರಿಸುವ ಕ್ರಮ ಹಿಂದೂ ಪರಂಪರೆಯಲ್ಲಿದೆ. ದೀಪಾವಳಿ ಹಬ್ಬದ ಆಚರಣೆಯಲ್ಲಿ ಸಂಪತ್ತಿನ ಮುಖ್ಯ ದೇವರು ಎಂದೆನಿಸಿರುವ ಲಕ್ಷ್ಮೀ ಪೂಜೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಗೋಪೂಜೆಯಂತೆಯೇ ಲಕ್ಷ್ಮಿ ಪೂಜೆಯನ್ನು ಮನೆಗಳಲ್ಲಿ ದೀಪಾವಳಿಯಂದು ಮುಖ್ಯವಾಗಿ ಆಚರಿಸುತ್ತಾರೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಲಕ್ಷ್ಮಿ ಪೂಜೆಯನ್ನು ನಿಯಮ ಬದ್ಧವಾಗಿ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ನವೆಂಬರ್ 7, 2018 ರಂದು ಈ ಬಾರಿಯ ಲಕ್ಷ್ಮಿ ಪೂಜೆ ಬರಲಿದೆ.  

Lakshmi Puja
 

ಲಕ್ಷ್ಮಿ ಪೂಜೆಯನ್ನು ಮಾಡುವ ಸಂಪೂರ್ಣ ವಿವರ

ಲಕ್ಷ್ಮಿ ಪೂಜೆಯನ್ನು ಆರಂಭ ಮಾಡುವ ಮುನ್ನ ಮೊದಲಿಗೆ ಮನೆಯನ್ನು ಶುದ್ಧೀಕರಿಸಬೇಕು. ಗಂಗಾ ಜಲವನ್ನು ಸಿಂಪಡಿಸುವ ಮೂಲಕ ಇದನ್ನು ನಡೆಸಬಹುದಾಗಿದೆ. ಇದರಿಂದ ಮನೆಯಲ್ಲಿ ಅಶುದ್ಧಿ ಇದ್ದರೂ ಅದು ಶುದ್ಧವಾಗುತ್ತದೆ ನಂತರ ಮಧ್ಯಭಾಗದಲ್ಲಿ ಕೆಂಪು ಬಟ್ಟೆಯನ್ನು ಹಾಸಿ, ಧಾನ್ಯಗಳನ್ನು ಹಾಕಿ ಅದರ ಮೇಲೆ ಕಲಶವನ್ನಿಟ್ಟು ಸಿಂಗರಿಸಬೇಕು.

ಈ ಕಲಶ ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರದ್ದೂ ಆಗಿರಬಹುದಾಗಿದೆ. ಕಲಶದ 3/4 ಭಾಗವನ್ನು ನೀರಿನಿಂದ ತುಂಬಿಸಿ ಕಲಶದ ಕುತ್ತಿಗೆಯ ಭಾಗದಲ್ಲಿ, ಐದು ಅಥವಾ ಏಳು ಮಾವಿನ ಎಲೆಗಳನ್ನು ಇಡಿ ಮತ್ತು ಅಕ್ಕಿಯನ್ನು ಇದರಲ್ಲಿ ತುಂಬಿಸಿ. ಅಕ್ಕಿಯ ಮೇಲೆ ಅರಶಿನವನ್ನು ಬಳಸಿಕೊಂಡು ತಾವರೆ ಹೂವನ್ನು ಚಿತ್ರಿಸಿ. ಇದರ ಮೇಲೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ. ಎಲೆಯ ಮೇಲೆ ಕೆಲವು ನಾಣ್ಯಗಳನ್ನು ಇರಿಸಿ.

Lakshmi Puja
 

ಕಲಶದ ಬಲಭಾಗದಲ್ಲಿ ಅಂದರೆ ನೈಋತ್ಯ ದಿಕ್ಕಿನಲ್ಲಿ ಗಣೇಶ ದೇವರನ್ನು ಇರಿಸಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಪ್ರಥಮ ಪೂಜೆ ಗಣೇಶನಿಗೆ ನೆರವೇರುತ್ತದೆ. ಈ ಮೂರ್ತಿಗೆ ಕುಂಕುಮ, ಅರಿಶಿನ ಮತ್ತು ಅಕ್ಕಿ ಧಾನ್ಯಗಳ ಕುಂಕುಮವನ್ನು ಇರಿಸಿ ನಿಮ್ಮ ವ್ಯವಹಾರದ ಪುಸ್ತಕಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಇಟ್ಟುಕೊಂಡಿದ್ದರೆ ವೇದಿಕೆಯ ನಂತರದಲ್ಲಿ ಇದನ್ನು ಇರಿಸಿ ನಂತರ ಆರತಿ ತಟ್ಟೆಯನ್ನಿಡಿ. ಈ ತಟ್ಟೆಯಲ್ಲಿ ಅರಶಿನ, ಕುಂಕುಮ, ಅಕ್ಕಿಧಾನ್ಯಗಳು, ಶ್ರೀಗಂಧದ ಪೇಸ್ಟ್, ಕೇಸರಿ, ತಾವರೆ ಹೂಗಳು ಮತ್ತು ಆರತಿಯನ್ನು ಇರಿಸಿ. ದೀಪವನ್ನು ಉರಿಸಿ ಪೂಜೆಯನ್ನು ಆರಂಭಿಸಿ.

Pooja
 

ಕಲಶಕ್ಕೆ ತಿಲಕವನ್ನು ಹಚ್ಚಿ ಮತ್ತು ನಿಮ್ಮ ಕೈಯಲ್ಲಿ ಅಕ್ಕಿಯ ಧಾನ್ಯಗಳನ್ನು ಹಿಡಿದುಕೊಳ್ಳಿ. ದೇವಿ ಲಕ್ಷ್ಮಿ ಯ ಸ್ತೋತ್ರಗಳನ್ನು ಪಠಿಸಿ ಇದರಿಂದ ಪೂಜೆಯ ಸಮಯದಲ್ಲಿ ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ. ಈಗ ಲಕ್ಷ್ಮಿ ದೆವಿಯ ವಿಗ್ರಹವನ್ನು ತೊಳೆಯಿರಿ, ಮೊದಲಿಗೆ ನೀರಿನಲ್ಲಿ ನಂತರ ಪಂಚಾಮೃತದಲ್ಲಿ ಮೂರ್ತಿಯನ್ನು ತೊಳೆಯಿರಿ.

ಪಂಚಾಮೃತವೆಂದರೆ ಹಾಲು, ಮೊಸರು, ಗಂಗಾ ಜಲ, ಜೇನು, ತುಪ್ಪದ ಮಿಶ್ರಣವಾಗಿದೆ. ತದನಂತರ ಮತ್ತೊಮ್ಮೆ ನೀರಿನಿಂದ ಮೂರ್ತಿಯನ್ನು ತೊಳೆಯಿರಿ. ಈ ನೀರಿನಲ್ಲಿ ಚಿನ್ನದ ಆಭರಣ ಅಥವಾ ಮುತ್ತನ್ನು ಮುಳುಗಿಸಿಟ್ಟಿರಬೇಕು. ಮೂರ್ತಿಯನ್ನು ಒರೆಸಿ ಮತ್ತು ಕಲಶದಲ್ಲಿರಿಸಿ

Lakshmi Puja
 

ಮೂರ್ತಿಯ ನೆತ್ತಿಗೆ ತಿಲಕವನ್ನು ಹಚ್ಚಿ ಮತ್ತು ದೇವರ ಎದುರಿಗೆ ನೈವೇದ್ಯವನ್ನು ಇರಿಸಿ. ಇದರಲ್ಲಿ ಚೆಂಡು ಮಲ್ಲಿಗೆ ಹೂವು, ಕುಂಕುಮ, ಅರಶಿನ, ಅಕ್ಕಿ ಧಾನ್ಯಗಳು, ಶ್ರೀಗಂಧದ ಪೇಸ್ಟ್ ಮತ್ತು ಕೇಸರಿ ಪೇಸ್ಟ್, ಸಿಹಿತಿಂಡಿಗಳು, ಹಣ್ಣುಗಳು, ತೆಂಗಿನ ಕಾಯಿ ಇರುವಂತೆ ನೋಡಿಕೊಳ್ಳಿ. ಇದರೊಂದಿಗೆ ದೇವರಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು, ಮುತ್ತು ನಾಣ್ಯಗಳನ್ನು ನಿಮಗೆ ಅರ್ಪಿಸಬಹುದಾಗಿದೆ.

ಇದೆಲ್ಲಾ ಮುಗಿದ ನಂತರ, ಇಲ್ಲೂ ಕೂಡ ಆರತಿಯನ್ನು ನಿಮಗೆ ಮಾಡಬಹುದಾಗಿದೆ. ಆದರಿಲ್ಲಿ ನೀವು ಗಟ್ಟಿಯಾಗಿ ಹಾಡಿ ಲಕ್ಷ್ಮಿ ದೇವರಿಗೆ ಆರತಿಯನ್ನು ಬೆಳಗುವಂತಿಲ್ಲ. ಏಕೆಂದರೆ ಲಕ್ಷ್ಮಿ ದೇವಿಯು ಗಟ್ಟಿಯಾದ ಸ್ವರಗಳನ್ನು ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ಸಣ್ಣದಾಗಿ ಗಂಟೆಯ ನಿನಾದವನ್ನು ನೀವು ಆರತಿ ಬೆಳಗುವಾಗ ಕಾರ್ಯರೂಪಕ್ಕೆ ತರಬಹುದಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Lakshmi Puja Vidhi For Diwali

    Lakshmi puja is a very important part of the entire Diwali celebration. Goddess Lakshmi is said to be the daughter of the Rishi Bhrigu, who during the Samudra Manthan was reborn and then got married to Lord Vishnu.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more