Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ಹಿಂದೂ ಪೂಜೆಯ ವಿಧಿ ವಿಧಾನಗಳ ಸಂಕೇತಗಳು
ಹಿಂದೂ ಧರ್ಮವು ಪ್ರಪಂಚದ ಧರ್ಮಗಳಲ್ಲಿಯೇ ಅತ್ಯಂತ ಕುತೂಹಲಕಾರಿ ವಿಚಾರಗಳನ್ನು ತನ್ನಲ್ಲಿ ಒಳಗೊಂಡಿರುವ ಧರ್ಮವಾಗಿದೆ. ಹಬ್ಬಗಳು, ಸಂಪ್ರದಾಯಗಳು, ಪೂಜಾ ವಿಧಿಗಳು ಮತ್ತು ಆಚರಣೆಗಳು ಈ ಧರ್ಮವನ್ನು ಇತರ ಧರ್ಮಗಳಿಗಿಂತ ಬೇರೆಯಾಗಿ ನಿಲ್ಲಿಸುತ್ತದೆ. ಈ ಧರ್ಮದ ಅತ್ಯಂತ ಪ್ರಧಾನವಾದ ಲಕ್ಷಣವೆಂದರೆ, ಇದು ಮಾನವನ ಮನಸ್ಸು ಮತ್ತು ದೇವರನ್ನು ಪೂಜಾ ವಿಧಿಗಳ ಮೂಲಕ ಏಕೀಕರಿಸುತ್ತದೆ. ಇಲ್ಲಿ ಪೂಜೆ ಮುಂತಾದ ವಿಧಿಗಳೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲ ಆಚರಣೆಯಾಗಿರುತ್ತದೆ.
ನಾವೆಲ್ಲರು ನೋಡಿದಂತೆ ಭಕ್ತಾಧಿಗಳು ದೇವರಿಗೆ ಹಣ್ಣು, ಹೂವು, ಎಲೆಗಳು, ನೈವೇಧ್ಯ ಇತ್ಯಾದಿಗಳನ್ನು ಅರ್ಪಿಸುತ್ತಿರುತ್ತಾರೆ. ಆದರೆ ಎಂದಾದರು ಇವುಗಳನ್ನು ಏಕೆ ದೇವರಿಗೆ ಅರ್ಪಿಸಲಾಗುತ್ತದೆ ಎಂಬ ಬಗ್ಗೆ ಆಲೋಚಿಸಿದ್ದೀರಾ? ಇವೆಲ್ಲವನ್ನು ಕೇವಲ ತೋರಿಕೆಗಾಗಿ ಮಾತ್ರ ದೇವರ ಮುಂದೆ ಇಡಲಾಗುವುದಿಲ್ಲ. ಬದಲಿಗೆ ಇವುಗಳ ಹಿಂದೆ ಒಂದು ಮಹತ್ವದ ಕಾರಣ ಮತ್ತು ಅರ್ಥಗಳು ಅಡಗಿರುತ್ತವೆ.
ಪೂಜೆ ಎನ್ನುವುದು ದೇವರಿಗೆ ನಿಗದಿತ ವಸ್ತುಗಳನ್ನು ಅರ್ಪಿಸುವ ಮೂಲಕ ಮಾಡುವ ವಿಧಿಯಾದರೆ, ಪ್ರಾರ್ಥನೆಯನ್ನು ಪ್ರತಿದಿನ ಅಥವಾ ವಿಶೇಷ ದಿನಗಳನ್ನು ದೇವರ ವಿಗ್ರಹ ಅಥವಾ ಚಿತ್ರದ ಮುಂದೆ ಮಾಡುವ ಆಚರಣೆಯಾಗಿರುತ್ತದೆ. ಕೆಲವೊಂದು ಅರ್ಪಣಾ ಮನೋಭಾವದ ಭಕ್ತಾಧಿಗಳು ಪ್ರತಿನಿತ್ಯವು ತಮ್ಮ ಮನೆಯಲ್ಲಿಯೇ ಪೂಜಾ ಕೈಂಕರ್ಯಗಳನ್ನು ಮಾಡಿದರೆ, ಇನ್ನು ಕೆಲವರು ದೇವಾಲಯಕ್ಕೆ ಹೋಗಿ ಅಲ್ಲಿನ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಈ ಪೂಜಾ ವಿಧಿಗಳು ಆಗಮ ಶಾಸ್ತ್ರದ ಪ್ರಕಾರ ನಡೆಯುತ್ತವೆ. ಇದರಲ್ಲಿ ಸ್ವ-ಶುದ್ಧಿ, ದೇವತೆಗಳಿಗೆ ಪುಷ್ಪಗಳ ಅರ್ಪಣೆ, ನೈವೇಧ್ಯದ ಅರ್ಪಣೆ ಇತ್ಯಾದಿಗಳು ಇರುತ್ತವೆ. ಇದರ ಹಿಂದೆ ಪ್ರಾರ್ಥನೆ, ಸ್ತೋತ್ರಗಳು ಸಹ ನಡೆಯುತ್ತವೆ. ಹೆಚ್ಚಿನ ಮಾಹಿತಿಗೆ ಓದಿ ಹಿಂದೂ ಪೂಜಾ ವಿಧಿಗಳ ಸಂಕೇತ.
ಹಿಂದೂ ದೇವರುಗಳನ್ನು ದಿನದ ಪ್ರಕಾರ ಪೂಜಿಸಿ

ವಿಗ್ರಹ
ವೇದಗಳ ಪ್ರಕಾರ ವಿಗ್ರಹಾರಾಧನೆ ಎನ್ನುವುದು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವ ಅತ್ಯಂತ ಕೆಳ ಹಂತದ ಅಥವಾ ಮೊದಲನೆ ಮಾರ್ಗವಾಗಿದೆ. ವಿಗ್ರಹವು ದೇವರ ದೈಹಿಕ ಕಾಯವಾಗಿದೆ. ಇದು ಮಾನವರಿಗೆ ದೇವರ ಕುರಿತಾದ ಕಲ್ಪನೆಯನ್ನು ನೀಡಿ, ಭಕ್ತಿಗೆ ಅಗತ್ಯವಾದ ಏಕಾಗ್ರತೆಯನ್ನು ಒದಗಿಸುತ್ತದೆ. ಇಲ್ಲಿ ಭಕ್ತಾಧಿಗಳು ಮೊದಲು ದೇವರ ವಿಗ್ರಹವನ್ನು ನೋಡುತ್ತಾರೆ. ಆಗ ಅವರ ಏಕಾಗ್ರತೆಯು ದೇವರ ಮೇಲೆ ಸ್ಥಿರಗೊಳ್ಳುತ್ತದೆ, ನಂತರ ಅವರ ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಲು ಶುರು ಮಾಡುತ್ತಾರೆ. ಕೊನೆಗೆ ಅವನು ದೈವದ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ.

ಪುಷ್ಪಗಳು
ಪುಷ್ಪಗಳು ನಮ್ಮೊಳಗೆ ಅರಳುವ ಒಳ್ಳೆಯತನವನ್ನು ಪ್ರತಿನಿಧಿಸುತ್ತವೆ.

ಫಲಗಳು
ಫಲಗಳು ಒಂದು ಬಗೆಯ ಬೇರ್ಪಡುವಿಕೆ, ಸ್ವಯಂ-ತ್ಯಾಗ ಮತ್ತು ದೇವರಿಗೆ ಸಂಪೂರ್ಣವಾಗಿ ಅರ್ಪಣೆಯಾಗುವ ತತ್ವವನ್ನು ವ್ಯಕ್ತಪಡಿಸುತವೆ.

ತೆಂಗಿನಕಾಯಿ
ತೆಂಗಿನಕಾಯಿಯನ್ನು ಸಂಸ್ಕೃತದಲ್ಲಿ "ಶ್ರೀಫಲ" ಎಂದು ಕರೆಯುತ್ತಾರೆ. ಶ್ರೀ ಫಲ ಎಂದರೆ ದೇವರ ಫಲ ಎಂದರ್ಥ. ಹಾಗಾಗಿ ತೆಂಗಿನಕಾಯಿ ದೇವರಿಗೆ ಅತ್ಯಾವಶ್ಯಕವಾದ ಹಣ್ಣಾಗಿ ಗುರುತಿಸಲ್ಪಟ್ಟಿದೆ. ತೆಂಗಿನಕಾಯಿಯನ್ನು ಒಡೆಯುವುದು ನಿಮ್ಮ ಅಹಂ ಅನ್ನು ತ್ಯಜಿಸಿ, ದೇವರಲ್ಲಿ ಶರಣಾಗುವುದನ್ನು ತಿಳಿಸುವ ವಿಧಾನ ಇದಾಗಿದೆ. ಅಜ್ಞಾನ ಮತ್ತು ಅಹಂ ಎಂಬ ತೆಂಗಿನಕಾಯಿಯನ್ನು ಒಡೆದರೆ ಅದರಲ್ಲಿರುವ ಬಿಳಿಯ ಭಾಗದಂತೆ ಜ್ಞಾನವು ಸಹ ನಮಗೆ ಕಾಣುತ್ತದೆ ಎಂಬ ತತ್ವ ಇದರಲ್ಲಿ ಅಡಗಿದೆ.

ದೀಪಗಳು
ಹಿಂದೂ ಧರ್ಮದಲ್ಲಿ ದೀಪಗಳು ಪವಿತ್ರತೆಯ , ದೇವರ, ಅದೃಷ್ಟದ ಮತ್ತು ಶಕ್ತಿಯ ಸಂಕೇತ. ದೀಪ ಎಂದರೆ ಬೆಳಕು. ಬೆಳಕಿನ ಅಸ್ತಿತ್ವವು ಕತ್ತಲೆ ಮತ್ತು ದುಷ್ಟ ಶಕ್ತಿಗಳನ್ನು ಹೊರದಬ್ಬುವ ಸಂಕೇತವಾಗಿರುತ್ತದೆ.

ಅಗರಬತ್ತಿ
ಅಗರಬತ್ತಿಗಳನ್ನು ಒಟ್ಟಿಗೆ ಉರಿಸುವುದು ನಮಗೆಲ್ಲ ಗೊತ್ತು. ಇದು ನಮ್ಮ ಜೀವನದಲ್ಲಿ ನಮಗಿರುವ ಹಲವಾರು ಆಸೆಗಳ ಸಂಕೇತಗಳಾಗಿವೆ.

ಪೂರ್ಣ ಕುಂಭ
ಮಣ್ಣಿನ ಮಡಿಕೆ ಅಥವಾ ಬಿಂದಿಗೆಯನ್ನು "ಪೂರ್ಣ ಕುಂಭ" ಎಂದು ಕರೆಯಲಾಗುತ್ತದೆ. ಇದರಲ್ಲಿ ಪೂರ್ಣ ಪ್ರಮಾಣದ ನೀರು ಇರಬೇಕು, ತಾಜಾ ಮಾವಿನ ಎಲೆಗಳನ್ನು ಇದಕ್ಕೆ ಕಟ್ಟಿರಬೇಕು ಮತ್ತು ಇದರ ಮೇಲೆ ಒಂದು ತೆಂಗಿನಕಾಯಿಯನ್ನು ಇಟ್ಟಿರಬೇಕು. ಇದನ್ನು ಸಾಮಾನ್ಯವಾಗಿ ಮುಖ್ಯ ದೇವರ ಮುಂದೆ ಅಥವಾ ಪೂಜೆ ಮಾಡುವ ಸ್ಥಳದಲ್ಲಿ ಪೂಜೆ ಆರಂಭಿಸುವ ಮೊದಲು ಇರಿಸಿರುತ್ತಾರೆ. ಪೂರ್ಣ ಕುಂಭ ಎಂದರೆ ತುಂಬಿದ ಮಡಿಕೆ ಎಂದರ್ಥ. ಇಲ್ಲಿ ಆ ಬಿಂದಿಗೆ ಅಥವಾ ಕುಂಭವು ಭೂದೇವಿಯನ್ನು, ನೀರು ಎಂಬುದು ಜೀವ ಜಲವನ್ನು, ಎಲೆಗಳು ಜೀವನವನ್ನು ಮತ್ತು ತೆಂಗಿನಕಾಯಿಯು ದೇವರ ಪ್ರಜ್ಞೆಯನ್ನು ಪ್ರತಿನಿಧಿಸುತ್ತವೆ.

ಲಕ್ಷ್ಮೀ ಹೋಮ
ಲಕ್ಷ್ಮೀಯು ಹೊಸ ಮನೆಯಲ್ಲಿ ಐಶ್ವರ್ಯ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಆಕೆಯನ್ನು ಆಹ್ವಾನಿಸುತ್ತ ಈ ಹೋಮವನ್ನು ಮಾಡಲಾಗುತ್ತದೆ.

ನವಗ್ರಹ ಹೋಮ
ನವಗ್ರಹಗಳನ್ನು ತೃಪ್ತಿ ಪಡಿಸಲು ಈ ಹೋಮವನ್ನು ಮಾಡಲಾಗುತ್ತದೆ. ಒಂಬತ್ತು ಗ್ರಹಗಳು ಮನೆಯನ್ನು ಕರುಣಿಸಲಿ, ತಮ್ಮ ಕೃಪಾ ಕಟಾಕ್ಷವನ್ನು ಮನೆಯವರ ಮೇಲೆ ತೋರಲಿ ಎಂದು ಈ ಪೂಜೆಯನ್ನು ಮಾಡಲಾಗುತ್ತದೆ.

ನೈವೇಧ್ಯ ಅಥವಾ ಪ್ರಸಾದ
ದೇವರಿಗೆ ನಾವು ಅರ್ಪಿಸುವ ನೈವೇಧ್ಯವು ನಮ್ಮಲ್ಲಿರುವ ಅಜ್ಞಾನ ಪ್ರಜ್ಞೆಯನ್ನು ತೋರಿಸುತ್ತದೆ. ದೇವರ ಮುಂದೆ ನಾವೇನು ಅಲ್ಲ ಎಂಬ ಅರ್ಥದಲ್ಲಿ ನಾವು ನೈವೇಧ್ಯವನ್ನು ದೇವರಿಗೆ ಅರ್ಪಿಸುತ್ತೇವೆ. ಈ ನೈವೇಧ್ಯವನ್ನು ದೇವರಿಗೆ ಅರ್ಪಿಸಿದ ನಂತರ ದೇವರ ಪ್ರಜ್ಞೆಯೆಂಬ ಬೆಳಕು ಮತ್ತು ಜ್ಞಾನ ನಮ್ಮಲ್ಲಿ ಮೂಡಿದಾಗ ನಮಗೆ ಧಾರ್ಮಿಕತೆಯ ಜ್ಞಾನೋದಯವು ಮೂಡುತ್ತದೆ. ಈ ನೈವೇಧ್ಯವನ್ನು ನಾವು ಸೇವಿಸುವ ಮೂಲಕ ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಅಲ್ಲ ಎಂಬ ತತ್ವವನ್ನು ನಾವು ಸಾರುತ್ತೇವೆ.



Click it and Unblock the Notifications











