Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನೀವರಿಯದ ಸಾವಿನ ಕರಾಳ ಲಕ್ಷಣಗಳು!
ಸಾವು ಎಂದರೆ ಎಲ್ಲರಿಗೂ ಭಯ. ಅದರ ಕಲ್ಪನೆ ಮಾಡಿಕೊಳ್ಳುವುದೆಂದರೆ ಮೈಯಲ್ಲಿ ನಡುಕ ಉಂಟಾಗುತ್ತದೆ. ಹುಟ್ಟಿದವರು ಸಾಯಲೇಬೇಕು ಎಂಬ ಮಾತಿನಂತೆ ಭೂಮಿಯಲ್ಲಿರುವ ಸಕಲ ಚರಾಚರ ವಸ್ತುಗಳಿಗೂ ಸಾವು ಕಟ್ಟಿಟ್ಟ ಬುತ್ತಿ.
ಸಾವಿನ ನಂತರದ ನಮ್ಮ ಬದುಕು ಹೇಗಿರುತ್ತದೆ ಎಂಬುದು ನಮ್ಮಲ್ಲಿ ಧುತ್ತನೇ ಎದುರಾಗುವ ಪ್ರಶ್ನೆಯಾಗಿದೆ. ಸಾವಿನ ನಂತವೂ ಒಂದು ಜಗತ್ತಿದೆ ಎಂದು ಪುರಾಣಗಳು ಹೇಳುತ್ತವೆ. ಇದು ಕೇವಲ ಕಟ್ಟು ಕಥೆಯೇ ಅಥವಾ ನಿಜವೇ, ಇಲ್ಲ ನಮ್ಮ ಭ್ರಮಯೇ ಎಂಬುದು ಬಿಡಿಸಲಾಗದ ಕಗ್ಗಂಟಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸೆಲೆಬ್ರಿಟಿಗಳ ನಿಗೂಢ ಸಾವುಗಳು
ಆದರೂ ಸಾವು ಮೌನವಾಗಿ ನಮ್ಮನ್ನು ಸಮೀಪಿಸುತ್ತದೆ. ಇಂದು ಕಂಡವರು ನಾಳೆ ಕಾಣರು ಎಂಬಂತೆ ಸಾವು ತನ್ನ ಕಬಂಧ ಬಾಹುಗಳಲ್ಲಿ ನಮ್ಮನ್ನು ಎಲ್ಲಿ ಹೇಗೆ ಬಂಧಿಸುತ್ತದೆಯೋ ಎಂಬುದು ಯಾರಿಗೂ ತಿಳಿಯದ ರಹಸ್ಯವಾಗಿದೆ. ಆದರೂ ಭಾರತೀಯ ಧರ್ಮಗ್ರಂಥಗಳ ಪ್ರಕಾರ ಮರಣ ಸಮೀಪಿಸಿದೆ ಎಂದು ಸೂಚಿಸುವ ಕೆಲವೊಂದು ಲಕ್ಷಣಗಳಿದ್ದು ಅವುಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ.
ಶಿವ ಪುರಾಣದಲ್ಲಿ ಮರಣ ಲಕ್ಷಣಗಳನ್ನು ಪ್ರಸ್ತುತಪಡಿಸಲಾಗಿದೆ. ಶಿವ ಪುರಾಣದ ಪ್ರಕಾರ, ಒಮ್ಮೆ ಪಾರ್ವತಿ ದೇವಿಯು ಶಿವನಲ್ಲಿ ಮರಣದ ಸಂಕೇತಗಳು ಯಾವುವು? ಅವನು/ಅವಳು ತಾನು ಸಾಯುತ್ತಿದ್ದೇನೆ ಎಂಬುದನ್ನು ಹೇಗೆ ಅರಿತುಕೊಳ್ಳುತ್ತಾರೆ? ಎಂದು ಕೇಳಿದಾಗ ನಂತರ ಶಿವನು ದೇವಿಗೆ ಮರಣದ ಬಗೆಗೆ ಎಲ್ಲವನ್ನೂ ವಿವರಿಸುತ್ತಾರೆ.
ಮನುಷ್ಯನಲ್ಲಿ ಕಂಡುಬರುವ 10 ಲಕ್ಷಣಗಳ ಮೂಲಕ ಆತ ಅಥವಾ ಆಕೆ ಮರಣಕ್ಕೆ ಸಮೀಪವಾಗುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಮರಣ ಲಕ್ಷಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳಲು ನೀವೂ ಉತ್ಸುಕರಾಗಿದ್ದೀರಾ? ಹಾಗಿದ್ದರೆ ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮಲೇಶಿಯಾ ವಿಮಾನದಂತೆ ಸುಳಿವೇ ಸಿಕ್ಕದ 6 ಕಾಣೆಯಾದ ವಿಮಾನಗಳು!

ಮರಣ ಲಕ್ಷಣಗಳು # 1:
ಮನುಷ್ಯನ ತ್ವಚೆಯ ಬಣ್ಣವು ತಿಳಿ ಹಳದಿ ಅಥವಾ ಬಿಳಿ ಸ್ವಲ್ಪ ಕೆಂಪಾಗಿದ್ದರೆ, ಇದು ಆ ವ್ಯಕ್ತಿ 6 ತಿಂಗಳಲ್ಲಿ ಸಾಯುತ್ತಾರೆ ಎಂಬುದನ್ನು ಸೂಚಿಸುತ್ತದೆ.

ಮರಣ ಲಕ್ಷಣ # 2:
ನೀರು ಅಥವಾ ಕನ್ನಡಿಯಲ್ಲಿ ವ್ಯಕ್ತಿಗೆ ತನ್ನ ಪ್ರತಿಬಿಂಬವನ್ನು ಕಾಣಲು ಸಾಧ್ಯವಾಗದಿದ್ದರೆ, ಆ ವ್ಯಕ್ತಿ ಆರು ತಿಂಗಳಲ್ಲಿ ಸಾವನ್ನಪ್ಪುತ್ತಾರೆ ಎಂಬುದು ತಿಳಿದುಬರುತ್ತದೆ.

ಮರಣ ಲಕ್ಷಣ # 3:
ಮನುಷ್ಯನಿಗೆ ಪ್ರತಿಯೊಂದೂ ಕಪ್ಪಾಗಿ ಕಂಡುಬಂದರೆ, ಕೂಡಲೇ ಸಾಯುತ್ತಾನೆ ಎಂಬುದು ಗೊತ್ತಾಗುತ್ತದೆ.

ಮರಣ ಲಕ್ಷಣ # 4:
ವ್ಯಕ್ತಿಯ ಎಡ ಕೈಯಲ್ಲಿ ಸೆಳೆತವುಂಟಾಗುತ್ತಿದ್ದರೆ ವ್ಯಕ್ತಿ ಕೇವಲ ಒಂದು ತಿಂಗಳು ಮಾತ್ರ ಬದುಕುತ್ತಾರೆ ಎಂಬುದಾಗಿದೆ.

ಮರಣ ಲಕ್ಷಣ # 5:
ಮಾನವನ ಅಂಗಾಂಗಗಳು ಕಲ್ಲಿನಂತೆ ಕಠಿಣವಾದಲ್ಲಿ, ಆಕೆ/ಆತ ಇನ್ನಾರು ತಿಂಗಳಲ್ಲಿ ಸಾಯುತ್ತಾರೆ ಎಂದಾಗಿದೆ.

ಮರಣ ಲಕ್ಷಣ # 6:
ಚಂದ್ರ, ಸೂರ್ಯ ಅಥವಾ ಬೆಂಕಿಯಿಂದ ಪ್ರತಿಫಲಿತ ಬೆಳಕನ್ನು ನೋಡಲು ವ್ಯಕ್ತಿಯು ವಿಫಲನಾದರೆ ಅವರು ಬೇಗನೇ ಸಾಯುತ್ತಾರೆ ಎಂದಾಗಿದೆ.

ಮರಣ ಲಕ್ಷಣ # 7:
ಮನುಷ್ಯನ ನಾಲಿಗೆ ಉಬ್ಬುವುದು ಮತ್ತು ವಸಡಿನಲ್ಲಿ ಕೀವು ಪ್ರಾರಂಭಗೊಂಡರೆ ವ್ಯಕ್ತಿ ಹೆಚ್ಚು ಕಾಲ ಬದುಕುವುದಿಲ್ಲ ಎಂಬುದು ನಿಜವಾಗುತ್ತದೆ.

ಮರಣ ಲಕ್ಷಣ # 8:
ಮನುಷ್ಯನಿಗೆ ಆಕಾಶದಲ್ಲಿ ಧ್ರವ ನಕ್ಷತ್ರವನ್ನು ಕಾಣಲು ಸಾಧ್ಯವಾಗದಿದ್ದರೆ ಇನ್ನಾರು ತಿಂಗಳಲ್ಲಿ ಸಾವು ಖಚಿತ ಎಂಬುದು ಇದರಿಂದ ತಿಳಿದುಬರುತ್ತದೆ.

ಮರಣ ಲಕ್ಷಣ # 9:
ಮನುಷ್ಯನಿಗೆ ಸೂರ್ಯ, ಚಂದ್ರ ಮತ್ತು ಆಕಾಶ ಕೆಂಪು ಬಣ್ಣದಲ್ಲಿ ಕಂಡುಬಂದರೆ, ಮನುಷ್ಯ ಬೇಗನೇ ಸಾಯುತ್ತಾನೆ ಎಂದಾಗಿದೆ.

ಮರಣ ಲಕ್ಷಣ # 10:
ಗೂಬೆ, ಖಾಲಿಯಾದ ಅಥವಾ ನಾಶವಾದ ಹಳ್ಳಿಯ ಕನಸು ಬಿದ್ದಲ್ಲಿ, ಆತನ/ಆಕೆಯ ಸಾವು ಸನ್ನಿಹಿತವಾಗಿದೆ ಎಂಬುದು ತಿಳಿದುಬರುತ್ತದೆ.



Click it and Unblock the Notifications











