For Quick Alerts
ALLOW NOTIFICATIONS  
For Daily Alerts

ನವರಾತ್ರಿ 2019 ವಿಶೇಷ: ದುರ್ಗಾ ಮಾತೆಯ ನವವರ್ಣಗಳ ಮಹತ್ವ

By Anuradha Yogesh
|

ಈ ಸಾಲಿನ (2019) ನವರಾತ್ರಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ....ಎಲ್ಲ ಕಡೆ ಹಬ್ಬದ ಸಂಭ್ರಮ ಕಾಣುತ್ತಿದೆ. ನವರಾತ್ರಿ ಎಂದರೆ ಸುಂದರವಾದ ದಿರಿಸು ಧರಿಸಿ ಕುಟುಂಬದ ಜೊತೆಗೆ 'ಗರ್ಬಾ' ನೃತ್ಯ ಮಾಡುವುದೇ ವಿಶೇಷ. ಹೆಣ್ಣುಮಕ್ಕಳು, ಹರೆಯದ ಹುಡುಗಿಯರು ಈ ಹಬ್ಬಕ್ಕಾಗಿ ಕಾಯುವುದರಲ್ಲಿ ಸಂಶಯವೇ ಇಲ್ಲ..ನವರಾತ್ರಿಯ ಒಂಭತ್ತು ದಿನಗಳಲ್ಲಿ, ಪ್ರತಿದಿನವೂ ಒಂದೊಂದು ಬಣ್ಣಕ್ಕೆ ಮಹತ್ವವಿದೆ. ಹೆಣ್ಣುಮಕ್ಕಳು ಪ್ರತಿದಿನದಂದು ಸೂಕ್ತ ಬಣ್ಣದ ದಿರಿಸು ಧರಿಸಿ ಸಂಭ್ರಮ ಪಡುತ್ತಾರೆ.

ನವರಾತ್ರಿಯಲ್ಲಿ ಪ್ರತಿದಿನಕ್ಕೆ ಒಂದು ವಿಶೇಷವಿದೆಯಂದು ಬಹಳ ಜನಕ್ಕೆ ಗೊತ್ತೇ ಇದೆ. ದುರ್ಗಾದೇವಿಯ ಒಂಬತ್ತು ರೂಪಗಳನ್ನು ಒಂದೊಂದು ದಿನ ಪೂಜಿಸಲಾಗುತ್ತದೆ. ಆದರೆ ಬಹಳಷ್ಟು ಜನರಿಗೆ ಬಣ್ಣದ ಮಹತ್ವ ಗೊತ್ತಿಲ್ಲ. ಈ ಲೇಖನದಲ್ಲಿ ಒಂಬತ್ತೂ ಬಣ್ಣಗಳ ಮಹತ್ವ ತಿಳಿಯೋಣ ಬನ್ನಿ.

Durga

ಮೊದಲ ದಿನ(ಕೆಂಪು ಬಣ್ಣ)
ನವರಾತ್ರಿಯ ಮೊದಲ ದಿನಕ್ಕೆ 'ಪ್ರತಿಪದ' ಎನ್ನುತ್ತಾರೆ. ದುರ್ಗಮಾತೆಗೆ 'ಶೈಲಪುತ್ರಿ' ಎಂದು ಕರೆಯುತ್ತಾರೆ(ಪರ್ವತಗಳ ಸುಪುತ್ರಿ). ಈ ದಿನದಂದು ದುರ್ಗೆಯನ್ನು ಶಿವನ ಪತ್ನಿಯಾಗಿ ಪೂಜಿಸಲಾಗುತ್ತದೆ. ಕೆಂಪು ಬಣ್ಣವು ಉತ್ಸಾಹ ಮತ್ತು ಸಂಭ್ರಮಗಳನ್ನು ಪ್ರತಿಬಿಂಬಿಸುತ್ತದೆ, ಹಬ್ಬವನ್ನು ಪ್ರಾರಂಭಿಸಲು ಅತಿ ಸೂಕ್ತವಾದ ಬಣ್ಣ.

ಎರಡನೆಯ ದಿನ(ಕಡುನೀಲಿ ಬಣ್ಣ)
ದ್ವಿತೀಯ ದಿನ ದುರ್ಗೆಯು ಬ್ರಹ್ಮಚಾರಿಣಿಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಸಂತೋಷ ಮತ್ತು ಸಮೃದ್ಧಿಯನ್ನು ಕೊಡುತ್ತಾಳೆ. ಕಡುನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯನ್ನು ಪ್ರತಿಪಾದಿಸುತ್ತದೆ.

ಮೂರನೆಯ ದಿನ(ಹಳದಿ ಬಣ್ಣ)
ತೃತಿಯ ದಿನದಂದು ದೇವಿಯು 'ಚಂದ್ರಕಾಂತೆ'ಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ರೂಪದಲ್ಲಿ ದುರ್ಗೆಯ ಹಣೆಯ ಮೇಲೆ ಅರ್ಧಚಂದ್ರಾಕೃತಿಯಿಂದ ಅಲಂಕಾರ ಮಾಡುತ್ತಾರೆ. ಇದು ಸೌಂದರ್ಯ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತದೆ. 'ಚಂದ್ರಕಾಂತೆ'ಯು ರಾಕ್ಷಸರೊಂದಿಗೆ(ದುಷ್ಟ ಶಕ್ತಿಗಳೊಂದಿಗೆ) ಹೋರಾಡುತ್ತಾಳೆ ಎಂಬ ಪ್ರತೀತಿ ಇದೆ. ಎಲ್ಲರ ಮನಸ್ಸಿನಲ್ಲಿ ಹಳದಿ ಬಣ್ಣವು ಉತ್ಸಾಹವನ್ನು ತುಂಬುತ್ತದೆ.

ನಾಲ್ಕನೆಯ ದಿನ(ಹಸಿರು ಬಣ್ಣ)
ಚತುರ್ಥಿಯ ದಿನದಂದು ದೇವಿಯು 'ಕುಶ್ಮಾಂದೆ'ಯ ರೂಪ ಪಡೆಯುತ್ತಾಳೆ. ಈಕೆಯನ್ನು ಜಗತ್ತಿನ ಸೃಷ್ತಿಕರ್ತೆ ಎನ್ನಲಾಗುತ್ತದೆ. ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಾಳೆ ಎಂಬ ನಂಬಿಕೆಯಿದೆ.

ಐದನೆಯ ದಿನ(ಬೂದು ಬಣ್ಣ)
ಪಂಚಮಿಯಂದು ದೇವಿಯು 'ಸ್ಕಂದ ಮಾತೆ'ಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಕಾರ್ತಿಕೇಯನನ್ನು ತನ್ನ ಶಕ್ತಿಯುತವಾದ ಕೈಯಲ್ಲಿ ಹಿಡಿದಿರುತ್ತಾಳೆ. ಬೂದು ಬಣ್ಣವು ತಾಯಿ ಮಗುವನ್ನು ರಕ್ಷಿಸಲು ಯಾವದೇ ಹಂತಕ್ಕು ಹೋಗಲೂ ತಯಾರಿರುತ್ತಾಳೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಆರನೆಯ ದಿನ(ಕೇಸರಿ)
ಆರನೆಯ ದಿನದಂದು ದೇವಿಯು 'ಕಾತ್ಯಾಯನಿ'ಯ ರೂಪ ಧರಿಸುತ್ತಾಳೆ. ಕೆಲವು ದಂತಕತೆಗಳ ಪ್ರಕಾರ 'ಕಾತ' ಎಂಬ ಋಷಿಯು ದೇವಿ ದುರ್ಗೆಯನ್ನು ಮಗಳಾಗಿ ಪಡೆಯಲು ಯಜ್ಞ್ ಮಾಡಿದ. ಅವನ ಭಕ್ತಿಗೆ ಮೆಚ್ಚಿ ದುರ್ಗೆಯು ಪ್ರಸನ್ನಳಾಗಿ, ಕೇಸರಿ ಬಣ್ಣದ ದಿರಿಸು ಧರಿಸಿ ಮಗಳಾಗಿ ಜನಿಸಿ ಬರುತ್ತಾಳೆ. ಈ ಬಣ್ಣವು ಧೈರ್ಯವನ್ನು ಪ್ರತಿಬಿಂಬಿಸಿತ್ತದೆ.

ಏಳನೆಯ ದಿನ(ಬಿಳಿಯ ಬಣ್ಣ)
ಏಳನೆಯ ದಿನದಂದು ದೇವಿಯನ್ನು 'ಕಾಳರಾತ್ರಿ' ಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ದೇವಿಯನ್ನು ಬಿಳಿಯ ಬಣ್ಣದ ಸೀರೆಯನ್ನು ಉಡಿಸಿ, ಕ್ರೋಧಭರಿತ ಕಣ್ಣುಗಳಿಂದ ಅಲಂಕರಿಸುತ್ತಾರೆ. ಬಿಳಿಯ ಬಣ್ಣವು ಭಕ್ತಿ ಮತ್ತು ಶಾಂತಿಯ ಪ್ರತೀಕವಾಗಿದೆ. ದೇವಿಯು ಭಕ್ತರನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆಯನ್ನು ಪ್ರತಿಪಾದಿಸಲು ಈ ಅಲಂಕಾರ ಮಾಡುತ್ತಾರೆ.

ಎಂಟನೆಯ ದಿನ (ಗುಲಾಬಿ ಬಣ್ಣ)
ಅಷ್ಟಮಿಯಂದು ದೇವಿಯನ್ನು ಎಲ್ಲ 'ಪಾಪ-ಪರಿಹಾರಕಳು' ಎಂದು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವು ಭರವಸೆ ಮತ್ತು ನವೀನತೆಯ ಪ್ರತೀಕವಾಗಿದೆ.

ಒಂಬತ್ತನೆಯ ದಿನ(ತಿಳಿ ನೀಲಿ)
ನವಮಿಯಂದು ದೇವಿಯು 'ಸಿದ್ಧಿಧಾತ್ರಿ'ಯ ರೂಪ ಧರಿಸುತ್ತಾಳೆ. ತಿಳಿನೀಲಿ ಬಣ್ಣದಿಂದ ಅಲಂಕರಿಸಲಾಗುತ್ತದೆ. 'ಸಿದ್ಧಿಧಾತ್ರಿ'ಗೆ, ಚಮತ್ಕಾರಕ ಶಕ್ತಿಗಳಿವೆಯೆಂದು ನಂಬಲಾಗುತ್ತದೆ. ತಿಳಿನೀಲಿ ಬಣ್ಣವು ನಿಸರ್ಗದ ಸೌಂದರ್ಯವನ್ನು ಪ್ರತಿಪಾದಿಸುತ್ತದೆ.

English summary

Significance of various colours in Navratri

Navratri is just around the corner and everyone seems to be very excited for this festival. Navratri means donning a vibrant attire and dancing "Garba" along with family and friends; and hence, women and young girls specially look forward to it throughout the year. During the 9 days of Navratri, there is a particular colour code for each day. Women dress up in that specific colour and admire the beautiful costumes of each other.
X
Desktop Bottom Promotion