For Quick Alerts
ALLOW NOTIFICATIONS  
For Daily Alerts

ಅಯ್ಯಪ್ಪ ದೀಕ್ಷೆ ತೆಗೆದುಕೊಂಡರೆ ಈ ನಿಯಮಗಳನ್ನು ಮುರಿಯುವಂತಿಲ್ಲ

|

ಅಯ್ಯಪ್ಪ ಸ್ವಾಮಿ....... ಎಂದು ಭಕ್ತ ಮನದಲ್ಲಿ ತುಂಬಿ ಕರೆದರೆ ಆ ಕರೆ ಅಯ್ಯಪ್ಪ ಸ್ವಾಮಿಗೆ ಕೇಳುತ್ತದೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆ, ಈ ನಂಬಿಕೆಗೆ ತಕ್ಕಂತೆ ಹಲವು ಭಕ್ತರ ಬದುಕಿನಲ್ಲಿ ಹಲವು ಪವಾಡಗಳು ನಡೆದಿದೆ.

Ayyappa Deeksha

ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಆ ನಿಯಮಗಳೇನು ಎಂದು ನೋಡೋಣ ಬನ್ನಿ:

1. ಬೆಳಗ್ಗೆ-ಸಂಜೆ ಸ್ನಾನ

1. ಬೆಳಗ್ಗೆ-ಸಂಜೆ ಸ್ನಾನ

ಬೆಳಗ್ಗೆ ಹಾಗೂ ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಬೆಳಗ್ಗೆ ಹೊತ್ತು ಸ್ನಾನ ಮಾಡಿದಾಗ ದೇಹ ಶುದ್ಧವಾಗುವುದು, ಆ ದಿನದ ಕೆಲಸವನ್ನು ಲವಲವಿಕೆಯಿಂದ ಮಾಡಲು ದೇಹದಲ್ಲಿ ಚೈತನ್ಯ ಮೂಡುತ್ತದೆ, ಸಂಜೆ ಸ್ನಾನ ಮಾಡುವುದರಿಂದ ದಣಿದ ದೇಹಕ್ಕೆ ಉಲ್ಲಾಸ ದೊರೆಯುತ್ತದೆ ಅಲ್ಲದೆ ಸುಖ ನಿದ್ದೆ ದೊರೆಯುವುದು. ನದಿಯಲ್ಲಿ ಅಥವಾ ಬೋರ್‌ವೆಲ್‌ನಲ್ಲಿ ಸ್ನಾನ ಮಾಡುವುದಾದರೆ ಬೆಳಗ್ಗೆ ಹೊತ್ತಿನಲ್ಲಿ ನೀರು ತುಂಬಾ ತಣ್ಣನೆ ಇರಲ್ಲ, ಅದು ಸ್ವಲ್ಪ ಬೆಚ್ಚಗೆ ಇರುತ್ತದೆ. ನದಿ ನೀರಿನಲ್ಲಿ ಸ್ನಾನ ಮಾಡಿದರೆ ಮನಸ್ಸಿಗೆ ಹುರುಪು ತುಂಬಿದಂತೆ ಅನಿಸುವುದು.

2. ಬೆಳಗ್ಗೆ-ಸಂಜೆ ಪೂಜೆ

2. ಬೆಳಗ್ಗೆ-ಸಂಜೆ ಪೂಜೆ

ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ, ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಅಯ್ಯಪ್ಪ ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು. ದೇವರ ಪೂಜೆಯಿಂದ ಏಕಾಗ್ರತೆ ಹೆಚ್ಚುವುದು. ಅಯ್ಯಪ್ಪ ಭಕ್ತರು ಮಾಲೆ ಹಾಕಿದ ಮೇಲೆ 24 ಗಂಟೆಯೂ ಅಯ್ಯಪ್ಪ ಸ್ವಾಮಿಯ ನೆನೆಯುತ್ತಾ ಇರಬೇಕು. ಈ ಸಮಯದಲ್ಲಿ ಅನೇಕ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಿ ಅಯ್ಯಪ್ಪಭಕ್ತರು ಒಟ್ಟಾಗಿ ಸೇರೆ ದೇವರ ಭಜನೆಗಳನ್ನು ಹಾಡಲಾಗುವುದು.

3. ಸ್ವಾಸ್ತಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ

3. ಸ್ವಾಸ್ತಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ

ಇದು ಕೂಡ ಬಹುಮುಖ್ಯವಾದ ನಿಯಮವಾಗಿದ್ದು ಇದನ್ನು ಪಾಲಿಸಬೇಕಾಗಿದೆ. ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದವರಿಗೆ ಮಾಡುವ ಆಹಾರವನ್ನು ತುಂಬಾ ಮಡಿಯಿಂದ ಮಾಡಬೇಕು, ಅವರಿಗೆ ಬಡಿಸುವ ಮುನ್ನ ಇತರರು ಆಹಾರದ ರುಚಿ ನೋಡುವಂತಿಲ್ಲ, ಅಲ್ಲದೆ ಮಾಲೆ ಹಾಕಿದವರು ತಂಗಳು ಆಹಾರ ಸೇವಿಸುವಂತಿಲ್ಲ.

ಮಾಂಸ, ಮದ್ಯ, ಧೂಮಪಾನ ಇವುಗಳನ್ನು ಮಾಡುವಂತಿಲ್ಲ.

5. ಅನ್ನ ದಾನ

5. ಅನ್ನ ದಾನ

ಅಯ್ಯಪ್ಪಸ್ವಾಮಿಗೆ ಮಾಲೆ ಹಾಕಿದಾಗ ಅನ್ನದಾನ ಮಾಡಬೇಕು. ಅನ್ನದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಆದ್ದರಿಂದ ಸ್ವಲ್ಪ ಜನರಿಗಾದರೂ ಅನ್ನದಾನ ಮಾಡಬೇಕು, ಅದರಲ್ಲೂ ಬಡವರಿಗೆ, ನಿರ್ಗತಿಕರಿಗೆ ಅನ್ನದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಸಿಗುವುದು.

6. ನೆಲದ ಮೇಲೆ ಮಲಗಬೇಕು

6. ನೆಲದ ಮೇಲೆ ಮಲಗಬೇಕು

ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದ ಮೇಲೆ ವೈಭೋಗದ ಜೀವನ ನಡೆಸಬಾರದು, ಬೆಡ್‌ ಬಳಸಬಾರದು, ನೆಲದ ಮೇಲೆ ಚಾಪೆ ಹಾಸಿ ಮಲಗಬೇಕು.

6. ನೆಲದ ಮೇಲೆ ಮಲಗಬೇಕು

6. ನೆಲದ ಮೇಲೆ ಮಲಗಬೇಕು

ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದ ಮೇಲೆ ವೈಭೋಗದ ಜೀವನ ನಡೆಸಬಾರದು, ಬೆಡ್‌ ಬಳಸಬಾರದು, ನೆಲದ ಮೇಲೆ ಚಾಪೆ ಹಾಸಿ ಮಲಗಬೇಕು.

7. ಹೆಚ್ಚು ಮಾತನಾಡಬಾರದು

ಅಯ್ಯಪ್ಪ ಸ್ವಾಮಿ ವ್ರತ ಮಾಡುವವರು ಹೆಚ್ಚು ಮಾತನಾಡಬಾರದು, ಅಂದರೆ ಅನಗ್ಯತ ಮಾತುಗಳಿಂದ ಸಮಯ ಕಳೆಯಬಾರದು, ಸಾಧ್ಯವಾದಷ್ಟು ದೇವರ ಧ್ಯಾನದಲ್ಲಿ ಕಳೆಯಬೇಕು.

8. ಬೇರೆಯವರಿಗೆ ಸಹಾಯ ಮಾಡಿ

8. ಬೇರೆಯವರಿಗೆ ಸಹಾಯ ಮಾಡಿ

ದೀಕ್ಷೆ ತೆಗೆದುಕೊಂಡವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಅಯ್ಯಪ್ಪಸ್ವಾಮಿ ಕಷ್ಟ ಅಂತ ಬಂದವರ ಕೈ ಬಿಡಲ್ಲ, ಅದೇ ಅವನ ಭಕ್ತರು ಕೂಡ ಕಷ್ಟದಲ್ಲಿ ಇದ್ದವರಿಗೆ ತಮ್ಮಿಂದ ಆದ ಸಹಾಯ ಮಾಡಿದರೆ ದೇವರು ಮೆಚ್ಚಿಕೊಳ್ಳುತ್ತಾನೆ.

ಬೇರೆಯವರನ್ನು ಆದಷ್ಟೂ ಖುಷಿಯಿಂದ ಇಡಬೇಕು.

8. ಕಟ್ಟುನಿಟ್ಟಿನ ಬ್ರಹ್ಮಚಾರ್ಯ ಪಾಲಿಸಬೇಕು

8. ಕಟ್ಟುನಿಟ್ಟಿನ ಬ್ರಹ್ಮಚಾರ್ಯ ಪಾಲಿಸಬೇಕು

ಅಯ್ಯಪ್ಪ ಭಕ್ತರು ಮಾಲೆ ಹಾಕಿದ ಮೇಲೆ ಬ್ರಹ್ಮಚರ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವರ ಮನಸ್ಸಿನಲ್ಲಿ ಕಾಮ, ಕ್ರೋಧಕ್ಕೆ ಅವಕಾಶವಿರಲ್ಲ. ಅಯ್ಯಪ್ಪ ಭಕ್ತರು ಯಾವುದೇ ಕೆಟ್ಟ ಪದ ಬಳಸುವಂತಿಲ್ಲ. ಈ ಸಮಯದಲ್ಲಿ ಸ್ತ್ರೀಯರಿಂದ ಒಂದು ಅಂತರ ಕಾಯ್ದುಕೊಳ್ಳಬೇಕು. ರೊಮ್ಯಾಂಟಿಕ್ ಸಿನಿಮಾ ನೋಡುವುದು, ರೊಮ್ಯಾಂಟಿಕ್ ಹಾಡುಗಳನ್ನು ನೋಡುವುದು ಮಾಡಬಾರದು, ಸದಾ ದೇವರ ಧ್ಯಾನದಲ್ಲಿರಬೇಕು.

9. ಸುಳ್ಳು ಹೇಳುವುದು, ಹಿಂಸೆ ಕೊಡುವುದು ಮಾಡಬಾರದು

9. ಸುಳ್ಳು ಹೇಳುವುದು, ಹಿಂಸೆ ಕೊಡುವುದು ಮಾಡಬಾರದು

ಅಯ್ಯಪ್ಪಸ್ವಾಮಿಗೆ ಮಾಲೆ ಹಾಕಿದ ಮೇಲೆ ಸುಳ್ಳು ಹೇಳುವಂತಿಲ್ಲ, ಸುಳ್ಳು ಹೇಳಿದರೆ ವ್ರತಕ್ಕೆ ಭಂಗ ಉಂಟಾಗುವುದು. ಅಲ್ಲದೆ ಪ್ರಾಣಿ-ಪಕ್ಷಿಗಳು ಹಾಗೂ ಮನುಷ್ಯರಿಗೆ ಹಿಂಸೆ ನೀಡುವಂತಿಲ್ಲ, ಯಾವುದೇ ಹಿಂಸೆ ಪ್ರವೃತ್ತಿ ಬಗ್ಗೆ ಯೋಚಿಸಿಬಾರದು. ತಮ್ಮ ಕಾಯಕವನ್ನು ಮಾಡುವಾಗ, ತಿನ್ನುವಾಗ, ನಡೆಯುವಾಗ ಸದಾ ಮನಸ್ಸಿನಲ್ಲಿ ಅಯ್ಯಪ್ಪಸ್ವಾಮಿಯ ಜಪ ಮಾಡಬೇಕು.

 10. ಸರಳ ಜೀವನ ನಡೆಸಬೇಕು

10. ಸರಳ ಜೀವನ ನಡೆಸಬೇಕು

ಅಯ್ಯಪ್ಪಸ್ವಾಮಿ ವ್ರತ ನಿಯಮದಲ್ಲಿ ಸರಳ ಜೀವನ ಕೂಡ ಒಂದು. ಯಾವುದೇ ವೈಭೋಗ ಅನುಭವಿಸಬಾರದು. ಕಾಲಿಗೆ ಚಪ್ಪಲಿ ಕೂಡ ಹಾಕಬಾರದು ಎಂಬ ನಿಯಮವಿದೆ. ಬಟ್ಟೆ ಕೂಡ ಅಷ್ಟೇ ಕಪ್ಪು ಅಥವಾ ಖಾವಿ ವಸ್ತ್ರ ಧರಿಸಬೇಕು ಎಂಬ ನಿಯಮವಿದೆ.

English summary

Rules Of Ayyappa Deeksha In Kannada

Rules Of Ayyappa Deeksha: Ayyappa Swami Devoties Must Follow These rules when take deeksha, read on..
X
Desktop Bottom Promotion