For Quick Alerts
ALLOW NOTIFICATIONS  
For Daily Alerts

ಅಂತೂ ಇಂತೂ ವರಮಹಾಲಕ್ಷ್ಮಿ ಹಬ್ಬ ಬಂದೇ ಬಿಡ್ತು..!

|

ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬ ಹರಿದಿನಗಳಿಗೆ ಎಂದೂ ಮೋಸವಿಲ್ಲ..! ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು. ಪ್ರತಿ ವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮಿ ಹಬ್ಬವನ್ನು ಎಲ್ಲಾ ಮುತ್ತೈದೆಯರು ಶ್ರದ್ಧೆ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

ಅದರಲ್ಲೂ ಭಾರತದ ದಕ್ಷಿಣದ ಭಾಗಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗಗಳಲ್ಲಿ ಮಹಾಲಕ್ಷ್ಮಿ ವ್ರತ ಮೂಲಕ ಆಚರಿಸುವುದು ವಿಶೇಷ. ಎರಡೂ ಭಾಗಗಳಲ್ಲೂ ಒಂದೇ ದೇವರಾದ ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಯೋಗ ಕ್ಷೇಮಕ್ಕಾಗಿ ಪೂಜಿಸಲಾಗುತ್ತದೆ.

How to perform Varamahalakshmi Puja?

ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ಅಂದರೆ ವರವನ್ನು ನೀಡುವ ದೇವರು ವರಮಹಾಲಕ್ಷ್ಮಿಯಾಗಿದ್ದಾರೆ ಎಂಬುದು ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮಿ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ (ಎಂಟು ಲಕ್ಷ್ಮಿಯರು) ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ. ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಮತ್ತು ಶಕ್ತಿಯ ಎಂಟು ದೇವತೆಗಳನ್ನು ಪೂಜಿಸಿದ ಮಹತ್ವ ಪುಣ್ಯ ವರಮಹಾಲಕ್ಷ್ಮಿ ದೇವರನ್ನು ಪೂಜಿಸುವುದರಲ್ಲಿದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನಕ್ಕಿಂತ ಮೊದಲು ಶುಕ್ರವಾರದಂದು ಈ ವ್ರತವನ್ನು ಕೈಗೊಳ್ಳಲಾಗುತ್ತದೆ. ಕ್ಯಾರೆಟ್ ಪಾಯಸ- ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್

ಸಾಂಪ್ರದಾಯಿಕವಾಗಿ ಪೂಜೆಯ ದಿವಸ ಮುಂಜಾನೆ ಏಳುವ ಸಮಯಕ್ಕೆ ಬ್ರಾಹ್ಮೀ ಮುಹೂರ್ತವೆಂದು ಹೇಳುತ್ತಾರೆ. ಆ ನಂತರ ಪೂಜೆಗೆ ಗೊತ್ತುಪಡಿಸಿದ ಸ್ಥಳ ಮತ್ತು ಮನೆಯೆಲ್ಲವನ್ನೂ ಶುಚಿಗೊಳಿಸಿ ಒಂದು ಸುಂದರವಾದ ರಂಗೋಲಿ ಅಥವ "ಕೋಲಂ" ಪೂಜೆ ಮಾಡುವ ಉದ್ದೇಶಿತ ಸ್ಥಳದಲ್ಲಿ ಚಿತ್ರಿಸುತ್ತಾರೆ. ಹಾಗಾಗಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಮನೆಯ ಮಧ್ಯಭಾಗಕ್ಕೆ ಸರಿಹೊಂದುವಂತೆ ರಂಗೋಲಿ ಇರಬೇಕು. ಇದು ಅದೃಷ್ಟವನ್ನು ತರುವ ಧನಲಕ್ಷ್ಮಿಗೆ ಸ್ವಾಗತವನ್ನು ಕೋರುವ ರೀತಿಯಾಗಿದೆ.

ಇದಾದ ಮೇಲೆ ಮುಂದಿನ ಹೆಜ್ಜೆಯೆಂದರೆ "ಕಳಶ" ಸ್ಥಾಪನೆ. ಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಕಲಶದ ಮೇಲೆ ಬರೆಯಲಾಗುತ್ತದೆ. ಅಕ್ಕಿ, ನೀರು, ನಾಣ್ಯ, ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸುತ್ತಾರೆ. ಕೆಲವರು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಳೆಗಳು ಕಪ್ಪು ಮಣಿಗಳನ್ನು ಇರಿಸುತ್ತಾರೆ. ನಂತರ ಅರಿಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಲಾಗುತ್ತದೆ.

ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರ ಫೋಟೋವನ್ನಿಟ್ಟು ಪೂಜಿಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಕಳಶದ ಹಿಂದೆ ಒಂದು ಕನ್ನಡಿ ಇಡುವ ಪದ್ಧತಿಯಿದೆ. ಈಗಂತೂ ಮಾರುಕಟ್ಟೆಯಲ್ಲಿ ವಿಶೇಷವಾಗಿ ತಯಾರಿಸಿದ ಲಕ್ಷ್ಮಿ ದೇವಿ ಲಭ್ಯವಿರುವ ಚೊಂಬುಗಳು ದೊರಕುತ್ತವೆ. ಕಳಶವನ್ನು ಸಾಮಾನ್ಯವಾಗಿ ಒಂದು ಅಕ್ಕಿಯ ಪೀಠದ ಮೇಲೆ ಇರಿಸುತ್ತಾರೆ. ಪೂಜೆ ಮಾಡುವಾಗ ಮೊದಲು ಗಣೇಶನನ್ನು ಪೂಜೆ ಮಾಡಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷ: ರುಚಿಕರವಾದ ಪುಳಿಯೋಗರೆ

ಗಣೇಶನ ನಾಮವನ್ನು ಪ್ರಾರಂಭಿಸುವುದರೊಂದಿಗೆ ಪೂಜೆಯನ್ನು ಆರಂಭಿಸಲಾಗುತ್ತದೆ. ನಂತರ ಲಕ್ಷ್ಮಿ ಸ್ತ್ರೋತ್ರವನ್ನು ಪಠಿಸಲಾಗುತ್ತದೆ. ನಂತರ ದೇವಿಗೆ ಆರತಿಯನ್ನು ಬೆಳಗಿ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಕೆಲವು ಮಹಿಳೆಯರು ದೇವಿಯ ಪ್ರಸಾದವೆಂದು ಹಳದಿ ದಾರವನ್ನು ಕೈಗಳಿಗೆ ಕಟ್ಟಿಕೊಳ್ಳುತ್ತಾರೆ. ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಅಡಿಕೆ ವೀಳ್ಯದೆಲೆಯೊಂದಿಗೆ ತಾಂಬೂಲವನ್ನು ನೀಡಲಾಗುತ್ತದೆ. ನಂತರ ಅಕ್ಕಪಕ್ಕದಲ್ಲಿರುವ ಮಹಿಳೆಯರನ್ನು ಸಂಜೆಯ ಆರತಿಗೆ ಆಹ್ವಾನಿಸುತ್ತಾರೆ.

ಮುಂದಿನ ದಿನ, ಶನಿವಾರದಂದು ಸ್ನಾನವನ್ನು ಮುಗಿಸಿದ ನಂತರ ಕಲಶವನ್ನು ಕೆಡವಲಾಗುತ್ತದೆ ಮತ್ತು ಕಲಶದ ನೀರನ್ನು ಮನೆಯೊಳಗೆ ಪ್ರೋಕ್ಷಿಸಲಾಗುತ್ತದೆ. ನಂತರ ಅಕ್ಕಿಯನ್ನು ಅನ್ನ ತಯಾರಿಸಲು ಬಳಸುವ ಅಕ್ಕಿಯೊಂದಿಗೆ ಮಿಶ್ರ ಮಾಡಲಾಗುತ್ತದೆ. ಪೂಜೆಯ ವಿಧಿ ವಿಧಾನಗಳು ತುಂಬಾ ಸರಳವಾಗಿದ್ದು ಯಾವುದಾದರೂ ವಿಧಾನ ಬಿಟ್ಟು ಹೋದಲ್ಲಿ ಚಿಂತಿಸದಿರಿ ಏಕೆಂದರೆ ದೇವಿಗೆ ನೀವು ಅರ್ಪಿಸುವ ಪ್ರಾರ್ಥನೆ ಇಲ್ಲಿ ಅತೀ ಮುಖ್ಯವಾಗಿರುತ್ತದೆ.

English summary

How to perform Varamahalakshmi Puja?

Varalakshmi Vratam is an important pooja performed by many women in the ... is an important ritual observed by married women in South India and Maharashtra. Married women observe this Varamahalakshmi vrat with great faith and devotion. They take early bath in the morning and observe fast at any one half of the day. This vrata is observed for the welfare and prosperity of the family. Some people also perform this puja in order to get blessed with children.
Story first published: Thursday, August 27, 2015, 19:35 [IST]
X
Desktop Bottom Promotion