Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತದ ಈ ಹಳ್ಳಿಯ ಮನೆಗಳಿಗೆ, ಬ್ಯಾಂಕ್‌ಗೆ ಬಾಗಿಲುಗಳೇ ಇಲ್ಲ, ಕಳ್ಳತನವೂ ನಡೆದಿಲ್ಲ!!
ನಾವೆಲ್ಲಾ ಮನೆ ಕಟ್ಟಿಸುವಾಗ ಮನೆ ಬಾಗಿಲು ಗಟ್ಟಿಯಾಗಿರಬೇಕೆಂದು ಬಯಸುತ್ತೇವೆ, ಇಲ್ಲದಿದ್ದರೆ ಯಾವುದಾದರೂ ಕಳ್ಳ ನಾವಿಲ್ಲದ ಹೊತ್ತಲ್ಲಿ ಒಳ ನುಗ್ಗಬಹುದು ಎಂಬ ಭಯ ಇದ್ದಿದ್ದೇ.

ಇನ್ನು ಬೆಂಗಳೂರಿನಂಥ ಮನೆಗಳಲ್ಲಾದರೆ ಮಲಗುವ ಮುನ್ನ ಹಾಗೂ ಹೊರಗಡೆ ಹೋಗುವ ಮುನ್ನ ಬಾಗಿಲು ಸರಿಯಾಗಿ ಹಾಕಿದೆಯೇ ಎಂದು ಎರಡೆರಡು ಸಲ ಚೆಕ್ ಮಾಡ್ತೀವಿ, ಇನ್ನು ಬ್ಯಾಂಕ್‌ಗಳಲ್ಲಾದರೆ ತುಂಬಾ ಸೆಕ್ಯೂರಿಟಿ ಇರುತ್ತದೆ.
ಆದರೆ ಭಾರತದ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಶನಿ ಶಿಂಗ್ನಾಪುರ್ ಎಂಬ ಗ್ರಾಮ ಇದೆ. ಈ ಗ್ರಾಮದ ವಿಶೇಷವೆಂದರೆ ಈ ಗ್ರಾಮದ ಯಾವುದೇ ಮನೆಗಳಿಗೇ ಬಾಗಿಲೇ ಇಲ್ಲ, ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಇಲ್ಲಿ ಯಾರ ಮನೆಯಲ್ಲೂ ಬಾಗಿಲುಗಳು ಮಾತ್ರ ಇಲ್ಲ, ಇದರ ಕುರಿತ ಆಸಕ್ತಿಕರ ವಿಷಯಗಳನ್ನು ಇಲ್ಲಿ ನೀಡಿದ್ದೇವೆ ನೋಡಿ...

ಇದುವರೆಗೆ ಒಂದೂ ಕಳ್ಳತನ ನಡೆದಿಲ್ಲ
ಇಲ್ಲಿಯ ಮನೆಗಳಿಗೆ ಬಾಗಿಲು ಇಲ್ಲ, ಆದರೆ ಈ ಗ್ರಾಮದೊಳಗೆ ಬಂದು ಕಳ್ಳತನ ಮಾಡುವ ಧೈರ್ಯ ಮಾತ್ರ ಯಾವುದೇ ಕಳ್ಳನಿಗೆ ಇಲ್ಲ. ಇದುವರೆಗೆ ಈ ಹಳ್ಳಿಯಲ್ಲಿ ಒಂದೇ ಒಂದು ಕಳ್ಳತನ ನಡೆದಿಲ್ಲ. 2010ರಲ್ಲಿ ಒಬ್ಬರು ತಮ್ಮ 35, 00 ಕಳ್ಳತನವಾಗಿದೆ ಎಂದು ಹೇಳಿ ದೂರು ನೀಡಿದ್ದರು. ಆದರೆ ಪರಿಶೀಲಿಸಿದಾಗ ಆ ಕಳ್ಳತನ ಗ್ರಾಮದ ಹೊರಭಾಗದಲ್ಲಿ ನಡೆದಿತ್ತು.

ಇಲ್ಲಿನ ಬ್ಯಾಂಕ್‌ಗಳಿಗೂ ಬಾಗಿಲುಗಳಿಲ್ಲ
ದೇವರು ಈ ಗ್ರಾಮವನ್ನು ರಕ್ಷಿಸುತ್ತಾನೆ, ಮನೆಗೆ ಬಾಗಿಲುಗಳು ಇಟ್ಟರೆ ಒಳಿತಾಗುವುದಿಲ್ಲ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಗ್ರಾಮಸ್ಥರ ಈ ಭಾವನೆಗೆ ಧಕ್ಕೆಯಾಗದಂತೆ ಅಲ್ಲಿನ ಬ್ಯಾಂಕ್‌ಗಳಲ್ಲಿ ಕೂಡ ಯಾವುದೇ ಬಾಗಿಲುಗಳಿಲ್ಲ.
ಆದರೆ ಕೂಲಂಕಷವಾಗಿ ನೋಡಿದರೆ ಬ್ಯಾಂಕ್‌ನಲ್ಲಿ ರಿಮೋಟ್ ಕಂಟ್ರೋಲ್ ಎಲೆಕ್ಟ್ರೋ ಮ್ಯಾಗ್ನೆಟ್ ಲಾಕ್ ಸಿಸ್ಟಮ್ ಇದೆ, ಅಲ್ಲದೆ ಸಂಜೆ ಹಣವನ್ನೆಲ್ಲಾ ಸಮೀಪದ ಬ್ಯಾಂಕ್‌ಗೆ ವರ್ಗಾಯಿಸಲಾಗುವುದು.

ನಾಮಕಾವಸ್ಥೆಗೆ ಇರುವ ಪೊಲೀಸ್ ಸ್ಟೇಷನ್
ಈ ಊರಲ್ಲಿ ಪೊಲೀಸ್ ಸ್ಟೇಷನ್ ಇರಲಿಲ್ಲ, ಆದರೆ ಸರಕಾರ ಅಲ್ಲೊಂದು ಪೊಲೀಸ್ ಸ್ಟೇಷನ್ ಹಾಕಿದೆ. ಆದರೆ ಆ ಸ್ಟೇಷನ್ ಕೇವಲ ನಾಮಕಾವಸ್ಥೆಗೆ ಇದೆ. ಅಲ್ಲಿ ಯಾವುದೇ ದೂರುಗಳು ದಾಖಲಾಗುತ್ತಿಲ್ಲ. ಇಲ್ಲಿ ಜನರ ನಂಬಿಕೆ ದೊಡ್ಡದಾಗಿದೆ, ಜನರು ಏನೇ ತಪ್ಪು ಮಾಡಲು ಭಯ ಪಡುತ್ತಾರೆ.

ಜನರಲ್ಲಿರುವ ನಂಬಿಕೆ ಏನು?
ಗ್ರಾಮಸ್ಥರು ಹೇಳುವ ಪ್ರಕಾರ ಎಷ್ಟೋ ವರ್ಷಗಳ ಹಿಂದೆ ಆ ಗ್ರಾಮದಲ್ಲಿ ಶನಿ ಪ್ರತ್ಯಕ್ಷವಾಗಿ ಈ ಗ್ರಾಮದ ಮನೆಗಳಿಗೆ ಬಾಗಿಲು ಇರಬಾರದು, ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದನಂತೆ, ಅಲ್ಲಿಂದ ಆ ಗ್ರಾಮದ ಮನೆಗಳಿಗೆ ಬಾಗಿಲುಗಳಿಲ್ಲ ಎನ್ನುತ್ತಾರೆ. ಅಲ್ಲದೆ ಅಲ್ಲಿಯ ಜನರ ನಂಬಿಕೆಗೆ ಇದುವರೆಗೆ ಮೋಸವಾಗಿಲ್ಲ, ಆದ್ದರಿಂದ ಶನಿ ಮಹಾತ್ಮ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾನೆ ಎಂಬ ನಂಬಿಕೆ ಬಲವಾಗಿದೆ.



Click it and Unblock the Notifications
