For Quick Alerts
ALLOW NOTIFICATIONS  
For Daily Alerts

ಹೋಳಿ 2019: ಹೋಳಿ ಹಬ್ಬದ ದಿನಾಂಕ ಹಾಗೂ ಪೂಜೆಯ ಮುಹೂರ್ತ

|

ಹೋಳಿ...ಹೋಳಿ...ಬಣ್ಣದ ಹೋಳಿ...ಹೀಗೆ ಹೋಳಿ ಬಗ್ಗೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬಾಲಿವುಡ್ ಸಹಿತ ದೇಶದ ಹೆಚ್ಚಿನ ಸಿನೆಮಾಗಳಲ್ಲಿ ಒಂದಾದರೂ ಹಾಡು ಇರುತ್ತಿತ್ತು. ವಸಂತಕಾಲದ ಆಗಮನದ ವೇಳೆ ಬರುವಂತಹ ಹೋಳಿ ಹಬ್ಬವು ದೇಶದಾದ್ಯಂತ ಆಚರಿಸಲ್ಪಡುವಂತಹ ಅತ್ಯಂತ ನೆಚ್ಚಿನ ಹಬ್ಬವಾಗಿದೆ. ಬಣ್ಣದಿಂದ ಮಿಂದೇಳುವಂತಹ ಈ ಹಬ್ಬವು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬರಿಗೂ ತುಂಬಾ ಇಷ್ಟ. ಈ ಹಬ್ಬಕ್ಕಾಗಿಯೇ ಹೆಚ್ಚಿನವರು ಕಾಯುತ್ತಲಿರುತ್ತಾರೆ. ಈ ದಿನ ಯಾರಿಗೂ ಬೇಕಾದರೂ ಬಣ್ಣ ಹಚ್ಚಬಹುದು. ಅದರಲ್ಲಿ ಬೇಸರಿಸುವ ವಿಚಾರವಿಲ್ಲ. ಅದರಲ್ಲೂ ಉತ್ತರ ಭಾರತದಲ್ಲಿ ತುಂಬಾ ಸಂಭ್ರಮ ಹಾಗೂ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಹೋಳಿ ಹಬ್ಬಕ್ಕೆ ಈಗಾಗಲೇ ಮಾರುಕಟ್ಟೆಗೆ ವಿವಿಧ ರೀತಿಯ ಬಣ್ಣಗಳು ಬಂದಿದೆ. ಮಕ್ಕಳು, ಪುರುಷರು ಹಾಗೂ ಮಹಿಳೆಯರು ಹೀಗೆ ಎಲ್ಲರೂ ಬಣ್ಣದ ಆಟದಲ್ಲಿ ತೊಡಗುವರು. ಹೋಳಿ ದಿನದಂದು ಮಹಿಳೆಯರು ವಿಶೇಷ ರೀತಿಯ ಸಿಹಿ ತಿಂಡಿ ತಯಾರಿ ಮಾಡುವರು. ಹೋಳಿಯ ಮತ್ತೊಂದು ವಿಶೇಷವೆಂದರೆ ಈ ದಿನ ಭಾಂಗ್ ತಯಾರಿಸಿ ಕುಡಿಯುವುದು. ಇದು ಕೆಲವೊಂದು ಗಿಡಮೂಳಿಕೆಗಳಿಂದ ಮಾಡಲಾಗುತ್ತದೆ. ಇದನ್ನು ಪಾನೀಯ ಮತ್ತು ಆಹಾರದೊಂದಿಗೆ ಸೇವನೆ ಮಾಡಲಾಗುತ್ತದೆ. ಭಾಂಗ್ ಕುಡಿದ ವ್ಯಕ್ತಿಯಲ್ಲಿ ಸ್ವಲ್ಪ ಮಟ್ಟಿನ ನಶೆ ಕೂಡ ೇರುತ್ತದೆ. ಇದರಿಂದ ತುಂಬಾ ತಮಾಷೆಯು ಅಲ್ಲಿ ಕಂಡುಬರುವುದು. ಹೋಳಿ ಹಬ್ಬವನ್ನು ಜಾತಿ, ಭೇದ ಮರೆತು ಆಚರಿಸಲಾಗುತ್ತದೆ.

Most Read: ಹೋಳಿ 2019: ಯಾವ್ಯಾವ ರಾಶಿಚಕ್ರದವರು ಯಾವ ಬಣ್ಣದಲ್ಲಿ ಹೋಳಿ ಆಚರಿಸಬೇಕು?

ಅನ್ಯ ಧರ್ಮೀಯರು ಕೂಡ ಈ ಹಬ್ಬದಲ್ಲಿ ಭಾಗಿಯಾಗುವರು. ಹೋಳಿ ಹಬ್ಬದ ಬಗ್ಗೆ ಇರುವ ಪುರಾಣ ಕಥೆಯೆಂದರೆ ರಾಕ್ಷಸ ರಾಜ ಹಿರಣ್ಯಕಶ್ಯಪನು ತನ್ನನ್ನು ಪ್ರತಿಯೊಬ್ಬರು ಪೂಜಿಸಬೇಕೆಂದು ಬಯಸುತ್ತಾನೆ. ಆದರೆ ಆತನ ಮಗ ಪ್ರಹ್ಲಾದ ಮಾತ್ರ ವಿಷ್ಣುವಿನ ಪರಮ ಭಕ್ತನಾಗಿರುತ್ತಾನೆ. ತನ್ನ ಮಗನಿಗೆ ಎಷ್ಟು ತಿದ್ದಿ ಹೇಳಿದರೂ ಪ್ರಹ್ಲಾದ ಮಾತ್ರ ವಿಷ್ಣುವನ್ನು ಆರಾಧಿಸುವುದನ್ನು ಬಿಡಲಿಲ್ಲ. ಇದರಿಂದ ಕ್ರೋಧಗೊಂಡ ಹಿರಣ್ಯಕಶ್ಯಪ, ತನ್ನ ತಂಗಿ ಹೋಳಿಕಗೆ ಆದೇಶ ನೀಡಿ, ಪ್ರಹ್ಲಾದನನ್ನು ಹಿಡಿದುಕೊಂಡು ಅಗ್ನಿ ಪ್ರವೇಶ ಮಾಡುವಂತೆ ಆದೇಶಿಸುತ್ತಾನೆ. ಹೋಳಿಕ ಹೀಗೆ ಮಾಡಿದಾಗ ವಿಷ್ಣು ದೇವರು, ಪ್ರಹ್ಲಾದನನ್ನು ರಕ್ಷಿಸುವರು ಮತ್ತು ಹೋಳಿಕ ಅಗ್ನಿಯಲ್ಲಿ ಭಸ್ಮವಾಗಿ ಹೋಗುವಳು. ಇದರ ಬಳಿಕ ಜನರು ಹೋಳಿಕ ದಹನ ಮಾಡುವರು. ಇದು ದುಷ್ಟಶಕ್ತಿಯ ಸಂಹಾರ ಎಂದು ನಂಬಲಾಗಿದೆ. ಇದರ ಮರುದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಜನರು ಬಣ್ಣಗಳಲ್ಲಿ ಆಟವಾಡುವರು.

Most Read: 'ಹೋಳಿ ಹಬ್ಬದ' ಭರದಲ್ಲಿ ಬಣ್ಣ ಕಣ್ಣಿಗೆ ಹೋಗದಂತೆ ನೋಡಿಕೊಳ್ಳಿ!

ಹೋಳಿಯಂದು ಮಾಡಬೇಕಾದ ಆಚರಣೆ

ಹೋಳಿ ಹಬ್ಬದಂದು ಮಹಿಳೆಯರು ಮಕ್ಕಳು, ಶಾಂತಿ, ಸಮೃದ್ಧಿ ಮತ್ತು ಮನೆಯ ಸಂತೋಷಕ್ಕಾಗಿ ಪ್ರಾರ್ಥನೆ ಮಾಡುವರು. ಹೋಳಿಕ ದಹನಕ್ಕಾಗಿ ಜನರು ಕಟ್ಟಿಗೆ ಸಂಗ್ರಹ ಮಾಡಿಕೊಂಡು ಅದನ್ನು ಒಂದು ಕಡೆ ರಾಶಿ ಹಾಕಿ ಬಳಿಕ ಅದಕ್ಕೆ ಬೆಂಕಿ ಕೊಡುವರು. ಗದ್ದೆಗಳು ಬೆಳೆಯಿಂದ ತುಂಬಿರುವ ವೇಳೆ ಮತ್ತು ಒಳ್ಳೆಯ ಬೆಳೆ ಬರಲಿ ಎಂದು ಜನರು ಹೋಳಿ ವೇಳೆ ಪ್ರಾರ್ಥನೆ ಮಾಡುವರು.

ಹೋಳಿಯ ಮುಹೂರ್ತ

*20 ಮಾರ್ಚ್

*ಹೋಳಿಕ ದಹನ ಮುಹೂರ್ತ ರಾತ್ರಿ 8.57 ನಿಮಿಷದಿಂದ 0.28 ನಿಮಿಷ

*ಭಾದ್ರ ಪುಂಚ್ಚ: 5.23ರಿಂದ 6.24

*ಭಾದ್ರ ಮುಖ: 6.24ರಿಂದ 8.07

*ರಂಗವಾಲಿ ಹೋಳಿ 21 ಮಾರ್ಚ್

*ಪೂರ್ಣಿಮಾ ತಿಥಿ ಆರಂಭ 10.44(ಮಾ.20)

*ಪೂರ್ಣಿಮಾ ತಿಥಿ ಅಂತ್ಯ 07.12(ಮಾ.21)

English summary

Holi 2019: Holi Festival Date and Pooja Muhurat

Although every festival has its own charm, the festival of Holi is unique because of the colors it involves…green, yellow, red, pink and all their hues. It is one of the major festivals of India and is celebrated with a lot of enthusiasm. It falls on the Full moon Day in the month of Phalgun-and is also called the Spring Festival, as it marks the arrival of spring. Market place becomes colorful as heaps of colors are seen on the roadside and roads and colonies continue looking colorful even after the festival by the left over colors played by children and adults both. Women start preparing sweets a few days before and a special drink, ‘kanji’ which is served to anyone who come at the door to wish. The highlight of Holi is mixing ‘Bhang’, which is a mixture of buds and leaves of cannabis ground into a paste, and mixed into drinks or food.
X