Latest Updates
-
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ?
ನಾಡಹಬ್ಬ ದಸರಾದ ಹಿನ್ನೆಲೆ, ಆಚರಣೆಗಳ ಮಹತ್ವ
ಮೈಸೂರಾ ದಸರಾ, ಎಷ್ಟೊಂದು ಸುಂದರಾ.. ಎಂದು ಡಾ. ಪಿ.ಬಿ.ಶ್ರೀನಿವಾಸ್ ರವರು ಹಾಡುತ್ತಿದ್ದ ಹಾಗೇ ನಮ್ಮ ಕಣ್ಮುಂದೆ ಮೈಸೂರಿನ ದಸರಾ ಹಬ್ಬದ ವೈಭವ ಹಾದುಹೋಗುತ್ತದೆ. ನವರಾತ್ರಿಯ ಒಂಬತ್ತು ದಿನಗಳ ಉಪವಾಸದ ಬಳಿಕ ಬರುವ ದಸರಾ ಹಬ್ಬ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಇಡಿಯ ದೇಶದಲ್ಲಿ ಭಕ್ತಿ ಮತ್ತು ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಪುರಾಣದಲ್ಲಿಯೂ ಈ ದಿನಕ್ಕೆ ಹೆಚ್ಚಿನ ಮಹತ್ವವಿದೆ.
ಈ ದಿನವೇ ಭಗವಂತ ರಾಮನು ಹತ್ತು ತಲೆಗಳ ರಾಕ್ಷಸ ರಾವಣನನ್ನು ಕೊಂದು ರಾಜ್ಯವನ್ನು ಆತನ ತಮ್ಮ ವಿಭೀಷಣನಿಗೆ ಒಪ್ಪಿಸಿದ ದಿನ. ರಾವಣನ ಸೆರೆಯಲ್ಲಿದ್ದ ಸೀತೆಗೆ ಮುಕ್ತಿ ದೊರೆತು ತನ್ನ ಪತಿಯೊಡನೆ ಸೇರುವ ಶುಭದಿನವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ.
ಅಧರ್ಮದ ವಿರುದ್ಧ ಧರ್ಮದ ಜಯ ಸಾಧಿಸಿದ ದಿನವನ್ನಾಗಿ ದಸರಾ ಹಬ್ಬವನ್ನು ಭಕ್ತಿ ಮತ್ತು ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಕರ್ನಾಟಕದ ಹೆಮ್ಮೆಯ ಹಬ್ಬವಾಗಿರುವ ದಸರಾವನ್ನು ಕಳೆದ ನಾನೂರು ವರ್ಷಗಳಿಂದ (2010-ನಾನೂರನೇ ವರ್ಷಾಚರಣೆ) ಮೈಸೂರ ಅರಸರು ಆಚರಿಸಿಕೊಂಡು ಬರುತ್ತಿದ್ದು ಈಗ ಕರ್ನಾಟಕ ಸರ್ಕಾರ ರಾಜ್ಯದ ಹಬ್ಬವನ್ನಾಗಿ ನಾಡಹಬ್ಬದ ರೂಪದಲ್ಲಿ ಆಚರಿಸಿಕೊಂಡು ಬರುತ್ತಿದೆ.

ವಿಜಯೋತ್ಸವವನ್ನು ಹೀಗೇ ಆಚರಿಸಬೇಕೆಂಬ ನಿಯಮವಿಲ್ಲ. ಕೆಲವರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ ಕೆಲವರು ಬಡವರಿಗೆ ಊಟ, ವಸ್ತ್ರಗಳನ್ನು ದಾನವನ್ನಾಗಿ ನೀಡಿ ಸಂತೃಪ್ತಿ ಅನುಭವಿಸುತ್ತಾರೆ. ಕರ್ನಾಟಕದಲ್ಲಿ ದಸರಾ ಹಬ್ಬಕ್ಕೆ ನಾಡಹಬ್ಬದ ರೂಪ ಬಂದಿರುವ ಕಾರಣ ಐತಿಹಾಸಿಕ ಸಂಪ್ರದಾಯಗಳನ್ನು ಸಾರ್ವಜನಿಕವಾಗಿ ನೆರವೇರಿಸುವ ಮೂಲಕ ಕರ್ನಾಟಕದ ಭವ್ಯ ಸಂಸ್ಕೃತಿಗೆ ಮೆರುಗು ನೀಡಲಾಗುತ್ತದೆ. ಉತ್ತರ ಭಾರತದಲ್ಲಿ ರಾವಣನ ಪ್ರತಿಕೃತಿಯನ್ನು ಸ್ಥಾಪಿಸಿ ಅದರಲ್ಲಿ ಪಟಾಕಿಗಳನ್ನಿಟ್ಟು ಹತ್ತನೆಯ ರಾತ್ರಿ ಸುಟ್ಟು ಹಾಕುವ ಮೂಲಕ ರಾವಣನನ್ನು ವಧಿಸಿ ಸಂಭ್ರಮಿಸಲಾಗುತ್ತದೆ. ಝಗಮಗಿಸುವ ಮೈಸೂರು ದಸರಾದ ವರ್ಣಮಯ ಹಿನ್ನೆಲೆ
ಇನ್ನೂ ಹಲವೆಡೆ ರಾಮ್ ಲೀಲಾ ಪ್ರಸಂಗವನ್ನು ಮತ್ತೊಮ್ಮೆ ಅಭಿನಯಿಸಿ ಅಂದಿನ ದಿನದ ಜಯವನ್ನು ಮತ್ತೊಮ್ಮೆ ಅನುಭವಿಸಲಾಗುತ್ತದೆ. ಕೆಲವರು ಈ ಸಂದರ್ಭದಲ್ಲಿ ಉಪವಾಸವಿರುವುದೂ ಶ್ರೇಯಸ್ಕರ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಸುಮಾರು ಹತ್ತು ದಿನಗಳ ಕಾಲ ದೇಶದ ಎಲ್ಲಾ ಊರುಗಳಲ್ಲಿ ಸಂಭ್ರಮ ತುಂಬಿ ತುಳುಕುತ್ತದೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಹಲವು ಮಳಿಗೆಗಳು, ಮನರಂಜನಾ ತಂಡಗಳು, ಊರಿನ ಮೈದಾನದಲ್ಲಿ ಸ್ಥಾಪಿತವಾಗುತ್ತವೆ. ಹೆಚ್ಚಿನ ಕಡೆ ರಾಮ್ ಲೀಲಾ ಕಥನವನ್ನು ಅಭಿನಯಿಸಲಾಗುತ್ತದೆ.
ತೊಗಲು ಬೊಂಬೆ, ಬೊಂಬೆಯಾಟದ ರೂಪಕದಲ್ಲಿಯೂ ರಾಮಾಯಣ ಮೂಡುತ್ತದೆ. ಇದು ಬರೆಯ ಭಾರತದಲ್ಲಿ ಮಾತ್ರವಲ್ಲ, ಭಾರತೀಯರು ನೆಲೆಸಿರುವ ವಿದೇಶಗಳಲ್ಲಿಯೂ ಆಚರಿಸಲಾಗುತ್ತದೆ. ಅದರಲ್ಲೂ ಭಾರತೀಯ ಹಿಂದೂ ಭಕ್ತರು ಹೆಚ್ಚಾಗಿರುವ ಅಮೇರಿಕಾದ ಕೆಲವು ಭಾಗಗಳಲ್ಲಂತೂ ಭಾರತದ ಯಾವುದೋ ಒಂದು ಗ್ರಾಮದಲ್ಲಿ ಆಚರಿಸಿವಂತೆಯೇ ಆಚರಿಸಲಾಗುತ್ತದೆ. ಇದು ನ್ಯಾಯಮಾರ್ಗದಿಂದ ಅಧರ್ಮವನ್ನು ಹಿಮ್ಮೆಟ್ಟುವ ಮೂಲಕ ವಿಜಯವನ್ನು ಪ್ರಾಪ್ತಿಯಾಗಿಸಲು ಮತ್ತು ಧರ್ಮ, ಸತ್ಯದ ಮಾರ್ಗದಲ್ಲಿ ನಡೆಯಲು ಜನರಿಗೆ ಸತತವಾಗಿ ನೀಡುವ ಪ್ರೇರಣೆಯಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.
ಅಂದು ಭಗವಂತ ರಾಮನಿಗೆ ಎದುರಾಗಿದ್ದ ದುಷ್ಟ ಶಕ್ತಿಗಳು ಯಾರು? ರಾವಣ, ಕುಂಭಕರ್ಣ, ಮೇಘನಾದ, ಮಾರೀಚ ಮೊದಲಾದ ರಾಕ್ಷಸರು. ಅದರಲ್ಲೂ ರಾವಣ ಅಪ್ಪಟ ಶಿವಭಕ್ತನಾಗಿದ್ದ. ಸೀತೆಯನ್ನು ಅಪಹರಿಸಿದ್ದ ಒಂದು ತಪ್ಪು ಬಿಟ್ಟರೆ ಬೇರೆ ತಪ್ಪು ಮಾಡಿಲ್ಲದ ವೇದಪಾರಾಂಗತ. ರಾಮನೊಂದಿಗಿದ್ದ ಬಂಟರು ಯಾರು? ರಾಕ್ಷಸರ ದೈತ್ಯಶಕ್ತಿಯ ನೂರರ ಒಂದಂಶಕ್ಕೂ ಸಾಟಿಯಾಗಲಾರದ ಕಪಿಗಳು. ಆದರೂ ಭಗವಂತ ರಾಮನೊಂದಿಗಿದ್ದ ಸತ್ಯ, ಧರ್ಮ ಮತ್ತು ಅಧರ್ಮವನ್ನು ತೊಡೆಯಲೇಬೇಕೆಂದ ದೃಢಸಂಕಲ್ಪ ರಾಕ್ಷಸರ ಸಂಹಾರಕ್ಕೆ ನೆರವಾಯಿತು. ಈ ಸಂಹಾರದ ಮೂಲಕ ಪಡೆಯ ವಿಜಯೋತ್ಸವದ ಸಂಕೇತವಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.
ಒಂಬತ್ತು ದಿನಗಳ ಸತತ ಹೋರಾಟದ ಬಳಿಕ ಹತ್ತನೆಯ ದಿನ ವಿಜಯ ಪ್ರಾಪ್ತಿಯಾಯಿತು. ಇದು ಕೇವಲ ರಾಮನ ಜಯವಾಗಿರಲಿಲ್ಲ, ಒಟ್ಟಾರೆ ಮಾನವತೆಯ, ಸತ್ಯ ಮತ್ತು ಧರ್ಮದ ಜಯವಾಗಿತ್ತು. ಅಂದಿನಿಂದ ಜನರ ಮನಸ್ಸಿನಲ್ಲಿ ಅಧರ್ಮದ ಅಟ್ಟಹಾಸ ಮೆರೆದಾಗ ಭಗವಂತನು ಮಾನವನ ರೂಪ ಧರಿಸಿ ಹುಟ್ಟಿ ಬರುತ್ತಾನೆ ಹಾಗೂ ಅಧರ್ಮವನ್ನು ಮೆಟ್ಟಿ ಜಗತ್ತಿನಲ್ಲಿ ಮತ್ತೆ ಧರ್ಮ ಸ್ಥಾಪನೆಯಾಗುವಂತೆ ಮಾಡುತ್ತಾನೆ ಎಂಬ ನಂಬಿಕೆ ಬಳೆದುಬಂದಿದೆ.



Click it and Unblock the Notifications












