Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ಮೇಳದ ನಾಗಾ ಸಾಧುಗಳ ಕುರಿತ ಇಂಟರೆಸ್ಟಿಂಗ್ ಕಹಾನಿ
ಕುಂಭ ಮೇಳವೆಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ಚಲನಚಿತ್ರಗಳಲ್ಲಿ ನೋಡಿದ್ದ ಕಾಣೆಯಾಗಿದ್ದ ಪ್ರಸಂಗ, ಲಕ್ಷಾಂತರ ಜನರ ಜಾತ್ರೆ, ನದಿಯಲ್ಲಿ ಮುಳುಗು ಹಾಕುವುದು ಮೊದಲಾದವು. ಹಿಂದೂ ಸಂಪ್ರದಾಯದಲ್ಲಿ ಅತಿ ಮಹತ್ವದ ಸ್ಥಾನ ಪಡೆದಿರುವ ಕುಂಭಮೇಳವನ್ನು ವೀಕ್ಷಿಸಲು ಆಗಮಿಸುವ ಲಕ್ಷಾಂತರ ಜನರಲ್ಲಿ ಸಾವಿರಾರು ವಿದೇಶೀಯರೂ ಇದ್ದು ಕುಂಭಮೇಳದ ವಿಧಿಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಾರೆ.
ಇದರಲ್ಲಿ ಪ್ರಮುಖ ಆಕರ್ಷಣೆ ಎಂದರೆ ನಾಗಾ ಸಾಧುಗಳು ಅಥವಾ ನಾಗಾ ಬಾಬಾಗಳು. ಪ್ರಥಮ ನೋಟಕ್ಕೇ ಇವರ ಅಸಾಮಾನ್ಯ ವೇಷಭೂಷಣ ಕುತೂಹಲ ಮೂಡಿಸಿದರೆ ಇವರು ಅನುಸರಿಸುವ ಚಿತ್ರ ವಿಚಿತ್ರ ಸಂಪ್ರದಾಯಗಳು ಇನ್ನಷ್ಟು ಬೆರಗು ಮೂಡಿಸುತ್ತವೆ. ನಾಗಾ ಸಾಧುಗಳು ಮೇಲ್ನೋಟಕ್ಕೆ ಎಲ್ಲರೂ ಒಂದೇ ರೀತಿಯಾಗಿರುವಂತೆ ಕಂಡುಬಂದರೂ ಅವರಲ್ಲಿ ಒಟ್ಟು ಎಂಟು ಅಖಾಡಾ ಅಥವಾ ಪಂಥಗಳಿವೆ.
ಪ್ರತಿ ಅಖಾಡಾದಲ್ಲಿಯೂ ಒಂದೊಂದು ಗುಂಪಿಗೆ ಸೇರಿದ ನಾಗಾಗಳು ತನ್ನದೇ ಆದ ಸಂಪ್ರದಾಯ, ವಿಚಿತ್ರ ವೇಷಭೂಷಣ ಮತ್ತು ಚಟುವಟಿಕೆಗಳನ್ನು ಪಾಲಿಸುತ್ತಾರೆ. ಇವರಿಗೆ ಲೋಕದ ಆಗುಹೋಗುಗಳಲ್ಲಿ ಯಾವುದೇ ಕುತೂಹಲ ಇಲ್ಲದೇ ಕೇವಲ ತಮ್ಮ ಜಗತ್ತಿನಲ್ಲಿಯೇ ವಿಹರಿಸುತ್ತಿರುವುದೇ ಇವರ ಬಗ್ಗೆ ಹಲವರು, ವಿಶೇಷವಾಗಿ ವಿದೇಶೀಯರು ಕುತೂಹಲ ತಾಳಲು ಕಾರಣವಾಗಿದೆ. ಭಯಾನಕ ರಹಸ್ಯ..! ನಾಗಾ ಸಾಧುಗಳು ವಸ್ತ್ರಗಳನ್ನೇಕೆ ಧರಿಸುವುದಿಲ್ಲ?
ಹಿಂದೂ ಪುರಾಣದ ಪ್ರಕಾರ ಈ ರುದ್ರಾಕ್ಷಿಗಳಲ್ಲಿ ಶರೀರದ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಿ ಧನಾತ್ಮಕ ಶಕ್ತಿಗಳನ್ನು ಹಿಡಿದಿಡುವ ಶಕ್ತಿಯಿದೆ. ಅದರಲ್ಲೂ ಹನ್ನೊಂದು ಸಾವಿರ ರುದ್ರಾಕ್ಷಿಗಳ ಸರವನ್ನು ಧರಿಸಿದವರು ಶೀಘ್ರವೇ ಶಿವನ ಅನುಗ್ರಹ ಪಡೆಯಲು ಅರ್ಹರಾಗುತ್ತಾರೆ ಎಂದು ಸಾಧುಗಳು ನಂಬುತ್ತಾರೆ. ಇವರ ಬಗ್ಗೆ ಕುತೂಹಲ ಮೂಡಿತೇ? ಇನ್ನಷ್ಟು ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡಿ, ಕುತೂಹಲ ತಣಿಸಿಕೊಳ್ಳಿ...

"ನಾಗಾ" ಎ೦ಬುದರ ಅರ್ಥವೇನು?
ಕೆಲವು ಮೂಲಗಳು ಹೇಳುವ ಪ್ರಕಾರ, "ನಾಗಾ" ಎ೦ಬ ಪದದ ಅರ್ಥವು "ನಗ್ನ" ಎ೦ದಾಗಿದೆ. ಈ ಸಾಧುಗಳು ಲೌಕಿಕ ಜಗತ್ತಿನ ಸಮಸ್ತ ವ್ಯವಹಾರಗಳಿ೦ದ ತಮ್ಮನ್ನು ತಾವೇ ಸ೦ಪೂರ್ಣವಾಗಿ ಹೊರಗಿರಿಸಿಕೊ೦ಡಿದ್ದು (ಸರ್ವಸ೦ಗ ಪರಿತ್ಯಾಗಿಗಳು), ಅ೦ತಹ ನಿರ್ಲಿಪ್ತತೆಯನ್ನು ಅವರು ಎಲ್ಲಾ ರೂಪಗಳಲ್ಲಿಯೂ ಅನುಸರಿಸುತ್ತಾರೆ.

ನಾಗಾ ಸಾಧುಗಳ ಸಂಪ್ರದಾಯ ಯಾರಿಗೂ ತಿಳಿದಿಲ್ಲ
ಇತಿಹಾಸದ ಪ್ರಕಾರ ದತ್ತಾತ್ರೇಯ ಎಂಬ ಸಾಧುಗಳಿಂದ ಈ ಸಂಪ್ರದಾಯ ಸ್ಥಾಪನೆಯಾಗಿದ್ದರೂ ಯಾವಾಗಿನಿಂದ ಎಂಬ ಖಚಿತ ಮಾಹಿತಿ ಇಲ್ಲ. ಸಮಯದ ಬಗ್ಗೆ ಕಾಳಜಿ ಇಲ್ಲದಿದ್ದ ಅವಧಿಯಲ್ಲಿಯೇ ಈ ಸಂಪ್ರದಾಯ ಪ್ರಾರಂಭವಾಗಿರಬಹುದು ಎಂದು ಇವರ ದಿನಚರಿಯನ್ನು ಗಮನಿಸಿದ ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ನಾಗಾ ಸಾಧುಗಳನ್ನು ಸನಾತನ ಧರ್ಮದ (ಹಿಂದೂ ಧರ್ಮದ) ರಕ್ಷಕರನ್ನಾಗಿ ಶಂಕರಾಚಾರ್ಯರು ನೇಮಿಸಿದರು ಎಂದೂ ಇತಿಹಾಸ ತಿಳಿಸುತ್ತದೆ.

ನಾಗಾ ಸಾಧುಗಳಿರುವ ಸ್ಥಳವೇ ಅಖಾಡಾ
ಪ್ರತಿ ಪಂಥವೂ ತಮ್ಮದೇ ಪ್ರತ್ಯೇಕ ಸ್ಥಳದಲ್ಲಿದ್ದು ಆ ಸ್ಥಳಕ್ಕೆ ಅಖಾಡಾ ಎನ್ನುತ್ತಾರೆ. ಇದರ ಸದಸ್ಯರು ಎಂದಿಗೂ ಬೌದ್ಧಿಕ ಮತ್ತು ಶಾರೀರಿಕ ಹೋರಾಟಕ್ಕೆ ತಯಾರಿರಬೇಕು.

ನಾಗಾ ಸಾಧುಗಳು ಶಿವನ ಆರಾಧಕರು
ನಾಗಾ ಸಾಧುಗಳು ಸದಾ ಶಿವನನ್ನು ಆರಾಧಿಸುತ್ತಾ ಶಿವನ ಅನುಗ್ರಹ ಪಡೆಯುವುದೇ ತಮ್ಮ ಜೀವನದ ಗುರಿ ಎಂದು ಭಾವಿಸಿರುತ್ತಾರೆ. ಇವರು ಬಹುತೇಕ ನಗ್ನರಾಗಿದ್ದು ಮೈತುಂಬಾ ವಿಭೂತಿ ಬಳಿದಿರುತ್ತಾರೆ. ನಗ್ನದ ಹೃಸ್ವರೂಪ 'ನಗ' ಪದವೇ ನಾಗಾ ಎಂದು ಪರಿವರ್ತಿತವಾಗಿದೆ. ಸಾರ್ವಜನಿಕವಾಗಿ ಅತಿ ಕಡಿಮೆ ಕಾಣಿಸಿಕೊಳ್ಳುವ ಇವರು ಕುಂಭಮೇಳದಲ್ಲಿ ಮಾತ್ರ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇವರು ತಮ್ಮನ್ನು ತಾವು ನಾಗಾ ಬಾಬಾ ಅಥವಾ ಯೋಧ-ಸನ್ಯಾಸಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.

ಇವರು ಸಾವಿಗೆ ಹೆದರುವುದಿಲ್ಲ
ತಮ್ಮನ್ನು ತಾವು ಯೋಧರೆನ್ನುವ ಇವರಿಗೆ ಸಾವಿಗೆ ಹೆದರಿಕೆಯೇ ಇಲ್ಲದಿರುವ ಕಾರಣ ಇವರನ್ನು ಕೆಣಕುವುದು ಅಪಾಯಕಾರಿಯಾಗಿದೆ. ಇವರ ಬಣವೂ ಒಂದು ಸೈನ್ಯದಂತೆ ವಿವಿಧ ಹಂತದ ಪಡೆಗಳಿಂದ ಕೂಡಿದೆ. ಇವರಲ್ಲಿ ಹೆಚ್ಚಿನವರ ಬಳಿ ತ್ರಿಶೂಲ, ಖಡ್ಗ, ದೊಣ್ಣೆ, ಶಂಖ ಮೊದಲಾದ ಆಯುಧಗಳು ಮತ್ತು ಸಲಕರಣೆಗಳಿರುತ್ತವೆ. ಹಲವರು ಸಂಗೀತ ಉಪಕರಣಗಳನ್ನಿಟ್ಟುಕೊಂಡಿರುತ್ತಾರೆ. ಯಾವ ಪಡೆ ಏನನ್ನು ಇಟ್ಟುಕೊಳ್ಳುತ್ತಾರೋ ಅದರ ಮೇಲೆ ಅವರ ಜವಾಬ್ದಾರಿಗಳು ಅವಲಂಬಿತವಾಗಿವೆ.

ನಾಗಾ ಸಾಧುಗಳು ಮನೆಗಳಲ್ಲಿ ವಾಸಿಸುತ್ತಾರೆಯೇ?
ಇಲ್ಲ, ಈ ಸಾಧುಗಳು ಯಾವುದೇ ಒ೦ದು ನಿರ್ದಿಷ್ಟವಾದ ಸ್ಥಳದೊ೦ದಿಗೆ ತಳುಕು ಹಾಕಿಕೊಳ್ಳಬಾರದಾದ್ದರಿ೦ದ, ಈ ಸಾಧುಗಳು ಬೇರೆ ಬೇರೆ ಸ್ಥಳಗಳಿಗೆ ಚಲಿಸುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಈ ಸಾಧುಗಳು ಯಾವುದೇ ಮನೆಯೊ೦ದನ್ನು ತಮ್ಮದಾಗಿಸಿಕೊ೦ಡಿರದೇ ಅಡ್ಡಾಡುತ್ತಲೇ ಇರುತ್ತಾರೆ.

ನಾಗಾ ಸಾಧುಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ?
ವಸ್ತ್ರಗಳ ಪರಿತ್ಯಾಗವು ಪ್ರಾಪ೦ಚಿಕ ಭೋಗ ವೈಭೋಗಗಳ ಪರಿತ್ಯಾಗದ ಸ೦ಕೇತವಾಗಿರುತ್ತದೆ. ಉಡುಪುಗಳು ನಮ್ಮನ್ನು ರಕ್ಷಿಸುತ್ತವೆ ಹಾಗೂ ಜೊತೆಗೆ ಅವು ನಮ್ಮ ಪ್ರತಿಷ್ಟೆಯ ಸ೦ಕೇತವೂ ಕೂಡ ಹೌದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಾಗಾ ಸಾಧುಗಳು ಬಟ್ಟೆಗಳನ್ನೇಕೆ ಧರಿಸುವುದಿಲ್ಲ?
ಇ೦ತಹ ಬಟ್ಟೆಬರೆಗಳನ್ನು ಪರಿತ್ಯಜಿಸುವುದರ ಮೂಲಕ ಈ ಸಾಧುಗಳು ಜೀವನದ ಅತ್ಯ೦ತ ಮೂಲಭೂತವಾದ ಅವಶ್ಯಕತೆಗಳಲ್ಲಿ ಒ೦ದನ್ನು ಪರಿತ್ಯಜಿಸಿದ೦ತಾಯಿತು. ಲೌಕಿಕ ಜೀವನದ ಪರಿತ್ಯಾಗದ ಸ೦ಕೇತವದು.

ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿದೇಶೀಯರು
ಕುಂಭಮೇಳಕ್ಕೆ ಭೇಟಿ ನೀಡುವ ವಿದೇಶೀಯರಿಗೆ ನಾಗಾ ಸಾಧುಗಳೇ ಅತಿ ಆಕರ್ಷಕವಾಗಿ ಕಂಡುಬರುವ ಕಾರಣ ಇವರ ಚಿತ್ರಗಳನ್ನು ಮತ್ತು ಇವರ ಆಚಾರ ವಿಚಾರಗಳನ್ನು ಅತಿಹೆಚ್ಚಾಗಿ ಚಿತ್ರೀಕರಿಸಿ ತಮ್ಮ ದೇಶಗಳಲ್ಲಿ ಪ್ರಚಾರ ನಡೆಸುವುದರಿಂದ ವಿದೇಶಗಳಲ್ಲಿ ನಾಗಾ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿದೇಶೀಯರು
ಆದರೆ ಈ ಬಗ್ಗೆ ನಾಗಾ ಸಾಧುಗಳಿಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೇ ಏನೇ ಅಂದರೂ ಅದರ ಬಗ್ಗೆ ಚಿಂತಿಸದೇ ಸದಾ ಶಿವನ ಅನುಗ್ರಹ ಪಡೆಯುವತ್ತಲೇ ತಮ್ಮ ಜೀವಮಾನವನ್ನು ಸವೆಸುತ್ತಾರೆ.



Click it and Unblock the Notifications