Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅರ್ಜುನನಲ್ಲಿದ್ದ ಈ ಗುಣಗಳು ನಮ್ಮಲ್ಲಿದ್ದರೆ ಯಶಸ್ಸು ಗ್ಯಾರಂಟಿ!
ಯಾವುದೇ ವಿಚಾರವಾದರೂ ಸರಿ ಆಸಕ್ತಿಯಿಂದ ಕಲಿತಾಗ ಮಾತ್ರ ಆ ವಿಧ್ಯೆ ಸಿದ್ಧಿಸೋದಕ್ಕೆ ಸಾಧ್ಯ. ಹೀಗಾಗಿ ಕಲಿಕೆಗೆ ಆಸಕ್ತಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಹಿಂದೂ ಧರ್ಮಗ್ರಂಥಗಳಾದ ಭಗವಧ್ಗೀತೆ ಹಾಗೂ ಮಹಾಭಾರತದಲ್ಲಿ ಕಲಿಕೆಯ ಬಗ್ಗೆ ಉಲ್ಲೇಖವಾಗಿದೆ. ಅದ್ರಲ್ಲೂ ಅರ್ಜುನ ಒರ್ವ ಉತ್ತಮ ವಿದ್ಯಾರ್ಥಿಯಾಗಿದ್ದನು. ಯಾವುದೇ ವಿಚಾರವಾದರೂ ಅದನ್ನು ಆಸಕ್ತಿಯಿಂದ ಕಲಿಯುತ್ತಿದ್ದನು. ಕಲಿಕೆಯಲ್ಲಿ ಅರ್ಜುನನನ್ನು ಮೀರಿಸೋದಕ್ಕೆ ಯಾರಿಂದಲೂ ಸಾಧ್ಯವಿರಲಿಲ್ಲ.
ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಕಲಿಕಾ ಆಸಕ್ತಿಯು ಅರ್ಜುನನ ಹಾಗೇ ಇರಬೇಕು ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರೋದು. ಹಾಗಾದ್ರೆ ಅರ್ಜುನನ ಕಲಿಕೆ ಹೇಗಿತ್ತು ? ಅದನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳೋದು ಹೇಗೆ ಅನ್ನೋದ್ರ ಬಗ್ಗೆ ತಿಳಿಸ್ತೀವಿ.

ಬಿಲ್ವಿಧ್ಯೆಯಲ್ಲಿ ಅರ್ಜುನನಿಗೆ ಸರಿಸಮನಾದ ವ್ಯಕ್ತಿ ಯಾರಿದ್ದಾರೆ?
ದ್ವಾಪರ ಯುಗದಲ್ಲಿ ಮಹಾಭಾರತ ಯುದ್ಧ ನಡೆದಿತ್ತು. ಅರ್ಜುನನು ಇಂದ್ರನ ಮಗ. ಈತ ಪಂಚ ಪಾಂಡವರಲ್ಲಿ ಮೂರನೇಯವನಾಗಿದ್ದು ಕೃಷ್ಣನ ಅನುಯಾಯಿಯಾಗಿದ್ದನು. ಅರ್ಜುನ ಬಿಲ್ವಿಧ್ಯೆಯಲ್ಲಿ ಪರಿಣತಿ ಹೊದ್ದಿದ್ದನು. ಹೀಗಾಗಿ ಈತನನ್ನು "ಸವ್ಯಸಾಚಿ" ಎಂದು ಕರೆಯಲಾಗುತ್ತಿತ್ತು. ಸವ್ಯಸಾಚಿ ಎಂದರೆ ಬಿಲ್ವಿಧ್ಯೆಯನ್ನು ಎಡಗೈ ಹಾಗೂ ಬಲಗೈನಲ್ಲಿ ಕರಗತ ಮಾಡಿಕೊಂಡಿದ್ದ ವ್ಯಕ್ತಿ ಎಂದರ್ಥ. ಅಷ್ಟಕ್ಕು ಅರ್ಜುನ ಇಷ್ಟೊಂದು ಪರಿಪೂರ್ಣತೆಯಿಂದ ಬಿಲ್ವಿಧ್ಯೆಯನ್ನು ಕಲಿತುಕೊಂಡಿದ್ದು ಹೇಗೆ? ಇದೆಲ್ಲಾ ಹೇಗೆ ಸಾಧ್ಯವಾಯ್ತು ಅನ್ನೋದಕ್ಕೆ ಉತ್ತರ ಕೊಡ್ತೀವಿ.
ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಗಿತ್ತು ಅದೊಂದು ಆಟ..!
ಪಾಂಡವರು ಬೆಳೆದು ದೊಡ್ಡವರಾಗುವ ಸಮಯದಲ್ಲಿ ಅವರಿಗೆ ಯುದ್ಧ ಕಲೆಗಳನ್ನು ಕಲಿಸೋದಕ್ಕೆ ದ್ರೋಣಾಚಾರ್ಯರನ್ನು ನೇಮಿಸಲಾಗಿತ್ತು. ಇನ್ನೂ ಪಾಂಡವರು ಕೃಪಾಚಾರ್ಯರಿಂದ ಶಿಕ್ಷಣವನ್ನು ಪಡೆಯುತ್ತಿದ್ದರು. ಇತ್ತ ಕೌರವರ ಜೊತೆಗೆ ಕವಡೆ ಆಟದಲ್ಲಿ ಸೋತ ಪಾಂಡವರು ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸವನ್ನು ಅನುಭವಿಸಬೇಕಾಯಿತು. ಇನ್ನೂ ಅಜ್ಞಾತವಾಸದಿಂದ ವಾಪಾಸ್ಸಾದ ಪಾಂಡವರು ತಮಗೆ ಸೇರಬೇಕಾದ ಭೂಮಿಯನ್ನು ಹಿಂತಿರಿಗಿಸುವಂತೆ ಕೌರವರ ಬಳಿ ಕೇಳಿಕೊಳ್ಳುತ್ತಾರೆ. ಆದರೆ ಕೌರವರು ಇದಕ್ಕೆ ನಿರಾಕರಿಸಿದಾಗ ಇವರಿಬ್ಬರ ಮಧ್ಯೆ ಕುರುಕ್ಷೇತ್ರ ಯುದ್ಧ ನಡೆಯುತ್ತದೆ.
ಅರ್ಜುನ ಕೌರವರ ಜೊತೆಗೆ ಯುದ್ಧಕ್ಕೆ ಒಪ್ಪದಿರಲು ಕಾರಣವೇನು?
ಕುರುಕ್ಷೇತ್ರ ಯುದ್ಧದ ಮೊದಲ ದಿನ ಯದ್ಧಭೂಮಿಯಲ್ಲಿ ಪಾಂಡವರು ಹಾಗೂ ಕೌರವರು ಎದುರು ಬದುರಾಗಿ ನಿಂತಿರುತ್ತಾರೆ. ಈ ವೇಳೆ ತನ್ನ ರಕ್ತ ಸಂಬಂಧಿಗಳನ್ನು ಯುದ್ಧ ಭೂಮಿಯಲ್ಲಿ ಕಂಡ ಅರ್ಜುನನಿಗೆ ಯುದ್ಧದಲ್ಲಿ ಹೋರಾಡೋದಕ್ಕೆ ಮನಸ್ಸಾಗೋದಿಲ್ಲ. ಆತನ ಮನಸ್ಸಿನಲ್ಲಿ ನಮ್ಮವರ ಜೊತೆಗೆ ಯುದ್ಧ ಮಾಡ್ಬೇಕಾ ಅನ್ನೋ ನೋವು ಕಾಡುತ್ತಿರುತ್ತದೆ. ಈ ವೇಳೆ ತನ್ನ ಸಾರಥಿಯಾಗಿದ್ದ ಕೃಷ್ಣನಲ್ಲಿ ಅರ್ಜುನ ಈ ನೋವನ್ನು ಹೇಳಿಕೊಳ್ಳುತ್ತಾನೆ. ಆಗ ಕೃಷ್ಣನು ಪ್ರತಿಯೊಬ್ಬರು ಅವರ ಪಾಲಿನ ಕರ್ಮವನ್ನು ನಿಭಾಯಿಸಲೇಬೇಕು. ಇದರಿಂದ ಯಾವ ರೀತಿ ತೊಂದರೆ ಆಗುತ್ತೆ ಎಂದು ಚಿಂತಿಸಬಾರದು. ಈ ಬಗ್ಗೆ ಭಗವಧ್ಗೀತೆಯಲ್ಲಿ ಉಲ್ಲೇಖವಾಗಿದೆ ಎಂದು ಹೇಳುತ್ತಾನೆ.
ಕೃಷ್ಣನ ಮಾತಿನಿಂದ ಅರ್ಜುನ ಕಲಿತುಕೊಂಡಿದ್ದೇನು?
ಅರ್ಜುನ ಯುದ್ಧ ಭೂಮಿಯಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದು ನಿಜ. ಆದರೆ ಭಗವಧ್ಗೀತೆಯಲ್ಲಿ ಉಲ್ಲೇಖವಾದ ಕೃಷ್ಣ ಹೇಳಿದ ಮಾತುಗಳು ಅರ್ಜುನನ ಮನ ಪರಿವರ್ತನೆ ಮಾಡಿದ್ದಂತೂ ಸುಳ್ಳಲ್ಲ. ಆ ಕ್ಷಣದಲ್ಲಿ ಕೃಷ್ಣನು ಹೇಳಿದ ಮಾತುಗಳನ್ನು ಕೇಳಿ ಅರ್ಜುನನ ಮನ ಪರಿವರ್ತನೆಯಾಗುತ್ತದೆ. ಇದರಿಂದ ನಾವು ಏನನ್ನು ತಿಳಿದುಕೊಳ್ಳುತ್ತೇವೆ ಅಂದ್ರೆ ಅರ್ಜುನನು ಶ್ರೀ ಕೃಷ್ಣನ ಮಾತನ್ನು ಕೇಳಿಕೊಂಡು ಯಾವ ರೀತಿ ಕಲಿತುಕೊಂಡ ಅನ್ನೋದು ನಮಗೆ ಅರ್ಥವಾಗುತ್ತದೆ.
ಅರ್ಜುನನಿಗೆ "ಪಾಶುಪತಾಸ್ತ್ರ" ಸಿಕ್ಕಿದ್ಹೇಗೆ?
ಪಾಂಡವರು ವನವಾಸದಲ್ಲಿದ್ದಂತಹ ಸಂದರ್ಭದಲ್ಲಿ ಅರ್ಜುನ ಅವರನ್ನೆಲ್ಲಾ ಬಿಟ್ಟು ಒಬ್ಬನೇ ಹಿಮಾಲಯಕ್ಕೆ ತಪಸ್ಸು ಮಾಡೋದಕ್ಕಾಗಿ ಹೊರಡುತ್ತಾನೆ. ಆತ ತನ್ನ ಶತ್ರುಗಳನ್ನು ಸೋಲಿಸಬೇಕೆಂದರೆ ಅನೇಕ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿರಬೇಕಿತ್ತು. ಆತ ಯುದ್ಧ ಕಲೆಗಳನ್ನು ಕಲಿಯುತ್ತಿದ್ದ ಸಂದರ್ಭದಲ್ಲಿ ಒಂದು ಸಾರಿ ಬ್ರುಗುತುಂಗ ಎಂಬ ಸ್ಥಳಕ್ಕೆ ತಲುಪುತ್ತಾನೆ. ಈ ಸಂದರ್ಭದಲ್ಲಿ ಒರ್ವ ಭೇಟೆಗಾರ ಹಾಗೂ ಅರ್ಜುನನ ಮಧ್ಯೆ ಕಾಳಜ ನಡೆಯುತ್ತದೆ. ಇಬ್ಬರು ಒಬ್ಬರಿಗೊಬ್ಬರು ಸರಿಸಮನಾಗಿ ಹೋರಾಡುತ್ತಾರೆ. ಏನೇ ಆದರೂ ಇಬ್ಬರು ಸೋಲೊಪ್ಪಿಕೊಳ್ಳೋದಕ್ಕೆ ಸಿದ್ಧರಿರೋದಿಲ್ಲ. ಕೊನೆಗೆ ಆ ಭೇಟೆಗಾರ ಶಿವನ ರೂಪಕ್ಕೆ ಬದಲಾಗುತ್ತಾನೆ. ಅರ್ಜುನನ ಕೆಚ್ಚೆದೆಯ ಹೋರಾಟಕ್ಕೆ ಮೆಚ್ಚಿದ ಶಿವ ಆತನಿಗೆ ಪಾಶುಪತಾಸ್ತ್ರವನ್ನು ವರವಾಗಿ ಕರುಣಿಸುತ್ತಾನೆ. ಈ ಅಧ್ಯಾಯನ ನಮಗೆ ಅರ್ಜುನ ಕಲಿಕೆಯಲ್ಲಿ ಆಸಕ್ತಿ ಇರುವ ವ್ಯಕ್ತಿ ಅನ್ನೋದನ್ನ ಗೊತ್ತು ಪಡಿಸುತ್ತದೆ.
ಅರ್ಜುನನಿಗೆ ಕಲಿಸೋದಕ್ಕೆ ಆಸಕ್ತಿ ತೋರಿದ್ಯಾಕೆ?
ಮಹಾಭಾರತದಲ್ಲಿ ಶ್ರೀ ಕೃಷ್ಣನು ಜೀವನ ಮೌಲ್ಯಗಳ ಬಗ್ಗೆ ಪಾಠವನ್ನು ಬೇರ್ಯಾರಿಗೂ ನೀಡಿಲ್ಲ. ಅರ್ಜುನನಿಗೆ ಮಾತ್ರ ಈ ಎಲ್ಲಾ ವಿಚಾರಗಳನ್ನು ಹೇಳುವ ಆಸಕ್ತಿ ಕೃಷ್ಣನಿಗೆ ಇತ್ತು. ಯಾಕಂದ್ರೆ ಅರ್ಜುನ ಕಲಿಕಾ ಆಸಕ್ತಿ ಉಳ್ಳವನಾಗಿದ್ದನು. ಇನ್ನೂ ದ್ರೋಣಾಚಾರ್ಯರು ಕೂಡ ಅರ್ಜುನನಿಗೆ ಮಾತ್ರ ಕಲಿಸೋದಕ್ಕೆ ವಿಶೇಷ ಆಸಕ್ತಿಯನ್ನು ತೋರುತ್ತಿದ್ದರು.
ಯಾವ ವ್ಯಕ್ತಿಗೆ ಕಲಿಯುವ ಆಸಕ್ತಿ ಇರುತ್ತದೋ ಆತ ಜೀವನದಲ್ಲಿ ಖಂಡಿತ ಮುಂದೆ ಬರುತ್ತಾನೆ. ನಮ್ಮ ಆಸಕ್ತಿ ಅರ್ಜುನನ ಹಾಗೇ ಇರಬೇಕು ಆಗ ಮಾತ್ರ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯ.



Click it and Unblock the Notifications



