Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೊದಲ ಆಷಾಢ ಶುಕ್ರವಾರ: ಈ ದಿನ ಮೈಸೂರು ಚಾಮುಂಡೇಶ್ವರಿ ದರ್ಶನದ ಮಹತ್ವವೇನು?
ಜೂನ್ 23ಕ್ಕೆ ಮೊದಲ ಆಷಾಢ ಶುಕ್ರವಾರ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠ ಅದರಲ್ಲೂ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ನಾಡ ದೇವತೆ ಚಾಮುಂಡೇಶ್ವರಿಗೆ ಆಷಾಢ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಗುವುದು.

ಚಾಮುಂಡೇಶ್ವರಿ ಮಹಿಷಾಸುರ ರಾಕ್ಷಸನನ್ನು ಕೊಂದ ಕಾರಣ ಮಹಿಷಾಸುರ ಮರ್ದಿನಿ ಎಂದು ಕೂಡ ಕರೆಯಲಾಗುವುದು. ಚಾಮುಂಡೇಶ್ವರಿ ದೇವಿಗೆ ಆಷಾಢ ಶುಕ್ರವಾರ ಸಲ್ಲಿಸುವ ಪೂಜೆ ತುಂಬಾ ವಿಶೇಷ ಏಕೆ? ಈ ದಿನ ಚಾಮುಂಡೇಶ್ವರಿಯನ್ನು ದರ್ಶನ ಮಾಡಬೇಕೆಂದು ಹೇಳುವುದು ಏಕೆ ಎಂದು ನೋಡೋಣ ಬನ್ನಿ:
ಆಷಾಢ ಮೊದಲ ಶುಕ್ರವಾರದಂದು ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಸಲ್ಲಿಸುವ ಪೂಜೆ ತುಂಬಾ ವಿಶೇಷ ಏಕೆ?
ಮೈಸೂರು ಚಾಮುಂಡೇಶ್ವರಿ ದೇವಿಗೆ ಆಷಾಢ ಮಾಸದ ಮೊದಲ ಶುಕ್ರವಾರದಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ತಾಯಿಯ ಜನ್ಮ ದಿನ. ಈ ಬಾರಿ ಚಾಮುಂಡೇಶ್ವರಿ ಜಯಂತಿಯನ್ನು ಜೂನ್ 23ರಂದು ಆಚರಿಸಲಾಗುತ್ತಿದೆ.
ಈ ದಿನ ತಾಯಿ ಚಾಮುಂಡಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ತ್ರಿಪಾದಿ, ಅಷ್ಟೋತ್ತರ ಹೀಗೆ ವಿವಿಧ ಬಗೆಯ ವಿಶೇಷ ಪೂಜೆಯನ್ನು ಆಯೋಜಿಸಲಾಗುತ್ತದೆ. ಆಷಾಢದ ಮೊದಲ ಶುಕ್ರವಾರದಿಂದ ಹಿಡಿದು ಪ್ರತೀಶುಕ್ರವಾರ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಆಷಾಢ ಶುಕ್ರವಾರದ ಸಮಯದಲ್ಲಿ ತುಂಬಾ ಭಕ್ತರು ಆಗಮಿಸುತ್ತಾರೆ. ಇವರಿಗೆ ಪ್ರಸಾದವನ್ನು ವಿತರಿಸಲಾಗುವುದು.
ಈ ಬಾರಿ ಭಕ್ತರಿಗೆ ಸಿದ್ಧವಾಗಿದೆ ಮ್ಯಾಂಗೋ ಬರ್ಫಿ ಪ್ರಸಾದ
ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಬರುವ ಭಕ್ತರಿಗೆ ಮ್ಯಾಂಗೋ ಬರ್ಫಿ ಪ್ರಸಾದ ಸಿದ್ಧವಾಗುತ್ತಿದೆ. 18 ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಈ ಬಾರಿಯೂ ಪ್ರಸಾದ ವಿತರಣೆ ಮಾಡಲಿದೆ. ನಾಳೆ ಅಂದರೆ ಜೂನ್ 23 ಶುಕ್ರವಾರ ಬೆಳಗ್ಗೆಯೇ ಪ್ರಸಾದ ನೀಡಲಾರಂಭಿಸುತ್ತಾರೆ. ಬೆಳಗ್ಗೆ ಉಪಹಾರಕ್ಕೆ ಪೈನಾಪಲ್ ಕೇಸರ್‌ಬಾತ್, ಪೊಂಗಲ್, ರವಾವಾಂಗೀಬಾತ್ ಇರಲಿದೆ. ಮಧ್ಯಾಹ್ನ ಊಟಕ್ಕೆ ಕೋಸಂಬರಿ, ಪಲ್ಯ, ಬಿಸಿಬೇಳೆಬಾತ್, ಅನ್ನ ಸಾಂಬಾರ್, ಹಪ್ಪಳ, ಮೊಸರು ಹಾಗೂ ಮ್ಯಾಂಗೋಬರ್ಫಿ ನೀಡಲಾಗುವುದು.
ಆಷಾಢ ಶುಕ್ರವಾರ ಭಕ್ತರು ಚಾಮುಂಡೇಶ್ವರಿ ದರ್ಶನವನ್ನೇಕೆ ಮಾಡುತ್ತಾರೆ?
* ಆಷಾಢ ಶುಕ್ರವಾರದಂದು ದೇವಿಗೆ ವಿಶೇಷ ಅಲಂಕಾರ ಮಾಡಲಾಗುವುದು, ಇದನ್ನು ಕಣ್ತುಂಬಿಕೊಳ್ಳುವುದೇ ಮಹಾದೃಷ್ಟ.
* ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುವುದು, ಈ ಭಾಗ್ಯವನ್ನು ಕಣ್ತುಂಬಿಕೊಳ್ಳಬಹುದು.
* ದೇವಿಯ ವಿಶೇಷ ಮಂತ್ರಗಳ ಪಠಣೆ ಮಾಡಲಾಗುವುದು, ಇದನ್ನು ಕೇಳಿದರೆ ನಮಗೆ ಭಾಗ್ಯ ಒದಗಲಿದೆ.
* ಚಾಮುಂಡೇಶ್ವರಿ ದೇವಿ ಕ್ಷೇತ್ರಕ್ಕೆ ಬಂದು ಈ ದಿನ ಏನು ಬೇಡಿಕೊಂಡರೂ ಅದು ನೆರವೇರುವುದು ಎಂದು ಹೇಳಲಾಗುವುದು. ಆದ್ದರಿಂದ ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.



Click it and Unblock the Notifications
