Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪೊರಕೆಯನ್ನು ಈ ರೀತಿ ಬಳಸ್ಬೇಡಿ! ಲಕ್ಷ್ಮೀ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ
ನಾವು ನಮ್ಮ ಮನೆ ಮತ್ತು ಅಂಗಳವನ್ನು ಸ್ವಚ್ಛ ಗೊಳಿಸಲು ಪೊರಕೆಯನ್ನು ಬಳಸುತ್ತೇವೆ. ಪೊರಕೆಯ ಬಗ್ಗೆ ಕೆಲವೊಂದು ನಂಬಿಕೆಗಳು ಇದೆ. ಈ ಪೊರಕೆಯನ್ನು ನಾವು ಮನೆಯ ಮುಂಭಾಗದಲ್ಲಿ ಇಟ್ಟರೆ ಅದು ಅಶುಭದ ಸಂಕೇತ. ಹೀಗೆ ಪೊರಕೆಯ ಬಗ್ಗೆ ಹಲವಾರು ನಿಬಂಧನೆಗಳಿದೆ.
ಆದರೆ ಪೊರೆಕೆಗೂ ಹಾಗೂ ಮಾತೆ ಲಕ್ಷ್ಮೀಗೂ ಒಂದು ರೀತಿಯ ಸಂಬಂಧವಿದೆ. ಪುರಾಣಗಳ ಪ್ರಕಾರ ಪೊರಕೆಯನ್ನು ಇದೇ ರೀತಿ ಬಳಸಬೇಕು. ಹಾಗೂ ಇಂತಹ ಜಾಗದಲ್ಲೇ ಇಡಬೇಕು ಅನ್ನೋ ನಂಬಿಕೆಗಳಿದೆ. ಹಾಗಾದ್ರೆ ಇವತ್ತು ನಾವು ನಿಮಗೆ ಪೊರಕೆ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿರೋದು ಏನು ಅನ್ನೋದನ್ನ ತಿಳಿಸ್ತೀವಿ.

ಪೊರಕೆಗೆ ಸಂಬಂಧಿಸಿದಂತೆ ವಾಸ್ತು ಟಿಪ್ಸ್
ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ ಅಥವಾ ಆರ್ಥಿಕ ಪರಿಸ್ಥಿಯನ್ನು ಸುಧಾರಿಸಿಕೊಳ್ಳಬೇಕಾದರೆ ವಾಸ್ತು ಶಾಸ್ತ್ರದಲ್ಲಿ ಅನೇಕ ಪರಿಹಾರಗಳಿದೆ. ಅದ್ರಲ್ಲಿ ಮುಖ್ಯವಾಗಿ ಮನೆಯ ಸ್ವಚ್ಛತೆಯನ್ನು ಕಾಪಾಡುವುದು. ನೀವು ಈ ನಿಯಮಗಳನ್ನು ಪಾಲಿಸಿದರೆ ಖಂಡಿತ ಮಾತೆ ಲಕ್ಷ್ಮೀಯು ಖುಷಿ ಪಡುತ್ತಾಳೆ. ಯಾಕಂದ್ರೆ ಮನೆಯ ಕೋಣೆಯಲ್ಲಿ ಲಕ್ಷ್ಮೀಯು ನೆಲೆಸಿರುತ್ತಾಳೆ. ವಾಸ್ತುವಿನ ಪ್ರಕಾರ ಮನೆಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೊರಕೆಯು ತುಂಬಾನೇ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾದ್ರೆ ನೀವು ಪೊರಕೆಯ ಬಗ್ಗೆ ಇರುವ ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳಿ. ಇದು ನಿಮ್ಮ ಮನೆಯಲ್ಲಿ ಸಂಪತ್ತು ಹಾಗೂ ಶಾಂತಿ ನೆಲೆಸಲು ಕಾರಣವಾಗುತ್ತದೆ.
ಹಾಳಾದ ಪೊರಕೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ ಹಾಳಾದ ಪೊರಕೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಪೊರಕೆ ಹಾಳಾಗಿದೆ ಅಂದ ತಕ್ಷಣ ಅದನ್ನು ಬಳಕೆ ಮಾಡಬಾರದು. ಇಂತಹ ಪೊರಕೆಯನ್ನು ಮನೆ ಒಳಗಡೆ ಇಟ್ಟುಕೊಳ್ಳೋದು ಮನೆಗೆ ಖಂಡಿತ ಶೋಭೆ ತರೋದಿಲ್ಲ. ಒಂದು ವೇಳೆ ನೀವು ಹಾಳಾದ ಪೊರಕೆಯಲ್ಲೇ ಮನೆಯನ್ನು ಸ್ವಚ್ಛಗೊಳಿಸಿದರೆ ಋಣಾತ್ಮಕ ಶಕ್ತಿ ಮನೆಯೊಳಗಡೆ ನುಗ್ಗುತ್ತದೆ. ಇದಿಷ್ಟೇ ಅಲ್ಲ, ಮನೆಗೆ ಯಾವಾಗ ಹೊಸ ಪೊರಕೆ ತರಬೇಕು ಅನ್ನೋದ್ರ ಬಗ್ಗೆಯೂ ನಿಮಗೆ ತಿಳಿದಿರಬೇಕು. ಹೌದು, ಶನಿವಾರದ ದಿನ ಮಾತ್ರ ನೀವು ಹೊಸ ಪೊರಕೆಯನ್ನು ಮನೆಗೆ ತರಬೇಕು. ಇದರಿಂದ ಕೇವಲ ಲಕ್ಷ್ಮೀ ಮಾತ್ರ ಖುಷಿ ಪಡೋದಿಲ್ಲ. ಇದರ ಜೊತೆಗೆ ಶನಿಯ ಆಶೀರ್ವಾದ ಕೂಡ ನಿಮಗೆ ಒಲಿಯುತ್ತದೆ.
ಸೂರ್ಯಾಸ್ತದ ನಂತರ ಮನೆ ಸ್ವಚ್ಛಗೊಳಿಸಿದರೆ ಆರ್ಥಿಕ ಸಮಸ್ಯೆ ಗ್ಯಾರಂಟಿ!
ಮನೆಯನ್ನು ಸ್ವಚ್ಛ ಮಾಡೋದಕ್ಕೂ ಇಂತಹದ್ದೇ ಸಮಯ ಅಂತ ಇದೆ. ಆ ಸಮಯದಲ್ಲಿ ಮಾತ್ರ ಮನೆಯನ್ನು ಸ್ವಚ್ಛಗೊಳಿಸಬೇಕು. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಮನೆಯನ್ನು ಸ್ವಚ್ಛಗೊಳಿಸಬೇಕು. ಸೂರ್ಯಾಸ್ತದ ನಂತರ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಬಾರದು. ಯಾಕಂದ್ರೆ ಕತ್ತಲೆಯ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸೋದ್ರಿಂದ ಋಣಾತ್ಮಕ ಅಂಶ ಮನೆಯೊಳಗಡೆ ಬರುತ್ತದೆ. ಇದಿಷ್ಟೇ ಅಲ್ಲ, ಸೂರ್ಯಾಸ್ತದ ನಂತರ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸುವುದನ್ನು ಲಕ್ಷ್ಮೀಯು ಇಷ್ಟ ಪಡೋದಿಲ್ಲ. ಹಾಗೂ ಅಂತಹ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತಂತೆ.
ಪೊರಕೆಯನ್ನು ಯಾವ ಜಗದಲ್ಲಿ ಇಡಬೇಕು?
ಪುರಾಣಗಳ ಪ್ರಕಾರ ಸ್ವಚ್ಛವಿಲ್ಲದ ಜಾಗದಲ್ಲಿ ಲಕ್ಷ್ಮೀಯು ನೆಲೆಸೋದಕ್ಕೆ ಇಷ್ಟ ಪಡೋದಿಲ್ಲ. ಹೀಗಾಗಿ ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸೋದು ತುಂಬಾನೇ ಮುಖ್ಯ. ಇದಿಷ್ಟೇ ಅಲ್ಲ, ನೀವು ಮನೆಯನ್ನು ಸ್ವಚ್ಛಗೊಳಿಸೋ ಪೊರಕೆಯನ್ನು ಸರಿಯಾದ ಜಾಗದಲ್ಲಿ ಇಡೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಹಾಗೆಯೇ ಪೊರಕೆಯನ್ನು ಮನೆಯ ಕೋಣೆಯ ಪಶ್ಚಿಮ ಭಾಗದಲ್ಲಿ ಇಡಬೇಕು. ನೀವು ಈ ರೀತಿ ಮಾಡಿದರೆ ಮನೆಯೊಳಗಡೆ ಇದ್ದ ಎಲ್ಲಾ ಋಣಾತ್ಮಕ ಶಕ್ತಿಗಳು ಹೊರಗಡೆ ಹೋಗುತ್ತದೆ.
ಕೊಳಕು ಪ್ರದೇಶದಲ್ಲಿ ಪೊರಕೆ ಇಡಲೇಬೇಡಿ!
ಪುರಾಣಗಳಲ್ಲಿ ಪೊರಕೆಗೆ ಮಾತೆ ಲಕ್ಷ್ಮೀಯ ಸ್ಥಾನವನ್ನು ನೀಡಲಾಗಿದೆ. ಹೀಗಾಗಿ ಯಾವ ವ್ಯಕ್ತಿಯೂ ಕೂಡ ಪೊರಕೆಯ ಮೇಲೆ ಹೆಜ್ಜೆಯನ್ನು ಇಡಲೇಬಾರದು. ಅಥವಾ ಅದರ ಮೇಲಿಂದ ಜಿಗಿಯಲೂ ಬಾರದು. ಸಾಮಾನ್ಯವಾಗಿ ಜನ ತಮ್ಮ ಮನೆಯ ಕೊಳಕು ಪ್ರದೇಶದಲ್ಲಿ ಪೊರಕೆಯನ್ನು ಇಡುತ್ತಾರೆ. ಒಂದು ವೇಳೆ ನೀವು ಕೂಡ ಹಾಗೆ ಮಾಡುತ್ತಿದ್ದರೆ ಇಂದಿನಿಂದಲೇ ಅದನ್ನು ನಿಲ್ಲಿಸಿ. ಯಾಕಂದ್ರೆ ಇದರಿಂದ ನೀವು ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಪೊರಕೆಯನ್ನು ನಿಂತ ಸ್ಥಿತಿಯಲ್ಲಿ ಒರಗಿಸಿ ಇಡಬಾರದು. ಬದಲಿಗೆ ಅದನ್ನು ಕೆಳಗೆ ಮಲಗಿಸಿದ ರೀತಿಯಲ್ಲಿ ಇಡಬೇಕು.
ಯಾವ ವಸ್ತುವಿನಿಂದ ತಯಾರಿಸಿದ ಪೊರಕೆ ಬಳಸಬೇಕು?
ಇದೀಗ ಮಾರುಕಟ್ಟೆಯಲ್ಲಿ ಹಲವಾರು ವಿಧದ ಪೊರಕೆಗಳನ್ನು ನಾವು ಕಾಣಬಹುದು. ಫೈಬರ್ ಅಥವಾ ಪ್ಲಾಸ್ಟಿಕ್ ಹೀಗೆ ಅನೇಕ ವಿಧವಾದ ಪೊರಕೆಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಆದರೆ ನಾವು ಬಿದಿರಿನ ಮರದಿಂದ ಮಾಡಿದ ಪೊರಕೆಯನ್ನೇ ಬಳಸಬೇಕಂತೆ. ಇದರಿಂದ ಮಾತೆ ಲಕ್ಷ್ಮೀಯು ಖುಷಿ ಪಡುತ್ತಾಳಂತೆ. ಹಾಗೂ ಆರ್ಥಿಕ ಸಮಸ್ಯೆಯು ನಿವಾರಣೆಯಾಗುತ್ತಂತೆ.
ಈ ಎಲ್ಲಾ ವಿಚಾರಗಳ ಬಗ್ಗೆ ನಾವು ಸಣ್ಣವರಿರಬೇಕಾದರೆ ನಮ್ಮ ಅಜ್ಜಿ ಖಂಡಿತ ನಮಗೆ ಹೇಳಿರುತ್ತಾರೆ. ಆದರೆ ನಾವು ಅದನ್ನೆಲ್ಲಾ ತಲೆಗೆ ಹಾಕೊಂಡು ಇರೋದಿಲ್ಲ. ಅಯ್ಯೋ ಅಜ್ಜಿ ಅದೇನೋ ಗೊಣಗುತ್ತಿದ್ದಾಳೆ ಅಂತ ಸುಮ್ಮನಾಗಿರ್ತೀವಿ. ಆದರೆ ಅಜ್ಜಿ ಹೇಳೋ ಪ್ರತಿಯೊಂದು ಮಾತಿನ ಹಿಂದೆ ಒಂದಲ್ಲ ಒಂದು ಕಾರಣವಿದೆ. ಹೀಗಾಗಿ ಇನ್ನಾದ್ರು ಪೊರಕೆ ಬಗ್ಗೆ ಇರುವ ಕೆಲವೊಂದು ವಿಚಾರಗಳನ್ನು ಸಾಧ್ಯವಾದಷ್ಟು ಪಾಲಿಸಿ.



Click it and Unblock the Notifications



