Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೆಲಂಗಾಣ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿದ ಎಮ್ಮೆ ಮೇಯಿಸುವ ಹುಡುಗಿ: ಥೇಟ್ ಸಿನಿಮಾದಂತಿದೆ ಇವರ ಕತೆ
ಎಮ್ಮೆ ಕಾಯುವ ಹುಡುಗಿ ತೆಲಂಗಾಣ ಚುನಾವಣೆಯಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದಾಳೆ. ಆರ್ಥಿಕವಾಗಿ ಏನೂ ಇಲ್ಲದ ಹುಡುಗಿ ಇಂದು ಆರ್ಥಿಕವಾಗಿ ಬಲವಾಗಿರುವ ದೊಡ್ಡ-ದೊಡ್ಡ ರಾಜಕಾರಣಿಗಳ ವಿರುದ್ಧ ತೊಡೆತಟ್ಟಿ ನಿಂತಿದ್ದಾಳೆ, ಈವಾಗ ಈ ಹುಡುಗಿಗೆ ಜನ ಬೆಂಬಲ ಹೆಚ್ಚಾಗಿರುವುದರಿಂದ ದೊಡ್ಡ-ದೊಡ್ಡ ಪಕ್ಷಗಳಿಗೂ ನಡುಕ ಹುಟ್ಟಿಸಿದೆ, ಈಗ ತೆಲಂಗಾಣದಲ್ಲಿ ಇವರ ಹವಾ ತುಂಬಾನೇ ಇದೆ.
ಯಾರೀಕೆ?
ಈಕೆಯ ಹೆಸರು ಕರ್ನೆ ಸಿರಿಶಾ, ದಲಿತ ಯುವತಿ, ಈಗ ಬಾರ್ರೆಲಕ್ಕಾ (ಎಮ್ಮೆ ಮೇಯಿಸುವ ಅಕ್ಕ) ಎಂದೇ ಗುರುತಿಸಿಕೊಂಡಿದ್ದಾಳೆ. ಈಕೆ ಮಾಡಿದ ಒಂದು ಸಿಂಪಲ್ ರೀಲ್ ಸಮಾಜದ ವಾಸ್ತವ ಸ್ಥಿತಿಯನ್ನು ಬಡಿದೆಬ್ಬಿಸಿದಂತಿತ್ತು, ರಾಜಕಾರಣಿಗಳ ಮುಖಕ್ಕೆ ರಪ್ಪೆಂದು ಭಾರಿಸಿದಂತಿತ್ತು. ಆ ಒಂದು ರೀಲ್ ಈಕೆಯ ಭವಿಷ್ಯವನ್ನೇ ಬದಲಾಯಿಸಿತು.

ಅಷ್ಟಕ್ಕೂ ಆಕೆ ಮಾಡಿದ ರೀಲ್ ಆದರೂ ಏನು?
ಈಕೆ ಚೆನ್ನಾಗಿ ಓದಿಕೊಂಡಿದ್ದಾಳೆ, ಆದರೆ ಕೆಲಸ ಸಿಗುವುದಿಲ್ಲ, ಇದರಿಂದ ಬೇಸರಗೊಂಡ ಆಕೆ ತಾಯಿಗೆ ಎಮ್ಮೆಗಳನ್ನು ಕೊಡಿಸಲು ಹೇಳಿ ಅದನ್ನು ಮೇಯಿಸುವ ವೀಡಿಯೋ ಮಾಡಿ ಹಾಕಿದಳು. ಹಾಯ್ ಫ್ರೆಂಡ್ ..ಡಿಗ್ರಿ ಆದರೂ ಕೆಲಸ ಇಲ್ಲ ಎಮ್ಮೆ ಮೇಯಿಸ್ತಾ ಇದ್ದೀನಿ ಎಂಬ ವೀಡಿಯೋ ಮಾಡಿ ಹಾಕಿದ್ದಳು. ಆ ವೀಡಿಯೋ ತುಂಬಾನೇ ವೈರಲ್ ಆಯ್ತು. ಆ ವೀಡಿಯೋ ರಾಜಕೀಯ ವ್ಯವಸ್ಥೆಯನ್ನು ಟೀಕೆ ಮಾಡಿದಂತಿತ್ತು. ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿ ಮಾಡುವ ಬದಲಿಗೆ ತಮ್ಮ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗೋಸ್ಕರ ಶ್ರಮಿಸುತ್ತಿದ್ದಾರೆ ಎಂಬುವುದನ್ನು ಟೀಕೆ ಮಾಡಿದಂತಿತ್ತು. ಈ ವೀಡಿಯೋ ಇಟ್ಟುಕೊಂಡು ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನು ಟೀಕೆ ಮಾಡಿದರು, ಆಡಳಿತ ಪಕ್ಷದವರು ವಿರೋಧ ಪಕ್ಷದವರು ಆ ಹುಡುಗಿಗೆ ಹಣಕೊಟ್ಟು ಹೀಗೆ ಮಾಡಿಸಿದ್ದಾರೆ ಎಂದರು, ಒಟ್ಟಿನಲ್ಲಿ ಆ ಹುಡುಗಿ ತೆಲಂಗಾಣ ತುಂಬಾ ಬಾರ್ರೆಲಕ್ಕಾ ಎಂದು ಫೇಮಸ್ ಆದರು.
ಚುನಾವಣೆಯಲ್ಲಿಯೂ ಸ್ಪರ್ಧಿಸಿದರು
ರೀಲ್ಸ್ ಮಾಡಿಕೊಂಡಿದ್ದ ಹುಡುಗಿ ಇಂದು ಸಾವಿರಾರು ಜನರು ನೆರೆದಿರುವ ವೇದಿಕೆಯಲ್ಲಿ ಮಾತನಾಡುತ್ತಾ ಚುನಾವಣೆ ಸ್ಪರ್ಧೆಗ ಇಳಿದಿದ್ದಾರೆ. ಇವರ ಕತೆ ಥೇಟ್ ಸಿನಿಮಾ ಕತೆಯಂತೆಯೇ ಇದೆ. ಬರೀ ಸ್ವಲ್ಪ ಗೆಳೆಯರು ಜೊತೆ ಹೋಗಿ ಚುನಾವಣೆಗೆ ನಾಮ ಪತ್ರ ಸಲ್ಲಿಸಿದರು, ಇದೀಗ ದೊಡ್ಡ ಕಾರುಗಳಲ್ಲಿ ಜನ ಬಂದು ಇವರನ್ನು ಗೆಲ್ಲಿಸಲು ಚುನಾವಣೆ ಪ್ರಚಾರ ಮಾಡುತ್ತಿದೆ.
ಕೊಲ್ಲಾಪುರು ಕ್ಷೇತ್ರದಲ್ಲಿ ಮೂರು ಪ್ರಬಲ ಪಕ್ಷಗಳಿಗೆ ಸೋಲಿನ ಭಯ ಹುಟ್ಟಿಸಿರುವ ಬಾರ್ರೆಲಕ್ಕಾ
ಬಿಆರ್‌ಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದಿದ ಸ್ಪರ್ಧಿಸಿರುವ ಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆ ನೀಡಿದ್ದಾರೆ. ಸಾಮಾಜಿಕ ತಾಣದಲ್ಲಿ ಇವರಿಗೆ ತುಂಬಾನೇ ಬೆಂಬಲ ಸಿಗುತ್ತಿದೆ. ತಮ್ಮ ಸ್ಪಷ್ಟ ಮಾತುಗಳಿಂದ ಗಮನ ಸೆಳೆಯುತ್ತಿರುವ ಇವರು ಕೆಲವರಿಗೆ ನ್ಯಾಯ ಒದಗಿಸಲು ನಾನು ಗೆಲ್ಲಬೇಕಾಗಿದೆ, ನಾನು ಗೆದ್ದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಕಡೆಗೆ ಮೊದಲ ಆದ್ಯತೆ ನೀಡುತ್ತೇನೆ, ನನಗೆ ತುಂಬಾ ಬೆದರಿಕೆ ಕರೆಗಳು ಬರುತ್ತಿವೆ, ನಾನು ಈ ಸಮಾಜದ ಬದಲಾವಣೆ ಶ್ರಮಿಸುತ್ತೇನೆ ಎಂದೆಲ್ಲಾ ಪ್ರಖರ ಭಾಷಣ ಮಾಡುವ ಮೂಲಕ ಜನರ ಮನವೊಲಿಸಲು ಯತ್ನಿಸಿದ್ದಾರೆ. ಇವರು ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಕಾಲೇಜಿಗೆ ಹೋಗುವ ತಮ್ಮನ ಮೇಲೆ ಅಟ್ಯಾಕ್ ಮಾಡಿದ್ದರು. ಇದು ಕೂಡ ದೊಡ್ಡ ಸುದ್ದಿಯಾಗಿತ್ತು.
ಹಣದ ಬಲದ ಮುಂದೆ ಬುದ್ಧಿಯ ಬಲ
ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಹೇಗೆ ಹಣ ಚೆಲ್ಲುತ್ತಾರೆ ಎಂಬುವುದು ಗೊತ್ತಿರುವ ವಿಷಯವೇ. ಆದರೆ ಈ ಹುಡುಗಿ ಯಾವುದೇ ಆರ್ಥಿಕ ಬಲವಿಲ್ಲದೆ ಚುನಾವಣೆ ಅಖಾಡಕ್ಕೆ ಧುಮಿಕಿದರು, ಅವರು ಈ ವಿಷಯ ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಿಳಿಸಿ ಎಲ್ಲರು 2 ರುಪಾಯಿ ಕೊಟ್ಟು ಸಹಕಾರಿಸುವಂತೆ ಕೇಳಿಕೊಂಡಿದದ್ರು. ಅದರೆ ಜನರು ಹಣ ಅವರು ಊಹಿಸಿದ್ದಕ್ಕಿಂತ ತುಂಬಾನೇ ಹಣ ಸಹಾಯ ಮಾಡಿದ್ದು ಮಾತ್ರವಲ್ಲ, ಅವರ ಹೋದಕಡೆ ಜನರು ಸ್ವಇಚ್ಛೆಯಿಂದ ಹೋಗಿ ಬೆಂಬಲ ಸೂಚಿಸಿದ್ದಾರೆ.
ಇವರು ಚುನಾವಣೆಗೆ ಸ್ಪರ್ಧಿಸುವ ಮುನ್ನ ಪರವಲ್ಲಿಕಾ ಎಂಬ ಹುಡುಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಲಂಗಾಣ ಸರಕಾರ ಮುಂದೆಕ್ಕೆ ಹಾಕಿದ್ದಕ್ಕೆ ವಯಸ್ಸು ಮೀರಿ ಇನ್ನು ಬರೆಯಲು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ನಿರುದ್ಯೋಗ ಸಮಸ್ಯೆ ಕೂಡ ಇದೆ. ಈ ಎಲ್ಲಾ ಕಾರಣಕ್ಕೆ ಈಗ ಈ ಹುಡುಗಿಗೆ ಬೆಂಬಲ ಸೂಚಿಸಲು ತುಂಬಾನೇ ಬೆಂಬಲಿಗರು ಮುಂದೆ ಬಂದಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುತ್ತಾರೆಯೇ? ಎಂಬುವುದನ್ನು ನಾಳೆಯ ಫಲಿತಾಂಶದಿಂದ ತಿಳಿಯಲಿದೆ.



Click it and Unblock the Notifications