Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕಾಳಸರ್ಪ ದೋಷವಿದ್ದರೆ ಆಷಾಢ ಅಮವಾಸ್ಯೆಗೆ ಈ ಪರಿಹಾರ ಮಾಡಿ
ಜುಲೈ 17ಕ್ಕೆ ಆಷಾಢ ಅಮವಾಸ್ಯೆ, ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದಿನ ಪಿತೃದೋಷ ಪರಿಹಾರ ಮಾಡಲಾಗುವುದು ಅಷ್ಟು ಮಾತ್ರವಲ್ಲ ಯಾರಿಗೆ ಕಾಳ ಸರ್ಪ ದೋಷವಿರುತ್ತದೋ ಅವರು ಈ ದಿನ ಪರಿಹಾರ ಮಾಡಿದರೆ ಕಾಳ ಸರ್ಪ ದೋಷ ಪರಿಹಾರವಾಗಲಿದೆ.
ಕಾಳ ಸರ್ಪದೋಷವಿದೆಯೆಂದು ಸೂಚಿಸುವ ಲಕ್ಷಣಗಳೇನು, ಕಾಳ ಸರ್ಪ ದೋಷ ಇರುವವರು ಆಷಾಢ ಅಮವಾಸ್ಯೆಯಂದು ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಈ ರೀತಿಯ ಸೂಚನೆಗಳು ಕಾಳ ಸರ್ಪದೋಷವಿದೆ ಎಂಬುವುದನ್ನು ಸೂಚಿಸುತ್ತದೆ
- ಕನಸಿನಲ್ಲಿ ಹಾವು ಕಂಡು ಬರುವುದು
- ಕಠಿಣ ಪರಿಶ್ರಮದ ನಂತರವೂ ಕೆಲಸ ಕಾರ್ಯಗಳಲ್ಲಿ ಅಪೇಕ್ಷಿತ ಫಲ ಸಿಗುವುದಿಲ್ಲ
- ಅತ್ಯಧಿಕ ಮಾನಸಿಕ ಒತ್ತಡವಿರುತ್ತದೆ
- ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಸದಾ ಗೊಂದಲದ ಸ್ಥಿತಿ ಇರುತ್ತದೆ
- ಕುಟುಂಬದಲ್ಲಿ ಸಮಸ್ಯೆ
- ಶತ್ರುಗಳಿಂದ ತೊಂದರೆ
ಕಾಳ ಸರ್ಪ ದೋಷ ಏಕೆ ಉಂಟಾಗುತ್ತದೆ?
ಜಾತಕದಲ್ಲಿ ರಾಹು ಮತ್ತು ಕೇತುಗಳಿಂದ ಉಂಟಾಗುವ ಕೆಟ್ಟ ಪರಿಣಾಮದಿಂದಾಗಿ ಕಾಳಸರ್ಪ ದೋಷ ಉಂಟಾಗುವುದು. ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತುಗಳ ನಡುವೆ ಗ್ರಹಗಳು ಬಂದಾಗ ಕಾಳ ಸರ್ಪ ದೋಷ ಉಂಟಾಗುವುದು. ಜ್ಯೋತಿಷ್ಯದಲ್ಲಿ, ರಾಹುವನ್ನು ಹಾವಿನ ತಲೆ ಮತ್ತು ಕೇತುವನ್ನು ಹಾವಿನ ಬಾಲ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಪ್ರಗತಿಯಾಗಲು ರಾಹು ಮತ್ತು ಕೇತು ಬಿಡುವುದಿಲ್ಲ.
ಕಾಳ ಸರ್ಪ ದೋಷಕ್ಕೆ ಆಷಾಢ ಅಮವಾಸ್ಯೆಗೆ ಈ ಪರಿಹಾರ ಮಾಡಿದರೆ ಒಳ್ಳೆಯದು:
- ನಿಮ್ಮ ಜಾತಕದಲ್ಲಿ ಕಲಸರ್ಪ ದೋಷವಿದ್ದರೆ, ಆಷಾಢ ಅಮಾವಾಸ್ಯೆಯಂದು ಶಾಸ್ತ್ರೋಕ್ತವಾಗಿ ಶಿವನನ್ನು ಆರಾಧಿಸಿ. ಈ ಪೂಜೆಯನ್ನು ರಾಹುಕಾಲದಲ್ಲಿ ಮಾಡಬೇಕು ಏಕೆಂದರೆ ಜಾತಕದಲ್ಲಿ ರಾಹು ಮತ್ತು ಕೇತುಗಳ ವಿಶೇಷ ಸ್ಥಾನದಿಂದಾಗಿ ಕಾಲಸರ್ಪ ದೋಷ ಉಂಟಾಗಿರುತ್ತದೆ, ಈ ಸಮಯದಲ್ಲಿ ಶಿವ ಆರಾಧನೆ ಮಾಡಿದರೆ ರಾಹು ಕೇತುವಿಗೆ ಪರಿಹಾರ ಮಾಡಿದಂತಾಗುವುದು.
- ಆಷಾಢ ಅಮಾವಾಸ್ಯೆಯಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ನದಿಯ ದಡದಲ್ಲಿ ಜೋಡಿ ಹಾವಿನ ಮೂರ್ತಿಗೆ ಪೂಜೆಮಾಡಬೇಕು. ಈ ಹಾವಿನ ಜೋಡಿಯನ್ನು ಚಿನ್ನ ಅಥವಾ ಬೆಳ್ಳಿಯಿಂದ ಮಾಡಬಹುದಾಗಿದೆ. ಪೂಜೆಯ ನಂತರ ಆ ಮೂರ್ತಿಗಳನ್ನು ನದಿ ನೀರಿನಲ್ಲಿ ಬಿಡಬೇಕು, ಹೀಗೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುವುದು.
- ಕಾಳಸರ್ಪ ದೋಷವನ್ನು ಹೋಗಲಾಡಿಸಲು ಈ ದಿನ ಉದ್ದಿನ ಬೇಳೆ ಮತ್ತು ತೆಂಗಿನಕಾಯಿಯನ್ನು ನದಿ ನೀರಿನಲ್ಲಿ ಬಿಡಿ.
ಇತರ ಪರಿಹಾರ
* ಕಾಳಸರ್ಪ ದೋಷವಿರುವವರು ಪ್ರತಿದಿನ ಶ್ರೀವಿಷ್ಣುವಿನ ಆರಾಧನೆ ಮಾಡಬೇಕು.
* ವೈದಿಕ ಶಾಸ್ತ್ರದ ಪ್ರಕಾರ ಕಾಳಸರ್ಪ ದೋಷವನ್ನು ಹೋಗಲಾಡಿಸಲು, ಶನಿವಾರದಂದು ಹರಿಯುವ ನೀರಿನಲ್ಲಿ ಕಲ್ಲಿದ್ದಲಿನ ತುಂಡುಗಳನ್ನು ತೇಲುವಂತೆ ಮಾಡಿ.
* ಶ್ರಾವಣಮಾಸದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.
* ಪ್ರತಿ ಶನಿವಾರ ಆಲದ ಮರವನ್ನು ಪೂಜಿಸುವುದರಿಂದ ಕಾಲಸರ್ಪ ದೋಷ ಕಡಿಮೆಯಾಗುವುದು. ಈ ರೀತಿ 7 ಶನಿವಾರ ಮಾಡಬೇಕು.
ಅದೃಷ್ಟ ಹೆಚ್ಚಲು ಈ ಪರಿಹಾರ ಮಾಡಿ
* ಆಷಾಢ ಅಮವಾಸ್ಯೆಯಂದು ಹಿಟ್ಟಿನಲ್ಲಿ ಸಕ್ಕರೆ ಬೆರೆಸಿ ಕಪ್ಪು ಇರುವೆಗಳಿಗೆ ಹಾಕಿದರೆ ಒಳ್ಳೆಯದು
* ಆಷಾಢ ಅಮಾವಾಸ್ಯೆಯ ಸಂಜೆ ಈಶಾನ್ಯ ಮೂಲೆಯಲ್ಲಿ ದೀಪವನ್ನು ಹಚ್ಚಿ. ಕೆಂಪು ಬತ್ತಿಯಿಂದ ತುಪ್ಪದ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ, ನಿಮ್ಮ ಸಂಪತ್ತು ವೃದ್ಧಿಸುವುದು.



Click it and Unblock the Notifications